Thursday 25th, April 2024
canara news

ಸಾಂತಕ್ರೂಜ್‍ನ ಬಿಲ್ಲವ ಭವನಕ್ಕೆ ಭೇಟಿವಿತ್ತ ವಿಶ್ವೇಶತೀರ್ಥರು ಬಿಲ್ಲವರ ಭವನ ಎಲ್ಲರ ಸಾಮರಸ್ಯದ ಭವನ : ಪೇಜಾವರಶ್ರೀ

Published On : 30 Jul 2018


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜು.30: ನಾನು ಮುಂಬಯಿಗೆ ಕಾಲೂರಿದ ಅನೇಕ ಸಲ ಬಿಲ್ಲವ ಭವನಕ್ಕೆ ಬರುವುದು ವಾಡಿಕೆ. ಕಾರಣ ನಾನು ಬರಬೇಕು ಎನ್ನುವುದು ಇಲ್ಲಿನ ಭಕ್ತಾಭಿಮಾನಿಗಳ ಆಶಯ. ಇಲ್ಲಿನ ಜನತೆಗೆ ನನ್ನಮೇಲೂ ವಿಶೇಷ ಪ್ರೀತಿ, ಅಭಿಮಾನ. ಬಿಲ್ಲವ ಭವನ ಒಂದು ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಭವನವಾಗಿ ತಲೆಯೆತ್ತಿ ನೊಂದೆಡೆ ನಿಂತಿದ್ದರೆ ಕಲಾಪೆÇೀಷಣೆಯೊಂದಿಗೆ ಕಲಾ ಭವನವಾಗಿ, ಸಂಸ್ಕೃತಿಯ ಬೆಳವಣಿಗೆಗೆ ಸಾಂಸ್ಕೃತಿಕ ಭವನವಾಗಿಯೂ ನಾಮಾಂಕಿತ. ಆದುದರಿಂದ ಬಿಲ್ಲವರ ಭವನ ಬರೀ ಬಿಲ್ಲವರದ್ದಲ್ಲ ಸಾಮರಸ್ಯತ್ವದ ಪ್ರತೀಕವೆಣಿಸಿದ ಎಲ್ಲರ ಭವನ ಆಗಿದೆ. ತಮ್ಮೆಲ್ಲರ ಇಂತಹ ಸೇವೆಗಳೊಂದಿಗೆ ಹಿಂದೂ ಧರ್ಮದ ಉಳಿವು ಸಾಧ್ಯವಾಗಿದೆ. ಕರ್ನಾಟಕದ ಕರಾವಳಿಯಲ್ಲಿ ನಾರಾಯಣ ಗುರುಗಳೂ ಹಿಂದುಳಿದ ಸಮಾಜದಲ್ಲಿ ಬಲ ತುಂಬಿದವರು. ಅವರ ಅನುಯಾಯಿಗಳಾದ ಬಿಲ್ಲವರು ಇಂದು ಎಲ್ಲೆಲ್ಲೂ ಪಸರಿಸಿಕೊಂಡು ಮುಂದಿದ್ದಾರೆ. ಎಂದು ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ತಿಳಿಸಿದರು.

ಐತಿಹ್ಯ ಪಂಚಮ ಪರ್ಯಾಯ ಮಹೋತ್ಸವ ಪೂರೈಸಿದ ಬಳಿಕ ಮೊದಲ ಬಾರಿ ಮುಂಬಯಿಗೆ ಆಗಮಿಸಿದ ಶ್ರೀಗಳು ಇಂದಿಲ್ಲಿ ಶನಿವಾರ ಸಂಜೆ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಸಾಂತಕ್ರೂಜ್ ಅಲ್ಲಿನ ಬಿಲ್ಲವರ ಭವನಕ್ಕೆ ಭೇಟಿಗೈದರು. ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ ಪದಾಧಿಕಾರಿಗಳನ್ನು ಒಳÀಗೊಂಡು ಸ್ವಾಮೀಜಿ ಅವರನ್ನು ಸುಖಾಗಮನ ಬಯಸಿದರು. ಶ್ರೀಗಳು ಬ್ರಹ್ಮಶ್ರೀ ನಾರಾಯಣ ಗುರು ಪ್ರತಿಮೆಗೆ ಆರತಿ ಬೆಳೆಗಿಸಿ ನೆರೆದ ಸದ್ಭಕ್ತರನ್ನು ಉದ್ದೇಶಿಸಿ ಅನುಗ್ರಹಿಸಿದರು.

