Wednesday 24th, April 2024
canara news

ಸಾರಸ್ವತ ಲೋಕಕ್ಕೆ ನಾಲ್ಕು ಕೃತಿಗಳನ್ನು ಅರ್ಪಿಸಿದ `ಸೃಜನಾ ಮುಂಬಯಿ' ಕನ್ನಡ ಲೇಖಕಿಯರ ಬಳಗ

Published On : 01 Jul 2018   |  Reported By : Rons Bantwal


ಸಾಹಿತ್ಯ ಸೇವೆ ಹಾಗೂ ಮಹಿಳಾ ಲೇಖಕಿಯರಿಗೆ ಪೆÇ್ರೀತ್ಸಾಹ ಸೃಜನದ ವೈಶಿಷ್ಟ ್ಯತೆ
(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)

ಮುಂಬಯಿ, ಜೂ.30: ಸುಮಾರು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಬೆಳೆದಿರುವ ಮುಂಬಯಿ ಮಹಾನಗರದಲ್ಲಿ ಮಹಿಳೆಯರನ್ನು ಒಟ್ಟುಗೂಡಿಸಿ ಕನ್ನಡ ಪರಿಚಾರಿಕೆಯನ್ನು ಮಾಡುತ್ತಿರುವ ಸೃಜನಾ ಬಳಗ ಇಡೀ ಮುಂಬಯಿ ಕನ್ನಡಿಗರು ಅಭಿಮಾನ ಪಡುವ ಸಂಗತಿ. ಪುಸ್ತಕ ಪ್ರಕಟಣೆಯೊಂದಿಗೆ ಸಾಹಿತ್ಯ ಸೇವೆ ಹಾಗೂ ಮಹಿಳಾ ಲೇಖಕಿಯರಿಗೆ ಬರಹ ಮಾಡಲು ಪೆÇ್ರೀತ್ಸಾಹ ಕೊಡುತ್ತಿದೆ. ನಾವೂ ಬರೆಯುವುದು ಮೊದಲು ನಮಗಾಗಿ. ಆಮೇಲೆ ಸಮಾಜಕ್ಕಾಗಿ ಈ ಅರಿವು ಎಲ್ಲಾ ಬರಹಗಾರರಿಗೆ ಇರಬೇಕಾದ ಅಗತ್ಯವಾದ ಕೆಲಸ ಎಂದು ಸೃಜನಾ ಸಹ ಸಂಚಾಲಕಿ ವಿೂನಾ ಕಳವಾರ ತಿಳಿಸಿದರು.

ಇಂದಿಲ್ಲಿ ಶನಿವಾರ ಸಂಜೆ ಮಾಟುಂಗಾ ಪೂರ್ವದ ಭಾವುದಾಜಿ ರಸ್ತೆಯಲ್ಲಿನ ಮೈಸೂರು ಅಸೋಸಿಯೇಶನ್ ಮುಂಬಯಿ ಕಿರುಸಭಾಗೃಹದಲ್ಲಿ ಮಹಾನಗರದಲ್ಲಿನ ಕನ್ನಡ ಲೇಖಕಿಯರ ಬಳಗ `ಸೃಜನಾ ಮುಂಬಯಿ' ಆಯೋಜಿಸಿದ್ದ ಐದು ಕೃತಿಗಳ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಿೂನಾ ಕಳವಾರ ಮಾತನಾಡಿದರು.

