Friday 19th, April 2024
canara news

ರಾಮರಾಜ ಕ್ಷತ್ರೀಯ ಸೇವಾ ಸಂಘದ ಮಹಿಳಾ ವಿಭಾಗ ಸಂಭ್ರಮಿಸಿದ ಶ್ರಾವಣೋತ್ಸವ ಸಮಾಧಾನವೇ ಸಮಾನತೆಯ ಬಾಳಿನ ತಂತ್ರ : ರೀನಾ ಕೇದರ್‍ನಾಥ್

Published On : 13 Aug 2018


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಆ.12: ರಾಮರಾಜ ಕ್ಷತ್ರೀಯ ಸೇವಾ ಸಂಘ ಮುಂಬಯಿ ಇದರ ಮಹಿಳಾ ವಿಭಾಗವು ಇಂದಿಲ್ಲಿ ಭಾನುವಾರ ಪೂರ್ವಾಹ್ನ ಸಾಂತಾಕ್ರೂಜ್ ಪೂರ್ವದಲ್ಲಿನ ಶ್ರೀ ಪೇಜಾವರ ಮಠ ಮುಂಬಯಿ ಶಾಖೆಯ ಶ್ರೀ ವಿಶ್ವೇಶತೀರ್ಥ ಸಭಾಗೃಹದಲ್ಲಿ ಆರೋಗ್ಯ ಸಂಜೀವಿನಿ ಮತ್ತು ಅರಸಿನ ಕುಂಕುಮ ಕಾರ್ಯಕ್ರಮದೊಂದಿಗೆ ಶ್ರಾವಣೋತ್ಸವವನ್ನು ಅದ್ದೂರಿಯಾಗಿ ಆಚರಿಸಿತು.

ಸಂಘದ ಮಹಿಳಾ ವಿಭಾಗಧ್ಯಕ್ಷೆ ರೀನಾ ಕೇದರ್‍ನಾಥ ಬೋಳಾರ್ ಮುಂದಾಳುತ್ವಲ್ಲಿ ನಡೆಸಲ್ಪಟ್ಟ ತ್ರಿವಳಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರಾಜ್‍ಕುಮಾರ್ ಕಾರ್ನಾಡ್ ವಹಿಸಿದ್ದು ಸಮಾಜದ ಜೇಷ್ಠ ಮಹಿಳಾ ಧುರೀಣೆ ಧನ್ವಂತರಿ ದಿನಕರ್ ರಾವ್ ದೀಪ ಪ್ರಜ್ವಲಿಸಿ ಸಮಾರಂಭಕ್ಕೆ ಚಾಲನೆಯನ್ನಿತ್ತರು. ಅತಿಥಿü ಅಭ್ಯಾಗತರುಗಳಾಗಿ ಸುಮನ್ ಮನ್‍ಮೋಹನ್ ರಾಜ್, ಕಲಾವತಿ ಗಣಪತಿ ಸೌಕೂರ್, ಸಂಘದ ಉಪಾಧ್ಯಕ್ಷ ಎನ್. ರವೀಂದ್ರನಾಥ್ ರಾವ್, ಗೌ| ಪ್ರ| ಕಾರ್ಯದರ್ಶಿ ಕೇದರ್‍ನಾಥ ಆರ್.ಬೋಳಾರ್ ವೇದಿಕೆಯಲ್ಲಿದ್ದು ಶುಭಾರೈಸಿದರು.

ನಮ್ಮದು ಬರೇ ಚಿಕ್ಕÀಸಮಾಜ ಎನ್ನುವ ಭಾವನೆ ಸಲ್ಲದು. ಬದಲಾಗಿ ನಮ್ಮಲ್ಲಿನ ಪ್ರತಿಭೆಗಳ, ಸಾಧಕರ ಬಗ್ಗೆ ಹೆಮ್ಮೆಪಡಬೇಕು. ಹನಿಹನಿಗೂಡಿ ಹಳ್ಳ ಎಂಬಂತೆ ಚಿಕ್ಕಚಿಕ್ಕ ಸಮಾಜಗಳು ಕೂಡಿಯೇ ಸುಭದ್ರ ರಾಷ್ಟ್ರವಾಗುವುದು. ಆದುದರಿಂದ ಸಮುದಾಯ ವಿಚಾರಿತ ಸಾಮಾನ್ಯತನ ಸಲ್ಲದು. ಇಂದು ಕ್ಷುದ್ರ ಸಮಾಜಗಳೇ ಭದ್ರವಾಗಿರುವುದು. ಆ ಮೂಲಕ ತಮ್ಮ ಸಮಾಜವನ್ನು ಭದ್ರಪಡಿಸುವ ಪ್ರಯತ್ನದಲ್ಲಿವೆ. ಸಂಸ್ಥೆಗಳು ಸಮುದಾಯಗಳ ಮುನ್ನಡೆಯ ಸಾರಥಿü ಇದ್ದಂತೆ. ಆದುದರಿಂದ ಸದಸ್ಯರು ಸಂಸ್ಥೆಗಳ ಮುನ್ನಡೆಗೆ ಬೆನ್ನೆಲುವಾಗಿ ನಿಂತು ಪೆÇ್ರೀತ್ಸಾಹಿಸಬೇಕು ಎಂದು ರಾಜ್‍ಕುಮಾರ್ ಕಾರ್ನಾಡ್ ತಿಳಿಸಿದರು.

