Thursday 25th, April 2024
canara news

ಅಜೆಕಾರು ಕಲಾಭಿಮಾನಿ ಬಳಗ ಸಂಭ್ರಮಿಸಿದ ಸಪ್ತದಶಾ ಉತ್ಸವದಲ್ಲಿ ಯಕ್ಷರಕ್ಷಾ ಪ್ರಶಸ್ತಿ ಪ್ರದಾನ

Published On : 28 Aug 2018   |  Reported By : Rons Bantwal


ಯಕ್ಷಗಾನ ಕೇವಲ ಮನೋರಂಜನಾ ಮಾಧ್ಯಮಕ್ಕೆ ಸೀಮಿತವಲ್ಲ : ಪದ್ಮನಾಭ ಅಸ್ರಣ್ಣ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಆ.28: ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ತನ್ನ ಸಪ್ತದಶಾ ಉತ್ಸವವನ್ನು ಇಂದಿಲ್ಲಿ ಭಾನುವಾರ ಕುರ್ಲಾ ಪೂರ್ವದಲ್ಲಿನ ಬಂಟರ ಭವನದ ಶ್ರೀಮತಿ ರಾಧಾಭಾಯಿ ಟಿ.ತಿಮ್ಮಪ್ಪ ಭಂಡಾರಿ ಸಭಾಗೃಹದಲ್ಲಿ ರಚಿಸಲ್ಪಟ್ಟ ಅಜೆಕಾರು ಬಳಗದ ಗೌರವ ಕಾರ್ಯದರ್ಶಿ ಸ್ವರ್ಗಸ್ಥ ಸುಧಾಕರ ಶೆಟ್ಟಿ ಎಣ್ಣೆಹೊಳೆ ವೇದಿಕೆಯಲ್ಲಿ ಅದ್ದೂರಿಯಾಗಿ ಸಂಭ್ರಮಿಸಿತು. ಬಂಟರ ಸಂಘ ಮುಂಬಯಿ ಇದರ ಜೊತೆ ಕೋಶಾಧಿಕಾರಿ ಐಕಳ ಗುಣಪಾಲ ಶೆಟ್ಟಿ ಅಧ್ಯಕ್ಷತೆಯಲ್ಲಿ ಉದ್ಘಾಟನಾ ಸಮಾರಂಭ ನಡೆಸಲ್ಪಟ್ಟಿತು. ಶ್ರೀ ಉಮಾ ಮಹೇಶ್ವರೀ ದೇವಸ್ಥಾನ ಜೆರಿಮೆರಿ ಇದರ ಪ್ರಧಾನ ಆರ್ಚಕ ಶ್ರೀನಿವಾಸ ಎನ್.ಉಡುಪ ದೀಪ ಪ್ರÀಜ್ವಲಿಸಿ ಬಳಗದ ಸಪ್ತದಶಾ ಉತ್ಸವ ಉದ್ಘಾಟಿಸಿ ಆಶೀರ್ವಚನಗೈದರು.

ಗೌರವ ಅತಿಥಿüಗಳಾಗಿ ಚಂದ್ರಶೇಖರ ಎಸ್.ಪೂಜಾರಿ, ಶಂಕರ್ ಶೆಟ್ಟಿ ಮುಲುಂಡ್, ವಿಶ್ವನಾಥ ಶೆಟ್ಟಿ ಕಡ್ತಲ, ಶಂಕರ್ ಆಳ್ವ ಕರ್ನೂರು, ವಾಮನ ಶೆಟ್ಟಿ, ರಮೇಶ್ ಶೆಟ್ಟಿ ಕಾಪು, ಸೀತರಾಮ ಶೆಟ್ಟಿ ವಾಮಂಜೂರು, ರಾಘು ಪಿ.ಶೆಟ್ಟಿ, ದೇವೆಂದ್ರ ಬುನ್ನನ್, ಮಂಜು ಕಾವ (ಪಿ.ಟಿ ರೈ), ಸತೀಶ್ ಶೆಟ್ಟಿ (ಲಕ್ಷ್ಮೀ ಕೇಟರರ್ಸ್) ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಸಮಾರೋಪ ಸಮಾರಂಭ-ಸನ್ಮಾನ ಗೌರವಾರ್ಪಣೆ

