Thursday 28th, March 2024
canara news

ದಶವಾರ್ಷಿಕ ಅಕ್ಕ ಸಮ್ಮೇಳನದಲ್ಲಿ ರಿಸರ್ವೇಶನ್ ಚಿತ್ರದ ಪ್ರದರ್ಶನ

Published On : 30 Aug 2018   |  Reported By : Rons Bantwal


ಸಂವಾದ ಕಾರ್ಯಕ್ರಮದಲ್ಲಿ ಚಿತ್ರ ನಿರ್ಮಾಪಕ ಯಾಕೂಬ್ ಖಾದರ್ ಗುಲ್ವಾಡಿ ಭಾಗಿ

ಮುಬಯಿ, ಆ.30: ಅಮೆರಿಕಾದ ಟೆಕ್ಸಾಸ್ ರಾಜ್ಯದ ಡಲ್ಲಾಸ್ ನಗರದ ಶರಟನ್ ಕನ್ವೆನ್ಶನ್ ಸೆಂಟರ್‍ನಲ್ಲಿ ನಾಳೆಯಿಂದ (ಆ.31 ರಿಂದ) ಸೆ.2ರ ವರೆಗೆ ನಡೆಯಲಿರುವ ಅಮೆರಿಕ ಕನ್ನಡ ಕೂಟಗಳ ಆಗರ" ಅಕ್ಕ ಸಮ್ಮೇಳನ"ದಲ್ಲಿ ಗುಲ್ವಾಡಿ ಟಾಕೀಸ್ ಬ್ಯಾನರ್ ನಡಿ ಕುಂದಾಪ್ರ ಕನ್ನಡದಲ್ಲಿ ಸಿದ್ಧಗೊಂಡು ಕಳೆದ ಬಾರಿ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರಶಸ್ತಿ ಪಡೆದು ದೇಶಾದ್ಯಂತ ಗಮನ ಸೆಳೆದಿದ್ದ ರಿಸರ್ವೇಶನ್ ಚಿತ್ರದ ವಿಶೇಷ ಪ್ರದರ್ಶನ ನಡೆಯಲಿದೆ. ಹಾಗೂ ಇದೇ ಚಿತ್ರದ ನಿರ್ಮಾಪಕ ಯಾಕೂಬ್ ಖಾದರ್ ಗುಲ್ವಾಡಿ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಈಗಾಗಲೇ ಆಸ್ಟೇಲಿಯಾದ ಮೆಲ್ಬೋರ್ನ್ ಅಂತರಾಷ್ಟ್ರೀಯ ಚಿತ್ರೋತ್ಸವ, ಬಾಂಗ್ಲಾದೇಶದ ಢಾಕÀ ಅಂತರಾಷ್ಟ್ರೀಯ ಚಿತ್ರೋತ್ಸವ, ರಷ್ಯಾದ ಕಝಾನ್ ಅಂತರಾಷ್ಟ್ರೀಯ ಚಿತ್ರೋತ್ಸವ, ಭಾರತತ ಕೋಲ್ಕತ ಅಂತರಾಷ್ಟ್ರೀಯ ಚಿತ್ರೋತ್ಸವಕ್ಕೆ ಅಧಿಕೃತವಾಗಿ ಆಯ್ಕೆಯಾಗಿ ಪ್ರದರ್ಶನ ಕಂಡಿದ್ದಲ್ಲದೇ ಲಂಡನ್ನಿನ ಬ್ರಿಸ್ಟೆಲ್ ಕನ್ನಡಿಗರಿಗಾಗಿ ವಿಶೇಷ ಪ್ರದರ್ಶನ ಕೂಡ ಕಂಡಿದೆ ಈ ಚಿತ್ರವನ್ನು ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಪಡೆದ ಯುವ ನಿರ್ದೇಶಕ ನಿಖಿಲ್ ಮಂಜೂ ಲಿಂಗೇಗೌಡ ನಿರ್ದೇಶಿಸಿದ್ದರೆ ಬಿ.ಶಿವಾನಂದ್, ಪ್ರದೀಪ್ ಕುಮಾರ್ ಶೆಟ್ಟಿ ಕೆಂಚನೂರು ಚಿತ್ರ ಕಥೆಯ ಪ್ರಮುಖ ರೂವಾರಿಗಳು. ಸಮೀರ್ ಕುಲಕರ್ಣಿ ಚಿತ್ರಕ್ಕೆ ಸಂಗೀತ ನೀಡಿದ್ದು. ಆದಿತ್ಯ ಕುಣಿಗಲ್ ರವರ ಸಂಕಲನದಲ್ಲಿ ಕ್ಯಾಮರಾಮ್ಯಾನ್ ಪಿವಿಆರ್ ಸ್ವಾಮಿ ಚಿತ್ರದ ದೃಶ್ಯಗಳನ್ನು ಅದ್ಭುತವಾಗಿ ಸೆರೆಹಿಡಿದಿದ್ದಾರೆ.

