Thursday 25th, April 2024
canara news

ಜಡತ್ವವನ್ನು ಕ್ರಿಯಾತ್ಮಕತೆಯೆಡೆಗೆ ಕೊಂಡೊಯ್ಯುವ ಶಕ್ತಿ ತುಳು ಆಚರಣೆಗಳಲ್ಲಿದೆ ಸ್ವರ್ಣ ಆಟಿದ ಆಯನೊ ಕಾರ್ಯಕ್ರಮದಲ್ಲಿ ಪ್ರದೀಪಕುಮಾರ್ ಕಲ್ಕೂರ

Published On : 14 Aug 2018


ಮುಂಬಯಿ (ಬದಿಯಡ್ಕ), ಆ.14: ಭೋಗ ಜೀವನದಿಂದ ತ್ಯಾಗದತ್ತ ಬದುಕು-ಜೀವನವನ್ನು ಎತ್ತರಕ್ಕೆ ಏರಿಸುವ ಆಚರಣೆ ಈ ಮಣ್ಣಿನ ಸತ್ವದ ಸಂಕೇತ. ಇಂದು ನಮ್ಮನ್ನು ಆವರಿಸಿರುವ ಜಡತ್ವವನ್ನು ನಿವಾರಿಸಿ, ಕ್ರಿಯಾತ್ಮಕತೆಯೆಡೆಗೆ ಕೊಂಡೊಯ್ಯುವ ಶಕ್ತಿ ತುಳುನಾಡಿನ ಆಚರಣೆಗಳಲ್ಲಿ ಅಡಕವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರದೀಪಕುಮಾರ ಕಲ್ಕೂರ ಅಭಿಪ್ರಾಯ ವ್ಯಕ್ತಪಡಿಸಿದರು.

ಜಿ.ಕೆ.ಚಾರಿಟೇಬಲ್ ಟ್ರಸ್ಟ್ ಬದಿಯಡ್ಕ ಹಾಗೂ ಕರ್ನಾಟಕ ಜಾನಪದ ಪರಿಷತ್ತು ಕೇರಳ ಘಟಕ ಹಾಗೂ ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ, ತುಳುವೆರೆ ಆಯನೊ ಕೂಟ ಬದಿಯಡ್ಕ ಇವುಗಳ ಸಂಯುಕ್ತ ಆಶ್ರಯದಲ್ಲಿ ಕುಂಟಾಲುಮೂಲೆ ವಾಂತಿಚ್ಚಾಲುನಲ್ಲಿ ಭಾನುವಾರ ಆಯೋಜಿಸಲಾದ ಆಟಿದ ಆಯನೊ ದ 50ನೇ ವರ್ಷದ ಸಮಾರಂಭದಲ್ಲಿ ಮುಖ್ಯ ಅತಿಥಿüಗಳಾಗಿ ಕಲ್ಕೂರ ಮಾತನಾಡಿದರು.

ಸಂಸ್ಕøತಿಯೊಳಗಿನ ಬದುಕು ಸೌಖ್ಯ ನೆಮ್ಮದಿ ನೀಡುತ್ತದೆ. ಜಾನಪದ, ಆಚರಣೆಗಳೊಮದಿಗೆ ಒಂದಾಗಿ ಬದುಕಿದಾಗ ಜೀವ ಚೈತ್ಯ ಮೂಡಿಬಂದು ನೆಮ್ಮದಿ ಮೂಡಿಸುತ್ತದೆ ಎಂದು ಅವರು ತಿಳಿಸಿದರು.

ಸಮಾರಂಭದಲ್ಲಿ ಅತಿಥಿüಗಳಾಗಿ ಉಪಸ್ಥಿತರಿದ್ದ ಜಿಲ್ಲಾ ಪಂಚಾಯತು ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್ ಅವರು ಮಾತನಾಡಿ, ಭಾರತೀಯ ಸಂಸ್ಕøತಿಯಲ್ಲಿ ಹರಿದು ಬಂದ ಸಾಂಸ್ಕøತಿಕ ಆಚರಣೆಗಳು ಪ್ರಕೃತಿಯೊಂದಿಗೆ ಜೀವ ಭಾವ ಸಂಬಂಧಗಳೊಂದಿಗೆ ನಿಕಟತೆಯನ್ನು ಹೊಂದಿದೆ ಎಂದು ತಿಳಿಸಿದರು. ಆಟಿಮಾಸದ ಸಂಕಷ್ಟಗಳನ್ನು ಜಾನಪದೀಯ ಚಿಂತನೆಗಳೊಂದಿಗೆ ಜೋಡಿಸಿ ಬದುಕಿನ ನೆಮ್ಮದಿಗೆ ಕಾರಣವಾದ ಆಚರಣೆಗಳನ್ನು ಮರೆಯಾಗದಂತೆ ಕಾಪಿಡಬೇಕಾದ ಅನಿವಾರ್ಯತೆ ಇದೆ ಎಂದು ಅವರು ತಿಳಿಸಿದರು.

