Friday 19th, April 2024
canara news

ಬಂಟವಾಳದ ಬಂಟರ ಸಂಘ-ಆಲ್‍ಕಾರ್ಗೊ ಸಹಯೋಗದ ಬೃಹತ್ ಶೈಕ್ಷಣಿಕ ವಿದ್ಯಾಥಿ೯ವೇತನ

Published On : 06 Aug 2018   |  Reported By : Rons Bantwal


ಬಂಟರು ಬದುಕನ್ನು ಪ್ರೇರೆಪಿಸುವ ಬಂಧುಗಳು : ಡಾ| ಶಾಂತಾರಾಮ ಶೆಟ್ಟಿ

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಅ.05: ಬಂಟತ್ವದ ಸ್ವಾರ್ಥದೊಂದಿಗೆ ಇಡೀ ಸಮಾಜವನ್ನು ಪೆÇ್ರೀತ್ಸಾಹಸುವಲ್ಲಿ ಬಂಟರು ಶ್ರೇಷ್ಠರು. ಬಂಟರು ಬದುಕನ್ನು ಪ್ರೇರೆಪಿಸುವ ಬಂಧುಗಳಾಗಿದ್ದಾರೆ. ಆದುದರಿಂದಲೇ ಎಲ್ಲಾ ಕ್ಷೇತ್ರಗಳಲ್ಲೂ ಬಂಟರ ಅಬ್ಬರ ಇಂದಿಗೂ ಆಡಂಬರಿಸುತ್ತಿದೆ. ನಾವೆಲ್ಲ ಇಷ್ಟೊಂದು ಸಾಧಕರಾಗಿದ್ದಾರೆ ಆದು ನಮ್ಮ ಸ್ವಸಮಾಜ ಪ್ರೇರಣೆಯಿಂದ. ಇಂತಹ ಕಾರ್ಯಕ್ರಮಗಳಿಂದ ಸಮಾಜದ ಋಣ ಪೂರೈಸಲು ಸಾಧ್ಯ. ಈ ಮೂಲಕ ಸಮಗ್ರ ಸಮಾಜ ಬೆಳಗುವುದು. ಬಂಟ್ವಾಳದ ಬಂಟರು ಎಲ್ಲರಿಕ್ಕಿಂತ ಭಿನ್ನರು ಮತ್ತು ಸರ್ವ ಸಾಧಕರು. ಭವಿಷ್ಯದ ಜನಾಂಗಕ್ಕೆ ಆದರನೀಯರೂ ಹೌದು. ಸಮಗ್ರ ಬಂಟ್ವಾಳದ ಜನತೆಯ ಸೇವೆ ಎಲ್ಲರಲ್ಲೂ ಚೈತನ್ಯ ಮೂಡಿಸುವಂತಿದೆ ಎಂದು ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ಪೆÇ್ರ| ಎಂ.ಶಾಂತಾರಾಮ ಶೆಟ್ಟಿ ತಿಳಿಸಿದರು.

ಇಂದಿಲ್ಲಿ ಆದಿತ್ಯವಾರ ಪೂರ್ವಾಹ್ನ ತುಂಬೆ ವಳವೂರು ಇಲ್ಲಿನ ಬೋಳಂತೂರುಗುತ್ತು ಗಂಗಾಧರ ರೈ ಕಾಂಪ್ಲೆಕ್ಸ್‍ನ ಬಂಟ್ವಾಳದ ಬಂಟರ ಭವನದ ಬೆಳ್ಳೂರು ಪರಾರಿ ಆರ್.ಎನ್ ಶೆಟ್ಟಿ ಸಭಾಗೃಹದಲ್ಲಿ ಮುಂಬಯಿ ಅಲ್ಲಿನ ಪ್ರತಿಷ್ಠಿತ ಆಲ್‍ಕಾರ್ಗೊ ಲಾಜಿಸ್ಟಿಕ್ ಲಿಮಿಟೆಡ್ ಸಂಸ್ಥೆಯ ಸಹಯೋಗದೊಂದಿಗೆ ಬಂಟರ ಸಂಘ ಬಂಟವಾಳ ತಾಲೂಕು ಇದರ ಶೈಕ್ಷಣಿಕ ಮತ್ತು ಸಮಾಜ ಕಲ್ಯಾಣ ಸಮಿತಿಯು ಆಯೋಜಿಸಿದ್ದ 2018ನೇ ವಾರ್ಷಿಕ ಬೃಹತ್ ವಿದ್ಯಾಥಿರ್s ವೇತನ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಡಾ| ಶಾಂತಾರಾಮ ಶೆಟ್ಟಿ ಮಾತನಾಡಿದರು.