ಸದ್ಯ ಮಹಿಳೆಯರಿಗೆ ಸ್ಥಾನಮಾನದ ಅಭಾವವಿದೆ ಎನ್ನುವುದು ತಪ್ಪು ಕಲ್ಪನೆ. ಅವಕಾಶ ತಮ್ಮದಾಗಿಸಲು ಮಹಿಳಾಶÀಕ್ತಿ ಸ್ವಯಂ ಪ್ರೇರಿತರಾಗಿ ಮುಂದಾಗÀಬೇಕು. ಮಹಿಳೆಯರ ಭಾವನೆ ಮನಸ್ಸುಗಳನ್ನು ಅರ್ಥೈಸುವಲ್ಲಿ ಪುರುಷರು ಸಫಲರಾದಾಗ ಅವಕಾಶಗಳು ತನ್ನಷ್ಟಕ್ಕೆನೇ ಫಲಿಸುವುದು. ಪುರುಷ ಮಹಿಳೆಯ ಸಮಾನತೆಯಿಂದ ಮಾತ್ರ ಇದು ಸಾಧ್ಯಗಲಿದೆ. ಅವಾಗಲೇ ಮಹಿಳೆಯರಲ್ಲಿನ ಅನ್ಯೋನ್ಯತೆ ನಿವಾರಣೆ ಆಗಬಲ್ಲದು. ನಾರಿಯರಲ್ಲಿನ ನಾನು ಎಂಬ ಅಹಂ ಸಂಘರ್ಷಕ್ಕೆ ಕಾರಣವಾಗದೆ ಸಹನೆ, ಸಹಬಾಳ್ವೆ ಪ್ರಧಾನವಾಗಿ ಮೂಡಿದಾಗ ಸಾಂಸರಿಕ ಬದುಕೇ ಹಸನಾಗುವುದು. ಆದುದರಿಂದ ಸಮಾಧಾನವೇ ಸಮಾನತೆಯ ಬಾಳಿನ ತಂತ್ರವಾಗಿದೆ ಎಂದು ರೀನಾ ಕೇದರ್‍ನಾಥ್ ಅಭಿಪ್ರಾಯ ಪಟ್ಟರು.

ವೀಣಾ ಸಂತೋಷ್ ರಾವ್ ಅವರು ಶ್ರಾವಣ ಆಚರಣೆ ಬಗ್ಗೆ ಸ್ಥೂಲವಾದ ಮಾಹಿತಿ ನೀಡಿ ಸುಮಂಗಲಿಯರು ದೀರ್ಘಕಾಲದ ಮಾಂಗಲ್ಯ ಪಾಪ್ತಿಗಾಗಿ ಆಷಾಢ ಮಾಸದ ಅಮಾವಾಸ್ಯೆಯ ಸಂಜೆ ವ್ರತವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸುವುದಿದೆ. ಆಷಾಢದ ಶುಕ್ಲ ಪಕ್ಷದ ಪಂಚಮಿದಿನ ಮಹಿಳೆಯರು ಅಮೃತಲಕ್ಷ್ಮೀ ವ್ರತ ಭಕ್ತಿಯಿಂದ ಆಚರಿಸುತ್ತಾರೆ. ಈ ಎಲ್ಲಾ ಮಹತ್ವಗಳು ಆಷಾಢ ಮಾಸದಲ್ಲಿ ಇರುವುದರಿಂದ ಈ ತಿಂಗಳು ವಿಶೇಷವಾದುದು ಎಂದು ಆಷಾಢ ಮಾಸದ ಮಹತ್ವ ಸಾರಿದರು.