ಜಾಗತಿಕ ಬಂಟರ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಜರುಗಿದ ಭವ್ಯ ಸಮಾರೋಪ ಸಮಾರಂಭಕ್ಕೆ ಶ್ರೀ ಕ್ಷೇತ್ರ ಕಟೀಲು ಇದರ ಅರ್ಚಕ ಶ್ರೀ ಅನಂತ ಪದ್ಮನಾಭ ಅಸ್ರಣ್ಣ ಅನುಗ್ರಹಿಸಿದರು. ಅತಿಥಿü ಅಭ್ಯಾಗತರುಗಳಾಗಿ ಸಮಾಜ ಸೇವಕರಾದ ಮುಂಡ್ಕೂರು ರತ್ನಾಕರ ಶೆಟ್ಟಿ, ಸಿಎ| ಸುರೇಂದ್ರ ಎ.ಶೆಟ್ಟಿ, ಪ್ರವೀಣ್ ಬಿ. ಶೆಟ್ಟಿ, ಶ್ಯಾಮ ಎನ್.ಶೆಟ್ಟಿ, ಸಿಎ| ಸದಾಶಿವ ಶೆಟ್ಟಿ ಉಪಸ್ಥಿತರಿದ್ದು ಸಂದರ್ರ್ಭೋಚಿತವಾಗಿ ಮಾತನಾಡಿ ಶುಭಾರೈಸಿದರು.

ಸಮಾರಂಭದÀಲ್ಲಿ ಬಂಟರ ಸಂಘ ಮುಂಬಯಿ ಇದರ ಮಾಜಿ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಮತ್ತು ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಪುಣೆ ಅಧ್ಯಕ್ಷ ಪ್ರವೀಣ್ ಶೆಟ್ಟಿ ಪುತ್ತೂರು ವರಿಗೆ ಸಂಸ್ಥೆಯ ಪ್ರತಿಷ್ಠಿತ ಕಲಾ ಗೌರವ ಪುರಸ್ಕಾರ `ಯಕ್ಷರಕ್ಷಾ ಪ್ರಶಸ್ತಿ' ಹಾಗೂ ಪ್ರಸಿದ್ಧ ಯಕ್ಷಗಾನ ಕಲಾವಿದ ಭಾಸ್ಕರ್ ರೈ ಕುಕ್ಕುವಳ್ಳಿ ಅವರಿಗೆ ಯಕ್ಷ ಭಾಸ್ಕರ ಬಿರುದು ಮತ್ತು ಪ್ರಸಿದ್ಧ ಚೆಂಡೆ-ಮದ್ದಳೆ ವಾದಕ ಪ್ರಶಾಂತ್ ಶೆಟ್ಟಿ ವಗೆನಾಡು ಅವರಿಗೆ ಯಕ್ಷ ಪ್ರಶಾಂತ ಬಿರುದು ಹಾಗೂ ಹಿರಿಯ ಯಕ್ಷಗಾನ ಕಲಾವಿದೆ ಪೂರ್ಣಿಮಾ ಯತೀಶ್ ರೈ ಅವರಿಗೆ ಯಕ್ಷ ಪೂರ್ಣಿಮ ಬಿರುದು ಪ್ರದಾನಿಸಿ (ಮಕ್ಕಳಾದ ಸಾಕ್ಷಾ ಯತೀಶ್ ಮತ್ತು ಸಾತ್ವಿಕ್ ಯತೀಶ್ ಜೊತೆಗೆ) ಮತ್ತು ಪ್ರಸಿದ್ಧ ನಾಟಕ ರಚನೆಕಾರ, ನಿರ್ದೇಶಕ ನಾರಾಯಣ ಶೆಟ್ಟಿ ನಂದಳಿಕೆ (ಶಾಂತಾ ನಾರಾಯಣ್ ಜೊತೆಗೆ), ಪ್ರಸಿದ್ಧ ಹಿರಿಯ ಪತ್ರಕರ್ತ ಶ್ರೀಧರ ಉಚ್ಚಿಲ್ (ಸುಪುತ್ರಿ ಗಾಯತ್ರಿ ಉಚ್ಚಿಲ್ ಜೊತೆಗೂಡಿ), ನಾಟಕ ನಿರ್ದೇಶಕ, ಕಿರುತೆರೆ ನಟ ರಮೇಶ್ ಶಿವಪುರ ಅವರಿಗೆ `ಯಕ್ಷರಕ್ಷಾ ಪ್ರಶಸ್ತಿ' ಹಾಗೂ ಚೆಂಡೆ-ಮದ್ದಳೆ ವಾದಕ ಗಣೇಶ್ ಮಯ್ಯ ವರ್ಕಾಡಿ ಅವರಿಗೆ ಮಾತೆ ಶ್ರೀಮತಿ ಸಂಪಾ ಎಸ್.ಶೆಟ್ಟಿ ಸ್ಮರಣಾರ್ಥ `ಮಾತಾ ಯಕ್ಷರಕ್ಷಾ ಪ್ರಶಸ್ತಿ'ಯನ್ನು ಅತಿಥಿüವರ್ಯರು ಶಾಲು ಹೊದೆಸಿ, ಸ್ಮರಣಿಕೆ, ಫಲಪುಷ್ಪ, ಪ್ರಶಸ್ತಿಪತ್ರ ಪ್ರದಾನಿಸಿ ಗೌರವಿಸಿದರು. ಪ್ರಶಸ್ತಿ ಪುರಸ್ಕೃತರು ಗೌರವÀಕ್ಕೆ ಉತ್ತರಿಸಿ ಅಭಿವಂದಿಸಿದರು.

