Friday 29th, March 2024
canara news

ಬಿಎಸ್‍ಕೆಬಿ ಎಸೋಸಿಯೇಶನ್ ಗೋಕುಲ ಆಶ್ರಯದಲ್ಲಿ ಸ್ವಾತಂತ್ರ್ಯ ದಿನಾಚರಣೆ

Published On : 19 Aug 2018   |  Reported By : Rons Bantwal


ಮುಂಬಯಿ, ಆ.18: ಬಿ.ಎಸ್. ಕೆ. ಬಿ. ಎಸೋಸಿಯೇಶನ್ , ಗೋಕುಲವು, ಭಾರತದ 72 ನೇಯ ಸ್ವಾತಂತ್ರ್ಯ ದಿನಾಚರಣೆಯನ್ನು ಬುಧವಾರ ದಿನಾಂಕ 15. 8. 2018 ರಂದು ನೇರೂಲ್ ನಲ್ಲಿರುವ ಹಿರಿಯ ನಾಗರಿಕರ ಆಶ್ರಯಧಾಮ 'ಆಶ್ರಯ' ದಲ್ಲಿ ಸಂಭ್ರಮದಿಂದ ಆಚರಿಸಿತು. ಪ್ರಾತಃಕಾಲ ಉಪಾಧ್ಯಕ್ಷ ವಾಮನ್ ಹೊಳ್ಳರವರು ಧ್ವಜಾರೋಹಣ ಗೈದು ಸರ್ವರಿಗೂ ಸ್ವಾತಂತ್ರ್ಯದಿನದ ಶುಭಾಶಯಗಳನ್ನು ಕೋರಿದರು. ನಂತರ 'ಸಾಮಾ ಗ್ರೂಪ್' ನಿಂದ ಸಂಗೀತ ರಸಮಂಜರಿ ಜರಗಿತು.

ಈ ಸಂದರ್ಭದಲ್ಲಿ ಡಾ| ಸುರೇಶ್ ರಾವ್ ರವರ ನೇತೃತ್ವದಲ್ಲಿ ಸ್ಥಾಪಿತವಾದ, ಅವಶ್ಯಕ ವೈದ್ಯಕೀಯ ಸಲಕರಣೆಗಳಾದ ವೀಲ್ ಚಯರ್, ವಾಕಿಂಗ್ ಸ್ಟಿಕ್, ಏರ್ ಬೆಡ್, ವಾಕರ್, ನೆಬುಲೈಜರ್ ಇತ್ಯಾದಿ ಸುಮಾರು 25 ಸಲಕರಣೆಗಳನ್ನು ಅಗತ್ಯವುಳ್ಳವರಿಗೆ ಒದಗಿಸುವ ಸೇವಾ ಸೌಲಭ್ಯ - 'ಆಶ್ರಯ ಸಂಜೀವನಿ - ಸೀನಿಯರ್ ಕ್ಯಾರ್ ಸೆಂಟರ್'' ನ್ನು ಸಂಘದ ಅಧ್ಯಕ್ಷ ಡಾ|ಸುರೇಶ್ ಎಸ್ ರಾವ್, ಪದಾಧಿಕಾರಿಗಳು, ಕಾರ್ಯಕಾರೀ ಸಮಿತಿ ಹಾಗೂ ಸರ್ವ ಸದಸ್ಯರುಗಳ ಸಮ್ಮುಖದಲ್ಲಿ, ಮುಖ್ಯ ಅತಿಥಿsಗಳಾಗಿ ಉಪಸ್ಥಿತರಿದ್ದ ಡಾ| ನರೇಂದ್ರ ತ್ರಿವೇದಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಅಪೆÇೀಲೋ ಹಾಸ್ಪಿಟಲ್ಸ್, ನವಿ ಮುಂಬಯಿ ಇವರು ದೀಪ ಪ್ರಜ್ವಲನೆಯೊಂದಿಗೆ ಉದ್ಘಾಟಿಸಿದರು. ಚಿತ್ರಾ ಮೇಲ್ಮನೆಯವರು ಡಾ| ನರೇಂದ್ರ ತ್ರಿವೇದಿಯವರ ಪರಿಚಯ ಪತ್ರ ವಾಚಿಸಿದರು. ಮುಖ್ಯ ಅತಿಥಿsಯನ್ನು ಪದಾಧಿಕಾರಿಗಳು ಶಾಲು ಹೊದಿಸಿ ಪುಷ್ಪಗುಚ್ಚವನ್ನಿತ್ತು ಗೌರವಿಸಿದರು. ಡಾ. ನರೇಂದ್ರ ತ್ರಿವೇದಿಯವರು ಮಾತನಾಡುತ್ತಾ ಉನ್ನತ ಧ್ಯೇಯವುಳ್ಳ ಇಂತಹ ಸೇವಾ ಸೌಲಭ್ಯಕ್ಕೆ ತಮ್ಮ ಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಹರಿದಾಸ್ ಭಟ್ ಕಾರ್ಯಕ್ರಮ ನಿರೂಪಿಸಿ, ವಂದನಾರ್ಪಣೆ ಗೈದರು.

