Thursday 25th, April 2024
canara news

ಜು.07: ಉಡುಪಿಯಲ್ಲಿ ಮಲ್ಪೆ ರಾಮದಾಸ ಸಾಮಗ ಸ್ಮರಣಾರ್ಥ ಪ್ರಶಸ್ತಿ ಪ್ರದಾನ

Published On : 07 Jul 2018   |  Reported By : Rons Bantwal


ಯಕ್ಷಗಾನ ಕಲಾವಿದ ಕೆ.ಶಿವರಾಮ ಜೋಗಿಗೆ ಮಲ್ಪೆ ರಾಮದಾಸ ಸಾಮಗ ಪ್ರಶಸ್ತಿ

ಮುಂಬಯಿ,ಜು.07: ಪರ್ಯಾಯ ಶ್ರೀ ಪಲಿಮಾರು ಮಠ, ಶ್ರೀಕೃಷ್ಣ ಮಠಉಡುಪಿ ಇದರಆಶ್ರಯದಲ್ಲಿ ತುಳುಕೂಟ ಉಡುಪಿ (ರಿ.) ವತಿಯಿಂದ ಮಲ್ಪೆರಾಮದಾಸ ಸಾಮಗ ಸ್ಮರಣಾರ್ಥ ಪ್ರಶಸ್ತಿ ಪ್ರದಾನ ಹಾಗೂ ತುಳು ಯಕ್ಷಗಾನ ಕಾರ್ಯಕ್ರಮ ಜುಲೈ 7ರಂದು ಸಂಜೆ 6.30ಕ್ಕೆ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ.

ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ಹಾಗೂ ಶ್ರೀ ಅದಮಾರು ಮಠದ ಕಿರಿಯಯತಿ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿಗಳವರ ದಿವ್ಯ ಉಪಸ್ಥಿತಿ ಮತ್ತು ಆಶೀರ್ವಚನದೊಂದಿಗೆ ಕಾರ್ಯಕ್ರಮ ನಡೆಯಲಿದೆ. ತುಳುಕೂಟ ಉಡುಪಿ (ರಿ.) ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಸಮಾರಂಭದ ಅಧ್ಯಕ್ಷತೆ ವಹಿಸಲಿರುವರು.

ಮುಖ್ಯ ಅತಿಥಿüಗಳಾಗಿ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಇದರ ಸದಸ್ಯ ಐರೋಡಿ ರಾಜಶೇಖರ ಹೆಬ್ಬಾರ್ ಹಾಗೂ ಯಕ್ಷಾಭಿಮಾನಿ ಮತ್ತು ಉದ್ಯಮಿ ವಿಶ್ವನಾಥ ಶೆಣೈ ಭಾಗವಹಿಸಲಿರುವರು. ಈ ಸಂದರ್ಭ ಹಿರಿಯ ಯಕ್ಷಗಾನ ಕಲಾವಿದ ಕೆ.ಶಿವರಾಮ ಜೋಗಿ ಅವರಿಗೆ ಮಲ್ಪೆ ರಾಮದಾಸ ಸಾಮಗ ಪ್ರಶಸ್ತಿ ಮತ್ತು ನಗದುರೂ.10,000/- ನೀಡಿ ಗೌರವಿಸಲಾಗುವುದು. ಸಭಾಕಾರ್ಯಕ್ರಮದ ಬಳಿಕ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಗಣೇಶ ಕೊಲೆಕಾಡಿ ವಿರಚಿತ `ಗೇಲ್ದಬೀರೆ ವಾಲಿ' ಎಂಬ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

