Thursday 28th, March 2024
canara news

ಸಂಭ್ರಮೋಲ್ಲಾಸದಿಂದ ಸ್ವಾತಂತ್ರೊ ್ಯೀತ್ಸವ ಆಚರಿಸಿದ ಗಾಣಿಗ ಸಮಾಜ ಮುಂಬಯಿ

Published On : 15 Aug 2018   |  Reported By : Rons Bantwal


ಕೊಟ್ಟು ಪಡಕೊಳ್ಳುವ ಸೇವೆ ಅರ್ಥರಹಿತ : ಕುತ್ಪಾಡಿ ರಾಮಚಂದ್ರ ಗಾಣಿಗ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಆ.15: ಸೇವೆಯಲ್ಲಿ ಸ್ವಾರ್ಥ ಇರಿಸುವುದು ಸೇವಾಧರ್ಮವಲ್ಲ ಮತ್ತು ಕೊಟ್ಟು ಪಡಕೊಳ್ಳುವ ಸೇವೆ ಅರ್ಥರಹಿತ. ಇಂತಹ ಸೇವೆಯು ಫಲದಾಯಕವೂ ಆಗದು. ಆದುದರಿಂದ ನಿಸ್ವಾರ್ಥ ಸೇವಾ ಮನೋಭಾವ ಮೈಗೂಡಿಸಿ ಅಗತ್ಯವುಳ್ಳರನ್ನು ಸ್ಪಂದಿಸಿ ಸೇವಾ ನಿರತರಾಗಿರಿ. ಇದು ಭವಂತನು ಮೆಚ್ಚುವಂತಾಗುವುದು. ಸಂಸ್ಕಾರಯುತ ಬಾಳಿಗೆ ಆಚರಣೆಗಳೇ ಅಡಿಪಾಯವಿದ್ದಂತೆ. ಒಂದು ಸಂಸಾರಿಕ ಬದುಕನ್ನು ರೂಪಿಸಲು ಸಂಸ್ಕಾರ ಎನ್ನುವುದು ಎಷ್ಟು ಮುಖ್ಯವೋ ಅಂತೆಯೇ ನೆಮ್ಮದಿಯುತ ಬಾಳಿಗೆ ಸಾಮರಸ್ಯವೂ, ಸಾಂಘಿಕತೆಯೂ ಅಷ್ಟೇ ಪ್ರಧಾನವಾದುದು. ಆದುದರಿಂದ ರಾಷ್ಟ್ರೀಯ ಉತ್ಸವಗಳನ್ನು ಬರೇ ಸಂತೋಷ, ಸಂಭ್ರಮಕ್ಕಾಗಿ ಆಚರಿಸದೆ ರಾಷ್ಟ್ರೀಯ ಭಾವೈಕ್ಯತೆ ಮೂಡಿಸಿ ಬಾಳಿಗೆ ಫಲಕಾರಿ ಆಗುವಂತೆ ಆಚರಿಸಿ. ಇದರಿಂದ ಸ್ವಸ್ಥ ಸಮಾಜ ನಿರ್ಮಾಣವೂ ಸಾಧ್ಯವಾಗುವುದು ಎಂದು ಗಾಣಿಗ ಸಮಾಜ ಮುಂಬಯಿ ಅಧ್ಯಕ್ಷ ಕುತ್ಪಾಡಿ ರಾಮಚಂದ್ರ ಎಂ.ಗಾಣಿಗ ತಿಳಿಸಿದರು.

ಕುರ್ಲಾ ಪೂರ್ವದ ಗುಲ್‍ರಾಜ್ ಟವರ್‍ನಲ್ಲಿನ ಗಾಣಿಗ ಸಮಾಜ ಮುಂಬಯಿ ಕಛೇರಿಯಲ್ಲಿ ಭಾರತ ರಾಷ್ಟ್ರದ 72ನೇ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆಯಲ್ಲಿ ಧ್ವಜಾರೋಹಣಗೈದು ರಾಷ್ಟೋತ್ಸವಕ್ಕೆ ಚಾಲನೆಯ -ನ್ನಿತ್ತರು ಬಳಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ರಾಮಚಂದ್ರ ಗಾಣಿಗ ಮಾತನಾಡಿದರು.

