Thursday 28th, March 2024
canara news

ಹನ್ನೆರಡನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಕರ್ನಾಟಕ ಸಂಘ ಮುಂಬಯಿ

Published On : 05 Jul 2018   |  Reported By : Ronida Mumbai


(ರೋನಿಡಾ ಮುಂಬಯಿ)

ಮುಂಬಯಿ, ಜು.05: ಬಂಟರ ಸಂಘ ಕುರ್ಲಾ ಇಲ್ಲಿ ಇದೇ. ಜುಲೈ.08ರ ಆದಿತ್ಯವಾರ ಮಧ್ಯಾಹ್ನ 2.30 ಗಂಟೆಗೆ ಸಂಘವು 12ನೇ ವಾರ್ಷಿಕೋತ್ಸವ ಸಂಭ್ರಮಿಸಲಿಸಿದೆ ಎಂದು ಸಂಘದ ಅಧ್ಯಕ್ಷ ಹ್ಯಾರಿ ಆರ್.ಸಿಕ್ವೇರ ತಿಳಿಸಿದ್ದಾರೆ.

ವಾರ್ಷಿಕೋತ್ಸವ ಪ್ರಯುಕ್ತ ಮಂಗಳೂರು ಮತ್ತು ಮುಂಬಯಿ ಮಹಾನಗರದ ವಿವಿಧ ಸಂಘ ಸಂಸ್ಥೆಗಳು ಮತ್ತು ಭಜನೆ ಮಂಡಳಿಗಳಿಗೆ ಕುಣಿತ, ಭಜನೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ. (ಮೊದಲನೆ ಬಹುಮಾನ 20,000/- ದ್ವಿತೀಯ 15,000/- ತೃತೀಯ 10,000/-) ನೀಡಲಾಗುವುದು ಎಂದು ಗಣೇಶ್ ಬಲ್ಯಾಯ ತಿಳಿಸಿದ್ದಾರೆ.

   

 Krishna B.Shetty                        Hary R.Sequier

   

Rajendra Rao                                Ganesh Balyaya

ಈ ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯದ ಸಚಿವರು, ಅನೇಕ ಸರಕಾರೇತರ ವ್ಯಕ್ತಿಗಳು ಆಗಮಿಸಲಿದ್ದು, ಕಾರ್ಯಕ್ರಮದಲ್ಲಿ ಅನೇಕ ಗಣ್ಯವ್ಯಕ್ತಿಗಳನ್ನು ಸನ್ಮಾನಿಸಲಾಗುವುದು. ಕಾರ್ಯಕ್ರಮದ ಕೊನೆಯಲ್ಲಿ ತುಳು ಕನ್ನಡ ಮಕ್ಕಳಿಗೆ ವಿದ್ಯಾಥಿರ್ü ವೇತನವನ್ನು ನೀಡಲಾಗುವುದು. ಕಾರ್ಯಕ್ರಮದಲ್ಲಿ ಸಂಘದ ಸದಸ್ಯರು, ತುಳುಕನ್ನಡಾಭಿಮಾನಿ ಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದು ಸಹಕರಿಸಬೇಕು ಎಂದು ಕಾರ್ಯದರ್ಶಿ ರಾಜೇಂದ್ರ ರಾವ್ ಈ ಮೂಲಕ ತಿಳಿಸಿದ್ದಾರೆ.

