ಮುಂಬಯಿ, ಆ.29: ಅಸೋಸಿಯೇಶನ್ ಆಫ್ ಕನ್ನಡ ಕೂಟ'ಸ್ ಆಫ್ ಅಮೇರಿಕಾ (ಅಕ್ಕ) ಸಂಸ್ಥೆಯು ಉತ್ತರ ಟೆಕ್ಸಾಸ್ ಮಲ್ಲಿಗೆ ಕನ್ನಡ ಕೂಟದ ಆಶ್ರಯದಲ್ಲಿ ಅಕ್ಕ ಸಂಸ್ಥೆಯು ಇದೇ ಆಗಸ್ಟ್.31 ಹಾಗೂ ಸೆ.02ರ ತ್ರಿದಿನಗÀಳಲ್ಲಿ ಅಮೆರಿಕದ ಡಾಲಸ್ ನಗರದ ಶೆರಟಾನ್ ಸಮ್ಮೇಳನ ಸಭಾಗೃಹದಲ್ಲಿ ಆಯೋಜಿಸಿರುವ ವಿಶ್ವದ ಪ್ರತಿಷ್ಠಿತ ಹತ್ತನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಮುಂಬಯಿ ಮಹಾನಗರದಲ್ಲಿನ ಅಪ್ರತಿಮ ಕಲಾವಿದೆ, ನೃತ್ಯ ಕಲಾ ವಸುಧರೆ ಕು| ಪ್ರಿಯಂಜಲಿ ರಾವ್ ಭರತನಾಟ್ಯ ನೃತ್ಯ ಪ್ರದರ್ಶನಕ್ಕೆ ಆಯ್ಕೆ ಆಗಿದ್ದಾರೆ ಎಂದು ಅಕ್ಕ ಸಮಿತಿ ಕಾರ್ಯಾಧ್ಯಕ್ಷ ಅಮರ್ನಾಥ್ ಗೌಡ ಮತ್ತು ಅಕ್ಕ ಸಂಸ್ಥೆಯ ಅಧ್ಯಕ್ಷ ಶಿವಮೂರ್ತಿ ಕೀಲರ ತಿಳಿಸಿದ್ದಾರೆ.
ಶ್ರೀಮತಿ ರೇವತಿ ಶ್ರೀನಿವಾಸ್ ರಾಘವನ್ ಇವರ ಶಿಷ್ಯೆ ಆಗಿರುವ ಕು| ಪ್ರಿಯಂಜಲಿ ರಾವ್ ಎ.ಬಿ ರಾವ್ ಮತ್ತು ತಾರಾ ಬಿ.ರಾವ್ ಅವರ ಮೊಮ್ಮಗಳಾಗಿದ್ದು, ಭರತನಾಟ್ಯದ ಒಲವು ಮೂಡಿ ದಕ್ಷಿಣ ಭಾರತದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಹಾಗೂ ನೃತ್ಯಕಲೆಯ ತವರೂರಾದ ತಂಜಾವೂರು ಇಲ್ಲಿನ ಭಕ್ತಿಪೂರ್ವಕ ಕಲೆಯನ್ನು ಆರಾಧಿಸಿ ಭರತನಾಟ್ಯ ನೃತ್ಯವನ್ನು ಮೈಗೂಡಿಸಿಕೊಂಡ ಕು| ಪ್ರಿಯಂಜಲಿ ರಾವ್ ನೂರಾರು ನೃತ್ಯ ಪ್ರದರ್ಶನ ನೀಡಿ ಹೆಗ್ಗಳಿಕೆಗೆ ಪಾತ್ರರಾದ ಅಪ್ರತಿಮ ಕಲಾವಿದೆ ಆಗಿದ್ದಾರೆ. ಕಿರಿಯ ವಯಸ್ಸಿನಲ್ಲಿಯೇ ನೃತ್ಯ ಕಲೆಯಲ್ಲಿ ಆಸಕ್ತಿ ಬೆಳೆಸಿದ್ದ ಪ್ರಿಯಂಜಲಿ ಶಾಲೆ ದಿನಗಳಲ್ಲಿ ಹಲವಾರು ನೃತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಪ್ರತಿಭಾಹ್ವಾನಿತ ಬೆಡಗಿಯೆಣಿದ್ದಾರೆ. ಕಳೆದ ಐದು ವರ್ಷಗಳಿಂದ ಭರತನಾಟ್ಯ ಅಭ್ಯಾಸ ನಿರತರಾಗಿರುವ ಪ್ರಿಯಂಜಲಿ ಹಲವು ಪುರಸ್ಕಾರಗಳಿಂದ ಗೌರವಿಸಲ್ಪಟ್ಟು ಜನಮನ್ನಣೆ ಪಡೆದ ಕಲಾವಿದೆಯಾಗಿ ಮೆರೆದಿದ್ದಾರೆ. ತನ್ನ ಶಾಲಾ ದಿನದಲ್ಲಿ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ನಗರದ ಅನೇಕಾನೇಕ ಕಾರ್ಯಕ್ರಮಗಳಲ್ಲಿ ನೀಡಿದ ನೃತ್ಯ ಪ್ರದರ್ಶನಗಳೇ ಇವರ ಸಾಧನೆಗೆ ಸಾಕ್ಷಿಯಾಗಿವೆ.
