Friday 29th, March 2024
canara news

ರಾಷ್ಟ್ರದ 72ನೇ ಸ್ವಾತಂತ್ರ್ಯೋತ್ಸವ ಸಂಭ್ರಮಿಸಿದ ಕನ್ನಡ ಸಂಘ ಸಾಂತಕ್ರೂಜ್ ಸಂಸ್ಥೆ

Published On : 17 Aug 2018   |  Reported By : Rons Bantwal


ಮಕ್ಕಳಲ್ಲಿ ದೇಶಭಕ್ತಿಯನ್ನು ಮೂಡಿಸುವ ಅಗತ್ಯವಿದೆ-ಎಲ್.ವಿ ಅವಿೂನ್
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಆ.15: ಇಂದು ನಾವು ರಾಷ್ಟ್ರದ 72ನೇ ಸ್ವಾತಂತ್ರ್ಯೋತ್ಸವ ಸಂಭ್ರಮಿಸುತ್ತಿದ್ದೇವೆ. ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರು, ಯೋಧರು ಮತ್ತು ಸೈನಿಕರ ತ್ಯಾಗ, ಬಲಿದಾನದ ಸಂಕೇತ ಇದಾಗಿದೆ. ಅವರೆಲ್ಲರ ಶ್ರಮದ ಫಲವೇ ಈ ಸ್ವಾತಂತ್ರ್ಯೋತ್ಸವ. ಆದುದರಿಂದ ಮೊದಲಾಗಿ ಹುತಾತ್ಮ ಸ್ವಾತಂತ್ರ ್ಯ ಯೋಧರಿಗೆ ನಮನ ಸಲ್ಲಿಸೋಣ. ನಮ್ಮ ಮಕ್ಕಳಲ್ಲಿ ದೇಶಭಕ್ತಿಯನ್ನು ಮೂಡಿಸಿ ದೇಶದ ಗಡಿ ಕಾಯುವ ಯೋಧರಲ್ಲಿ ಆತ್ಮಸ್ಥೈರ್ಯ ತುಂಬಿಸಬೇಕು. ಸ್ವಾತಂತ್ರ್ಯ ಸಮರದಲ್ಲಿ ತಮ್ಮ ಜೀವಗಳನ್ನೇ ಅಡವಿಟ್ಟು ದೇಶಕ್ಕಾಗಿ ಹೋರಾಡಿದ ಫಲವಾಗಿನಾವು ಇಂದು ಸ್ವಾತಂತ್ರರಾಗಿ ಬಾಳಲು ಸಾಧ್ಯವಾಗಿದೆ. ಆದ್ದರಿಂದ ನಾವು ಇಂದು ಸುರಕ್ಷಿತ, ಸಮೃದ್ಧಿ, ನೆಮ್ಮದಿಯುತರಾಗಿ ಸುಂದರಮಯವಾಗಿ ಬಾಳುತ್ತಿದ್ದೇವೆ. ಆದರೆ ರಾಷ್ಟ್ರದ ಗಡಿ ಪ್ರದೇಶಗಳಲ್ಲಿ ನಮ್ಮ ನೆಮ್ಮದಿಯ ಬಾಳಿಗಾಗಿ ಯೋಧರು, ಸೈನಿಕ ಪಡೆಯು ತಮ್ಮ ಕುಟುಬ, ಪರಿವಾರ, ಬಂಧುಬಳಗವನ್ನು ದೂರವಿರಿಸಿ ಗಡಿ ಕಾಯುತ್ತಿದ್ದು ನಮ್ಮ ನೆಮ್ಮದಿಯ ಬಾಳಿನ ಶ್ರೇಯಸ್ಸು ಅವರಿಗೆಲ್ಲರಿಗೂ ಸಲ್ಲಿಸಲೇಬೇಕು. ಅವರ ತ್ಯಾಗಮಯ ಜೀವನಕ್ಕೆ ನಾವೆಲ್ಲರೂ ತಲೆಬಾಗಿಸಿ ವಂದಿಸ ಬೇಕು ಎಂದು ಕನ್ನಡ ಸಂಘ ಸಾಂತಕ್ರೂಜ್ ಅಧ್ಯಕ್ಷ ಎಲ್.ವಿ ಅವಿೂನ್ ನುಡಿದರು.

