Friday 29th, March 2024
canara news

ರಷ್ಯಾ ರಾಷ್ಟ್ರದ ಟಸ್ಖೇಂಟ್‍ನಲ್ಲಿ ಜರಗುವ 17ನೇ ಅಂತರಾಷ್ಟ್ರೀಯ ಸಾಂಸ್ಕೃತಿಕ ಸಮ್ಮೇಳನ

Published On : 02 Jul 2018   |  Reported By : Rons Bantwal


ಎಲ್.ವಿ ಅವಿೂನ್-ಪಂ| ನವೀನ್ಚoದ್ರ ಸನಿಲ್-ಚಂದ್ರಶೇಖರ ಬೆಳ್ಚಡ ಆಯ್ಕೆ

ಮುಂಬಯಿ, ಜುಲೈ.02: ಗ್ಲೋಬಲ್ ಫೌಂಡೇಶನ್ ಅಚೀವರ್ (ಜಿಎಫ್‍ಎ) ಸಂಸ್ಥೆಯು ರಷ್ಯಾ ರಾಷ್ಟ್ರದ ಟಸ್ಖೇಂಟ್ (ಉಝ್ಬೆಕೀಸ್ತಾನ್)ನ ಅಲ್ಲಿನ ಕುಶ್‍ಬೆಗಿ ಸ್ಟ್ರೀಟ್‍ನ ಅಮರ್ ಸಭಾಂಗಣದಲ್ಲಿ ಇದೇ ಜುಲೈ ಮೊದಲ ವಾರದಲ್ಲಿ ಜಾಗತಿಕ ಅರ್ಥಶಾಸ್ತ್ರದ ಬೆಳವಣಿಗೆ ಮತ್ತು ಸಾಮಾಜಿಕ ಅಭಿವೃದ್ಧಿ (ಗ್ಲೋಬಲಾಯಿಝೇಶನ್ ಆಫ್ ಇಕಾನಾಮಿಕ್ ಗ್ರೋಥ್ ಎಂಡ್ ಸೋಶಿಯಲ್ ಡೆವಲಪ್‍ಮೆಂಟ್) ವಿಚಾರಿತ ಮಹಾ ಸಮ್ಮೇಳನ ಆಯೋಜಿಸಿದೆ. ಈ ಮಹಾ ಸಮ್ಮೇಳನಕ್ಕೆ ರಾಷ್ಟ್ರದ ಆಥಿರ್üಕ ರಾಜಧಾನಿ ಮುಂಬಯಿ ಮಹಾನಗರದಲ್ಲಿನ ಪ್ರತಿಷ್ಠಿತ ಸಮಾಜ ಸೇವಕರಾದ ಕನ್ನಡ ಸಂಘ ಸಾಂತಕ್ರೂಜ್‍ನ ಅಧ್ಯಕ್ಷ ಎಲ್.ವಿ ಅವಿೂನ್, ವಾಸ್ತುತಜ್ಞ ಪಂ| ನವೀನ್‍ಚಂದ್ರ ಆರ್.ಸನಿಲ್ ಮತ್ತು ತೀಯಾ ಸಮಾಜ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಆರ್.ಬೆಳ್ಚಡ ಸಮ್ಮೇಳನಕ್ಕೆ ಆಯ್ಕೆಗೊಳಿಸಿದ್ದು ಆಯ್ದ ಬೃಹನ್ಮುಂಬಯಿನ ಪ್ರತಿಷ್ಠಿತ ಮೂರು ಮಹಾನೀಯರಿಗೂ ತಮ್ಮ ಸಾಧನೀಯ ಸೇವೆಯನ್ನು ಗುರುತಿಸಿ ಏಷಿಯಾ ಪೆಸಿಫಿಕ್ ಅಚೀವರ್ಸ್ ಅವಾರ್ಡ್ (ಂsiಚಿ Pಚಿಛಿiಜಿiಛಿ ಂಛಿhieveಡಿs ಂತಿಚಿಡಿಜ) ಪ್ರಶಸ್ತಿ ಪ್ರದಾನಿಸಿ ಗೌರವಿಸಲಾಗುವುದು ಎಂದು ಜಿಎಫ್‍ಎ ಕಾರ್ಯದರ್ಶಿ ಎ.ಕೆ ಶರ್ಮ ತಿಳಿಸಿದ್ದಾರೆ.

