Thursday 28th, March 2024
canara news

ಜುಲೈ.8 ರಂದು ಉಡುಪಿಯಲ್ಲಿ ನನ್ನ ಹಾಡು ನನ್ನದು ಸುಗಮ ಸಂಗೀತ ಸ್ಪರ್ಧೆ

Published On : 06 Jul 2018   |  Reported By : Rons Bantwal


ಉಡುಪಿ: ದಿಶಾ ಕಮ್ಯೂನಿಕೇಷನ್ಸ್ ಟ್ರಸ್ಟ್ ಕಟಪಾಡಿ-ಉಡುಪಿ, ಕಲಾನಿಧಿ ಸಾಂಸ್ಕøತಿಕ ಕಲಾ ಸಂಸ್ಥೆ (ರಿ.) ಉಡುಪಿ, ರಾಗವಾಹಿನಿ (ರಿ.) ಉಡುಪಿ, ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನ ಅಂಬಲಪಾಡಿ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ನನ್ನ ಹಾಡು ನನ್ನದು ಸುಗಮ ಸಂಗೀತ ಗೀತಾಗಾಯನ ಸ್ಪರ್ಧೆ ಸೀಸನ್-2 ಸುಗಮ ಸಂಗೀತ ಗೀತಗಾಯನ ಸ್ಪರ್ಧೆ -2018 ಜುಲೈ. 8 ರಂದು ಬೆಳಗ್ಗೆ 9ಕ್ಕೆ ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದ ಭವಾನಿ ಮಂಟಪದಲ್ಲಿ ನಡೆಯಲಿದೆ. ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ.ನಿ.ಬಿ.ವಿಜಯ ಬಲ್ಲಾಳ್ ಕಾರ್ಯಕ್ರಮ ಉದ್ಘಾಟಿಸಲಿರುವರು. ಹಿರಿಯ ಸಂಗೀತ ನಿರ್ದೇಶಕ ನಾದವೈಭವಂ ಉಡುಪಿ ವಾಸುದೇವ ಭಟ್ ಅಧ್ಯಕ್ಷತೆ ವಹಿಸುವರು.

ಉಡುಪಿ ತುಳುಕೂಟದ ಅಧ್ಯಕ್ಷ,ಬಡಗುಬೆಟ್ಟು ಕ್ರೆಡಿಟ್ ಕೋ-ಅಪರೇಟಿವ್ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಬಿ.ಜಯಕರ್ ಶೆಟ್ಟಿ ಇಂದ್ರಾಳಿ, ಮುಡುಸಗ್ರಿ ಶ್ರೀ ದುರ್ಗಾ ಆದಿಶಕ್ತಿ ದೇವಸ್ಥಾನದ ಆಪ್ತ ಕಾರ್ಯದರ್ಶಿ ಕುಸುಮ ನಾಗರಾಜ್ ಆಚಾರ್ಯ, ಬಾರ್ಕೂರಿನ ಹಿರಿಯ ಸಾಹಿತಿ ಪ್ರಕಾಶ ಆಚಾರ್ಯ ವಡ್ಡರ್ಸೆ, ಉಡುಪಿ ತುಳುಕೂಟದ ಕಾರ್ಯದರ್ಶಿ ಗಂಗಾಧರ್ ಕಿದಿಯೂರು ಮುಖ್ಯಅತಿಥಿಗಳಾಗಿ ಭಾಗವಹಿಸಲಿರುವರು. ಸುಗಮ ಸಂಗೀತ ಗೀತಾಗಾಯನ ಸ್ಪರ್ಧೆಯು 15ರಿಂದ 60 ವರ್ಷ ವಯಸ್ಸಿನವರಿಗಾಗಿ ಮೂರು ಹಂತದÀಲ್ಲಿ ನಡೆಯಲಿದ್ದು, ಜು.8 ರಂದು ಪ್ರಥಮ ಸುತ್ತಿನ ಆಯ್ಕೆ ಮತ್ತು ಸೆಮಿಫೈನಲ್ ಸ್ಪರ್ಧೆ ನಡೆಯಲಿದೆ. ಸೆಮಿಫೈನಲ್‍ನಲ್ಲಿ ಆಯ್ಕೆಯಾದ 10ಮಂದಿ ಅಂತಿಮ ಹಂತದ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದಲ್ಲಿ 10ಸಾವಿರ ರೂ.ನಗದು, ಟ್ರೋಫಿ ಸಮೇತ ಅತ್ಯುತ್ತಮ ಗಾಯಕ ಪ್ರಥಮ ಪ್ರಶಸ್ತಿ ಹಾಗೂ 5 ಸಾವಿರ ರೂ.ನಗದು, ಟ್ರೋಫಿ ಸಮೇತ ಅತ್ಯುತ್ತಮ ಗಾಯಕ ದ್ವಿತೀಯ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಹೆಚ್ಚಿನ ಮಾಹಿತಿ ಹಾಗೂ ಹೆಸರು ನೋಂದಾಯಿಸಲು ಮೊಬೈಲ್: 9964019229, 9964107067, 9483802494, ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here