ಆಲ್‍ಕಾರ್ಗೋ ಇಡೀ ಸಮಾಜಕ್ಕೆ ವೇತನ ವಿತರಿಸುತ್ತಿರುವುದು ಸ್ತುತ್ಯರ್ಹ. ಜಾಗತಿಕವಾಗಿ ಭವ್ಯತೆ ಸಾರುವ ಅವರ ಕನಸಿನ ಈ ಕಾರ್ಯಕ್ರಮ ಎಲ್ಲರಿಗೂ ಮಾದರಿ. ಸಮಾಜದಲ್ಲಿ ಎಲ್ಲರೂ ಸುಶಿಕ್ಷಿತರಾಗಿ ದುಃಖಮುಕ್ತರಾಗಿ ಬಾಳುವಂತಾಗಲಿ ಎನ್ನುವುದೇ ಇವರೆಲ್ಲರ ಆಶಯ. ಇವೆಲ್ಲವೂ ಸರ್ವರ ಕೂಡುವಿಕೆಯಿಂದ ಈಡೇರಲಿ ಎಂದು ಶಾಂತಾರಾಮ ಶೆಟ್ಟಿ ತಿಳಿಸಿ ಲಾಲ್‍ಬಹುದ್ಧೂರು ಶಾಸ್ತ್ರೀ ಅವರು ಮೂಖತಃಕಂಡ ಆಕರ್ಷನೀಯ ಸ್ಥಾನವಾದ ಬಂಟ್ವಾಳವನ್ನು ಉಲ್ಲೇಖಿಸಿ ಬಂಟ್ವಾಳದ ಸಾಧಕರನ್ನು ಪ್ರಶಂಸಿದರು. ಹಾಗೂ ಸರ್ವರೂ ಸಮೃದ್ಧಿ, ನೆಮ್ಮದಿಯೊಂದಿಗೆ ಬದುಕುವಂತಾಗಲಿ ಎಂದಾರೈಸಿದರು.

ಬಂಟರ ಸಂಘ ಬಂಟವಾಳ ಅಧ್ಯಕ್ಷ ನಗ್ರಿಗುತ್ತು ವಿವೇಕ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಗೌರವ ಅತಿಥಿsಗಳಾಗಿ ಮೈಟ್ ಶಿಕ್ಷಣ ಸಂಸ್ಥೆ ಮೂಡಬಿದ್ರೆ ಅಧ್ಯಕ್ಷ ರಾಜೇಶ್ ಚೌಟ, ನವಿಮುಂಬಯಿನ ನಿವೃತ್ತ ಪೆÇಲೀಸ್ ಅಧಿಕಾರಿ ಮತ್ತು ಆಲ್‍ಕಾರ್ಗೊ ಸಂಸ್ಥೆಯ ಸಿಎಸ್‍ಆರ್ ಸಲಹೆಗಾರ ಕೆ.ಎಲ್ ಪ್ರಸಾದ್ ಹಾಗೂ ಆಲ್‍ಕಾರ್ಗೊ ಸಿಎಸ್‍ಆರ್ ಮುಖ್ಯಸ್ಥ ಡಾ| ನೀಲ್‍ರತ್ನ ಆರ್. ಶೆಂಡೆ ವೇದಿಕೆಯಲ್ಲಿ ಆಸೀನರಾಗಿದ್ದು ಆಯ್ದ ಸ್ಥಳಿಯ ಬಹುತೇಕ ಸಮುದಾಯ, ಜಾತಿಗಳ ಸುಮಾರು 1,500 ವಿದ್ಯಾಥಿರ್üಗಳಿಗೆ 40ಲಕ್ಷ ಮೊತ್ತಕ್ಕೂ ಅಧಿಕ ಶೈಕ್ಷಣಿಕ ದೇಣಿಗೆ ವಿತರಿಸಿದರು.