ಸಂಸ್ಥೆಯು ಹಿತೈಷಿಹಾಗೂ ಯುವೋದ್ಯಮಿ ರತ್ನಾಕರ್ ಶೆಟ್ಟಿ ಥಾಣೆ, ಸಂಸ್ಥೆಯ ಗೌರವಾಧ್ಯಕ್ಷ ಜಗನ್ನಾಥ್ ಎಂ. ಗಾಣಿಗ, ಉಪಾಧ್ಯಕ್ಷ ಭಾಸ್ಕರ ಎಂ.ಗಾಣಿಗ, ಗೌ| ಕೋಶಾಧಿಕಾರಿ ಜಯಂತ ಪಿ.ಗಾಣಿಗ, ಉಪ ಕಾರ್ಯದರ್ಶಿ ಜಗದೀಶ ಗಾಣಿಗ, ಮಹಿಳಾ ವಿಭಾಗಧ್ಯಕ್ಷೆ ತಾರಾ ಎನ್.ಭಟ್ಕಳ್ ವೇದಿಕೆಯಲ್ಲಿದ್ದು ಸಂಸ್ಥೆಯ ವಿದ್ಯೋದಯ ಸಮಿತಿ ಸಮಾಜದ ಮಕ್ಕಳಿಗೆ ವಾರ್ಷಿಕವಾಗಿ ಕೊಡಮಾಡಿದ ವಿದ್ಯಾಥಿರ್ü ವೇತನ, ಪ್ರತಿಭಾ ಪುರಸ್ಕಾರ ಪ್ರದಾನಿಸಿ ಗೌರವಿಸಿದರು.

ಸ್ವಾತಂತ್ರ್ಯಕ್ಕಾಗಿ ಗಾಣಿಗ ಸಮುದಾಯದ ಮುತ್ಸದ್ಧಿಗಳೂ ಹೋರಾಟ ನಡೆಸಿದ್ದಾರೆ. 72 ವರ್ಷಗಳ ಹಿಂದೆ ಮಹಾತ್ಮಾ ಗಾಂಧಿಜೀ ಕಂಡ ರಾಮರಾಜ್ಯದ ಕನಸು ಇಂದಿಗೂ ಕನಸಾಗಿಯೇ ಉಳಿದಂತಿದೆ. ಪ್ರಜಾಪ್ರಭುತ್ವವನ್ನು ನಾವುಗಳು ಎಷ್ಟರ ತನಕ ಅರ್ಥೈಸಿ ಜೀವನದಲ್ಲಿ ರೂಢಿಸಿ ಕೊಳ್ಳಲಾರೆಯೋ ಅಲ್ಲಿ ತನಕ ಜನಸಾಮಾನ್ಯರು ಸ್ವಾತಂತ್ರ್ಯವಾಗಿ ಬಾಳುವುದು ಸುಲಭಸಾಧ್ಯವಲ್ಲ. ಈ ನಿಟ್ಟಿನಲ್ಲಿ ಎಲ್ಲಾ ಸಮುದಾಯಗಳು ಜಾಗೃತರಾಗಬೇಕು ಎಂದೂ ರಾಮಚಂದ್ರ ಗಾಣಿಗ ಕಿವಿಮಾತುಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಆಶಾ ಹರೀಶ್ ತೋನ್ಸೆ, ರಾಜೇಶ್ ಆರ್. ಕುತ್ಪಾಡಿ, ಬಾಲಚಂದ್ರ ಕಟಪಾಡಿ, ಸದಾನಂದ ಕಲ್ಯಾಣ್ಫುರ್, ಎಂ.ಆರ್ ಸೀತಾರಾಮ್, ಬಾಲಕೃಷ್ಣ ಜಿ.ತೋನ್ಸೆ, ಕಾಳಿಂಗ ರಾವ್, ನಾರೇಂದ್ರ ರಾವ್, ಪದ್ಮನಾಭ ಎನ್.ಗಾಣಿಗ ಗಾಣಿಗ, ಟಿ.ಎಸ್ ದಿನೇಶ್ ರಾವ್, ಗೋಪಾಲಕೃಷ್ಣ ಜಿ.ಗಾಣಿಗ, ದಿನೇಶ್ ಗಾಣಿಗ ಭಯಂದರ್, ಆರತಿ ಸತೀಶ್ ಗಾಣಿಗ, ವೀಣಾ ದಿನೇಶ್ ಗಾಣಿಗ ಸೇರಿದಂತೆ ಸದಸ್ಯರನೇಕರು ಉಪಸ್ಥಿತರಿದ್ದರು.