Chandrashekar Belchada

ಸಮ್ಮೇಳನದ ಕೊನೆಯ ದಿನ ಜು.07ನೇ ಶನಿವಾರ ಅಂತರಾಷ್ಟ್ರೀಯ ಸಾಂಸ್ಕೃತಿಕ ಸಮಿತಿ ಮತ್ತು ಜಿಎಫ್‍ಎ ಇವುಗಳ ಆಶ್ರಯದಲ್ಲಿ ಹದಿನೆಳನೇ ಅಂತರಾಷ್ಟ್ರೀಯ ಸಾಂಸ್ಕೃತಿಕ ಸಮ್ಮೇಳನ (ಇಂಟರ್‍ನೇಶನಲ್ ಕಲ್ಚರಲ್ ಫೆಸ್ಟ್-ಐಸಿಎಫ್) ಆಯೋಜಿಸಿದೆ. ಈ ಭವ್ಯ ಉತ್ಸವ `ಸಾಂಸ್ಕೃತಿಕ ಸೌರಭ'ದಲ್ಲಿ ಭಾರತೀಯ ಸಂಸ್ಕೃತಿ ಸಾರುವ ವೈವಿಧ್ಯಮಯ ನೃತ್ಯಾವಳಿ, ನೃತ್ಯರೂಪಕ, ಜಾನಪದ ಮತ್ತು ಸಾಹಿತಿಕ ಕಾರ್ಯಕ್ರಮಗಳು ಜರಗಲಿವೆ. ಅಪರಾಹ್ನ ನಡೆಯಲಿರುವ ಭವ್ಯ ಸಮಾರಂಭದಲ್ಲಿ ಗಣ್ಯಾಧಿಗಣ್ಯರು ಉಪಸ್ಥಿತರಿದ್ದು ಕನ್ನಡ ಸಂಘ ಸಾಂತಾಕ್ರೂಜ್ ಅಧ್ಯಕ್ಷ ಎಲ್.ವಿ ಅವಿೂನ್, ವಾಸ್ತುತಜ್ಞ ಪಂ| ನÀವೀನ್‍ಚಂದ್ರ ಆರ್.ಸನಿಲ್, ತೀಯಾ ಸಮಾಜ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಆರ್.ಬೆಳ್ಚಡ ಇವರಿಗೆ ವಾರ್ಷಿಕ ಪುರಸ್ಕಾರ ಪ್ರದಾನಿಸುವರು ಎಂದು ಐಸಿಎಫ್ ಭಾರತೀಯ ಸಮಿತಿ ಕಾರ್ಯಾಧ್ಯಕ್ಷ ಇಂ| ಮಂಜುನಾಥ್ ಸಾಗರ್ ತಿಳಿಸಿದ್ದಾರೆ.

L V Amin (C)

ಎಲ್.ವಿ ಅವಿೂನ್:
ಕನ್ನಡ ಸಂಘ ಸಾಂತಾಕ್ರೂಜ್ ಇದರ ಅಧ್ಯಕ್ಷರು. ಬಿಲ್ಲವರ ಅಸೋಸಿಯೇಶನ್ ಮುಂಬಯಿ ಮಾಜಿ ಅಧ್ಯಕ್ಷ, ಭಾರತ್ ಬ್ಯಾಂಕ್‍ನ ಮಾಜಿ ನಿರ್ದೇಶಕ, ಮುಂಬಯಿ ಪ್ರದೇಶ ಬಿಜೆಪಿ ಪಕ್ಷದ ಧುರೀಣ, ಮಂಗಳೂರು ಬಜಪೆ ದೊಡ್ಡಿಕಟ್ಟೆ ಶ್ರೀ ಸ್ವಯಂ ಭೂಉಮಾಮಹೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ, ಆಡಳಿತ ಮಂಡಳಿ ಅಧ್ಯಕ್ಷರಾಗಿ, ಸಮಾಜ ಸೇವಕ, ಧಾರ್ಮಿಕ ಮುಂದಾಳುವಾಗಿ, ಅಂಬಿಕಾ ಮೌಲ್ಡ್‍ಟೆಕ್ ಪ್ರೈವೇಟ್ ಲಿಮಿಟೆಡ್ (ಎಸ್ಸೆಲ್) ಸಂಸ್ಥೆಯ ಆಡಳಿತ ನಿರ್ದೇಶಕರಾಗಿ ಓರ್ವ ಯಶಸ್ವೀ ಉದ್ಯಮಿ ಆಗಿ ಮುಂಬಯಿ ಮಹಾನಗರದಲ್ಲಿ ತನ್ನದೇ ಆದ ಸ್ವಂತಿಕೆಯ ಪ್ರತಿಷ್ಠೆ ರೂಪಿಸಿ ಕೊಂಡವರು.