ಹಿರಿಯ ಯಕ್ಷಗಾನ ಕಲಾವಿದ ಕೆ. ಶಿವರಾಮಜೋಗಿ:
ತೆಂಕುತಿಟ್ಟಿನ ಯಕ್ಷಗಾನಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿ ಖ್ಯಾತರಾಗಿರುವ ಹಿರಿಯ ಯಕ್ಷಗಾನ ಕಲಾವಿದ ಕೆ.ಶಿವರಾಮ ಜೋಗಿ ಅವರು ಸುಮಾರು 60ವರ್ಷ ವಿವಿಧ ಮೇಳಗಳಲ್ಲಿ ಕಲಾಸೇವೆ ಮಾಡಿರುತ್ತಾ ರೆ. ಪ್ರಸಿದ್ಧ ಯಕ್ಷಗಾನ ಗುರುಗಳಾದ ಶೇಣಿ ಗೋಪಾಲಕೃಷ್ಣ ಭಟ್, ವಿಟ್ಲ ಗೋಪಾಲಕೃಷ್ಣ ಜೋಷಿ ಮತ್ತು ಕುಡಾಣ ಗೋಪಾಲಕೃಷ್ಣ ಭಟ್‍ಇವರಿಂದಯಕ್ಷಗಾನದಅನುಭವವನ್ನು ಪಡೆದು ಕೊಂಡು ಕುಣಿತ, ಅರ್ಥಗಾರಿಕೆ, ರಂಗನಡೆ ಇತ್ಯಾದಿಗಳನ್ನು ಅಭ್ಯಸಿಸಿ ಕೊಂಡಿದ್ದಾರೆ. ಸುರತ್ಕಲ್ ಮೇಳ ಒಂದರಲ್ಲಿ 40 ವರ್ಷ ದುಡಿದ ಇವರುಇತರ ಮೇಳಗಳಾದ ಕೂಡ್ಲು, ಮುಲ್ಕಿ, ಕರ್ನಾಟಕ, ಮಂಗಳಾದೇವಿ, ಎಡನೀರು, ಕುಂಟಾರು, ಹೊಸನಗರ ಮೇಳಗಳಲ್ಲಿ 63 ವರ್ಷ ಬಣ್ಣ ಹಚ್ಚಿದ್ದಾರೆ.ಯಕ್ಷಗಾನದಲ್ಲಿಇವರದುಶ್ಶಾಸನ, ಹಿರಣ್ಯಾಕ್ಷ, ದುಶ್ಯಂತ, ರಾವಣ, ಕರ್ಣ, ಕೋಟಿಇಂತಹ ಒಳ್ಳೆಯ ಪ್ರಮುಖ ಪಾತ್ರಗಳು ಸೇರಿದಂತೆ ಅನೇಕ ಪ್ರಸಂಗಳಲ್ಲಿ ಮಿಂಚಿದ್ದಾರೆ. ಬಂಟ್ವಾಳದ ಗುರುವಪ್ಪ ಜೋಗಿ ಹಾಗೂ ಸೀತಮ್ಮ ಜೋಗಿ ದಂಪತಿಗಳ ಮಗನಾಗಿ 1941ರಲ್ಲಿ ಜನಿಸಿ 6ನೇ ತರಗತಿತನಕ ವಿದ್ಯಾಭ್ಯಾಸ ಮಾಡಿತಮ್ಮ 13ನೇ ವಯಸ್ಸಿನಲ್ಲಿ ಯಕ್ಷಗಾನಕ್ಕೆ ಪಾದಾರ್ಪಣೆ ಮಾಡಿದ ಮಹಾನ್ ಕಲಾವಿದ. ಪತ್ನಿ ಲತಾ ಜೋಗಿ ಮಕ್ಕಳಾದ ಸೌಮ್ಯ ಹಾಗೂ ಸುಮಂತ್‍ರಾಜ್ ಅವರೊಂದಿಗಿನ ಸಂತೃಪ್ತ ಸಂಸಾರದೊಂದಿಗೆ ಸುಖಜೀವನ ನಡೆಸುತ್ತಿದ್ದಾರೆ.

ಪ್ರಸ್ತುತ ಹನುಮಗಿರಿ ಮೇಳದಲ್ಲಿ ತನ್ನ 77ನೇ ವಯಸ್ಸಿನಲ್ಲಿ ಕಲಾಸೇವೆ ಮಾಡುತ್ತಿರುವಇವರು ಅನೇಕ ಪ್ರಶಸ್ತಿ, ಪುರಸ್ಕಾರಗಳನ್ನು ತಮ್ಮದಾಗಿಸಿದ್ದಾರೆ. ಕರ್ನಾಟಕರಾಜ್ಯಜಿಲ್ಲಾರಾಜ್ಯೋತ್ಸವ ಪ್ರಶಸ್ತಿ, ಶೇಣಿ ಪ್ರಶಸ್ತಿ, ಕೀಳಾರು ಗೋಪಾಲಕೃಷ್ಣ ಪ್ರಶಸ್ತಿ ಪಡೆದಿರುವ ಶಿವರಾಮ ಜೋಗಿ ಅವರು ಈ ಬಾರಿಯ ತುಳುಕೂಟ ಉಡುಪಿ (ರಿ.) ವತಿಯಿಂದ ಕೊಡಲ್ಮಾಡುವ ಮಲ್ಪೆ ರಾಮದಾಸ ಸಾಮಗ ಪ್ರಶಸ್ತಿಗೆ ಆಯ್ಕೆ ಆಗಿರುತ್ತಾರೆ ಎಂದು ತುಳುಕೂಟ ಉಡುಪಿ (ರಿ.) ಇದರ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ, ಮಲ್ಪೆ ರಾಮದಾಸ ಸಾಮಗ ಸ್ಮರಣಾರ್ಥ ಪ್ರಶಸ್ತಿ ಸಂಚಾಲಕ ಎಸ್.ವಿ.ಭಟ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here