Thursday 28th, March 2024
canara news

ಗುರುಪುರ ಬಂಟರ ಮಾತೃ ಸಂಘ ವಾರ್ಷಿಕೋತ್ಸವ

Published On : 01 Aug 2018   |  Reported By : Rons Bantwal


ಯುವಜನರು ಮಾದಕ ವ್ಯಸನಿಗಳಾಗದೆ ಸಮಾಜದ ಮೇಲಿನ ಕಳಕಳಿ ಬೆಳೆಸಿಕೊಳ್ಳಬೇಕು : ಕೃಪಾ ಆಳ್ವ

ಮುಂಬಯಿ (ಗುರುಪುರ), ಜು.31: ದೀಪಗಳು ಹಲವಿದ್ದಾಗ ಹೆಚ್ಚು ಬೆಳಕು ಸಿಗುತ್ತದೆ. ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಬಲ ಬರುತ್ತದೆ. ಮಹಿಳೆಯರಿಗೆ ಗೌರವ ನೀಡುವ ಸಂಘ ಬೆಳೆಯುತ್ತದೆ. ಗುರುಪುರ ಬಂಟರ ಮಾತೃ ಸಂಘ ಅದಕ್ಕೊಂದು ನಿದರ್ಶನ. ಯುವಜನರು ಮಾದಕ ವ್ಯಸನಿಗಳಾಗದಂತೆ ಜಾಗೃತಿ ಮೂಡಿಸಿ, ಅವರು ಇಂತಹ ಸಂಘ-ಸಂಸ್ಥೆಗಳಲ್ಲಿ ಸಕ್ರಿಯರಾಗುವಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ಭವಿಷ್ಯದಲ್ಲಿ ನಮ್ಮ ಸಂಸ್ಕøತಿಯ ಅವಿಭಾಗ್ಯ ಅಂಗವಾಗಿರುವ ಮಕ್ಕಳು ಬಂಟ ಸಂಸ್ಕøತಿ ಮುಂದುವರಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಆಯೋಗದ ಅಧ್ಯಕ್ಷೆ ಕೃಪಾ ಅಮರ್ ಆಳ್ವ ಅಭಿಪ್ರಾಯಪಟ್ಟರು.

ಗುರುಪುರದಲ್ಲಿ ಶ್ರೀ ವೈದ್ಯನಾಥ ಸಭಾಗೃಹದಲ್ಲಿ ಭಾನುವಾರ ಆಯೋಜಿಸಲಾದ ಗುರುಪುರ ಬಂಟರ ಮಾತೃ ಸಂಘದ ವಾರ್ಷಿಕ ಸಮಾವೇಶ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಹಿಂದೊಮ್ಮೆ ಸಂವೃದ್ಧಿಯಿಂದ ಕೂಡಿದ್ದ ನಮ್ಮ ತುಳು ಸಂಸ್ಕøತಿ ಈಗ ಪಾಶ್ಚಾತ್ಯ ಪ್ರಭಾವದಿಂದ ಕಳೆಗುಂದುತ್ತಿದೆ. ಪಾಶ್ಚಾತ್ಯ ಅನುಕರಣೆ ಹೆಚ್ಚಾಗುತ್ತಿದ್ದು, ಇದರ ನೇರ ಪರಿಣಾಮ ತುಳು ಭಾಷೆ ಮೇಲಾಗುತ್ತಿದ್ದು, ತುಳು ಭಾಷೆ ಉಳಿಯುತ್ತದೋ ಎಂಬ ಭೀತಿ ಉಂಟಾಗಿದೆ. ತುಳು ಭಾಷೆ, ಸಂಸ್ಕøತಿ ಉಳಿಸುವುದು ನಮ್ಮ-ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು. ಈ ನಿಟ್ಟಿನಲ್ಲಿ ಬಂಟ ಸಮಾಜದ ಮಕ್ಕಳಿಗೆ ನಮ್ಮ ಸಂಸ್ಕøತಿ ತಿಳಿದುಕೊಳ್ಳಲು ಅವಕಾಶ ಕಲ್ಪಿಸಬೇಕು. ಬಂಟರು ಗುರುಹಿರಿಯರು, ಕುಟುಂಬಿಕರ ಗೌರವಿಸುವ ಪರಂಪರೆ ಬೆಳೆಸಿಕೊಳ್ಳಬೇಕು ಎಂದು ಮಂಗಳೂರು ಶ್ರೀ ದೇವಿ ಎಜ್ಯುಕೇಶನ್ ಟ್ರಸ್ಟ್ ಉಪಾಧ್ಯಕ್ಷೆ ಮೈನಾ ಶೆಟ್ಟಿ ಹೇಳಿದರು.