ಮನುಷ್ಯನ ಜೀವನವನ್ನು ರೂಪಿಸುವ ನವರಸ ಭರಿತ ಕಲೆಯೊಂದಿದ್ದರೆ ಅದು ಯಕ್ಷಗಾನ. ಯಕ್ಷಗಾನ ಇಂದು ಕೇವಲ ಮನೋರಂಜನಾ ಮಾಧ್ಯಮಕ್ಕೆ ಮಾತ್ರ ಸೀಮಿತವಲ್ಲ. ನಮ್ಮ ನಾಡಿನ ಸಂಸ್ಕಾರ, ಸಂಸ್ಕೃತಿಗಳನ್ನು ತೆರೆದಿಡುವ ಧರ್ಮ ಬೋಧನೆ ಸಾರುವ ಒಂದು ಮಹತ್ತರ ಕೆಲಸ ಮಾಡುತ್ತದೆ. ಧಾರ್ಮಿಕ ಸಂದೇಶ ಸಾರುವ ಈ ಕಲೆಯನ್ನು ಮುಂಬಯಿ ಮಹಾನಗರದಲ್ಲಿ ಎಲ್ಲರೂ ಅತ್ಪಾಧಿಸುವಂತೆ ಮಾಡಿದ ಹಿರಿಮೆ ಅಜೆಕಾರು ಬಾಲಕೃಷ್ಣ ಅವರಿಗೆ ಸಲ್ಲಬೇಕು. ಇವರಿಗೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮನ ಅನುಗ್ರಹ ಸದಾ ಇರಲಿ ಎಂದು ಪದ್ಮನಾಭ ಅಸ್ರಣ್ಣ ಹರಸಿದರು.

