Saturday 20th, April 2024
canara news

ಗೋಕುಲವಾಣಿ ವಿಶೇಷಾಂಕ ಅಖಿಲ ಭಾರತ ಕನ್ನಡ ಕಥಾ ಸ್ಪರ್ಧೆ-ಕಥೆಗಳಿಗೆ ಆಹ್ವಾನ

Published On : 05 Jul 2018   |  Reported By : Rons Bantwal


ಮುಂಬಯಿ, ಜು.06: ಬಿ.ಎಸ್.ಕೆ.ಬಿ ಅಸೋಸಿಯೇಶನ್ ಮುಂಬಯಿ ತನ್ನ ಮುಖವಾಣಿಯಾಗಿ ಪ್ರಕಟಿಸುತ್ತಿರುವ `ಗೋಕುಲವಾಣಿ' ಮಾಸಪತ್ರಿಕೆ ನವಂಬರ್ 2018ರ ಸಂಚಿಕೆಯನ್ನು ದೀಪಾವಳಿ ವಿಶೇಷ ಸಂಚಿಕೆಯಾಗಿ ಹೊರತರುತ್ತಿದೆ. ಆ ಪ್ರಯುಕ್ತ ಅಖಿಲ ಭಾರತ ಮಟ್ಟದ ಕನ್ನಡ ಕಥಾ ಸ್ಪರ್ಧೆಯನ್ನು ಆಯೋಜಿಸಿದೆ. ಕಥೆಗಳಿಗೆ ಪ್ರಥಮ(ರೂ. 10,000/-), ದ್ವಿತೀಯ (ರೂ. 5,000/-) ಹಾಗೂ ತೃತೀಯ (ರೂ.3,000/-) ಬಹುಮಾನವನ್ನು ಅರ್ಹ ಕಥೆಗಳಿಗೆ ನೀಡಲಾಗುತ್ತದೆ. ತೀರ್ಪುಗಾರರ ಮೆಚ್ಚುಗೆ ಪಡೆದ ಎರಡು ಕಥೆಗಳಿಗೆ ತಲಾ ರೂ. 1,000/- ಬಹುಮಾನ ಕೊಡಲಾಗುವುದು ಎಂದು `ಗೋಕುಲವಾಣಿ' ಗೌರವ ಸಂಪಾದಕ ಡಾ| ವ್ಯಾಸರಾಯ ನಿಂಜೂರು ತಿಳಿಸಿದ್ದಾರೆ.

ಸ್ಪರ್ಧೆಗೆ ಕೆಲವೊಂದು ನಿಯಮಗಳು ಇದ್ದು, ಕಥೆ ಸ್ವರಚಿತವಾಗಿರಬೇಕು. ಅನುವಾದ, ರೂಪಾಂತರ, ಅನುಕರಣೆಗಳಿಗೆ ಆಸ್ಪದವಿಲ್ಲ. ಓರ್ವ ಲೇಖಕರು ಒಂದೇ ಕಥೆ ಕಳುಹಿಸತಕ್ಕದ್ದು. ಕಥೆ 2000 ಶಬ್ದಗಳ ಮಿತಿಯಲ್ಲಿ ಇರಬೇಕು. ಕಾಗದದ ಒಂದೇ ಮಗ್ಗುಲಲ್ಲಿ ಕೈಬರಹ ಅಥವಾ ಕಂಪ್ಯೂಟರೀಕೃತ ರೂಪದಲ್ಲಿರುವ ಕಥೆಗಳನ್ನು ಸ್ಪೀಡ್ ಪೆÇೀಸ್ಟ್ ಅಥವಾ ಈಮೇಲ್ ಮುಖಾಂತರ ಕೆಳಗೆ ನೀಡಿದ ವಿಳಾಸಕ್ಕೆ ಕಳಿಸಬಹುದು. ಪ್ರವೇಶ ಶುಲ್ಕವಿಲ್ಲ. ಲೇಖಕರ ಹೆಸರನ್ನು ಪ್ರತ್ಯೇಕ ಹಾಳೆಯೊಂದರಲ್ಲಿ ಲಗತ್ತೀಕರಿಸಬೇಕು. ಇದರಲ್ಲಿ ಕಥೆಯ ಹೆಸರು, ಲೇಖಕರ ಹೆಸರು, ವಿಳಾಸ, ಮೊಬೈಲ್ ನಂಬರ್, ಈಮೇಲ್ ನಮೂದಿಸಬೇಕು. ಕಥೆಯ ಯಾವುದೇ ಪುಟದಲ್ಲಿ ಲೇಖಕರ ಹೆಸರು ಇದ್ದಲ್ಲಿ ಕಥೆ ಅಸ್ವೀಕೃತವಾಗುತ್ತದೆ.

ಸ್ಪರ್ಧೆಗೆ ಬಂದ ಕಥೆಗಳನ್ನು ಹಿಂತಿರುಗಿಸಲಾಗುವುದಿಲ್ಲ. ತೀರ್ಪುಗಾರರ ತೀರ್ಮಾನವೇ ಅಂತಿಮ. ಯಾವುದೇ ಪತ್ರ ವ್ಯವಹಾರ, ದೂರವಾಣಿ ಕರೆ ನಿಷಿದ್ಧ. ಕಥೆಗಳನ್ನು ಅಂತಿಮವಾಗಿ 25.9.2018. ಸ್ವೀಕರಿಸಲಾಗುವುದು. ಸ್ಪರ್ಧೆಯ ಫಲಿತಾಂಶ ಗೋಕುಲವಾಣಿ ವಿಶೇಷಾಂಕ ಹಾಗೂ ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟಿಸಲಾಗುವುದು. ಕಥೆಗಳನ್ನು Editor, Gokulavani, Kannada Monthly, BSKB Association, Plot No. 273, Gokul Marg, Sion (E), Mumbai 400 022. Email: ಇಲ್ಲಿಗೆ ಕಳುಹಿಸಿ ಕೊಡುವರೇ ವಿನಂತಿ.

 

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here