ನಮ್ಮಲ್ಲಿರುವ ಲೋಪದೋಷ, ತಪ್ಪು ಸರಿಪಡಿಸಿಕೊಂಡು ನಾವು ಸಶಕ್ತೀಕರಣಗೊಳ್ಳಬೇಕು. ಸಶಕ್ತೀಕರಣವೆಂದರೆ ಇನ್ನೊಬ್ಬರನ್ನು ತುಳಿದು ನಾವು ಮೇಲೆ ಹೋಗುವುದೆಂದಲ್ಲ. ಭಿನ್ನಾಭಿಪ್ರಾಯ ಸಹಜ. ಆದರೆ ಅಂತಹ ಸಂದರ್ಭದಲ್ಲೂ ಸಂಘಟನೆಯನ್ನು ಹಿಡಿದಿಟ್ಟುಕೊಂಡು ಮುನ್ನಡೆಸುವುದು ಮುಖ್ಯ. ನಾವೆಲ್ಲರೂ ನಿನ್ನೆಗಿಂತ ಇಂದು, ಇಂದಿಗಿಂತ ನಾಳೆ ಉತ್ತಮ ಬದುಕಿನ ಬಗ್ಗೆ ಚಿಂತಿಸಬೇಕು. ಹೇಳುವುದು ಒಂದು ಮಾಡುವುದು ಇನ್ನೊಂದು ಎಂಬ ನಮ್ಮೊಳಗಿನ ದ್ವಂದ್ವ ನೀತಿಯಿಂದ ಹೊರಬರಬೇಕು ಎಂದು ಆಸರೆ ಚಾರಿಟೇಬಲ್ ಟ್ರಸ್ಟಿನ ಆಶಾಜ್ಯೋತಿ ರೈ ಹೇಳಿದರು.

ವೇದಿಕೆಯಲ್ಲಿ ಸಂಘದ ಮಾಜಿ ಅಧ್ಯಕ್ಷ ಉದ್ಯಮಿ ಉಮೇಶ್ ಮುಂಡ, ಸಂಘದ ಅಧ್ಯಕ್ಷ ತಿಂಗುಮಾರುಗುತ್ತು ರಾಜಕುಮಾರ್ ಶೆಟ್ಟಿ, ಮಹಿಳಾ ಘಟಕದ ಕಾರ್ಯದರ್ಶಿ ರೇವತಿ ಆಳ್ವ, ಉದ್ಯಮಿ ರವಿರಾಜ್ ಶೆಟ್ಟಿ ಇದ್ದರು. ಸ್ವಾಗತಿಸಿದ ಪ್ರಶಾಂತಿ ರೈ ವಂದಿಸಿದರು. ಇದಕ್ಕಿಂತ ಮುಂಚೆ ಸಂಘದ ವಾರ್ಷಿಕ ಮಹಾಸಭೆ ನಡೆಯಿತು.