ಸಂಘದ ಕುರಿತು.....
ಕರ್ನಾಟಕ ಮತ್ತು ಮುಂಬಯಿಯ ಅನೇಕ ಸಂಘ ಸಂಸ್ಥೆಗಳು ಹುಟ್ಟಿ ಹೆಮ್ಮರವಾಗಿ ಬೆಳೆದು ನಾನಾ ರೀತಿಯ ಸಮಾಜಪರ ಕಾರ್ಯವೆಸಗುತ್ತಾ, ಜಾತೀಯ ಹಾಗೂ ಇನ್ನಿತರ ಜಾತೀಯ ಹೆಸರುಗಳನ್ನು ಮುಂದಿಟ್ಟುಕೊಂಡು ಸಮಾಜದಲ್ಲಿ ತಮ್ಮದೇ ಆದ ಛಾಪನ್ನು ಪ್ರಕಟಿಸಿವೆ. ಈ ರೀತಿಯ ಸಂಘ ಸಂಸ್ಥೆಗಳಿಂದ ನಮ್ಮ ಕನ್ನಡ, ತುಳು ಬಾಂಧವರು ಸದುಪಯೋಗ ಪಡೆದುಕೊಂಡಿರುತ್ತಾರೆ. ಒಂದು ಸಂಸ್ಥೆ ಇನ್ನೊಂದು ಸಂಸ್ಥೆಗೆ ಮಾದರಿ ಎಂಬಂತೆ ಅನ್ಯೋನ್ಯತೆಯಿಂದ ಹಲವಾರು ಬಾರಿ ವಿವಿಧ ಸಂಸ್ಥೆಗಳ ಪದಾಧಿಕಾರಿಗಳು ಒಂದೇ ವೇದಿಕೆಯಲ್ಲಿ ಕಾಣುತ್ತಾರೆ. ಇದೇ ಮಾದರಿಯಲ್ಲಿ 2006ರಲ್ಲಿ ಅಂಧೇರಿ ಪರಿಸರದ ಕನ್ನಡ, ತುಳು ಹಾಗೂ ಕೊಂಕಣಿ ಜನರೊಂದಿಗೆ ಮರೋಲ್, ಸಾಕಿನಾಕ, ಪೆÇವಾಯಿ, ಕಮಾನಿ ಮತ್ತು ಅಂಧೇರಿ ಇತರ ಪರಿಸರದ ಸಮಾನಮನಸ್ಕರಿಂದ ಹುಟ್ಟಿಕೊಂಡ ಸಂಸ್ಥೆ0iÉುೀ ಕರ್ನಾಟಕ ಸಂಘ ಅಂಧೇರಿ.

ಜಾತಿ ಮತ ಭೇದವಿಲ್ಲದೆ ಮುಂದುವರಿದ ಈ ಸಂಸ್ಥೆ ಮಹಾರಾಷ್ಟ್ರದಲ್ಲಿ ಸರಕಾರದಲ್ಲಿನೋಂದಣಿಯಾಗಿ ತನ್ನದೇ ಆದ ಕಛೇರಿಯನ್ನು ಮರೋಲ್‍ನಲ್ಲಿ ಹೊಂದಿರುತ್ತದೆ. ಕೃಷ್ಣ ಬಿ. ಶೆಟ್ಟಿ ಮುಂದಾಳತ್ವದಲ್ಲಿ ಸ್ಥಾಪನೆಯಾದ ಈ ಸಂಘದ ಅಧ್ಯಕ್ಷರಾಗಿ ಭಾಸ್ಕರ್ ಸುವರ್ಣ ಸಸಿಹಿತ್ಲು, ಕೆಂಜೂರುಮನೆ ಆಶಿತ್ ಶೆಟ್ಟಿ ಅವರು ಮತ್ತು ಹಾಲಿ ಅಧ್ಯಕ್ಷರಾಗಿ ಹ್ಯಾರಿ ಆರ್.ಸಿಕ್ವೇರ ಮೂಡುಪೆರಾರ್ ಸಂಘದ ಉಸ್ತುವರಿಯನ್ನು ಜವಾಬ್ದಾರಿಯುತ ಮತ್ತು ಯಶಸ್ವಿಯಾಗಿ ಪೂರೈಸಿದ್ದಾರೆ. ಪ್ರತೀ ವರ್ಷ ಸಂಘವು 160 ಬಡ ವಿದ್ಯಾಥಿರ್üಗಳಿಗೆ ವಿದ್ಯಾಥಿರ್ü ವೇತನವನ್ನು ನೀಡುತ್ತಾ ಶಿಕ್ಷಣ ಕ್ಷೇತ್ರಕ್ಕೆ ವಿಶೇಷವಾಗಿ ಪೆÇ್ರೀತ್ಸಾಹ ನೀಡುತ್ತಾ ಬಂದಿರುತ್ತದೆ. ಅನೇಕ ವಿದ್ವಾಂಸರು, ಮೇಧಾವಿಗಳು ಹಾಗೂ ಹೆಸರಾಂತ ವೈಧ್ಯರೂ ಸಂಘದ ಕರೆಗೆ ಓಗೊಟ್ಟು ವರ್ಷಂಪ್ರತಿ ವಿದ್ಯಾಥಿರ್üಗಳಿಗಾಗಿ ವ್ಯಕ್ತಿತ್ವ ವಿಕಸನಗಳ ಶಿಬಿರವನ್ನು ನಡೆಸಿಕೊಟ್ಟಿದ್ದಾರೆ. ಅಲ್ಲದೆ ಅನೇಕ ಸಮಾಜಪರ ಗಣ್ಯರನ್ನೂ ಸಮಾಜ ಸೇವಾಕಾರ್ಯಕರ್ತರನ್ನೂ ವಿಶೇಷವಾಗಿ ಶಿಕ್ಷಣ ಕ್ಷೇತ್ರದಲ್ಲಿ ದುಡಿದಿರುವ ಮಹನೀಯರನ್ನು ಗುರುತಿಸಿ ಅವರವರ ಸೇವೆಗಳಿಗನುಗುಣವಾಗಿ ಸನ್ಮಾನಿಸಲಾಗಿದೆ.