ನ್ಯಾಯವಾದಿ ಯು.ಬಾಲಕೃಷ್ಣ ಕಟಪಾಡಿ ಮಾತನಾಡಿ ಸ್ವಾತಂತ್ರ್ಯೋತ್ಸವಗಳಂತಹ ರಾಷ್ಟ್ರೀಯ ದಿನಾಚರಣೆಗ -ಳನ್ನು ಸಂಭ್ರಮಿಸುವುದರಿಂದ ಭಾವೀ ಪ್ರಜೆಗಳಾದ ನಮ್ಮ ಮಕ್ಕಳಲ್ಲಿ ರಾಷ್ಟ್ರಪ್ರೇಮ ಮೊಳಗುವುದು. ಆ ಮುಖೇನ ಇಂತಹ ಸಂಭ್ರಮಗಳು ಅನುಭವದ ಪಾಠಗಳಾಗುವುದು. ರಾಷ್ಟ್ರೀಯ ಆಚಣೆಯಿಂದ ನಮ್ಮ ಸಂಘವು ಸಮುದಾಯವನ್ನು ಒಗ್ಗೂಡಿಸುತ್ತಿರುವುದು ಸ್ತುತ್ಯರ್ಹ. ಈ ಮೂಲಕ ಸಂಘ, ಸಮುದಾಯ ಮತ್ತು ಸಮಗ್ರ ರಾಷ್ಟ್ರದ ಶ್ರೇಯೋಭಿವೃದ್ಧಿ ಸಾಧ್ಯ ಎನ್ನುತ್ತಾ ಸ್ವಾಂತತ್ರ್ಯಕ್ಕಾಗಿ ಹೋರಾಡಿ ಮಡಿದ ಮಹಾನ್ ವ್ಯಕ್ತಿಗಳು, ಸೈನಿಕರ ತ್ಯಾಗಬಲಿದಾನವನ್ನು ನೆನಪಿಸಿದರು. ಹಾಗೂ ಸದ್ಯ ರಾಷ್ಟ್ರ ರಕ್ಷಣೆಗಾಗಿ ಪಣತೊಡುವ ರಾಷ್ಟ್ರನಾಯಕರ, ಯೋಧರ ಸೇವೆ ಸ್ಮರಿಸಿ ಎಲ್ಲರಿಗೂ ದೀರ್ಘಾಯುಷ್ಯ ಆಶಿಸಿದÀರು.

ದೇಶದ ಪ್ರತೀಯೊಬ್ಬ ಪ್ರಜೆಯ ಪಾಲಿಗೆ ರಾಷ್ಟ್ರಕಂಡ ಸ್ವಾತಂತ್ರ್ಯ ಎಷ್ಟು ಮಹತ್ವದ್ದೋ ಜನರೂ ಸ್ವತಂತ್ರರಾಗಿ ಬಾಳುತ್ತಾ ಮತ್ತೊಬ್ಬರಿಗೂ ಸ್ವತಂತ್ರರಾಗಿ ಬದುಕಿಸುವಲ್ಲಿ ಪ್ರೇರೆಪಿಸುವುದೂ ಅಷ್ಟೇ ಮುಖ್ಯ. ಸವಿಂಧಾನವು ಸ್ವತಂತ್ರರಾಗಿ ಬಾಳಲು ಹಕ್ಕುಗಳನ್ನು ರೂಪಿಸಿದ್ದು ಇವುಗಳನ್ನು ಶಿಸ್ತುಬದ್ಧರಾಗಿ ನಿಷ್ಠೆಯಿಂದ ಪಾಲಿಸಿ ಬಾಳುವುದೇ ಮೊದಲ ಸ್ವತಂತ್ರ್ಯ ಆಗಿದೆ. ಪ್ರಜಾಪ್ರಭುತ್ವದ ಮುನ್ನಡೆಗೆ ಇಂತಹ ದಿನಾಚರಣೆಗಳು ಬುನಾದಿ ಆಗಿದ್ದು ಪ್ರಸಕ್ತ ಯುವ ಪೀಳಿಗೆ ಇಂತಹ ಆಚರಣೆಗಳನ್ನು ಅರ್ಥಪೂರ್ಣವಾಗಿ ಸಂಭ್ರಮಿಸಬೇಕು. ಇದಕ್ಕೆ ಸಮಾಜದ ಹಿರಿಯರು ಪೆÇ್ರೀತ್ಸಹಕರೂ, ಆದರ್ಶರಾಗಬೇಕು. ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ ಯುವ ಜನಾಂಗ ತ್ಯಾಗ ಮನೋಭಾವ ಬೆಳೆಸಬೇಕು. ಆವಾಗಲೇ ಭ್ರಷ್ಟಮುಕ್ತ ದೇಶ ಸಾಧ್ಯ ಆಗುವುದು. ಭಾರತೀಯರ ಒಗ್ಗೂಡುವಿಕೆಯೇ ದೇಶದ ಶಕ್ತಿ ಮತ್ತು ರಾಷ್ಟ್ರಭಕ್ತಿ ಆಗಿದೆ ಎಂದು ಉಪಾಧ್ಯಕ್ಷ ಬಿ.ವಾಸುದೇವ ರಾವ್ ಸ್ವಾತಂತ್ರೊ ್ಯೀತ್ಸವದ ಸಂದೇಶ ಸಾರಿದರು.

