Tuesday 23rd, April 2024
canara news

ಅಮೇರಿಕಾದಲ್ಲಿ ನಡೆಯುವ ವಿಶ್ವದ ಪ್ರತಿಷ್ಠಿತ ಕನ್ನಡ ಸಮ್ಮೇಳನ ಅಕ್ಕ ವಿಶ್ವ ಕನ್ನಡ ಸಮ್ಮೇಳದ ಕವಿಗೋಷ್ಠಿಗೆ ಗೋಪಾಲ ತ್ರಾಸಿ ಆಯ್ಕೆ

Published On : 29 Aug 2018   |  Reported By : Rons Bantwal


ಮುಂಬಯಿ, ಆ.29: ಅಸೋಸಿಯೇಶನ್ ಆಫ್ ಕನ್ನಡ ಕೂಟ'ಸ್ ಆಫ್ ಅಮೇರಿಕಾ ಸಂಯೋಜಿತ ವಿಶ್ವದ ಪ್ರತಿಷ್ಠಿತ ಅಕ್ಕ ಸಂಸ್ಥೆ ಈ ಬಾರಿ ಹತ್ತನೇ ವಿಶ್ವ ಅಕ್ಕ ಕನ್ನಡ ಸಮ್ಮೇಳ ಆಯೋಜಿಸಿದ್ದು ಸಮೇಳನದಲ್ಲಿ ಕನ್ನಡದ ಕಂಪನ್ನು ಪಸರಿಸುವ ಕವಿಮನಗಳನ್ನು ಪರಿಚಯಿಸುವ ಕವಿಗೋಷ್ಠಿಗೆ ಕನ್ನಡದ ಸಂವೇದನಾಶೀಲ ಕವಿ ಗೋಪಾಲ ತ್ರಾಸಿ ಕವಿತೆ ಪ್ರಸ್ತುತ ಪಡಿಸಲು ಆಯ್ಕೆ ಗೊಂಡಿದ್ದಾರೆ.

ಉತ್ತರ ಟೆಕ್ಸಾಸ್ ಮಲ್ಲಿಗೆ ಕನ್ನಡ ಕೂಟ ಇದರ ಆಶ್ರಯದಲ್ಲಿ ಅಕ್ಕ ಸಂಸ್ಥೆಯು ಇದೇ ಆಗಸ್ಟ್.31 ಹಾಗೂ ಸೆ.01 ಮತ್ತು 02ರ ಮೂರು ದಿನಗÀಳಲ್ಲಿ ಅಮೆರಿಕದ ಡಾಲಸ್ ನಗರದ ಶೆರಟಾನ್ ಸಮ್ಮೇಳನ ಸಭಾಗೃಹದಲ್ಲಿ ಅಕ್ಕ ವಿಶ್ವ ಕನ್ನಡ 10ನೇ ಸಮ್ಮೇಳನದಲ್ಲಿ ನಾಡಿನ ಹೆಸರಾಂತ ಕವಿ ಜಯಂತ್ ಕಾಯ್ಕಿಣಿ ಅಧ್ಯಕ್ಷತೆಯಲ್ಲಿ ಜರಗುವಶ್ರಾವಣ ಮಧ್ಯಾಹ್ನ - ಅಕ್ಕ 2018 ಕವಿಗೋಷ್ಠಿಯಲ್ಲಿ ಗೋಪಾಲ ತ್ರಾಸಿ ತಮ್ಮ ಕವಿತೆಯನ್ನು ಪ್ರಸ್ತುತ ಪಡಿಸಲಿದ್ದಾರೆ.

ಈ ಬಾರಿಯ ಅಕ್ಕ ಸಮ್ಮೇಳನದ ಹತ್ತುಹಲವು ವಿಶೇಷತೆಗಳನ್ನು ಅಕ್ಕ (ಅಮೇರಿಕಾ ಕನ್ನಡ ಕೂಟಗಳ ಆಗರ) ಸಮ್ಮೇಳನ ನಡೆಸಲಿದ್ದು ವಿಶ್ವದಾದ್ಯಂತದ ನೂರಾರು ಕನ್ನಡದ ಕಣ್ಮಣಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಅಕ್ಕ ಸಮಿತಿ ಕಾರ್ಯಾಧ್ಯಕ್ಷ ಅಮರ್‍ನಾಥ್ ಗೌಡ ಮತ್ತು ಅಕ್ಕ ಸಂಸ್ಥೆಯ ಅಧ್ಯಕ್ಷ ಶಿವಮೂರ್ತಿ ಕೀಲರ ತಿಳಿಸಿದ್ದಾರೆ.

ಗೋಪಾಲ ತ್ರಾಸಿ ಅವರು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಹಿರಿಯ ಪ್ರಬಂಧಕರಾಗಿರುವ ಗೋಪಾಲ ತ್ರಾಸಿ ಅವರು 3 ಕವನ ಸಂಕಲನ, 1 ಕಥಾ ಸಂಕಲನ, 2 ಸಂಪಾದಿತ ಕೃತಿಗಳು ಪ್ರಕಟಗೊಂಡಿವೆ. ಲೇಖನ ಮತ್ತು ಅಂಕಣ ಬರಹಗಳ ಕೃತಿ ಅಚ್ಚಿನಲ್ಲಿವೆ. ಕವಿಯಾಗಿ, ಕಥೆಗಾರ, ಅಂಕಣಕಾರ, ನಿರೂಪಣೆ, ರಂಗಭೂಮಿ, ಸಂಗೀತ, ಸಂಘಟನೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಅಸಕ್ತಿ ಬೆಳೆಯಿಸಿ ಕೊಂಡಿರುವರು. ಗೋಪಾಲ್ ಮುಂಬಯಿ ರಾತ್ರಿ ಶಾಲೆಯಿಂದ ಬಂದ ಬಹುಮುಖ ಪ್ರತಿಭೆ. ಕವಿ ಗೋಷ್ಠಿಗಳಲ್ಲಿ ತಮ್ಮದೇ ಆದೆ ಆಕರ್ಷಕ ಶೈಲಿಯ ವಾಚನ, ಗಾಯನದ ಮೂಲಕ ಶ್ರೋತ್ರರ ಮನಗೆದ್ದ ಯುವಕವಿಯಲ್ಲೋರ್ವರು.

ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಸಕ್ರೀಯ ಸದಸ್ಯರೂ, ಕ್ರೀಡಾಪಟು ಕೂಡಾ ಆಗಿರುವ ಗೋಪಾಲ್ ಅವರು ಭರಣಿಮನೆ ಲಿಂಗ ಪೂಜಾರಿ ಉಪ್ಪಿನಕುದುರು ಮತ್ತು ಹೊಸೊಕ್ಲು ಮನೆ ಮುತ್ತು ಪೂಜಾರಿ ತ್ರಾಸಿ ಇವರ ಸುಪುತ್ರರಾಗಿದ್ದಾರೆ. ಪತ್ನಿ ಸವಿತಾ ಗೋಪಾಲ್ ಮತ್ತು ಇಬ್ಬರು ಗಂಡು ಮಕ್ಕಳಾದ ಧ್ರುವ ಹಾಗೂ ಅಪೂರ್ವ ಅವ್‍ಅರೊಂದಿಗೆ ಕಾಂದಿವಿಲಿ ಚಾರ್ಕೋಪ್‍ನಲ್ಲಿ ವಾಸವಾಗಿದ್ದಾರೆ.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here