ಕಳೆದ ಬುಧವಾರ ವಕೋಲಾ ಅಲ್ಲಿನ ಸಂಘದ ಸ್ವಕಚೇರಿಯಲ್ಲಿ ರಾಷ್ಟ್ರದ 72ನೇ ಸ್ವಾತಂತ್ರ್ಯೋತ್ಸವದ ಶುಭಾವಸರದಲ್ಲಿ ರಾಷ್ಟ್ರಗೀತೆಯೊಂದಿಗೆ ರಾಷ್ಟ್ರಧ್ವಜಾರೋಹಣ ನೆರವೇರಿಸಿ ತನ್ನ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಸಿ ಅವಿೂನ್ ಮಾತನಾಡಿ ಪ್ರಸ್ತುತ ನಮ್ಮ ರಾಷ್ಟ್ರವು ಅನೇಕಾನೇಕ ಬದಲಾವಣೆಗಳಿಂದ ಮುನಡೆಯುತ್ತಿದ್ದು, ವಿಶ್ವವೇ ಗುರುತಿಸುವಂತಾಗಿದೆ. 2014ರ ಸ್ವಾತಂತ್ರ್ಯೋತ್ಸವ ಸಂಭ್ರಮದ ಕೆಂಪುಕೋಟೆಯಲ್ಲಿ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದ ಅನೇಕ ವಿಚಾರಗಳು ಇಂದು ನವ ಭಾರತವಾಗಿ ನಿರ್ಮಾಣವಾಗಿಸಿದೆ. ಸ್ವಚ್ಛತಾ ಅಭಿಯಾನ, ಬೇಟಿ ಪಡಾವೋ ಬೇಟಿ ಬಚಾಯೋ ಅಂದೋಲನ, ಜಿಎಸ್‍ಟಿ, ಪ್ರಧಾನಮಂತ್ರಿ ಉಜ್ವಲ ಯೋಜನೆ, ಜನಧನ ಯೋಜನೆಗಳು ಭ್ರಷ್ಟಚಾರ ನಿರ್ಮೂಲನಕ್ಕೆ ಕಡಿವಾಣ ಹಾಕುವಂತಿವೆ. ಆ ಮೂಲಕ ನಮ್ಮರಾಷ್ಟ್ರವನ್ನು ಇತರೇ ರಾಷ್ಟ್ರಗಳು ಗೌರವದಿಂದ ಕಾಣುವಂತಾಗಿದ್ದು ನಮ್ಮ ರಾಷ್ಟ್ರದ ಸ್ನೇಹ ಸಂಬಂಧವನ್ನು ಬಯಸುವಂತಾಗಿದೆ ಎಂದರು.

ಈ ಶುಭಾವಸರದಲ್ಲಿ ಜೊತೆ ಕಾರ್ಯದರ್ಶಿ ಚಂದ್ರಹಾಸ ಜೆ.ಕೋಟ್ಯಾನ್, ಜೊತೆ ಕೋಶಾಧಿಕಾರಿ ದಿನೇಶ್ ಬಿ. ಅವಿೂನ್, ಶಿಕ್ಷಣ ಸಮಿತಿ ಕಾರ್ಯಾಧ್ಯಕ್ಷ ಬನ್ನಂಜೆ ರವೀಂದ್ರ ಅವಿೂನ್, ಕಾರ್ಯದರ್ಶಿ ಶಕೀಲಾ ಪಿ.ಶೆಟ್ಟಿ,ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷೆ ವನಿತಾ ವೈ. ನೋಂದ, ಕಾರ್ಯದರ್ಶಿ ಲಕ್ಷ್ಮೀ ಎನ್.ಕೋಟ್ಯಾನ್, ಕಾರ್ಯಕಾರಿ ಸಮಿತಿ ಸದಸ್ಯರಾದ ಗೋವಿಂದ ಆರ್. ಬಂಗೇರಾ, ಸಲಹಾ ಸಮಿತಿ ಸದಸ್ಯರಾದ ಎನ್.ಎಂ ಸನೀಲ್, ವಿಶೇಷ ಆಮಂತ್ರಿತ ಸದಸ್ಯರಾದ ಶಿವರಾಮ ಎಂ. ಕೋಟ್ಯಾನ್, ಹರೀಶ್ ಜೆ. ಪೂಜಾರಿ, ಅಂತರಿಕ ಲೆಕ್ಕ ಪರಿಶೋಧಕ ರಾಜಶೇಖರ್ ಎ.ಅಂಚನ್ ಸೇರಿದಂತೆ ಸದಸ್ಯರನೇಕರು ಉಪಸ್ಥಿತರಿದ್ದರು.

ಸಂಘದ ಗೌ| ಕೋಶಾಧಿಕಾರಿ ಸುಧಾಕರ್ ಉಚ್ಚಿಲ್ ಸ್ವಾಗತಿಸಿದರು. ಗೌ| ಪ್ರ| ಕಾರ್ಯದರ್ಶಿ ಸುಜತಾ ಆರ್.ಶೆಟ್ಟಿ ಯುವಜನತೆಯಲ್ಲಿ ರಾಷ್ಟ್ರಾಭಿಮಾನ, ರಾಷ್ಟ್ರೀಯ ಭಾವೈಕ್ಯತೆ ಬೆಳೆಸುವಂತೆ ತಿಳಿಸುತ್ತಾ ವಂದಿಸಿದರು.

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here