ಅಪರಾಹ್ನ ಡಾ| ಸುರೇಶ್ ಎಸ್ ರಾವ್ ರವರ ಅಧ್ಯಕ್ಷತೆಯಲ್ಲಿ ಜರಗಿದ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ, ಉಪಾಧ್ಯಕ್ಷರುಗಳಾದ ವಾಮನ್ ಹೊಳ್ಳ ಮತ್ತು ಶೈಲಿನಿ ರಾವ್, ಕಾರ್ಯದರ್ಶಿ ಎ.ಪಿ.ಕೆ. ಪೆÇೀತಿ, ಜತೆ ಕಾರ್ಯದರ್ಶಿ ಚಿತ್ರಾ ಮೇಲ್ಮನೆ, ಕೋಶಾಧಿಕಾರಿ ಹರಿದಾಸ್ ಭಟ್, ಜತೆ ಕೋಶಾಧಿಕಾರಿ ಕುಸುಮ್ ಶ್ರೀನಿವಾಸ್, ಆಶ್ರಯ ಸಂಚಾಲಕಿ ಚಂದ್ರಾವತಿ ರಾವ್ ಉಪಸ್ಥಿತರಿದ್ದರು. ಬೈಲೂರು ಬಾಲಚಂದ್ರ ರಾವ್ ರವರು ತಮ್ಮ ಮಾತಾ ಪಿತರುಗಳಾದ ಬೈಲೂರು ಲಕ್ಷ್ಮೀನಾರಾಯಣ ರಾವ್ ಮತ್ತು ಜಲಜಾಕ್ಷಮ್ಮನವರ ಹೆಸರಿನಲ್ಲಿ ಸ್ಥಾಪಿಸಿದ 'ಗೋಕುಲ ಕಲಾಶ್ರೀ' ಪ್ರಶಸ್ತಿಯನ್ನು,ಗೋಕುಲದ ಕಾರ್ಯಕಾರೀ ಸಮಿತಿ ಸದಸ್ಯೆ ಪ್ರೇಮಾ ಎಸ್. ರಾವ್ ಅÀವರಿಗೆ, ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಬಾಲಚಂದ್ರ ರಾವ್ , ಪ್ರಭಾವತಿ ರಾವ್ ದಂಪತಿ ಶಾಲು ಹೊದಿಸಿ, ಫಲಪುಷ್ಪ, ಸ್ಮರಣಿಕೆ,ಸನ್ಮಾನ ಪತ್ರಗಳೊಂದಿಗೆ ಪ್ರದಾನಿಸಿದರು. ಡಾ ಸಹನಾ ಪೆÇೀತಿ ಸನ್ಮಾನ ಪತ್ರ ವಾಚಿಸಿದರು. ಬಾಲಚಂದ್ರ ರಾವ್ ರವರು ತನ್ನ ಅಭಿನಂದನಾ ನುಡಿಗಳನ್ನಾಡಿ ಹಲವು ವರ್ಷಗಳಿಂದ ಗೋಕುಲದ ಕಾರ್ಯಕಾರಿ ಸಮಿತಿ ಸದಸ್ಯೆಯಾಗಿ, ಸಾಹಿತ್ಯ, ಭಜನೆ, ನೃತ್ಯ, ನಾಟಕ, ಯಕ್ಷಗಾನ ಇತ್ಯಾದಿ ಕ್ಷೇತ್ರಗಳಲ್ಲಿ ಪ್ರೇಮಾ ರಾವ್ ಸಲ್ಲಿಸುತ್ತಿರುವ ಸೇವೆಯನ್ನು ಸ್ಮರಿಸುತ್ತಾ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದರು. ಡಾ ಸುರೇಶ್ ಎಸ್ ರಾವ್ ರವರು ಪ್ರೇಮಾ ರಾವ್ ರವರು ಗೋಕುಲಕ್ಕೆ ಸಲ್ಲಿಸುತ್ತಿರುವ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸುತ್ತಾ, ಗೋಕುಲದ ಪುನರ್ ನಿರ್ಮಾಣ ಹಾಗೂ ಪ್ರಸ್ತುತ ಯೋಜನೆಗಳನ್ನು ವಿಸ್ತಾರವಾಗಿ ವಿವರಿಸಿ ಸದಸ್ಯರೆಲ್ಲರ ತನುಮನಧನದ ಸಹಕಾರ ಕೋರಿದರು. ಸನ್ಮಾನಕ್ಕೆ ಉತ್ತರಿಸುತ್ತಾ ಪ್ರೇಮಾ ರಾವ್ ರವರು ತಾನು ಕಾರ್ಯಕಾರೀ ಸಮಿತಿಗೆ ಸೇರಿದಾಗಿನಿಂದ ತನಗೆ ಪೂರ್ಣ ಬೆಂಬಲವನ್ನಿತ್ತು ಸಹಕರಿಸಿದ ಎಲ್ಲಾ ಪದಾಧಿಕಾರಿಗಳಿಗೆ, ಕಾರ್ಯಕಾರಿ ಸಮಿತಿಗೆ, ಮಾರ್ಗದರ್ಶನವನ್ನಿತ್ತ ಹಿರಿಯರಿಗೆ ತನ್ನ ಮನದಾಳದ ಧನ್ಯವಾದಗಳನ್ನು ಸಲ್ಲಿಸಿದರು. ನಂತರ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಅತ್ಯುನ್ನತ ಅಂಕಗಳನ್ನು ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಪುರಸ್ಕರಿಸಿದರು. ಇಂದ್ರಾಣಿ ರಾವ್ ಬಹುಮಾನ ವಿಜೇತರ ಯಾದಿಯನ್ನು ವಾಚಿಸಿದರು. ಕಾರ್ಯದರ್ಶಿ ಎ.ಪಿ.ಕೆ. ಪೆÇೀತಿ ಕಾರ್ಯಕ್ರಮ ನಿರೊಪಿಸಿದರು.

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here