ಕನ್ನಡ ಸಂಘ ಸಾಂತಾಕ್ರೂಜ್ (ರಿ.) ಸಂಸ್ಥೆ ಇದೀಗ ಅರ್ವತ್ತರ ಆಚರಣೆಯಲ್ಲಿದ್ದು ವಜ್ರಮಹೋತ್ಸವ ಸಂಭ್ರಮದಲ್ಲಿ -ದೆ. ಆ ಪಯ್ಕಿ ಸುಮಾರು 18ವರ್ಷಗಳಿಂದ (ಆರು ಅವಧಿಗೆ) ನಿರಂತರವಾಗಿ ಸಂಘದ ಅಧ್ಯಕ್ಷಪದ ಅಲಂಕರಿಸಿದ್ದಾರೆ. ಸಂಘದಲ್ಲಿ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಇನ್ನಿತರ ವಿಭಿನ್ನ, ಅರ್ಥಪೂರ್ಣ ಕಾರ್ಯಕ್ರಮ -ಗಳನ್ನು ರೂಪಿಸಿ ಸಮಾಜಹಿತ ಯೋಜನೆಗÀಳನ್ನು ರೂಪಿಸಿ ವೈಶಿಷ್ಟ್ಯಮಯವಾಗಿ ಬೆಳೆಸಿ ಕೀರ್ತಿಗೆ ಪಾತ್ರರಾದ ಎಲ್ವೀ ತನ್ನ ಅಧಿಕಾರವಧಿಯಲ್ಲಿ ಸಂಘಕ್ಕೆ ಪುನ:ರ್‍ಜೀವ ನೀಡಿ ಸಂಸ್ಥೆಯಲ್ಲಿ ಬೆಳೆಸಿದವರು. ಆ ಮೂಲಕ ಬೃಹನ್ಮುಂಬಯಿ ಅಲ್ಲಿನ ನೂರಾರು ಕನ್ನಡ ಸಂಸ್ಥೆಗಳ ಪಯ್ಕಿ ಕನ್ನಡ ಸಂಘ ಸಾಂತಾಕ್ರೂಜ್‍ನ್ನು ಅಗ್ರಗಣ್ಯ ಪಂಕ್ತಿಯಲ್ಲಿರಿಸಲು ಹರಸಾಹಸ ಪಟ್ಟವರು.

Navinchandra Sanil (NRS)