ಕಾರ್ಯಕ್ರಮದಲ್ಲಿ ಡಾ| ಸುನೀತಾ ಎಂ.ಶೆಟ್ಟಿ ಅವರ `ಸಮಾರಾಧನೆ' ಕೃತಿಯನ್ನು ಮುಂಬಯಿನ ಹಿರಿಯ ಸಾಹಿತಿ ಡಾ| ವಿಶ್ವನಾಥ್ ಕಾರ್ನಾಡ್, ಸೃಜನಾ ಪ್ರಕಾಶಿತÀ ಕೃತಿಗಳ ಇತರ ಲೇಖಕರ ಅವಲೋಕನ ಬರಹಗಳ `ಓದು ಮುಗಿಸಿದ ಮೇಲೆ' ಕೃತಿಯನ್ನು ಮೈಸೂರು ಅಸೋಸಿಯೇಶÀನ್ ಮುಂಬಯಿ ಅಧ್ಯಕ್ಷೆ ಕು| ಕಮಲಾ ಕಾಂತರಾಜ್ ಮತ್ತು ಡಾ| ದಾಕ್ಷಾಯಿಣಿ ಯಡಹಳ್ಳಿ ಅವರ ಕೃತಿಗಳಾದ `ವರ್ತುಲ' ಕಥಾ ಸಂಕಲನವನ್ನು ನಾಡಿನ ಹೆಸರಾಂತ ವಿಮರ್ಶಕ ಡಾ| ಕೆ.ರಘುನಾಥ್ ಹಾಗೂ ಜಾನಪದ ಹಾಡುಗಳ ಸಂಕಲನ `ಅವ್ವಂದಿರ ಹಾಡುಗಳು' ಕೃತಿಗಳನ್ನು ಏಕಕಾಲಕ್ಕೆ ಬಿಡುಗಡೆ ಗೊಳಿಸಿ ಕೃತಿಗಳನ್ನು ವಿಶ್ಲೇಷಿಸಿದರು.

ವಿಶ್ವನಾಥ್ ಕಾರ್ನಾಡ್ ಮಾತನಾಡಿ ಡಾ| ಸುನೀತಾ ಶೆಟ್ಟಿ ಅವರು ತುಂಬಾ ಸಂಶೋಧನೆ ಮಾಡಿ ಲೇಖನಗಳನ್ನು ಬರೆಯುತ್ತಾರೆ. ಅವರ ಲೇಖನಗಳು ವೈಚಾರಿಕೆಯಿಂದ ಕೂಡಿರುತ್ತದೆ. ವಿಷಯಗಳ ಆಯ್ಕೆ ಮತ್ತು ವಿವರಿಸುವ ಪದ್ಧತಿ ಗಮನಿಸಿದಾಗ ಅವರ ಆಳವಾದ ಅಧ್ಯಯನ ಕಂಡು ಬರುತ್ತದೆ. ಸಮಾರಾಧನೆ ಇದೊಂದು ಹೊಸ ರೀತಿಯ ಗ್ರಂಥ ಎಂದರು.
ನಮ್ಮಲ್ಲಿ ಇರುವ ಸಂಸ್ಕೃತಿ ನಮ್ಮ ಆಚಾರ ವಿಚಾರಗಳ ಬಗ್ಗೆ ನಾವು ಹೆಮ್ಮೆ ಹೊಂದಿರಬೇಕು. ಮುಂಬಯಿಯಲ್ಲಿ ಮಹಿಳೆ ಲೇಖಕಿಯರು ತುಂಬಾ ಕ್ರೀಯಾಶೀಲರಾಗಿ ಸಾಹಿತ್ಯ ನುಡಿ ಸೇವೆಯಲ್ಲಿ ತೊಡಗಿಸಿಕೊಂಡ ಪರಿ ನಿಜಕ್ಕೂ ನನಗೆ ತುಂಬಾ ಹೆಮ್ಮೆ ಅನಿಸುತ್ತದೆ. ನಮ್ಮ ಸಂತೋಷವನ್ನು ಬೇರೆಯವರ ಜೊತೆಗೆ ಹಂಚಿಕೊಂಡು ಇನ್ನೊಬ್ಬರಿಗೆ ಖುಷಿ ಕೊಡುವಂತಹ ಬರಹಗಳು ಕೃತಿಗಳಲ್ಲಿ ಇಂದು ಕಾಣಿಸಿಕೊಳ್ಳುವುದು ಬಹಳ ಅಗತ್ಯವೆನಿಸುತ್ತದೆ ಎಂದು ಕಮಲಾ ಕಾಂತರಾಜ್ ತಿಳಿಸಿದರು.