ವೃದ್ಧಾಶ್ರಮವೊಂದನ್ನು ಸ್ಥಾಪಸಿ, ವೃದ್ಧಾಪ್ಯದಿಂದ ಬಳಲುವ ನಿರಾಶ್ರಿತ ಒಡಲುಗಳನ್ನು ಹಾಗೂ ನೊಂದ ಮನಸ್ಸುಗಳನ್ನು ಸಾಂತ್ವನಿಸುವ ನಿಟ್ಟಿನಲ್ಲಿ ನಮ್ಮ ಸಂಘವು ಕನಸು ಕಾಣುತ್ತಿದೆ. ಅಂತೆ0iÉುೀ ನಮ್ಮ ಪದಾಧಿಕಾರಿüಗಳೆಲ್ಲರ ಮತ್ತು ಮುಂಬಯಿಯ ಕೊಡುಗೈ ಧಾನಿಗಳ ನೆರವಿನಿಂದ ಉಡುಪಿ ಹೆಬ್ರಿ ಸಮೀಪ, ಸಂತ್ತೆಕಟ್ಟೆಯಲ್ಲಿ 4 ಎಕರೆ ಭೂಮಿಯನ್ನು ಈಗಾಗಲೇ ಖರೀದಿಸಿದ್ದೇವೆ ಎನ್ನಲು ಹೆಮ್ಮೆಯಾಗುತ್ತಿದೆ.

ಸಂಘದ ದ್ಯೇಯೋದ್ದೇಶಗಳಿಗುಣವಾಗಿ ಬಡತನದ ರೇಖೆಗಿಂತ ಕೆಳಗೆ ಜೀವಿಸುತ್ತಿರುವ ವಿಧವೆಯವರನ್ನು ಗುರುತಿಸಿ ಅವರಿಗೂ ಧನ ಸಹಾಯಗೈಯುವ ಉದ್ದೇಶದಿಂದ ನಮ್ಮ ಮುಂಬಯಿ ಪರಿಸರದ ಸುಮಾರು 103 ಬಡ ವಿಧವೆಯರನ್ನು ಆ0iÉ್ಕು ಮಾಡಿ ಪ್ರತೀಯೊಬ್ಬರಿಗೂ ಮಾಸಿಕವಾಗಿ ತಲಾ 500/- ರೂಪಾಯಿ ಅಂತೆ ವಿಧವಾ ವೇತನವನ್ನು ಸಂಘವು ಸತತವಾಗಿ ಕಳೆದ 10 ವರ್ಷಗಳಿಂದ ನೀಡುತ್ತಿದೆ. ಜಾತಿ ಮತ ಬೇದವಿಲ್ಲದ ಈ ಯೋಜನೆಯನ್ನು ಹಮ್ಮಿಕೊಂಡಿರುವ ನಮ್ಮ ಸಂಘವು ಸರಕಾರೇತರ ಪ್ರಪ್ರಥಮ ಸಂಘ ಎಂದು ಹೇಳಿ ಕೊಳ್ಳಲು ಅಭಿಮಾನವಾಗುತ್ತಿದೆ.

ನಮ್ಮ ಈ ಸಂಘದಿಂದ ರಕ್ತದಾನ ಶಿಬಿರ, ವಾರ್ಷಿಕ ಸತ್ಯನಾರಾಯಣ ಪೂಜೆ, ಹಳದಿ ಕುಂಕುಮ, ವಾರ್ಷಿಕ ಗಣೋಶೋತ್ಸವವು ನಿರಂತರ ನಡೆಯುತ್ತಿದೆ. ಅಂಗವಿಕಲರಿಗಾಗಿ ಸಲಕರಣೆಗಳನ್ನು ವಿತರಿಸಲಾಗಿದೆ. ಸಂಘದ ಕಛೇರಿಯಲ್ಲಿ ಉಚಿತವಾಗಿ ಯೋಗ ಶಿಕ್ಷಣ ಮತ್ತು ಯೋಗಾಭ್ಯಾಸ ತರಬೇತಿಯನ್ನು ಕಳೆದ 9 ವರ್ಷಗಳಿಂದ ನಡೆಸುತ್ತಿದ್ದೇವೆ. ಬಡವರ ಮತ್ತು ನಿರಾಶ್ರಿತರ ಮದುವೆ ಸಮಾರಂಭಗಳಿಗಾಗಿ ಜಾತಿ ಮತ ಭೇದವಿಲ್ಲದೆ ಧನ ಸಹಾಯ ಮಾಡಿರುತ್ತೇವೆ.

