Tuesday 20th, November 2018
canara news

ಮಕ್ಕಳಿಗೆ ಸಂಸ್ಕøತಿ-ಸಂಸ್ಕಾರಗಳ ಅರಿವು ಬಾಲ್ಯದಲ್ಲೇ ಲಭಿಸಲಿ ಉಪ್ಪಳ ಚಿಣ್ಣರ ಕಲರವಕ್ಕೆ ಚಾಲನೆ ನೀಡಿ ಪ್ರದೀಪ್ ಕುಮಾರ್ ಕಲ್ಕೂರ

Published On : 06 Jul 2018   |  Reported By : Rons Bantwal


ಮುಂಬಯಿ, ಜು.06: ಮಾತೃಭಾಷೆ, ಸಂಸ್ಕøತಿಯ ಸಂವರ್ಧನೆಗೆ ಯುವ ತಲೆಮಾರನ್ನು ತಯಾರು ಗೊಳಿಸುವ ಹೊಣೆ ಎಲ್ಲರಮೇಲಿದೆ. ಸಂಸ್ಕøತಿ-ಸಂಸ್ಕಾರಗಳ ಅರಿವು ಎಳೆಯ ಪ್ರಾಯದಲ್ಲಿ ಲಭ್ಯವಾದಾಗ ಅಂತಹ ಮಕ್ಕಳ ಭವಿಷ್ಯ ಉಜ್ವಲವಾಗಿ ಬೆಳೆದು ತೃಪ್ತ ಬದುಕು ಸಾಕಾರವಾಗುವುದೆಂದು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅಭಿಪ್ರಾಯ ವ್ಯಕ್ತಪಡಿಸಿದರು.

ಕಾಸರಗೋಡುನ ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿಯು ಸುಬ್ಬಯ್ಯಕಟ್ಟೆಯ ತರಂಗಿಣಿ ಆರ್ಟ್ಸ್ ಮತ್ತು ಸ್ಪೋಟ್ರ್ಸ್ ಕ್ಲಬ್ ಸಹಯೋಗದಲ್ಲಿ ಗುರುವಾರ ಕುಡಾಲು ಮೇರ್ಕಳ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ "ಚಿಣ್ಣರ ಕಲರವ" ಸರಣಿ ಕಾರ್ಯಕ್ರಮ ಉದ್ಘಾಟಿಸಿ ಕಲ್ಕೂರ ಮಾತನಾಡಿದರು.

ಗಡಿನಾಡು ಕಾಸರಗೋಡುನ ವರ್ತಮಾನದ ಭಾಷಾ ತಲ್ಲಣಗಳ ಮಧ್ಯೆ ಹೊಸ ತಲೆಮಾರನ್ನು ಕೊಂಡೊಯ್ಯುವ ಕವಲು ಹಾದಿಯಲ್ಲಿ ಮುನ್ನಡೆಸಲಾಗುವ ವಿವಿಧ ಕನ್ನಡ ಭಾಷಾ ಚಟುವಟಿಕೆಗಳು ತನ್ನದೇ ಪ್ರಭಾವದಿಂದ ಪರಿಣಾಮಕಾರಿಯಾಗಿದೆ ಎಂದು ತಿಳಿಸಿದ ಅವರು ಸಂಸ್ಕøತಿ ಸಂವರ್ಧನೆಯಲ್ಲಿ ಪರಂಪರೆ ಸಾಗಿಬಂದ ನಡಾವಳಿಗಳು, ಜೀವನ ಕ್ರಮ, ಸಾಂಸ್ಕøತಿಕ ಸೊಗಡು ಮತ್ತು ಅದು ಮಣ್ಣಿನೊಂದಿಗೆ ತೊಡಗಿಸಿಕೊಂಡಿರುವ ಹೊಕ್ಕುಬಳಸುವಿಕೆಯನ್ನು ಯುವ ಜನರಿಗೆ-ಪುಟಾಣಿಗಳಿಗೆ ತೋರಿಸಿಕೊಡುವ ಕೈಂಕರ್ಯ ಮಹತ್ವದ ಸಾಧನೆ ಎಂದು ಶ್ಲಾಘಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗಡಿನಾಡು ಸಾಹಿತ್ಯ ಸಾಂಸ್ಕøತಿಕ ವೇದಿಕೆಯ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ ಬನದಗದ್ದೆ ಮಾತನಾಡಿ, ತಿಳಿಯಾದ ನೀರಿನ ಹೊಳಪಿನಂತೆ, ಹರಡಿದ ಆಕಾಶದಂತೆ ನಿಷ್ಕಲ್ಮಶ ಮನಸ್ಸಿನ ಪುಟ್ಟ ಮಕ್ಕಳ ಅರಳುವಿಕೆಗೆ ಸ್ವಸ್ಥ ಸಮಾಜ ಪ್ರಯತ್ನಿಸಬೇಕು. ನಮ್ಮ ಸಂಸ್ಕøತಿ, ಜೀವನ ಮೌಲ್ಯಗಳನ್ನು ಮಕ್ಕಳಲ್ಲಿ ಪ್ರತಿಬಿಂಬಿಸಿದಾಗ ಬದುಕಿಗೆ ವಿಶೇಷ ಅರ್ಥಪ್ರಾಪ್ತಿಯಾಗುತ್ತದೆ ಎಂದು ತಿಳಿಸಿದರು.