ಬೆಸ್ಟ್ ಫೀಚರ್ ಫಿಲ್ಮ್ ಈ ಚಿತ್ರ ಪ್ರಾದೇಶಿಕ ಭಾಷಾ ವಿಭಾಗದಲ್ಲಿ 2017 ರಲ್ಲಿ ಕನ್ನಡದ ಅತ್ಯುತ್ತಮ ರೂಪಕ ಚಿತ್ರ (ಬೆಸ್ಟ್ ಫೀಚರ್ ಫಿಲ್ಮ್ (ರಜತ ಕಮಲ) ಮತ್ತು 2018 ರಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಬಿಫ್ಸ್) ನಲ್ಲಿ ಕನ್ನಡದ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದು ಕೊಂಡಿದೆ.

ವೃತ್ತಿಯಲ್ಲಿ ಗುಜರಿ ವ್ಯಾಪಾರಿಯಾಗಿರುವ ಯಾಕೂಬ್ ಖಾದರ್ ಗುಲ್ವಾಡಿ ಖುದ್ಧಾಗಿ ಚಿತ್ರ ಪದರ್ಶನದಲ್ಲಿ ನಾನು ಭಾಗಿವಹಿಸಲಿದ್ದಾರೆ. ಈಗಾಗಲೇ ಅಮೆರಿಕ, ಇಂಗ್ಲೆಂಡ್, ಕೆನಡ, ಸಿಂಗಾಪುರ, ಕಿನ್ಯಾ, ತಾಂಜಾನಿಯ, ಮಲೇಷಿಯಾ, ಸೌದಿ ಅರೇಬಿಯಾ, ದುಬೈ, ಒಮಾನ್, ಕತಾರ್, ಶ್ರೀಲಂಕಾ, ಮಾಲ್ಡೀವ್ಸ್- ಬ್ಯಾಂಕಾಕ್ ಮುಂತಾದ ಸುಮಾರು ಹದಿನೈದು ದೇಶಗಳಿಗೆ ಕನ್ನಡ ಕಟ್ಟುವ ಕೆಲಸಕ್ಕಾಗಿ 25 ಕ್ಕೂ ಹೆಚ್ಚು ಬಾರಿ ವಿದೇಶಳಿಗೆ ಸುತ್ತಾಡಿದ ಯಾಕೂಬ್ ಗುಲ್ವಾಡಿ ಮೂರು ಪುಸ್ತಕಗಳನ್ನು ಬರೆದಿರುವರು.

ನನಗೆ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ (2016 ರಾಜ್ಯ ಪ್ರಶಸ್ತಿ) (2017 ರಲ್ಲಿ ರಿಸರ್ವೇಶನ್ ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿ) (2018 ರಲ್ಲಿ ರಿಸರ್ವೇಶನ್ ಚಿತ್ರಕ್ಕಾಗಿ ಬಿಫ್ಸ್ ಅಂತರಾಷ್ಟ್ರೀಯ ಪ್ರಶಸ್ತಿ). ಸತತ ಮೂರು ವರ್ಷ ಹ್ಯಾಟ್ರಿಕ್ ಪ್ರಶಸ್ತಿಗಳು ಬಂದಿವೆ ಅಲ್ಲದೇ ದೇಶ ವಿದೇಶಗಳ ಹಲವು ಕನ್ನಡ ಸಂಘಗಳು ಪ್ರಶಸ್ತಿ ನೀಡಿ ಗೌರವಿಸಿದೆ. ಂಟಿಣiಛಿ ವಸ್ತುಗಳ ಸಂಗ್ರಹಕಾರರಾಗಿ *ರಾಷ್ಟ್ರ, ರಾಜ್ಯ ಪ್ರಶಸ್ತಿ ಪಡೆದ ಹಲವು ಚಲನ ಚಿತ್ರಗಳಿಗೆ ವಸ್ತ್ರ ವಿನ್ಯಾಸಕಾರರಾಗಿ ದುಡಿದಿದ್ದಲ್ಲದೆ ಗುಲ್ವಾಡಿ ಸಾಂಸ್ಕ್ರತಿಕ ಪ್ರತಿಷ್ಟಾನ ಸ್ಥಾಪಿಸಿ ಗುಲ್ವಾಡಿ ಎಂಬ ಪುಟ್ಟ ಹಳ್ಳಿಯಲ್ಲಿ ವರ್ಷಕ್ಕೆರಡು ಸಾಹಿತ್ಯ-ಸಂಸ್ಕೃತಿ ಉತ್ಸವ ನಡೆಸುತ್ತಿರುವ ನಾನು ಕರ್ನಾಟಕ ಚಲನ ಚಿತ್ರ ಪ್ರಶಸ್ತಿ ಕಮಿಟಿಯ ಸದಸ್ಯನಾಗಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಸದಸ್ಯನಾಗಿ ಹತ್ತಾರು ವರ್ಷಗಳಿಂದ ಕೋಮು ಸೌಹಾರ್ದತೆಗೋಸ್ಕರ ತನ್ನನ್ನು ಸತತವಾಗಿ ತೊಡಗಿಸಿ ಕೊಂಡಿದ್ದಾರೆ.

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here