ಸಮಾಜಮುಖಿ ಕಾರ್ಯಕ್ರಮಕ್ಕೆ ಈ ಸಂಸ್ಥೆ ಮಾದರಿ. ಸಮಾಜದಲ್ಲಿನ ಸಂಪನ್ಮೂಲತೆ ಬಳಸಿ ಸಮಾಜದ ಉನ್ನತಿಗೆ ಶ್ರಮಿಸಬೇಕು. ಬರೇ ಭವನಗಳನ್ನು ರಚಿಸುವುದಕ್ಕಿಂತ ಆ ಭವನದ ಮೂಲಕ ಸಮಾಜದ ಜನತೆಯ ಭವಿಷ್ಯ ರೂಪಿಸಲು ಪ್ರೇರಕರಾದಾಗ ಸಂಸ್ಥೆಗಳ ಅಸ್ತಿತ್ವ ಫಲಪ್ರದವಾಗುವುದು. ವಿದ್ಯಾಥಿರ್sಗಳೇ ತಾವೂ ಸರ್ವೋತ್ಕತಷ್ಟ ಶಿಕ್ಷಣ ಪಡೆದು ಶಶಿಕಿರಣ್ ಅವರಂತಹ ಕನಸುಕಂಡು ಜೀವನ ಪಾವನವಾಗಿಸಿರಿ. ಶಿಕ್ಷಣ ಬರೇ ಸ್ವಂತಿಕೆಗೆ ಮಾತ್ರವಲ್ಲ ಅದÉÇ್ರಂದಿಗೆ ಜೀವನ ರೂಪಿಸುವ ಜೊತೆಗೆ ಸಮಾಜಕ್ಕೂ ಪೂರಕವಾಗಬೇಕು. ಉದ್ಯಮಸ್ಥರೂ ಬದುಕಿನ ಶ್ರೀಮಂತಿಕೆಯೊಂದಿಗೆ ಸಮಾಜದ ಶ್ರೀಮಂತಿಕೆಯಲ್ಲಿ ಪಾಲುದಾರರಾಗಿ ಸಮಾಜದ ಸರ್ವಸ್ವಕ್ಕೆ ಪ್ರೇರಕರಾಗಬೇಕು. ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಪ್ರೀತಿಗೆ ಭಾಜನೆರಾಗಿ ಸಾಂಘಿಕವಾಗಿ ಮುನ್ನಡೆಯಲು ಇಂತಹ ಕಾರ್ಯಕ್ರಮ ಮಾದರಿ ಎಂದು ರಾಜೇಶ್ ಚೌಟ ಅಭಿಪ್ರಾಯ ಪಟ್ಟರು.

ಕೆ.ಎಲ್ ಪ್ರಸಾದ್ ಮಾತನಾಡಿ ಸಮಾಜ ಸೇವೆ ನನ್ನ ಅತೀಪ್ರಿಯ ವಿಚಾರವಾಗಿದೆ. ಸಮಾಜ ಸೇವೆಗೆ ಹೃದಯಶೀಲತಾ ಮನೋಭಾವÀ ಅಗತ್ಯವಿದೆ. ಇದು ಶಶಿಕಿರಣ್ ಮತ್ತು ಆರತಿ ಶೆಟ್ಟಿ ದಂಪತಿಯ ರಕ್ತದಲ್ಲೇ ಅಡಗಿದಂತಿದೆ. ನಿಮ್ಮಲ್ಲಿನ ಸಾಧಾರಣ ವ್ಯಕ್ತಿಗಳಲ್ಲಿ ಅಸಾಧಕನೀಯ ಸಾಧನೆ ಎಲ್ಲರಿಗೂ ಮೇರು ಪಂಕ್ತಿಯಾಗಿದೆ. ವೇತನ ಪಡೆಯುವ ಎಲ್ಲರೂ ಭಾಗ್ಯಶಾಲಿಗಳು. ನಾವೆಲ್ಲರೂ ಜಾತಿ ಧರ್ಮದ ಸ್ವಾರ್ಥ ಕಾಣದೆ ಮೊದಲಾಗಿ ಭಾರತೀಯರಾಗಿ ಬಾಳಿದಾಗ ಎಲ್ಲರ ಶ್ರೇಯಸ್ಸು ಸಾಧ್ಯವಾಗುವುದು. ಎಲ್ಲರೂ ಸುಖಿಯಾಗಿ ಬಾಳಬೇಕು. ನಮ್ಮೆಲ್ಲರಲ್ಲೂ ಮಾನವತಾ ಮನೋಭಾವ ಬೆಳೆಸಿಕೊಳ್ಳಬೇಕು. ದುಷ್ಟಚಟ ಮುಕ್ತರಾಗಿ ಮಾತಾ ಪಿತರಿಗೆ ಅದರನೀಯರಾಗಿ ಬದುಕು ಬಂಗಾರವಾಗಿಸಿ ಎಂದು ಸಲಹಿಸಿದರು.