ಐಕಳ ಹರೀಶ್ ಮಾತನಾಡಿ ಬಾಲಕೃಷ್ಣ ಶೆಟ್ಟಿ ಅವರು ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸಲು ಹಗಲಿರುಳು ಶ್ರಮಿಸುತ್ತಿರುವುದರ ಜೊತೆಗೆ ಕಲಾವಿದರಿಗೆ ಸಹಾಯಸ್ತ, ಪೆÇ್ರೀತ್ಸಹಧನ ಮೂಲಕ ಪ್ರೇರೆಪಿಸುತ್ತಿದ್ದಾರೆ. ಎಲ್ಲಾ ಕಲೆಗಳ ಜೊತೆಗೆ ವಿಶೇಷವಾಗಿ ಯಕ್ಷಗಾನ ಕಲೆಗೂ ಆಥಿರ್sಕ ನೆರವುವಿತ್ತು ಸಹಕರಿಸುತ್ತಿರುವುದು ನಿಜವಾಗಿಯೂ ಮೆಚ್ಚುವಂತದ್ದು. ಇಂತಹ ಕಲಾ ಸೇವಕನನ್ನು ನಾವೂ ಉಳಿಸಿ ಬೆಳೆಸುವ ಅಗತ್ಯವಿದೆ ಎಂದರು.

ಯಕ್ಷಗಾನ ಕಲಾಸೇವೆ ಅಂದರೆ ಅದು ದೇವರ ಸೇವೆಗೆ ಸಮಾನ. ಈ ಯಕ್ಷಗಾನ ಕಲೆ ಉಳಿಸಿ ಪೆÇೀಷಿಸುವಲ್ಲಿ ಮುಂಬಯಿ ಕಲಾಭಿಮಾನಿಗಳ ಪಾತ್ರ ಮಹತ್ತರವಾದುದು. ಈ ನಿಟ್ಟಿನಲ್ಲಿ ಬಾಲಕೃಷ್ಣ ಶೆಟ್ಟಿ ಅವರು ಕಳೆದ 17 ವರ್ಷದಿಂದ ನಿರಂತರ ಮಾಡುತ್ತಾ ಬಂದಿರುವ ಕಲಾಸೇವೆ ಶ್ಲಾಘನೀಯ ಎಂದು ಪ್ರಶಸ್ತಿಗೆ ಉತ್ತರಿಸಿ ಕರ್ನಿರೆ ವಿಶ್ವನಾಥ ಶೆಟ್ಟಿ ತಿಳಿಸಿದರು.

ಯಕ್ಷಗಾನ ಕಲೆಯನ್ನು ಪುಣೆ ಪರಿಸರದಲ್ಲಿ ಉಳಿಸಿ ಬೆಳೆಸುವಲ್ಲಿ ನಾನೂ ಪ್ರಯತ್ನಶೀಲನಾಗಿದ್ದೇನೆ. ಈ ನನ್ನ ಸೇವೆಯನ್ನು ಪರಿಗಣಿಸಿ ಇಂದು ಇಷ್ಟು ದೊಡ್ಡ ಸತ್ಕಾರ ಮಾಡಿದ್ದು ಇದು ಯಕ್ಷಗಾನ ಕಲೆಗೆ ಸಂದ ಗೌರವವೇ ಸರಿ. ಇದು ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಗೆ ಸಂದಿದ ಸತ್ಕಾರ ಎಂದು ಭಾವಿಸುತ್ತೇನೆ ಎಂದು ಪ್ರವೀಣ್ ಶೆಟ್ಟಿ ತಿಳಿಸಿದರು.

