Sunday 17th, February 2019
canara news

ಮೀನಿಗೆ ರಾಸಾಯನಿಕ ಬಳಕೆ: ಪತ್ತೆಗೆ ಅಧಿಕಾರಿಗಳು ತಯಾರು

Published On : 08 Jul 2018   |  Reported By : canaranews network


ಮಂಗಳೂರು: ಕೇರಳದ ತಿರುವನಂತಪುರದ ಅಮರವಿಳ ಚೆಕ್ಪೋಸ್ಟ್ನಲ್ಲಿ ನಡೆದ ತಪಾಸಣೆಯಲ್ಲಿ ಮೀನಿನಲ್ಲಿ ರಾಸಾಯನಿಕ ಫ್ರಾಮಾಲಿನ್ ಪತ್ತೆಯಾದ ನಂತರ ಕರ್ನಾಟಕ ಕರಾವಳಿಯಲ್ಲಿಯೂ ಮೀನಿಗೆ ರಾಸಾಯನಿಕ ಬೆರೆಸಿ ಮಾರಾಟ ಮಾಡಲಾಗುತ್ತಿದೆ ಎಂಬ ವದಂತಿ ಹಬ್ಬಿತ್ತು.ಈ ಕುರಿತಂತೆ ಗ್ರಾಹಕರೊಬ್ಬರು ಮೀನು ಮಾರಾಟಗಾರರ ಜೊತೆ ಈ ಕುರಿತಂತೆ ಮಾತನಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಜಿಲ್ಲೆಯಲ್ಲಿ ಈ ಬಗ್ಗೆ ಆತಂಕ ಸೃಷ್ಠಿಯಾಗಿತ್ತು.ಮೀನುಗಾರಿಕೆ ನಿಷೇಧ ಅವಧಿಯಲ್ಲಿ ಹೊರ ರಾಜ್ಯಗಳಿಂದ ಕೇರಳಕ್ಕೆ ತರುವ ಬೃಹತ್ ಪ್ರಮಾಣದ ಮೀನುಗಳಲ್ಲಿ ಮನುಷ್ಯನ ಮೃತದೇಹ ಕೆಡದಂತೆ ಇಡಲು ಬಳಸುವ ಕ್ಯಾನ್ಸರ್ ಕಾರಕ ಫಾರ್ಮಲಿನ್ ರಾಸಾಯನಿಕ ಅಂಶವಿರುವುದು ಕೊಚ್ಚಿನ್ ನ ಸಿಐಎಫ್ ಟಿ ಕೇಂದ್ರದ ಲ್ಯಾಬ್ ನಲ್ಲಿ ಇತ್ತೀಚೆಗೆ ದೃಢಪಟ್ಟಿತ್ತು.

ಈ ಹಿನ್ನಲೆಯಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಮೀನಗಾರಿಕಾ ಇಲಾಖೆಯ ತಜ್ಞರು ಕೇರಳದ ಕೊಚ್ಚಿನ್ ಗೆ ತೆರಳಿ ಮೀನಿನಲ್ಲಿ ಅಪಾಯಕಾರಿ ಫಾರ್ಮಲಿನ್ ಅಥವಾ ಅಮೋನಿಯಾ ರಾಸಾಯನಿಕ ಅಂಶ ಬಳಕೆ ಪತ್ತೆ ಹಚ್ಚಲು ಕೇರಳದ ಕೊಚ್ಚಿನ್ ನಲ್ಲಿರುವ ಕೇಂದ್ರ ಮೀನುಗಾರಿಕೆ ತಂತ್ರಜ್ಞಾನ ಸಂಸ್ಥೆ ಅಭಿವೃದ್ದಿ ಪಡಿಸಿದ ವಿಶೇಷ ಕಿಟ್ ನ್ನು ಮಂಗಳೂರಿಗೆ ತೆಗೆದುಕೊಂಡು ಬಂದಿದ್ದಾರೆ.

ಮೀನಿನಲ್ಲಿ ಅಪಾಯಕಾರಿ ರಾಸಾಯನಿಕ ಗುರುತಿಸುವ ವಿಶೇಷ ಕಿಟ್ ಇದಾಗಿದ್ದು, ಈ ಒಂದು ಕಿಟ್ ನಲ್ಲಿ 20 ಸ್ಟ್ರಿಪ್ ಗಳಿದ್ದು, ಎರಡು ರೀತಿಯ ದ್ರಾವಣಗಳನ್ನು ಬೆರೆಸಬೇಕು, ಒಂದು ಸ್ಟ್ರಿಪ್ ನಿಂದ ಪರೀಕ್ಷೆಗೆ ಒಳಪಡಿಸಲಿರುವ ಮೀನನ್ನು ತಿವಿದು ಬೆರೆಸಿದ ದ್ರಾವಣದಲ್ಲಿ ಮುಳುಗಿಸಬೇಕು. ಈ ಸಂದರ್ಭದಲ್ಲಿ ಸ್ಟ್ರಿಪ್ ನೀಲಿ ಬಣ್ಣಕ್ಕೆ ತಿರುಗುತ್ತದೆ. ಈ ಸಂದರ್ಭದಲ್ಲಿ ಬಣ್ಣದ ಗಾಢತೆಯನ್ನು ಅವಲಂಭಿಸಿ ಮೀನಿನಲ್ಲಿ ಫಾರ್ಮಲಿನ್ ಅಥವಾ ಅಮೋನಿಯಾ ಬಳಸಲಾಗಿದೆಯೇ ಎಂದು ತೀರ್ಮಾನಿಸಲಾಗುತ್ತದೆ ಎಂದು ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
More News

ಸೇವ್ ಸುವರ್ಣ ತ್ರಿಭುಜ ನಾಪತ್ತೆಯಾದ ಮೀನುಗಾರರ ಪತ್ತೆಗೆ ಉಳ್ಳಾಲ ಪತ್ರಕರ್ತರ ಜಾಗೃತಿ
ಸೇವ್ ಸುವರ್ಣ ತ್ರಿಭುಜ ನಾಪತ್ತೆಯಾದ ಮೀನುಗಾರರ ಪತ್ತೆಗೆ ಉಳ್ಳಾಲ ಪತ್ರಕರ್ತರ ಜಾಗೃತಿ
ಮಾ.04: ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ಉತ್ಸವ
ಮಾ.04: ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ಉತ್ಸವ
ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅಷ್ಠಬಂಧ ಬ್ರಹ್ಮ ಕಲಶೋತ್ಸವ
ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅಷ್ಠಬಂಧ ಬ್ರಹ್ಮ ಕಲಶೋತ್ಸವ

Comment Here