ಚರ್ಚಾಗೋಷ್ಠಿ

ಮಕ್ಕಳಿಂದ ಮನೋರಂಜನಾ ಕಾರ್ಯಕ್ರಮದ ಬಳಿಕ `ಸಮಕಾಲೀನ ಸಂದರ್ಭದಲ್ಲಿ ಬಂಟರ ಅಭಿವೃದ್ಧಿಯಲ್ಲಿ ಬಂಟ ಸಂಘಟನೆಗಳ ಕೊಡುಗೆ' ವಿಷಯದಲ್ಲಿ ಚರ್ಚಾಗೋಷ್ಠಿ ನಡೆಯಿತು. ಇದರಲ್ಲಿ ನವನೀತ ಶೆಟ್ಟಿ ಕದ್ರಿ, ಡಾ. ಸಾಯಿಗೀತಾ ಶೆಟ್ಟಿ(ವಿಭಾಗ ಮುಖ್ಯಸ್ಥೆ, ಮಾನವಿಕಾ ವಿಭಾಗ ನಿಟ್ಟೆ ವಿದ್ಯಾಲಯ, ಮಂಗಳೂರು), ತುಳು ವಿದ್ವಾಂಸ ಡಾ. ಗಣನಾಥ ಎಕ್ಕಾರು ಮತ್ತು ಸತೀಶ್ ಅಡಪ ಸಂಕಬೈಲು(ಮಂಗಳೂರು ಬಂಟರ ಮಾತೃ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ) ಪಾಲ್ಗೊಂಡಿದ್ದರು. ಸಂಘದ ಅಧ್ಯಕ್ಷ ತಿರುವೈಲುಗುತ್ತು ರಾಜಕುಮಾರ್ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಪದಾಧಿಕಾರಿಗಳಾದ ಪರುಷೋತ್ತಮ ಮಲ್ಲಿ, ಸುದರ್ಶನ ಶೆಟ್ಟಿ ಪೆರ್ಮಂಕಿ, ಸತ್ಯಾನಂದ ಶೆಟ್ಟಿ, ಹರೀಶ್ ಶೆಟ್ಟಿ, ಸುನೀತಾ ಶೆಟ್ಟಿ, ನಳಿನಿ ಶೆಟ್ಟಿ ಮೊದಲಾವವರು ಕಾಶರ್ಯಕ್ರಮ ಸಂಯೋಜಕರಾಗಿ ಕೆಲಸ ಮಾಡಿದರು.


ಗುರುಪುರ ಬಂಟರ ಮಾತೃ ಸಂಘದ ಅಧ್ಯಕ್ಷರಾಗಿ

ರಾಜಕುಮಾರ್ ಶೆಟ್ಟಿ ಆಯ್ಕೆ

ಇದೇ ವೇಳೆ 2018-2020ನೇ ಸಾಲಿಗೆ ಸಂಘದ ಅಧ್ಯಕ್ಷರಾಗಿ ರಾಜಕುಮಾರ್ ಶೇಟ್ಟಿ ತಿರುವೈಲುಗುತ್ತು ಪುನರಾಯ್ಕೆಯಾದರು. ಪದಾಧಿಕಾರಿಗಳಾಗಿ ಸಂತೋಷ ಶೆಟ್ಟಿ ಶೆಡ್ಡೆ ಹೊಸಲಕ್ಕೆ(ಉಪಾಧ್ಯಕ್ಷ), ಜಯರಾಮ ರೈ, ಉಳಾಯಿಬೆಟ್ಟು(ಕಾರ್ಯದರ್ಶಿ), ಕೃಷ್ಣಕಾಂತ ಶೇಣವ ನಾರಳಗುತ್ತು(ಜೊ.ಕಾ), ಸತ್ಯಾನಂದ ಶೆಟ್ಟಿ ಗುರುಪುರ(ಕೋಶಾಧಿಕಾರಿ), ಹರೀಶ ಶೆಟ್ಟಿ ಉಪ್ಪುಗೂಡು(ಸಂಘಟನಾ ಕಾರ್ಯದರ್ಶಿ), ಉಮಾಶಂಕರ್ ಸುಲಯ ಮಟ್ಟಿ ಮಳಲಿ(ಸಂಘಟನಾ ಕಾರ್ಯದರ್ಶಿ ಹಾಗೂ ಸುನಿತಾ ಶೆಟ್ಟಿ(ಅಧ್ಯಕ್ಷೆ, ಮಹಿಳಾ ಘಟಕ), ಉದಯ ಕುಮಾರ್ ಶೆಟ್ಟಿ ಬೆಳ್ಳೂರುಗುತ್ತು(ಅಧ್ಯಕ್ಷ, ಯುವ ವಿಭಾಗ) ಆಯ್ಕೆಯಾದರು.

 

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here