ಸಂಘದ ಈ ಚಟುವಟಿಕೆಗಳನ್ನು ಗಮನಿಸಿ ಧರ್ಮಸ್ಥಳ ವೀರೇಂದ್ರ ಹೆಗ್ಗಡೆ ಅವರು ಮೆಚ್ಚುಗೆ ವ್ಯಕ್ತಪಡಿಸಿ ಲಿಖಿತಪತ್ರವನ್ನು ನೀಡಿರುತ್ತಾರೆ. ಮುಂಬಯಿಯ ಅನೇಕ ಗಣ್ಯರ ಮನ್ನಣೆಗೂ ಪಾತ್ರರಾಗಿದ್ದೇವೆ. ಡಾ| ಸುನಿತಾ ಎಂ.ಶೆಟ್ಟಿ ಅವರು ಸ್ವತ:ಸಂಘದ ಕಛೇರಿಗೆ ಆಗಮಿಸಿ ವಿಧವಾ ವೇತನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತನ್ನ ಕೈಯಿಂದಲೇ ವಿಧವಾ ವೇತನ ವಿತರಣೆ ಮಾಡಿರುತ್ತಾರೆ. ಈ ಸಂಘದ ವಿಧವಾ ವೇತನ ಉದ್ಘಾಟನಾ ಸಮಾರಂಭವನ್ನು ಭಂಟರ ಭವನ ಸಭಾಗೃಹದಲ್ಲಿ ಬಿಜೆಪಿ ನೇತಾರ ದಿವಂಗತ ಪ್ರಮೋದ್ ಮಹಾಜನ್‍ರ ಪತ್ನಿ ರೇಖಾ ಮಹಾಜನ್ ಮತ್ತು ಕರ್ನಾಟಕ ಸರಕಾರದ ಒಐಅ ಭಾರತಿ ಶೆಟ್ಟಿಯವರು ಉದ್ಘಾಟಿಸಿದ್ದರು.
ಕೇವಲ ಮಹಿಳೆಯರೇ ಈ ವೇದಿಕೆಯಲ್ಲಿ ಉಪಸ್ಥಿತರಿದ್ದು ಈ ಕಾರ್ಯಕ್ರಮಕ್ಕೆ ಶುಭ ಹಾರೈಸಿದ್ದರು.

ಜಯಕೃಷ್ಣ ಎ.ಶೆಟ್ಟಿ, ವೀಕೇ ಸಮೂಹದ ಕರುಣಾಕರ್ ಶೆಟ್ಟಿ, ಕಡಂದಲೆ ಸುರೇಶ್ ಭಂಡಾರಿ, ನಾಗರಾಜ ಪಡುಕೋಣೆ, ಬಿ. ಗಣಪತಿ, ಮಾಹಿಮ್ ವಿಶ್ವನಾಥ ಶೆಟ್ಟಿ, ಎನ್.ಟಿ ಪೂಜಾರಿ, ಪ್ರಕಾಶ್ ಡಿಸೋಜ (ಡೆನ್), ಅಶೋಕ್ ಕೋಟ್ಯಾನ್, ಸುಧಾಕರ್ ಪೂಜಾರಿ ಪೆÇವಾಯಿ, ಲತಾ ಜಯರಾಮ ಶೆಟ್ಟಿ, ಜಯಪ್ರಕಾಶ್ ಶೆಟ್ಟಿ, ಶ್ರೀನಿವಾಸ ಸಾಲಿಯನ್, ಕಾಪು ಬೈರುಗುತ್ತಿನ ರಮೇಶ್ ಶೆಟ್ಟಿ, ಸ್ಟ್ರಯ್ಕಾನ್ ಬಿಲ್ಡರ್ ಹಾಗೂ ಡೆವಲಾಪರ್ಸ್‍ನ ಸುರೇಶ್ ಶೆಟ್ಟಿ, ಸಾಯಿಕೇರ್‍ನ ಸುರೇಂದ್ರ ಎ.ಪೂಜಾರಿ, ರವಿ ಕೋಟ್ಯಾನ್, ಮಾಧವ್ ಶೆಟ್ಟಿ, ಮಾಣಿಲ ಕ್ಷೇತ್ರ ಮೋಹನ್‍ದಾಸ್ ಸ್ವಾಮಿಜಿ, ಕೈರಬೆಟ್ಟು ವಿಶ್ವನಾಥ ಭಟ್, ಎಸ್.ಎನ್ ಉಡುಪ, ರಾಜೇಶ್ ಸಾಮಗ, ಪಿ.ಧನಂಜಯ ಶೆಟ್ಟಿ ಹಾಗೂ ಇನ್ನಿತರ ಹಲವಾರು ಕೊಡುಗೈ ದಾನಿಗಳು ಈ ಸಂಘದ ಬೆನ್ನೆಲುಬು ಆಗಿದ್ದಾರೆ. ಇವರೆಲ್ಲರಿಗೂ ನಮ್ಮ ಈ ಸಂಘದಿಂದ ಆಥಿರ್üಕ ಸಹಾಯ ಪಡೆಯುತ್ತಿರುವ ನೂರಾರು ಬಡ ಹಿರಿಯ ಮಹಿಳೆಯರ ಆಶೀರ್ವಾದ ಸದಾ ಇರಲೆಂದು ಹಾರೈಸುತ್ತೇವೆ.