1974ರಲ್ಲಿ ತನ್ನ ಸ್ವಂತಿಕೆಯ ಉದ್ಯಮವನ್ನಾಗಿಸಿ ಅಂಬಿಕಾ ಗ್ರೂಫ್ ಆಫ್ ಕಂಪೆನಿಸ್ ಸಂಸ್ಥೆಯನ್ನು ಸ್ಥಾಂಪನೆಗೊಳಿಸಿ ಪ್ರೆಶರ್ ಡೈ, ಗೃಹಪಯೋಗಿ ಸಾಮಾಗ್ರಿಗಳ ಉತ್ಪಾದನೆಗಳಾದ ಮಿಕ್ಸರ್ ಗ್ರೈಂಡರ್ ಹಾಗೂ ಸಿಲಿಂಗ್ ಪ್ಯಾನ್ ಇತ್ಯಾದಿಗಳನ್ನು ಮುಂಬಯಿ ಹಾಗೂ ಗುಜರಾತ್‍ನ ದಮನ್‍ನಲ್ಲಿ ಉತ್ಪಾಧಿಸಿ ಮಾರುಕಟ್ಟೆಗೆ ವಿತರಿಸುವಲ್ಲಿ ಯಶಕಂಡರು. ಕ್ರಮೇಣ 1980ರಲ್ಲಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಪಕ್ಷವನ್ನು ಸೇರಿ ರಾಜಕೀಯಕ್ಕೆ ಸೇರ್ಪಡೆಗೊಂಡರು. ಬಳಿಕ 1980-1994ನಲ್ಲಿ ಸಾಂತಾಕ್ರೂಜ್ ವಿಧಾನ ಸಭಾ ಕ್ಷೇತ್ರದ ಕೋಶಾಧಿಕಾರಿ, 1994-2000ನಲ್ಲಿ ಸಾಂತಾಕ್ರೂಜ್ ವಿಧಾನ ಸಭೆಯ ಅಧ್ಯಕ್ಷರಾಗಿ, 2000-2003ರÀಲ್ಲಿ ಉತ್ತರ-ಪಶ್ಚಿಮ ಮುಂಬಯಿ ಜಿಲ್ಲಾ ಉಪಾಧ್ಯಕ್ಷ, 2003-2004ರÀಲ್ಲಿ ಉತ್ತರ-ಪಶ್ಚಿಮ ಮುಂಬಯಿ ಜಿಲ್ಲಾ ಕೋಶಾಧಿಕಾರಿ, 2004-2009ರಲ್ಲಿ ಸೌತ್ ಇಂಡಿಯಾನ್ ಸೆಲ್, ಮುಂಬಯಿ ಇದರ ಅಧ್ಯಕ್ಷ, 2009-2015 ಮುಂಬಯಿ ಬಿಜೆಪಿ ಕಾರ್ಯನಿರ್ವಾಹಣ ಸಮಿತಿಯ ಸದಸ್ಯರಾಗಿ ಹಾಗೂ ಇದೀಗ ಮಹಾರಾಷ್ಟ್ರ ಬಿಜೆಪಿ ಕಾರ್ಯನಿರ್ವಾಹಣ ಸಮಿತಿಯ ಸದಸ್ಯರಾಗಿ ರಾಜಕೀಯ ಕ್ಷೇತ್ರದಲ್ಲಿ ಕಾರ್ಯನಿರ್ವಾಹಿಸುತ್ತಾ ಒಟ್ಟಾರೆ ಎರಡುವರೆ ದಶಕಗಳಲ್ಲಿ ರಾಜಕರಣದಲ್ಲಿ ತೊಡಗಿಸಿರುವರು.

ಬಳಿಕ ಸಾಮಾಜಿಕಿ ಕಳಕಳಿ ಹೊಂದಿ ಸ್ವಸಮಾಜದ ಸಂಸ್ಥೆಗಳ ಮುಖೇನ ಸಮಾಜ ಸೇವೆಗೆ ಆಸಕ್ತಿ ತೋರಿದ ಎಲ್ವೀ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಉಪಾಧ್ಯಕ್ಷ, ಅಧ್ಯಕ್ಷರಾಗಿ ಶ್ರಮಿಸುತ್ತಾ ಭಾರತ್ ಬ್ಯಾಂಕ್‍ನ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದರು. ಅಲ್ಲೂ ಸಾಲ ವಿತರಣಾ ವಿಭಾಗದ ಕಾರ್ಯಧ್ಯಕ್ಷರಾಗಿ ದಕ್ಷತೆ ಮೆರೆದಿರುವರು. ಸದ್ಯ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಮುಂಬಯಿ ಇದರ ಉಪಾಧ್ಯಕ್ಷರಾಗಿರುವರು.