ಬದಿಯಡ್ಕ ಗ್ರಾ.ಪಂ. ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭವನ್ನು ಮಲಾರ್ ಮೂಲಬ್ರಹ್ಮಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ಶೆಟ್ಟಿ ಬಾಕ್ರಬೈಲು ಧರ್ಮಚಾವಡಿ ದೀಪ ಬೆಳಗಿಸಿ ಉದ್ಘಾಟಿಸಿದರು. ಅವರು ಮಾತನಾಡಿ, ತುಳುನಾಡಿನ ಆಚರಣೆಗಳನ್ನು ಯುವ ಸಮಾಜಕ್ಕೆ ತಿಳಿಯಪಡಿಸುವ ಚಟುವಟಿಕೆಗಳು ಅಗತ್ಯವಿದೆ ಎಂದು ತಿಳಿಸಿದರು.

ಶಾಸಕ ಎನ್.ಎ.ನೆಲ್ಲಿಕುನ್ನು, ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕಾಧ್ಯಕ್ಷ ಅಬ್ದುಲ್ ರಹಮಾನ್ ಸುಬ್ಬಯ್ಯಕಟ್ಟೆ, ಗಡಿನಾಡು ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಕಾರ್ಯದರ್ಶಿ ಅಖಿಲೇಶ್ ನಗುಮುಗಂ ಉಪಸ್ಥಿತರಿದ್ದು ಶುಭಹಾರೈಸಿದರು. ಟೈಮ್ಸ್ ಆಫ್ ಕುಡ್ಳ ಪತ್ರಿಕೆಯ ಸಂಪಾದಕ ಎಸ್.ಆರ್.ಬಂಡಿಮಾರ್, ಬದಿಯಡ್ಕ ಗ್ರಾ.ಪಂ.ಮಾಜೀ ಅಧ್ಯಕ್ಷ ಮಾಹಿನ್ ಕೇಳೋಟ್, ಸಾಮಾಜಿಕ ಕಾರ್ಯಕರ್ತ ಅಶೋಕ ಭಂಡಾರಿ ಸುಬ್ಬಯ್ಯಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ನ್ಯಾಯವಾದಿ ಕೆ.ಶ್ರೀಕಾಂತ್ ಹಾಗೂ ಪ್ರದೀಪಕುಮಾರ್ ಕಲ್ಕೂರ ಆಟಿ ಆಯನೊವನ್ನು ಚೆನ್ನೆಮಣೆ ಆಟವಾಡುವ ಮೂಲಕ ಜಂಟಿಯಾಗಿ ವಿಶಿಷ್ಟ ಚಾಲನೆ ನೀಡಿದರು. ಹರಿದಾಸ ಜಯಾನಂದಕುಮಾರ್ ಹೊಸದುರ್ಗ ಅವರಿಗೆ ಕಾರ್ಯಕ್ರಮದ ವೇದಿಕೆಯಲ್ಲಿ ಕೀರ್ತನ ಕೇಸರಿ ಪ್ರಶಸ್ತಿ ಪ್ರಧಾನಗೈದು ಗೌರವಿಸಲಾಯಿತು. ಪಾಲಕೃಷ್ಣಕುಲಾಲ್ ವಾಂತಿಚ್ಚಾಲ್ ಸ್ವಾಗತಿಸಿ, ರಂಗ ನಿರ್ದೇಶಕ ಹರ್ಷ ರೈ ಪುತ್ರಕಳ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಮಕ್ಕಳಿಗೆ ಆಯೋಜಿಸಲಾದ ವಿವಿಧ ಜಾನಪದ ಕ್ರೀಡಾ ಸ್ಪರ್ಧೆಗಳನ್ನು ಕುಂಬಾರ ಜನಾಂಗ ಸಂಶೋಧಕ ಸೋಮಪ್ಪ ಸಾಲಿಯಾನ್ ಕಟ್ಟೆ ಮೈಸೂರು ಉದ್ಘಾಟಿಸಿದರು. ಶಶಿಪ್ರಭಾ ಮಂಡೆಕಾವು ನಿರ್ವಹಿಸಿದರು. ಯತೀಶ್ ಕುಮಾರ್ ವಂದಿಸಿದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here