ಭಾಸ್ಕರ ಕುಕ್ಕುವಳ್ಳಿ ಮಾತನಾಡಿ ನಾನು ದೇಶ ವಿದೇಶದಲ್ಲಿ ಸುತ್ತುತ್ತಿತ್ತಾ ಅನೇಕ ಯಕ್ಷಗಾನ, ತಾಳಮದ್ದಳೆಗಳಲ್ಲಿ ಭಾಗವಹಿಸಿದ್ದೇನೆ. ಆದರೆ ಈ ಕಲಾ ಪ್ರಕಾರಗಳಿಗೆ ಮುಂಬಯಿಯಲ್ಲಿ ಸಿಗುವ ಪೆÇ್ರೀತ್ಸಾಹ ಎಲ್ಲಕ್ಕಿಂತಲೂ ಭಿನ್ನ ಮತ್ತು ಶ್ರೇಷ್ಠವಾಗಿದೆ. ಕಲಾವಿದರನ್ನು ಮತ್ತು ಕಲೆಯನ್ನು ಪ್ರೀತಿಸುವ, ಗೌರವಿಸುವ ಹೃದಯವಂತ ಕಲಾರಸಿಕರು ಮುಂಬಯಿಗರು ಎನ್ನುವುದನ್ನು ನಾನು ಸ್ವತಃ ಅನುಭವಿಸಿದ್ದೇನೆ. ಈ ಸನ್ಮಾನ ಮುಂಬಯಿ ಮಹಾನಗರದ ಪ್ರಥಮ ಸನ್ಮಾನ ಎನ್ನಲು ಹೆಮ್ಮೆಯೆನಿಸುತ್ತಿದೆ ಎಂದರು.

ಮುಂಬಯಿಯ ಪ್ರಸಿದ್ಧ ಭಾಗವತ ಪೆÇಲ್ಯ ಲಕ್ಷ್ಮೀನಾರಾಯಣ ಶೆಟ್ಟಿ ಮತ್ತು ಅರ್ಥದಾರಿ, ಪ್ರಾಚಾರ್ಯ ಪೆÇ್ರ| ಭಾಸ್ಕರ ರೈ ಕುಕ್ಕುವಳ್ಳಿ ಅಭಿನಂದನಾ ಭಾಷಣಗೈದರು. ಅಜೆಕಾರು ಬಳಗದ ಸ್ಥಾಪಕಾಧ್ಯಕ್ಷ ಅಜೆಕಾರು ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು ಆಶಾ ಬಾಲಕೃಷ್ಣ ಶೆಟ್ಟಿ ದಂಪತಿ ಅತಿಥಿüಗಳನ್ನು ಸಾಂಪ್ರದಾಯಿಕವಾ ಗಿ ಸತ್ಕರಿಸಿ ಗೌರವಿಸಿದರು. ಗಣೇಶ್ ಕೊಲಕಾಡು ಹೆಬ್ರಿ ಅವರು ಛಂದಸ್ಸು ದಾಟಿಯ ಭಾಮಿನಿ ಪದ್ಯರೂಪದಲ್ಲಿ ಸನ್ಮಾನಪತ್ರವನ್ನು ವಾಚಿಸಿದರು. ಕರ್ನೂರು ಮೋಹನ್ ರೈ ಕಾರ್ಯಕ್ರಮ ನಿರೂಪಿಸಿ ಕೃತಜ್ಞತೆ ಸಮರ್ಪಿಸಿದರು.

ಸಾಂಸ್ಕøತಿಕ ಕಾರ್ಯಕ್ರಮವಾಗಿ ಮಹಿಳಾ ಮಂಡಳಿಯಿಂದ `ಮಹಿಷಿ ಮರ್ದಿನಿ' ಮತ್ತು ಪುರುಷ ಮಂಡಳಿಯಿಂದ `ಶ್ರೀ ಮೂಕಾಂಬಿಕ' ಯಕ್ಷಗಾನ ಬಯಲಾಟ, ವಾರ್ಷಿಕ ತಾಳಮದ್ದಳೆ ಸಮಾರೋಪ ಹಾಗೂ ವಾರ್ಷಿಕ `ಯಕ್ಷರಕ್ಷಾ ಪ್ರಶಸ್ತಿ-ಪುರಸ್ಕಾರ' ಪ್ರದಾನ ನಡೆಸಲ್ಪಟ್ಟಿತು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here