ಗೌರವ-ಸನ್ಮಾನಗಳು
2001ರ ಫೆಬ್ರವರಿಯಲ್ಲಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಸಂಸ್ಥೆಯು ಇವರ ಅನನ್ಯ ಸಮಾಜ ಮತ್ತು ರಾಜಕೀಯ ಕ್ಷೇತ್ರದ ಸೇವೆಗಾಗಿ ಸನ್ಮಾನಿಸಿತು. 2001ರ ಎಪ್ರಿಲ್‍ನಲ್ಲಿ ಸಾಹಿತ್ಯ ಬಳಗ ಮುಂಬಯಿ, ಕರ್ನಾಟಕ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಂಗಳೂರು ಸಂಸ್ಥೆಯಿಂದ ತುಳು ಸಂಸ್ಕೃತಿಯ ಸೇವೆಗಾಗಿ ಸನ್ಮಾನಿಸಲ್ಪಟ್ಟರು. 2002ರಲ್ಲಿ ಸೆÉಲ್ಯೂಟ್ ಮುಂಬಯಿ ಸಂಸ್ಥೆಯಿಂದ ರಾಜಕೀಯ, ಸಾಮಾಜಿಕ ಹಾಗೂ ಆಥಿರ್sಕ ಕ್ಷೇತ್ರದ ಕೊಡಗೆಗಾಗಿ ಪುರಸ್ಕಾರಿಸಿ ಗೌರವಿಸಿತು. ಹಿಂದುಳಿದ ಸಮಾಜ ಬಾಂಧವರಿಗೆ ನೀಡಿದ ಸೇವೆಗಾಗಿ ಮತ್ತೆ ಬಿಲ್ಲವರ ಅಸೋಸಿಯೇಶನ್ ಸನ್ಮಾನಿಸಿತು. ನವೆಂಬರ್ 2005ರಲ್ಲಿ ಜ್ಞಾನ ಮಂದರ ವಿದ್ಯಾ ಮತ್ತು ಸಾಂಸ್ಕೃತಿಕ ಸಂಸ್ಥೆಯಿಂದ ಧಾರ್ಮಿಕ ಹಾಗೂ ಸಾಮಾಜಿಕ ಸೇವೆಗಾಗಿ `ಸಮಾಜ ರತ್ನ' ಬಿರುದು ನೀಡಿ ಪುರಸ್ಕಾರ ಪ್ರದಾನಿಸಿ ಗೌರವಿಸಿತು. ಮೇ. 2006 ರಲ್ಲಿ ಕರ್ನಾಟಕ ಸಂಘ ನವ ದೆಹಲಿ ಹಾಗೂ ಜ್ಞಾನ ಮಂದರ ಆಕಾಡೆಮಿ ಬೆಂಗಳೂರು ಅಯೋಜಿಸಿದ ಅಖಿಲ ಭಾರತ ಕನ್ನಡ ವಚನ ಸಾಹಿತ್ಯ ಸಮ್ಮೇಳನದಲ್ಲಿ ಭಾರತ `ಜ್ಯೋತಿ ಪುರಸ್ಕಾರ' ನೀಡಿ ಸನ್ಮಾನಿಸಿತು. 2006ರ ಡಿಸೆಂಬರ್‍ನಲ್ಲಿ ಕರ್ನಾಟಕ ಸಂಘ ಮುಂಬಯಿ ಹಾಗೂ ರಂಗ ಸಮಾಜ ಸಂಸ್ಕೃತಿ ಬೆಂಗಳೂರು ಅಯೋಜಿಸಿದ ಅಖಿಲ ಭಾರತ ಕನ್ನಡ ವಚನ ಸಾಹಿತ್ಯ ಸಮ್ಮೇಳನದಲ್ಲಿ `ಸುವರ್ಣ ಕನ್ನಡಿಗ' ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. 2017ರ ಡಿಸೆಂಬರ್‍ನಲ್ಲಿ ಕನ್ನಡ ಸಂಘ ಸಾಂತಾಕ್ರೂಜ್ ತನ್ನ ಸುವರ್ಣ ಮಹೋತ್ಸವ ಸಮಾರಂಭದಲ್ಲಿ `ಸಮಾಜ ಭೂಷಣ' ಪುರಸ್ಕಾರ ನೀಡಲಾಯಿತು. 2017ರ ಜನವರಿಯಲ್ಲಿ ಬಿಲ್ಲವರ ಅಸೋಸಿಯೇಶನ್ ತನ್ನ 85ನೇ ಸಂಸ್ಥಾಪಕ ದಿನಾಚರಣೆಯ ಶುಭಾವಸರದಲ್ಲಿ ವಿವಿಧ ಕ್ಷೇತ್ರಗಳಲ್ಲಿ ನೀಡಿದ ಸೇವೆಗಾಗಿ ಸನ್ಮಾನಿಸಿತು. 2017ನೇ ಸೆಪ್ಟೆಂಬರ್‍ನಲ್ಲಿ ಕಲ್ವಾ ಫ್ರೆಂಡ್ಸ್ ತನ್ನ 9ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ `ಯಶಸ್ವಿ ಸಂಧಾನಕಾರ' ಪ್ರಶಸ್ತಿ ನೀಡಿ ಗೌರವಿಸಿದೆ.