ಆಲ್‍ಕಾರ್ಗೊ ಸಂಸ್ಥೆಯ ಉದ್ದೇಶವೇ ಸದೃಢ ರಾಷ್ಟ್ರ ನಿರ್ಮಾಣ. ಇಂತಹ ಕಾರ್ಯಕ್ರಮಗಳಿಂದ ಸಾಮಾಜಿಕ ಭವನದ ಸೇವೆ ಸಾರ್ಥಕವಾಗುವುದು. ಸ್ವಾರ್ಥದಿಂದ ಹೊರಬಂದು ಪರಿಶ್ರಮಿಗಳಾಗಿ ಮುನ್ನಡೆದಾಗ ಜೀವನ ಸಫಲಾಗುವುದು. ಮಕ್ಕಳಲ್ಲಿ ಕನಸುಗಳೇ ಬದುಕಿಗೆ ಮಾರ್ಗದರ್ಶನ ಆಗಬೇಕು. ಇದನ್ನು ತಾವೆಲ್ಲರೂ ಪೂರ್ಣ ಗೊಳಿಸಬೇಕು. ತಮ್ಮಲ್ಲಿನ ಪ್ರತಿಭೆಗಳನ್ನು ಪ್ರಾಮಾಣಿಕವಾಗಿ ಪ್ರದರ್ಶಿಸಿ ಮುನ್ನಡೆದಾಗ ತಾವೆಲ್ಲರೂ ಸಾಧಕರಾಗ ಬಲ್ಲೀರಿ. ಆಶಾವಾದಿಗಳಾಗಿ ನ್ಯಾಯಯುತ ಬಾಳನ್ನು ಬೆಳಗಿಸಿರಿ ಎಂದು ಡಾ| ನೀಲ್‍ರತ್ನ ತಿಳಿಸಿದರು.

ಇದು ಕಲ್ಲು ಸಿಮೆಂಟಿನ ಭವನವಲ್ಲ. ಸಮಾಜ ಜನತೆಯ ಪ್ರೀತಿಯ ಧ್ಯೋತಕವಾಗಿದ್ದು, ಸಾಮಾಜಿಕ ಶ್ರೇಯೋಭಿವೃದ್ಧಿಯ ಹಣತೆ ಇದಾಗಿದೆ. ಜಾತಿ ಮತ ಧರ್ಮದ ಅಂತರವಿಲ್ಲದೆ ವಿದ್ಯಾಥಿರ್sಗಳನ್ನು ಪೆÇ್ರೀತ್ಸಾಹಿಸಬೇಕು ಎನ್ನುವ ಶಶಿಕಿರಣ್ ಶೆಟ್ಟಿ ಆಶಯದಂತೆ ಈ ವೇತನ ವಿತರಿಸಲಾಗುತ್ತಿದೆ. ಇವತ್ತಿನ ಗಣ್ಯರೆಲ್ಲರೂ ಮಾದರಿ ವ್ಯಕ್ತಿಗಳು ಅವರ ಆದರ್ಶವನ್ನು ನಿವೆಲ್ಲಾ ಮಾದರಿಯಾಗಿಸಬೇಕು. ವಿದ್ಯಾಥಿರ್sವೇತನ ಕೊಂಡು ಕೊಳ್ಳುವುದರ ಬಗ್ಗೆ ಮಾಹಿತಿ ಮತ್ತು ಅದರ ಬಗ್ಗೆ ಜವಾಬ್ದಾರಿ ಇರುವುದು ತಮ್ಮ ತಮ್ಮ ಕರ್ತವ್ಯ.ಮುಂದಿನ ದಿನಗಳಲ್ಲಿ ಸಮಾಜದ ಮಕ್ಕಳಿಗೆ ಬಡ್ಡಿ ರಹಿತ ಸಾಲವನ್ನು ನೀಡಿ ಉನ್ನತ ಶಿಕ್ಷಣಕ್ಕೆ ಪೆÇ್ರೀತ್ಸಾಹಿಸುವ ಮತ್ತು ಸಂಪೂರ್ಣ ಶಿಕ್ಷಣಕ್ಕಾಗಿ ಕನಿಷ್ಠ 100 ವಿದ್ಯಾಥಿರ್sಗಳನ್ನು ದತ್ತು ಸ್ವೀಕರಿಸುವ ಉದ್ಡೇಶ ಈ ಸಂಸ್ಥೆಗಿದೆ. ಸರ್ವ ಬಂಧುಗಳಿಗೆ ಬಂಟ ಸಂಘ ಗೌರವಿಸುತ್ತಿದೆ. ಅದನ್ನೇ ಮಕ್ಕಳು ಮತ್ತು ಪಾಲಕರು ಸಮಾಜದಲ್ಲಿ ಪ್ರದರ್ಶಿಸಿ ರಾಷ್ಟ್ರೀಯ ಭಾವೈಕ್ಯತೆಗೆ ಪ್ರೇರಕರಾಗಬೇಕು ಎಂದು ಅಧ್ಯಕ್ಷೀಯ ಭಾಷಣದಲ್ಲಿ ವಿವೇಕ್ ಶೆಟ್ಟಿ ಕರೆಯಿತ್ತರು.

