Thursday 18th, April 2024
canara news

ಕಾರ್ಯನಿರತ ಪತ್ರಕರ್ತರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾಗಿ ಶ್ರೀನಿವಾಸ ನಾಯಕ್ ಇಂದಾಜೆ ಗೆಲುವು

Published On : 11 Aug 2018   |  Reported By : Rons Bantwal


ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಂಸಾರ ಬಲಗೊಳ್ಳಲು ಮುಂದಾಗಿದ್ದಾರೆ. ಹಿಂದೆ ಹೆಂಡತಿ ತನ್ನ ಖರ್ಚಿಗೆ ಗಂಡನ ಬಳಿ ಹಣಕ್ಕಾಗಿ ಬೇಡಿಕೊಳ್ಳಬೇಕಿತ್ತು.

ಇಂದು 50 ಸಾವಿರ ರೂ ಅಷ್ಟು ಹಣವನ್ನು ಬೇಕಾದರೆ ಗಂಡನಿಗೆ ಕೊಡುವಷ್ಟು ಮಹಿಳೆಯರು ಶಕ್ತರಾಗಿದ್ದಾರೆ. ಅದಕ್ಕೆ ಸ್ವ-ಸಹಾಯ ಸಂಘವೇ ಕಾರಣ ಎಂದು ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.

ಆನೇಕಲ್ ತಾಲೂಕಿನ ಚಂದಾಪುರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಆಯೋಜಿಸಿದ್ದ ಕಾರ್ಯಕ್ರಮವನ್ನು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಉದ್ಘಾಟಿಸಿದರು.

ತಾಲೂಕಿನ ಹಳೆ ಚಂದಾಪುರದಲ್ಲಿನ ಸನ್ ಪ್ಯಾಲೇಸ್ ವಿವಾಹ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ವತಿಯಿಂದ ಆಯೋಜಿಸದ್ದ ಒಕ್ಕೂಟಗಳ ಉದ್ಘಾಟನೆ ಹಾಗೂ ವಿವಿಧ ಅನುದಾನ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಸ್ವ-ಸಹಾಯ ಸಂಘ ಅಂದರೆ ಸ್ವ-ಸಹಾಯಕ್ಕೆ ರೂಪಿತವಾಗಿರುವುದು. ಸಂಘ ಹಲವು ಮಕ್ಕಳ ತಾಯಿ ಇದ್ದಂತೆ ಹಾಗಾಗಿ ಸಭೆಗಳನ್ನು ನಡೆಸುವುದರ ಮೂಲಕ ಕಷ್ಟ, ಸುಖ ಹಂಚಿಕೊಳ್ಳಬಹುದಾಗಿದೆ. ಭವಿಷ್ಯದ ಕನಸುಗಳನ್ನು ಚಿಂತಿಸಿಕೊಳ್ಳುತ್ತಿರಿ. ಅದಕ್ಕೆ ಮಹಿಳೆ ಅಭಿವೃದ್ಧಿಗೆ ಸಂಘಕ್ಕೆ ಸೇರಿ ಕೊಳ್ಳಿ ಎಂದು ಅವರು ಹೇಳಿದರು.
ನಮ್ಮ ಜಿಲ್ಲೆಯಲ್ಲಿ ಮಳೆ ಜಾಸ್ತಿ ಇದೆ. ಆದರೆ, ಬೆಂಗಳೂರು ಭಾಗದಲ್ಲಿ ಹಾಲು ಉತ್ಪಾದನೆ ಹೆಚ್ಚಾಗಿದೆ. ಇದರಿಂದ ರೈತ ಕುಟುಂಬಗಳು ನೆಮ್ಮದಿಯಾಗಿ ಬದುಕು ನೀಗಿಸಲು ಸಹಾಯವಾಗಿದೆ. ಈ ಭಾಗದಲ್ಲಿ 218 ಡೈರಿಗಳಿಗೆ ಆರ್ಥಿಕ ಸಹಾಯ ನೀಡಲಾಗಿದೆ.

ಸ್ವಚ್ಛ ಮಾಡುವವರು ಇದ್ದಾರೆಂದು ಗಲೀಜು ಮಾಡುವುದು ಸರಿಯಲ್ಲ. : ಹೆಗ್ಗಡೆಯವರು

ರಾಜ್ಯದ 8000 ದೇವಾಲಯಗಳಲ್ಲಿ ಸ್ವಚ್ಛತೆ ಮಾಡುತ್ತಿದ್ದೇವೆ. ಸ್ವಚ್ಛತೆ ಮಾಡುವವರು ಇದ್ದಾರೆ ಎಂದು ನಾವು ಗಲೀಜು ಮಾಡಬಾರದು. ಅದೇ ನಮ್ಮ ಪುಣ್ಯದ ಕೆಲಸ ಎಂದು ಹೇಳಿದರು.

ಈ ಸಭೆಯಲ್ಲಿ ಇಷ್ಟು ಮಹಿಳೆಯರು ಸೇರಿದ್ದಾರೆಂದರೆ ಅವರ ಸಂತೋಷ ವ್ಯಕ್ತಪಡಿಸಲು ಎಂದು ನಾನು ಭಾವಿಸಿದ್ದೇನೆ. ಬದುಕಿನಲ್ಲಿ ಸಂತೋಷ ಬೇಕು. ನೆಮ್ಮದಿ ಆರೋಗ್ಯ ಭವಿಷ್ಯದ ಬಗ್ಗೆ ಅಭಯಬೇಕು ಇದೇ ಪ್ರತಿಯೊಬ್ಬ ಮನುಷ್ಯನಿಗೆ ಬೇಕಿರುವುದು ಎಂದರು.

ಉತ್ತರ ಕನ್ನಡದ ಜಿಲ್ಲೆಯಲ್ಲಿ ಎರಡು ವರ್ಷದಷ್ಟು ಮಳೆ ಬಂದಿದೆ. ಈ ಭಾಗದಲ್ಲಿ ಮಳೆಯೇ ಕಡಿಮೆ ಇದೆ. ಒಂದು ಕಡೆ ಅತಿವೃಷ್ಠಿ, ಅನಾವೃಷ್ಠಿ ಇದೆ ಹಾಗಾಗಿ ಎರಡು ಸಮನಾಗಿದ್ದರೆ ಮಾತ್ರ ಬದುಕು ಯಶಸ್ವಿಯಾಗಲಿದೆ ಎಂದರು.

ಬೆಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಎಂ. ಕೃಷ್ಣಪ್ಪ, ತಾಲೂಕು ಪಂಚಾಯತ್ ಅಧ್ಯಕ್ಷರಾದ ಮುನಿರತ್ನ ನಾರಾಯಣಪ್ಪ, ಬಮೂಲ್ ಅಧ್ಯಕ್ಷರಾದ ಮುನಿರತ್ನ ನಾರಾಯಣಪ್ಪ ಮೊದಲಾದವರು ಉಪಸ್ಥಿತರಿದ್ದರು.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here