ಪಂ| ನವೀನ್‍ಚಂದ್ರ ಆರ್.ಸನಿಲ್:
ಸ್ವಾತಂತ್ರ್ಯ ಹೋರಾಟಗಾರ ಹಾಗೂ ಹೆಸರಾಂತ ಸಮಾಜ ಸೇವಕ ಮತ್ತು ಮುಂಬಯಿ ಶಿಕ್ಷಣ ಕ್ಷೇತ್ರದ ದಿಗ್ಗಜ ಉಡುಪಿ ಜಿಲ್ಲೆಯ ಬಡ ಎರ್ಮಾಳು ಗರಡಿ ಮನೆತನದ (ಸ್ವರ್ಗಸ್ಥÀ) ರಾಮ ಬಿ.ಸನಿಲ್ ಮತ್ತು ಬಜ್ಪೆ ದೊಡ್ಡಿಕಟ್ಟೆ ಮನೆತನದ ಗುಲಾಬಿ ರಾಮ ಸನಿಲ್ ದಂಪತಿ ಸುಪುತ್ರ ನವೀನ್‍ಚÀಂದ್ರ ಸನಿಲ್ ಅವರು ಸ್ಥಾಪತ್ಯವೇದ ವಾಸ್ತು ಪರಂಗತ ಪಂಡಿತರೆಂದೇ ಪ್ರಸಿದ್ಧರು. ಸನಿಲ್ ಅವರು ಕರ್ನಾಟಕ-ಮಹಾರಾಷ್ಟ್ರ ರಾಜ್ಯಗಳಾದ್ಯಂತ ಸೇರಿದಂತೆ ಹತ್ತಾರು ಪ್ರಸಿದ್ಧ ದೇವಸ್ಥಾನಗಳ ವಾಸ್ತು ಸಲಹಾಗಾರರಾಗಿ ಪ್ರಸಿದ್ಧರು.

ಮುಂಬಯಿ ಮಹಾನಗರಿಯ ಫೆÇೀರ್ಟ್ ಕನ್ನಡ ಭವನ ಶಾಲೆಯಲ್ಲಿ ಓದು ಪೂರೈಸಿ ಮುಂಬಯಿ ಅಲ್ಲಿನ ಲಾಲಾ ಲಜಪತರಾಯ್ ಕಾಲೇಜ್‍ನಲ್ಲಿ ಬಿ.ಕಾಂ ಪದವೀಧರರಾದರು. ಭಾರತೀಯ ರಕ್ಷಣಾ ಪಡೆಯ ಲೆಕ್ಕಪತ್ರ ವಿಭಾಗದಲ್ಲಿ ಸುಮಾರು ಎರಡು ದಶಕಕ್ಕೂ ಅಧಿಕ ಸೇವೆ ಸಲ್ಲಿಸಿ ಬಳಿಕ ಸೇವೆಯಿಂದ ಸ್ವಯಂ ನಿವೃತ್ತಿಯನ್ನು ಪಡೆದು ಸರ್ವ ಜನರಿಗೂ ಉಪಯುಕ್ತ ಹಾಗೂ ಅಗತ್ಯವುಳ್ಳ ವೇದ ಮೂಲದ ವಾಸ್ತುಶಾಸ್ತ್ರದ ಆಳವಾದ ಅಧ್ಯಾಯನಕ್ಕೆ ತೊಡಗಿದ ಮೇಧಾವಿ ಆಗಿದ್ದಾರೆ.

ವಾಸಸ್ಥಳ, ಕಟ್ಟಡ, ಶಾಲೆ, ಆಸ್ಪತ್ರೆ ಸ್ಥಳಗಳು, ಔದ್ಯೋಗಿಕ ಮತ್ತು ಉದ್ಯಮಸ್ಥಾನ ಸೇರಿದಂತೆ ಮುಖ್ಯವಾಗಿ ಪಾವಿತ್ರ್ಯತೆಯ ದೈವ ಯಾ ದೇವಸ್ಥಾನÀಗಳ ವಾಸ್ತುಗಳನ್ನು ನಿಷ್ಠಾವುಳ್ಳರಾಗಿ ತಿಳಿಸುವ ವಾಸ್ತುಪಂಡಿತ. ಇವರು ಮಸ್ಕತ್ (ಒಮಾನ್), ಕುವೇಯ್ಟ್ ಹಾಗೂ ಕತಾರ್ ರಾಷ್ಟ್ರಗಳಿಗೂ ಭೇಟಿಗೈದು ವಾಸ್ತು ಸಂಶೋಧನೆ ಮತ್ತು ಪರ್ಯಾಲೋಚನಾ ಅಧ್ಯಯನ ನಡೆಸಿದ್ದಾರೆ.