ಈ ಸಂದರ್ಭದಲ್ಲಿ ಅಸೋಸಿಯೇಶನ್‍ನ ಉಪಾಧ್ಯಕ್ಷ ಶಂಕರ ಡಿ.ಪೂಜಾರಿ, ಗೌ| ಪ್ರ| ಕಾರ್ಯದರ್ಶಿ ಧನಂಜಯ ಎಸ್.ಕೋಟ್ಯಾನ್, ಗೌ| ಪ್ರ| ಕೋಶಾಧಿಕಾರಿ ರಾಜೇಶ್ ಜೆ.ಬಂಗೇರ, ಗೌ| ಜೊತೆ ಕಾರ್ಯದರ್ಶಿಗಳಾದ ಹರೀಶ್ ಜಿ.ಸಾಲ್ಯಾನ್, ಕೇಶವ ಕೆ.ಕೋಟ್ಯಾನ್, ಧರ್ಮೇಶ್ ಎಸ್.ಸಾಲ್ಯಾನ್, ಜೊತೆ ಕೋಶಾಧಿಕಾರಿಗಳಾದ ಶಿವರಾಮ ಕೆ.ಸಾಲ್ಯಾನ್, ಸದಾಶಿವ ಎ.ಕರ್ಕೇರ, ಮಹಿಳಾ ವಿಭಾಗಧ್ಯಕ್ಷೆ ಜಯಂತಿ ವಿ.ಉಳ್ಳಾಲ್, ಭಾರತ್ ಬ್ಯಾಂಕ್‍ನ ನಿರ್ದೇಶಕರುಗಳಾದ ಭಾಸ್ಕರ್ ಎಂ.ಸಾಲ್ಯಾನ್, ಗಂಗಾಧರ್ ಜೆ.ಪೂಜಾರಿ, ಸಾಮಾಜಿಕ ಮತ್ತು ಧಾರ್ಮಿಕ ಸಮಿತಿ ಕಾರ್ಯಧ್ಯಕ್ಷ ಮೋಹನ್‍ದಾಸ್ ಜಿ.ಪೂಜಾರಿ ಸೇರಿದಂತೆ ಅಸೋಸಿಯೇಶ ನ್‍ನ ಉಪಸಮಿತಿ, ಸ್ಥಳೀಯ ಸಮಿತಿಗಳ ಮುಖ್ಯಸ್ಥರು, ಪದಾಧಿಕಾರಿಗಳು ಸೇರಿದಂತೆ ಸದಸ್ಯರನೇಕರು ಹಾಜರಿದ್ದರು. ಅಧ್ಯಕ್ಷ ಚಂದ್ರಶೇಖರ ಪೂಜಾರಿ ಶ್ರೀಗಳಿಗೆ ಶಾಲು ಹೊದೆಸಿ ಫಲಪುಷ್ಪಗಳನ್ನಿತ್ತು ಸಾಂಪ್ರದಾಯಿಕವಾಗಿ ಸನ್ಮಾನಿಸಿ ಗೌರವಿಸಿದರು.

ಸಾಮಾಜಿಕ ಮತ್ತು ಧಾರ್ಮಿಕ ಸಮಿತಿ ಕಾರ್ಯದರ್ಶಿ ರವೀಂದ್ರ ಎ.ಅವಿೂನ್ (ಶಾಂತಿ) ಪೂಜೆಯನ್ನು ನೆರವೇರಿಸಿದರು.

 

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here