ಕುಲದೇವರು ಶ್ರೀ ರಾಮ ದೇವರಿಗೆ ಆರಾಧಿಸಿ ಸ್ತೋತ್ರದೊಂದಿಗೆ ಕಾರ್ಯಕ್ರಮ ಆದಿಗೊಂಡಿತು. ಬಳಿಕ ಗೇಮ್ಸ್ ನಡೆಸಲ್ಪಟ್ಟವು. ಮಹಿಳೆಯರು ಧಾರ್ಮಿಕ ಕಾರ್ಯಕ್ರಮವಾಗಿಸಿ ಅರಸಿಣ ಕುಂಕುಮ ಕಾರ್ಯಕ್ರಮ, ಕನ್ನಡ ಕಲಿಕೆ ಮತ್ತು ಆಧುನಿಕ ಯುಗದ ದಾಂಪತ್ಯ ಜೀವನದಲ್ಲಿ ಗಂಡನ ಪಾತ್ರ ಮುಖ್ಯವೋ ಹೆಂಡತಿಯ ಪಾತ್ರ ಪ್ರಧಾನವೋ ವಿಚಾರವಾಗಿ ಹರಟೆ ಕಾರ್ಯಕ್ರಮ ಪ್ರಸ್ತುತಪಡಿಸಿದರು. ಮಧ್ಯಾಂತರದಲ್ಲಿ ಮಹಿಳಾ ಪದಾಧಿಕಾರಿಗಳು ಯೋಗ ಇನ್‍ಸ್ಟಿಟ್ಯೂಟ್ ತಂಡವು ಜೀವವನ್ನು ಯಾವ ರೀತಿಯಾಗಿ ಸಮತೋಲನದಲ್ಲಿ ಇರಿಸಬೇಕು ವಿಚಾರಿತ ಆರೋಗ್ಯ ಸಂಜೀವಿನಿ ಮಾಹಿತಿಗಾರ ನಡೆಸಿ ಯೋಗ ಮುಖೇನ ಮನವರಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸಂಘದ ಸದಸ್ಯರು, ಮಹಿಳಾ ಸದಸ್ಯೆಯರು, ಮಕ್ಕಳು ವಿವಿಧ ವಿನೋದಾವಳಿ ಕಾರ್ಯಕ್ರಮ ಪ್ರದರ್ಶಿಸಿದರು.


ಕಾರ್ಯಕ್ರಮದಲ್ಲಿ ರಾಮರಾಜ ಕ್ಷತ್ರೀಯ ಸಂಘ ಮುಂಬಯಿ ಮಹಿಳಾ ವಿಭಾಗದ ಗೌ| ಕೋಶಾಧಿಕಾರಿ ಪ್ರಜ್ಞ ಎಸ್.ರಾವ್, ಕಾರ್ಯಕಾರಿ ಸಮಿತಿ ಸದಸ್ಯೆಯರುಗಳಾದ ಕವಿತಾ ಆರ್.ರಾವ್, ಕಾಂತಿ ವಿ.ರಾವ್, ಧನಲಕ್ಷ್ಮಿ ಆರ್.ಕಾರ್ನಾಡ್, ಶ್ರೇಯಾ ಎಸ್.ರಾವ್, ಸಾರಿಕ ಡಿ.ಶೇರೆಗಾರ್, ಅನುಪಮ ಎಸ್.ರಾವ್, ನಿಶಾ ಎಸ್.ರಾವ್, ಗಾಯತ್ರಿ ರಾವ್ ಸೇರಿದಂತೆ ಮಾಜಿ, ಹಾಲಿ ಪದಾಧಿಕಾರಿಗಳು, ಸದಸ್ಯರನೇಕರು, ಸಮಾಜ ಬಾಂಧವರು ಉಪಸ್ಥಿತರಿದ್ದು ಆರತಿ ಎನ್.ರಾವ್ ಗೇಮ್ಸ್ ನಡೆಸಿದರು.

ಕೀರ್ತನ ರೂಪೇಶ್ ರಾವ್ ಸ್ವಾಗತಿಸಿದರು. ಮಹಿಳಾ ವಿಭಾಗದ ಸದಸ್ಯೆಯರು ಭಜನೆಗೈದು ಹಳದಿಕುಂಕುಮ ಕಾರ್ಯಕ್ರಮ ನೆರವೆರಿಸಿದರು. ರಾಜ್‍ಕುಮಾರ್ ಕಾರ್ನಾಡ್ ಗಣ್ಯರಿಗೆ ಪುಷ್ಫಗುಪ್ಚವನ್ನಿತ್ತು, ಸ್ಪರ್ಧಾ ವಿಜೇತರಿಗೆ ಬಹುಮಾನ ಪ್ರದಾನಿಸಿ ಅಭಿನಂದಿಸಿದರು. ಸಪ್ನಾ ಉದಯಕುಮಾರ್ ಬೇಕಲ್ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ಗೌರವ ಕಾರ್ಯದರ್ಶಿ ಚಿತ್ರಾ ಎಂ.ರಾವ್ ಅಭಾರ ಮನ್ನಿಸಿದರು.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here