Thursday 28th, March 2024
canara news

ಬಿಲ್ಲವ ಭವನದಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರು ಜಯಂತ್ಯೋತ್ಸವಕ್ಕೆ ಚಾಲನೆ

Published On : 28 Aug 2018   |  Reported By : Rons Bantwal


ಮುಂಬಯಿ ಆ.28: ಬಿಲ್ಲವರ ಎಸೋಸಿಯೇಶನ್ ಮುಂಬಯಿ ಇದರ ಕೇಂದ್ರ ಕಚೇರಿ ಸಾಂತಕ್ರೂಜ್ ಪೂರ್ವದ ಬಿಲ್ಲವ ಭವನದಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುಗಳ 164ನೇ ಜಯಂತ್ಯೋತ್ಸವಕ್ಕೆ ದಿನಾಂಕ 26.08.2018ರಂದು ಪ್ರಾತಃ ಕಾಲದಲ್ಲಿ ಚಾಲನೆ ನೀಡಲಾಯಿತು.

ಬೆಳಿಗ್ಗೆ 5 ರಿಂದ 6 ರವರೆಗೆ ಜರಗಿದ ಗಣಹೋಮ ಪೂಜಾ ವಿಧಿ ವಿಧಾನವನ್ನು ಪುರೋಹಿತ ಧನಂಜಯ್ ಶಾಂತಿ ನೆರವೇರಿಸಿದರು. ಜತೆ ಕಾರ್ಯದರ್ಶಿ ಹರೀಶ್ ಜಿ. ಸಾಲ್ಯಾನ್ ದಂಪತಿಗಳು ಪೂಜಾ ವೃತ ಕೈಗೊಂಡರು.

ಬೆಳಿಗ್ಗೆ 6.20ಕ್ಕೆ "ಓಂ ನಮೋ ನಾರಾಯಣಾಯ ನಮಃ ಶಿವಾಯ" ಎಂಬ 24 ಗಂಟೆಗಳ ಜಪಯಜ್ಞದ ಉದ್ಘಾಟನೆಯನ್ನು ಬಿಲ್ಲವರ ಎಸೋಸಿಯೇಶನ್‍ನ ಅಧ್ಯಕ್ಷ ಚಂದ್ರಶೇಖರ್ ಎಸ್. ಪೂಜಾರಿ ಅವರು ಜ್ಯೋತಿ ಪ್ರಜ್ವಲಿಸಿ ನೆರವೇರಿಸಿದರು. ಮುಖ್ಯ ಅತಿಥಿsಯಾಗಿ ಉದ್ಯಮಿ ಗಣೇಶ್ ಬಿ. ಪೂಜಾರಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್, ಬಿಲ್ಲವರ ಛೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀಯ ಕಾರ್ಯಾಧ್ಯಕ್ಷ ಎನ್. ಟಿ. ಪೂಜಾರಿ, ಎಸೋಸಿಯೇಶನ್‍ನ ಉಪಾಧ್ಯಕ್ಷರುಗಳಾದ ಶಂಕರ್ ಡಿ. ಪೂಜಾರಿ, ಹರೀಶ್ ಜಿ. ಅಮೀನ್, ಶ್ರೀನಿವಾಸ್ ಆರ್. ಕರ್ಕೇರ, ಸಿ.ಎ. ಅಶ್ವಜಿತ್ ಹೆಜ್ಮಾಡಿ, ಗೌ. ಪ್ರ. ಕಾರ್ಯದರ್ಶಿ ಧನಂಜಯ್ ಶಾಂತಿ, ನಾಗೇಶ್ ಕೋಟ್ಯಾನ್, ಅಶೋಕ್ ಕುಕ್ಯಾನ್, ವಿಠ್ಠಲ್ ಪೂಜಾರಿ, ಬಿ. ರವೀಂದ್ರ ಅಮೀನ್, ಶಕುಂತಲಾ ಕೆ. ಕೋಟ್ಯಾನ್ ಉಪಸ್ಥಿತರಿದ್ದರು.

ಪ್ರಭಾಕರ್ ಸಸಿಹಿತ್ಲು ಮತ್ತು ಸಂಗಡಿಗರು ಜಪಯಜ್ಞದ ನಿರ್ವಹಣೆ ವಹಿಸಿದ್ದರು. ಧಾರ್ಮಿಕ ಉಪ ಸಮಿತಿಯ ಕಾರ್ಯಾಧ್ಯಕ್ಷ ಶ್ರೀ ಮೋಹನ್‍ದಾಸ್ ಜಿ. ಪೂಜಾರಿ ಮತ್ತು ಗೌ. ಕಾರ್ಯದರ್ಶಿ ರವೀಂದ್ರ ಶಾಂತಿಯವರ ನಿರ್ವಹಣೆಯಲ್ಲಿ ಧಾರ್ಮಿಕ ಕ್ರಿಯೆ ಪ್ರಾರಂಭಗೊಂಡಿತು.

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here