ಬಂಟರ ಕಾರ್ಯದರ್ಶಿ ಚಂದ್ರ್ರಹಾಸ ಡಿ.ಶೆಟ್ಟಿ, ಡಾ| ಪ್ರಶಾಂತ್ ಮಾರ್ಲ, ಸಂಘದ ಉಪಾಧ್ಯಕ್ಷ ಕಿರಣ್ ಹೆಗ್ಡೆ ಅನಂತಾಡಿ, ಜೊತೆ ಕಾರ್ಯದರ್ಶಿ ನವೀನ್‍ಚಂದ್ರ ಶೆಟ್ಟಿ ಮುಂಡಜೆಗುತ್ತು, ಮಹಿಳಾ ವಿಭಾಗಧ್ಯಕ್ಷೆ ಆಶಾ ಪ್ರಸಾದ್ ರೈ ಮತ್ತಿತರÀರು ಪದಾಧಿಕಾರಿಗಳು ಉಪಸ್ಥಿತರಿದ್ದು ಅತಿಥಿsಗಳಿಗೆ ಶಾಲು, ಕೃತಿಸ್ಮರಣಿಕೆ ನೀಡಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ಉಳೆಪಾಡಿಗುತ್ತು ರಾಜೇಶ್ ನಾೈಕ್, ಸಂಧ್ಯಾ ವಿವೇಕ್ ಶೆಟ್ಟಿ, ನಕ್ರೆ ಸುರೇಂದ್ರ ಶೆಟ್ಟಿ, ಸವಿಸ್ತಾರ್ ಶೆಟ್ಟಿ ಉಪಸ್ಥಿತರಿದ್ದರು.

ಕು| ತೃಪ್ತಿ ರೈ, ಖುಷಿ ಶೆಟ್ಟಿ, ರಿಷಾ ಎಲ್.ಶೆಟ್ಟಿ ಮತ್ತು ಶ್ರೀಕ್ಷಾ ಶೆಟ್ಟಿ ಪ್ರಾರ್ಥನೆಯನ್ನಾಡಿದರು. ಶೈಕ್ಷಣಿಕ, ಸಾಮಾಜಿಕ ಸಮಿತಿ ಕಾರ್ಯಾಧ್ಯಕ್ಷ ಹೆಚ್.ಸಂಕಪ್ಪ ಶೆಟ್ಟಿ ಫಲಾನುಭವಿಗಳ ಪಟ್ಟಿ ಮತ್ತು ಕೋಶಾಧಿಕಾರಿ ಜಗಧೀಶ್ ಶೆಟ್ಟಿ ಇರಾಗುತ್ತು ಫಲಾನುಭವಿಗಳ ಯಾದಿ ವಾಚಿಸಿದರು. ಬಾಲಕೃಷ್ಣ ಆಳ್ವ ಕೋಡಾಜೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಚಂದ್ರ್ರಹಾಸ ಡಿ.ಶೆಟ್ಟಿ ಕೃತಜ್ಞತೆ ಸಮರ್ಪಿಸಿದರು.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here