ಸಮಾಜ ಬಾಂಧವರಲ್ಲಿ ಸೇರಿಕೊಳ್ಳಲು ಇದೊಂದು ಉತ್ತಮ ವೇದಿಕೆ. ಇಲ್ಲಿ ಎಲ್ಲರೂ ನಮ್ಮವರು ಎಂದಾಗ ತಮ್ಮತನವು ಹೆಚ್ಚುತ್ತಾ ಸಂಬಂಧಗಳು ಇನ್ನಷ್ಟು ಬಲಗೊಳ್ಳುವುದು. ಮುಂದಿನ ದಿನಗಳಲ್ಲಿ ನಾನೂ ಈ ಸಂಸ್ಥೆಯಲ್ಲಿ ಸಕ್ರೀಯಳಾಗಿ ಸಮಾಜದ ಸೇವೆಗೆ ಬಲತುಂಬುವೆ ಎಂದು ಮಂಜುಳಾ ಗಾಣಿಗ ತಿಳಿಸಿ ಸ್ವಾತಂತ್ರೊ ್ಯೀತ್ಸವದ ಶುಭಾರೈಕೆ ಸಲ್ಲಿಸಿದರು.

ಇದೇ ಶುಭಾವಸರದಲ್ಲಿ ಕುತ್ಪಾಡಿ ರಾಮಚಂದ್ರÀರ ವಿರೋಧದ ನಡುವೆಯೂ ಅವರ ಪರಿವಾರ ಸದಸ್ಯರು ಹಾಗೂ ಗಾಣಿಗ ಸಮಾಜವು ರಾಮಚಂದ್ರ ಎಂ.ಗಾಣಿಗ ಅವರ 75ನೇ ಹುಟ್ಟುಹಬ್ಬ ಸಂಭ್ರಮಿಸಿದರು. ಸುಗುಣಾ ರಾಮಚಂದ್ರ ಗಾಣಿಗ ಮತ್ತು ಪರಿವಾರ ಸದಸ್ಯರು ಉಪಸ್ಥಿತರಿದ್ದರು.

ಕು| ಈಶಾ ರಾಜೇಶ್ ಗಾಣಿಗ ರಾಷ್ಟ್ರಪ್ರೇಮ ಗೀತೆಯನ್ನಾಡಿದರು. ಗೌ| ಪ್ರ| ಕಾರ್ಯದರ್ಶಿ ಚಂದ್ರಶೇಖರ್ ಆರ್.ಗಾಣಿಗ ಸ್ವಾಗತಿಸಿ ಪ್ರಾಸ್ತವನೆಗೈದು ಕಾರ್ಯಕ್ರಮ ನಿರ್ವಹಿಸಿದರು. ವಿದ್ಯೋದಯ ಸಮಿತಿ ಕಾರ್ಯಾಧ್ಯಕ್ಷ ವಿಜಯೇಂದ್ರ ಗಾಣಿಗ ಸತ್ಕರಿಸಲ್ಪಟ್ಟ ಪ್ರತಿಭಾನ್ವಿತರ ಯಾದಿ ಪ್ರಕಟಿಸಿ ಮಕ್ಕಳಿಗೆ ಹಿತನುಡಿಗಳನ್ನಾಡಿದರು. ಯುವ ವಿಭಾಗಧ್ಯಕ್ಷ ಗಣೀಶ್ ಆರ್.ಕುತ್ಪಾಡಿ ಅಭಾರ ಮನ್ನಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.

 

 

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here