ಪ್ರತಿಷ್ಠಿತ ಮನೆತನದ ಹಿನ್ನೆಲೆಯೊಂದಿಗೆ ಬೆಳೆದರೂ ತೆರೆಮರೆಯಲ್ಲಿದ್ದು ಅಗತ್ಯವುಳ್ಳವರಿಗೆ ಸದಾ ಅಭಯಸ್ತ ಚಾಚುವ ದಾನಿಯಲ್ಲೊಬ್ಬರು. ಸರಳ ವ್ಯಕ್ತಿತ್ವ ರೂಢಿಸಿ ತಾನು ಕರಗತಗೊಳಿಸಿಕೊಂಡ ವಾಸ್ತು ವಿದ್ಯೆಯನ್ನು ನಿಷ್ಠುರತೆಯಿಂದಾದರೂ ಪ್ರಾಮಾಣಿಕವಾಗಿ ಪ್ರಯೋಗಿಸುವ ನಿಷ್ಠಾವಂತರು. ಶ್ರೀಮಂತ ಬಡವ ಎನ್ನುವ ತಾರತಮ್ಯವಿಲ್ಲದೆ ಸರ್ವ ಜನರಿಗೂ ಉಪಯುಕ್ತ ಹಾಗೂ ಆಗತ್ಯವುಳ್ಳ ವೇದಮೂಲದ ವಾಸ್ತು ಶಾಸ್ತ್ರವನ್ನು ಎಲ್ಲರಿಗೂ ಫಲಿಸುವಲ್ಲಿ ಸದಾ ಸಿದ್ಧರು. ಕ್ರೀಯಾಶೀಲ ಸಾಧಕರೆಂದಿನಿಸಿದರೂ ಎಲ್ಲೂ ತನ್ನ ಹೆಗ್ಗಳಿಕೆಯನ್ನು ತೋರ್ಪಡಿಸದೆ ಸಾಧನೆಯ ಹಾದಿಯಲ್ಲಿ ಮುನ್ನಡೆಯುವ ಸಜ್ಜನ ಸದ್ಗುಣವಂತರು. ಹಿಮಾಲಯದ ತಪ್ಪಲಿನವರೆಗೂ ಪಯಣಿಸಿ ಅಲ್ಲಿ ಅಧ್ಯಯನ ನಡೆಸಿ ವಾಸ್ತು ವಿದ್ಯಾಪಂಡಿತ್ ಮತ್ತು ವಾಸ್ತುವಿಶಾರದ ಎಂಬ ಎರಡು ಪದವಿಗಳನ್ನು ಪ್ರಾಪ್ತಿಸಿ ವಾಸ್ತು ಪಾಂಡಿತ್ಯವನ್ನು ಮೈಗೂಡಿಸಿದವರು.