ಕೆ.ರಘುನಾಥ್ ಮಾತನಾಡಿ ಕ್ರಿಯಾಶೀಲತೆಗೆ ಇನ್ನೊಂದು ಹೆಸರು ಮುಂಬಯಿ ಲೇಖಕಿ ಡಾ| ಸುನೀತಾ ಶೆಟ್ಟಿ. ಕನ್ನಡ ಜಾನಪದ ನಮ್ಮ ಆಸ್ತಿ. ಆದರಿಂದ ಹಾಡುಗಳೂ ಕೂಡ ಬಂದು ನಮ್ಮ ಲೌಕಿಕ ಪರಂಪರೆಗೆ ಸೇರಿದವು. ಅವುಗಳನ್ನು ಸಂಗ್ರಹಿಸಿ ಕೊಟ್ಟವರು ದಾಕ್ಷಾಯಣಿ ಯಡವಳ್ಳಿ ಅವರು. ಮೌಖಿಕ ಪರಂಪರೆಯ ಕಥೆಗಳು ಶಿಷ್ಟ ಸಾಹಿತ್ಯದ ಮೇಲೆ ಪ್ರಭಾವ ಬೀರಿದೆ. ವರ್ತುಲ ಕಥಾ ಸಂಕಲನದಲ್ಲಿ ಹೆಣ್ಣು ಗಂಡುಗಳ ವರ್ತುಲ ಬಂಧನ ಇರುವುದನ್ನು ಈ ಕಥಾ ಸಂಕಲನದಲ್ಲಿ ಆಶಯ ವ್ಯಕ್ತವಾಗಿದೆ. ನಮ್ಮ ಕನ್ನಡ ಸಂಸ್ಕೃತಿಯ ಅನಾವರಣ ಈ ಕಥೆಗಳಲ್ಲಿ ಪ್ರಕಟವಾಗಿದೆ. ದಾಕ್ಷಾಯಣಿ ಯಡಹಳ್ಳಿ ಅವರ ಜಾನಪದ ಅವ್ವಂದಿರ ಹಾಡುಗಳನ್ನು ಸುಶ್ರವಿವಾಗಿ ಗಾಯನ ಮಾಡಿದರು.

ಸೃಜನಕ್ಕೆ ಈಗ ಹದಿನಾರÀ ಹರೆಯ. ಮುಂಬಯಿ ಲೇಖಕಿಯರು ಸೇರಿ ಕಟ್ಟಿದ ಸಂಘವಿದು. ಮುಂಬಯಿ ಕನ್ನಡ ಲೇಖಕಿಯರಿಗೆ ವೇದಿಕೆ ಒದಗಿಸುವುದು ಇದರ ಮುಖ್ಯ ಕೆಲಸ. ಕನ್ನಡ ಸಾಹಿತ್ಯ, ಕನ್ನಡ ಭಾಷೆಯ ಸಂಸ್ಕೃತಿಯ ಕಂಪನ್ನು ಮುಂಬಯಿ ಕನ್ನಡಿಗರಿಗೆ ಊಣಬಡಿಸುತ್ತಿದೆ ಎಂದು ಡಾ| ದಾಕ್ಷಯಣಿ ಯಡವಳ್ಳಿ ಪ್ರಾಸ್ತಾವಿಕ ಭಾಷಣಗೈದÀು ಸ್ವಾಗತಿಸಿದರು.

ಮೈಸೂರು ಅಸೋಸಿಯೇಶನ್ ಮುಂಬಯಿ ಸಹಯೋಗ ಹಾಗೂ ಸೃಜನಾ ಸಂಸ್ಥೆಯ ಆಶ್ರಯದಲ್ಲಿ ನಡೆಸÀಲ್ಪಟ್ಟ ಕಾರ್ಯಕ್ರಮದ ವೇದಿಕೆಯಲ್ಲಿ ಸೃಜನಾ ರೂವಾರಿ ಡಾ| ಸುನೀತಾ ಎಂ.ಶೆಟ್ಟಿ, ಹೇಮಾ ಸದಾನಂದ್ ಅವಿೂನ್ ಉಪಸ್ಥಿರೈದ್ದು ಅತಿಥಿüಗಳಿಗೆ ಕೃತಿಗಳನ್ನಿತ್ತು ಗೌರವಿಸಿದರು. ಡಾ| ದಾಕ್ಷಾಯಿಣಿ ಯಡಹಳ್ಳಿ ಸ್ವಾಗತಿಸಿ ಪ್ರಸ್ತಾವನೆಗೈದರು. ವಾಣಿ ಶೆಟ್ಟಿ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಶಾರದಾ ಅಂಬೆಸಂಗೆ ಪ್ರಾರ್ಥನೆಯನ್ನಾಡಿ ಅಭಾರ ಮನ್ನಿಸಿದರು.

 

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here