Sunday 17th, February 2019
canara news

ಮಾಜಿ ಶಾಸಕರನ್ನೇ ಯಾಮಾರಿಸಿದ ಚಾಲಾಕಿ ಖದೀಮರು

Published On : 08 Jul 2018   |  Reported By : canaranews network


ಮಂಗಳೂರು: ಬುದ್ಧಿವಂತ ,ಸುಶಿಕ್ಷಿತ ರಾಜಕೀಯ ನಾಯಕರೊಬ್ಬರನ್ನು ಚಾಲಾಕಿ ಖದೀಮರು ಯಾಮಾರಿಸಿ ಹಣ ಲಪಡಾಯಿಸಿದ ಪ್ರಸಂಗ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಮಂಗಳೂರಿನ ಮಾಜಿ ಶಾಸಕ ಜೆ ಆರ್ ಲೋಬೊ ಅವರನ್ನು ಚಾಲಾಕಿ ಖದೀಮರು ವಂಚಿಸಿದ ಘಟನೆ ನಡೆದಿದೆ.ಮಂಗಳೂರಿನ ಮಾಜಿ ಶಾಸಕ ಜೆ ಆರ್ ಲೋಬೋ ಅವರ ಮೊಬೈಲ್ ಕರೆ ಮಾಡಿದ ಚಾಲಾಕಿ ಖದೀಮರು ಲೋಬೊ ಅವರಿಂದ ಎ ಟಿ ಎಂ ಕಾರ್ಡ್ ನ ವಿವರ ಪಡೆದು ಹಣ ಲಪಡಾಯಿಸಿದ್ದಾರೆ. ಸ್ಟೆಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಕರೆಮಾಡಿರುವುದಾಗಿ ಪರಿಚಯಿಸಿಕೊಂಡ ಖದೀಮರು , ನೀವು ಎ ಟಿ ಎಂ ಕಾರ್ಡ್ ನ ಕೀ ವಿವರ ನೀಡಿಲ್ಲ ಈ ಕಾರಣ ನಿಮ್ಮ ಎ ಟಿ ಎಂ ಕಾರ್ಡ್ ನ್ನು ಬ್ಲಾಕ್ ಮಾಡುವುದಾಗಿ ತಿಳಿಸಿದ್ದಾರೆ.

ಈ ಹಿನ್ನಲೆಯಲ್ಲಿ ದೂರವಾಣಿ ಕರೆಯನ್ನು ನಂಬಿದ ಮಾಜಿ ಶಾಸಕ ಜೆ ಆರ್ ಲೋಬೊ ತಮ್ಮ ಉಳಿತಾಯ ಖಾತೆಯ ಎ ಟಿ ಎಂ ಕಾರ್ಡ್ ನ , ಓ ಟಿ ಪಿ ನಂಬರ್ ಅನ್ನು ಕರೆಮಾಡಿದ ಖದೀಮರಿಗೆ ನೀಡಿದ್ದಾರೆ. ಈ ಪರಿಣಾಮ ಕ್ಷಣ ಮಾತ್ರದಲ್ಲಿ ಲೋಬೊ ಅವರ ಖಾತೆಯಿಂದ 50 ಸಾವಿರ ರೂಪಾಯಿ ಯನ್ನು ಖದೀಮರು ಎಗರಿಸಿದ್ದಾರೆ. ಮೊದಲು 25 ಸಾವಿರ ರೂಪಾಯಿ ನಂತರ 19,999 ಹಾಗು 5 ಸಾವಿರ ರೂಪಾಯಿಯಂತೆ ಲೋಬೊ ಅವರ ಖಾತೆಯಿಂದ ಹಣ ತೆಗೆಯಲಾಗಿದೆ.ವಂಚನೆ ಗೊಳಗಾಗಿರುವುದನ್ನು ಅರಿತ ಮಾಜಿ ಶಾಸಕ ಜೆ ಆರ್ ಲೋಬೊ ಮಂಗಳೂರಿನ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಐ ಟಿ ಆಕ್ಟ್ ನಡಿ ಪ್ರಕರಣ ದಾಖಲಿಸಿಕೊಂಡ ಕದ್ರಿ ಠಾಣೆಯ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಖದೀಮರು ಆನ್ ಲೈನ್ ಖರೀದಿ ಮಾಡಿರಬೇಕು ಎಂದು ಪೊಲೀಸರು ಶಂಕೆ ವ್ಯಕ್ತ ಪಡಿಸಿದ್ದಾರೆ.
More News

ಸೇವ್ ಸುವರ್ಣ ತ್ರಿಭುಜ ನಾಪತ್ತೆಯಾದ ಮೀನುಗಾರರ ಪತ್ತೆಗೆ ಉಳ್ಳಾಲ ಪತ್ರಕರ್ತರ ಜಾಗೃತಿ
ಸೇವ್ ಸುವರ್ಣ ತ್ರಿಭುಜ ನಾಪತ್ತೆಯಾದ ಮೀನುಗಾರರ ಪತ್ತೆಗೆ ಉಳ್ಳಾಲ ಪತ್ರಕರ್ತರ ಜಾಗೃತಿ
ಮಾ.04: ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ಉತ್ಸವ
ಮಾ.04: ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ಉತ್ಸವ
ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅಷ್ಠಬಂಧ ಬ್ರಹ್ಮ ಕಲಶೋತ್ಸವ
ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅಷ್ಠಬಂಧ ಬ್ರಹ್ಮ ಕಲಶೋತ್ಸವ

Comment Here