ನೆರೂಳ್‍ನ ಶ್ರೀ ಶನೀಶ್ವರ ದೇವಸ್ಥಾನ, ಘನ್ಸೋಲಿಯ ಶ್ರೀ ಮೂಕಾಂಬಿಕಾ ದೇವಸ್ಥಾನ, ಐರೋಲಿಯ ಶ್ರೀ ದುರ್ಗಾಪರಮೇಶ್ವರಿ ಮಂದಿರ, ಹೀಗೆ ಸುಮಾರು 46ಕ್ಕೂ ಮಿಕ್ಕಿದ ದೇವಸ್ಥಾನಗಳ ನಿರ್ಮಾಣಕ್ಕೆ ವಾಸ್ತುವಿನ ಸಲಹೆ ಸೂಚನೆಗಳನ್ನು ನೀಡಿ ಆ ಕ್ಷೇತ್ರಗಳ ಪ್ರಸಿದ್ಧಿಗೆ ಕಾರಣೀಭೂತರಾದ ಶ್ರೇಯಸ್ಸು ಇವರಿಗಿದೆ. ಸಕಲಗುಣ ಸಂಪನ್ನರೆಣಿಸಿದ ನವೀನ್‍ಚಂದ್ರರು ಪ್ರಚಾರ ಪುರಸ್ಕಾರಗಳಿಂದ ದೂರವಿದ್ದರೂ, ತಮ್ಮನ್ನು ಆರಸಿ ಬಂದ ಬಿರುದು ಸನ್ಮಾನಗಳು ಹಲವಾರು. ಸಮಾಜರತ್ನ, ಜ್ಞಾನ ಸರಸ್ವತಿ, ಕರ್ನಾಟಕ ಚೇತನ, ಡಾ| ಬಿ.ಆರ್ ಅಂಬೇಡ್ಕರ್ ಪ್ರಶಸ್ತಿ, ಸಿದ್ಧಾರ್ಥ ಪ್ರಶಸ್ತಿ, ಕರ್ನಾಟಕ ಜ್ಯೋತಿ ಮುಂತಾದ ರಾಜ್ಯ ಪ್ರಶಸ್ತಿಗಳು ತಮ್ಮ ಶ್ರೇಯಸ್ಸಿನ ಮಡಿಲನ್ನು ಸೇರಿದೆ. ಅಲ್ಲದೆ ಸ್ವಾಮಿ ವಿವೇಕಾನಂದ ರಾಷ್ಟ್ರ ಪ್ರಶಸ್ತಿ ಮತ್ತು ಅಬುಧಾಬಿಯಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದಲ್ಲಿ ವಿಶ್ವಮಾನ್ಯರು (ಉಟobಚಿಟ ಒಚಿಟಿ-2012 ಂತಿಚಿಡಿಜ) ಅಂತರಾಷ್ಟ್ರೀಯ ಪ್ರಶಸ್ತಿ ಪಡೆದ ಹಿರಿಮೆ ಇವರದ್ದು.

ವಾಸ್ತು ವಿಜ್ಞಾನ ಅಧ್ಯಯನಕ್ಕಾಗಿ ಇಂಟರ್‍ನ್ಯಾಷನಲ್ ವಾಸ್ತು ಅಸೋಸಿಯೇಶನ್ ಸರ್ಟಿಫಿಕೇಟ್ ಆಫ್ ಮಿಲಿನಿಯಂ ಪ್ರದಾನಿಸಿದ ವಾಸ್ತುಮಾರ್ತಾಂಡ ಎಂಬ ಬಿರುದು ಶ್ರೀ ಶಂಕರಾಚಾರ್ಯರ ಕಮಲ ಹಸ್ತದಿಂದ ಮುಡಿಗೇರಿಸಿ ಕೊಂಡ ವಾಸ್ತುಮೇಧಾವಿಯೂ ಇವರಾಗಿದ್ದಾರೆ. ರಾಷ್ಟ್ರವ್ಯಾಪಿ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳಿಗೆ ಪಯಣಿಸಿ ತಮ್ಮ ವಾಸ್ತುಪಾಂಡಿತ್ಯ ಸಲಹೆಯನ್ನೀಡಿ ಅಂತರಾಷ್ಟ್ರೀಯ ಪ್ರಸಿದ್ಧಿ ವಾಸ್ತುತಜ್ಞರೆಣಿಸಿ ರುವರು. `ವಾಸ್ತು ವಿದ್ಯಾ ಪಂಡಿತ್' ಮತ್ತು `ವಾಸ್ತು ವಿಷಾರದ' ವಿದ್ಯೆಯನ್ನು ಕರಗತ ಮಾಡಿ ಕೊಂಡಿರುವರು. ಕರ್ನಾಟಕ ರಾಜ್ಯ ಮಟ್ಟದ 2012ನೇ ಸಾಲಿನ ಪ್ರತಿಷ್ಠಿತ `ಸೌರಭ ಪ್ರಶಸ್ತಿ' ಭಾಜನರಾದ ಇವರು `ವಾಸ್ತು ಮಾರ್ತಾಂಡ' ಪಂಡಿತರಾಗಿಯೇ ಪ್ರಸಿದ್ಧರು. ಕರ್ನಾಟಕ ರಾಜ್ಯ `ಸೌರಭ ಪ್ರಶಸ್ತಿ' ಪುರಸ್ಕೃತರು.




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here