2013ರಲ್ಲಿ ಬಂಟರ ಭವನದಲ್ಲಿ ಮಹಾರಾಷ್ಟ್ರದ ಕನ್ನಡ ತುಳು ಸಂಘ ಸಂಸ್ಥೆಗಳಿಂದ ನೃತ್ಯೋತ್ಸವ ಮತ್ತು ನೃತ್ಯ ಸ್ಪರ್ದೆಯನ್ನು ಯಶಸ್ವಿಯಾಗಿ ಏರ್ಪಡಿಸಿ ಪ್ರಶಸ್ತಿಯನ್ನು ವಿತರಣೆ ಮಾಡಿರುತ್ತೆವೆ. ಈ ಸ್ಪರ್ಧೆಯಲ್ಲಿ ಸುಮಾರು 20 ತಂಡಗಳು ಭಾಗವಹಿಸಿದ್ದು ಪ್ರಥಮ ಬಹುಮಾನವನ್ನು ದೇವಾಡಿಗ ಸಂಘ ಕು0ದಾಪುರ (ಮು0ಬೈ) ಇವರು ಮತ್ತು ದ್ವಿತೀಯ ಬಹುಮಾನವನ್ನು ಬ0ಟರ ಸ0ಘದ ಪ್ರಾದೇಶಿಕ ಸಮಿತಿ ಮೀರ ಬಯ0ದರ್‍ರವರು ಹಾಗೂ ತೃತೀಯ ಬಹುಮಾನವನ್ನು ಕಲ್ಯಾಣ ಕನ್ನಡ ಸ0ಘದವರು ಪಡೆದಿರುತ್ತಾರೆ. ಕ್ರಮವಾಗಿ 15000/-, 10000/-, 5000/- ಬಹುಮಾನ ಮತ್ತು ಪ್ರಶಸ್ತಿ ಪತ್ರದೊ0ದಿಗೆ ವಿಜೇತರ ತ0ಡಗಳನ್ನುಸನ್ಮಾನಿಸಲಾಗಿದೆ.

ಅ0ಧೇರಿ ಪರಿಸರದ ಧಾರ್ಮಿಕ ಸ0ಸ್ಥೆಗಳ ಅನೇಕ ಪ್ರಮುಖರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಗಿದೆ. ಮತ್ತು ಮು0ಬೈಯ ಕನ್ನಡ ವಿಶ್ವವಿದ್ಯಾನಿಲಯದಲ್ಲಿ ಪಧವಿ ಪಡೆದ ಅನೇಕರನ್ನು ಸನ್ಮಾನಿಸಲಾಗಿದೆ. ಕಲೆ ಮತ್ತು ಸಾಮಾಜಿಕ ಕ್ಷೇತ್ರದಲ್ಲಿಯ ಸಾಧಕರನ್ನು ಸಹ ಸನ್ಮಾನಿಸಿದ್ಧೇವೆ. ನಮ್ಮ ಸಂಸ್ಥೆಯ 8ನೇ ವರ್ಷದ ವಾರ್ಷಿಕೋತ್ಸವಕ್ಕೆ ಶ್ರೀ ಶ್ರೀ ಪೇಜಾವರ ಸ್ವಾಮಿಯವರು ಆಗಮಿಸಿ ಆಶೀರ್ವದಿಸಿದ್ದಾರೆ.




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here