ಕರ್ನಾಟಕ ಗಮಕ ಕಲಾ ಪರಿಷತ್ತಿನ ಗಡಿನಾಡ ಘಟಕಾಧ್ಯಕ್ಷ ಟಿ.ಶಂಕರನಾರಾಯಣ ಭಟ್ ಮುಖ್ಯ ಅತಿಥಿüಗಳಾಗಿ ಉಪಸ್ಥಿತರಿದ್ದು ಮಾತನಾಡಿದರು.

ತರಂಗಿಣಿ ಆಟ್ಸ್ ಮತ್ತು ಸ್ಪೋಟ್ರ್ಸ್ ಕ್ಲಬ್ ಕಾರ್ಯದರ್ಶಿ ಬಿ.ಎ.ಲತೀಫ್, ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕಾಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ ಉಪಸ್ಥಿತರಿದ್ದು ಶುಭಾಶಂಸನೆಗೈದರು.

ಕ್ಲಬ್ ಸದಸ್ಯ ಅಶೋಕ್ ಭಂಡಾರಿ, ಶೋಭಾನೆ ಹಾಡುಗಾರರಾದ ಗಿರಿಜಾ ಎಂ. ಭಟ್ ಎಡಮಲೆ,ಜನಾರ್ಧನ ಹಂದೆ, ಎಸ್.ಕೆ.ಬಾಲಕೃಷ್ಣ, ಗಡಿನಾಡು ಕಲಾ ಸಾಂಸ್ಕøತಿಕ ಅಕಾಡೆಮಿ ಸದಸ್ಯೆ ಸಂಧ್ಯಾಗೀತಾ ಬಾಯಾರು, ಕಾರ್ಯದರ್ಶಿ ಅಖಿಲೇಶ್ ನಗುಮುಗಂ, ಮುಖಂಡರಾದ ಸೀತಾರಾಮ ಶೆಟ್ಟಿ, ಝಡ್.ಎ ಕಯ್ಯಾರು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಮಾಧ್ಯಮ ಪ್ರಶಸ್ತಿ ವಿಜೇತ ಕವಿ, ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಅವರನ್ನು ಅಭಿನಂದಿಸಲಯಿತು. ಜೊತೆಗೆ ಅವರು ಬರೆದಿರುವ ನೆಲದ ಧ್ಯಾನ ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಈ ಸಂದರ್ಭ ಅಕಾಡೆಮಿ ವತಿಯಿಂದ ಶಾಲಾ ಲೈಬ್ರರಿಗೆ ಉಚಿತವಾಗಿ ವಿವಿಧ ಪುಸ್ತಕಗಳನ್ನು ನೀಡಲಾಯಿತು.

ಗಡಿನಾಡ ಸಾಹಿತ್ಯ ಸಾಂಸ್ಕøತಿಕ ವೇದಿಕೆಯ ಉಪಾಧ್ಯಕ್ಷ ಪೆÇ್ರ| ಎ.ಶ್ರೀನಾಥ್ ಸ್ವಾಗತಿಸಿದರು.ಶಾಲಾ ಮುಖ್ಯೋಪಾಧ್ಯಾಯ ಪ್ರಕಾಶ್ ನಂಬೂದಿರಿ ವಂದಿಸಿದರು. ಬಳಿಕ ಶೋಭಾನೆ ಗೀತೆಗಳ ಸಹಿತ ಕನ್ನಡ ಗೀತಗಾಯನ ಪ್ರಾತ್ಯಕ್ಷಿಕೆ ನಡೆಯಿತು.
More News

ಮೈಸೂರು ಅಸೋಸಿಯೇಷನ್-ನವಿ ಮುಂಬಯಿ ಕನ್ನಡ ಸಂಘ ಸಂಯೋಜನೆಯಲ್ಲಿ
ಮೈಸೂರು ಅಸೋಸಿಯೇಷನ್-ನವಿ ಮುಂಬಯಿ ಕನ್ನಡ ಸಂಘ ಸಂಯೋಜನೆಯಲ್ಲಿ
ಎಂ.ಸಂಜೀವರು ನಿಸ್ವಾರ್ಥ ಹೋರಾಟಗಾರ : ಮಾಜಿ ಪ್ರಧಾನಿ ದೇವೇಗೌಡ
ಎಂ.ಸಂಜೀವರು ನಿಸ್ವಾರ್ಥ ಹೋರಾಟಗಾರ : ಮಾಜಿ ಪ್ರಧಾನಿ ದೇವೇಗೌಡ
ನ.25:ಹವ್ಯಕ ವೆಲ್ಫೇರ್ ಟ್ರಸ್ಟ್ ಮುಂಬಯಿ ಸಂಸ್ಥೆಯಿಂದ ಹವ್ಯಕರ ಸಭಾಗೃಹದಲ್ಲಿ
ನ.25:ಹವ್ಯಕ ವೆಲ್ಫೇರ್ ಟ್ರಸ್ಟ್ ಮುಂಬಯಿ ಸಂಸ್ಥೆಯಿಂದ ಹವ್ಯಕರ ಸಭಾಗೃಹದಲ್ಲಿ

Comment Here