ನವದೆಹಲಿ ಅಲ್ಲಿನ ರಾಷ್ಟ್ರಪತಿ ಭವನದಲ್ಲಿ ಕಳೆದ ಬಾರಿ ನಡೆಸಲ್ಪಟ್ಟ ರಾಷ್ಟ್ರಪತಿ ಪ್ರಣಾಬ್ ಮುಖಾರ್ಜಿ ವಿದಾಯ ಕೂಟದಲ್ಲಿ ಆಯೋಜಿಸಲಾಗಿದ್ದ ಭವ್ಯ ನೃತ್ಯಾವಳಿ ಕಾರ್ಯಕ್ರಮದಲ್ಲೂ ನೃತ್ಯ ಪ್ರದರ್ಶಿಸಿದ ನಿಸ್ಸೀಮಾ ಕಲಾವಿದೆ. ನೃತ್ಯರಂಜನಿ ಫೈನ್ ಆರ್ಟ್ಸ್ ಅಕಾಡೆಮಿ ಇದರ ವಿದ್ಯಾಥಿü9ನಿ. ಈಕೆಯ ವೀಕ್ಷಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ನೂತನ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ, ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್, ಸಚಿವೆ ಸ್ಮೃತಿ ಇರಾನಿ ಇನ್ನಿತರ ಗಣ್ಯರು ಸಂತಸ ವ್ಯಕ್ತ ಪಡಿಸಿ ಅಭಿನಂದಿಸಿದ್ದಾರೆ.
ಶ್ರೀಮತಿ ರೇವತಿ ಶ್ರೀನಿವಾಸ್ ರಾಘವನ್ ಇವರ ಶಿಷ್ಯೆ ಆಗಿರುವ ಕು| ಪ್ರಿಯಂಜಲಿ ರಾವ್ ಈಕೆ ಖಾರ್ ಪಶ್ಚಿಮದ ನಿವಾಸಿ ವಿದ್ಯಾ ಆರ್.ರಾವ್ ಸುಪುತ್ರಿಯಾಗಿದ್ದು, ಪ್ರಸಿದ್ದಹ ಸಮಾಜ ಸೇವಕರುಗಳಾದ ಎ.ಬಿ ರಾವ್ ಮತ್ತು ತಾರಾ ಬಿ.ರಾವ್ ಅವರ ಮೊಮ್ಮಗಳಾಗಿದ್ದಾರೆ. ಭರತನಾಟ್ಯದ ಒಲವು ಮೂಡಿ ದಕ್ಷಿಣ ಭಾರತದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಹಾಗೂ ನೃತ್ಯಕಲೆಯ ತವರೂರಾದ ತಂಜಾವೂರು ಇಲ್ಲಿನ ಭಕ್ತಿಪೂರ್ವಕ ಕಲೆಯನ್ನು ಆರಾಧಿಸಿ ಭರತನಾಟ್ಯ ನೃತ್ಯ ಮೈಗೂಡಿಸಿಕೊಂಡ ಪ್ರಿಯಂಜಲಿ ಸಾವಿರಾರು ನೃತ್ಯ ಪ್ರದರ್ಶನ ನೀಡಿ ಹೆಗ್ಗಳಿಕೆಗೆ ಪಾತ್ರರಾದ ಅಪ್ರತಿಮ ಕಲಾವಿದೆ ಆಗಿದ್ದಾರೆ. ಕಿರಿಯ ವಯಸ್ಸಿನಲ್ಲಿಯೇ ನೃತ್ಯ ಕಲೆಯಲ್ಲಿ ಆಸಕ್ತಿ ಬೆಳೆಸಿ ಶಾಲೆ ದಿನಗಳಲ್ಲೇ ಹಲವಾರು ನೂರಾರು ನೃತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಪ್ರತಿಭಾಹ್ವಾನಿತ ಬೆಡಗಿಯಾಗಿದ್ದಾರೆ. ಕಳೆದ ಐದು ವರ್ಷಗಳಿಂದ ಭರತನಾಟ್ಯ ಅಭ್ಯಾಸ ನಿರತರಾಗಿರುವ ಪ್ರಿಯಂಜಲಿ ಹಲವು ಪುರಸ್ಕಾರಗಳಿಂದ ಗೌರವಿಸಲ್ಪಟ್ಟು ಜನಮನ್ನಣೆ ಪಡೆದ ಕಲಾವಿದೆ ಆಗಿ ಮೆರೆದಿದ್ದಾರೆ. ತನ್ನ ಶಾಲಾ ದಿನದಲ್ಲಿ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ನಗರದ ಅನೇಕ ಕಾರ್ಯಕ್ರಮಗ ಳಲ್ಲಿ ನೀಡಿದ ನೃತ್ಯ ಪ್ರದರ್ಶನಗಳೇ ಇವರ ಸಾಧನೆಗೆ ಸಾಕ್ಷಿಯಾಗಿವೆ. ಚಿತ್ರ / ಮಾಹಿತಿ : ರೋನ್ಸ್ ಬಂಟ್ವಾಳ್