Thursday 18th, April 2024
canara news

ಐರೋಡಿ ಗೋವಿಂದಪ್ಪರವರಿಗೆ `ಯಕ್ಷಗಾನ ಕಲಾಪ್ರಶಸ್ತಿ (2018)'

Published On : 01 Sep 2018   |  Reported By : Rons Bantwal


ಮುಂಬಯಿ, ಆ.31: ರಾಷ್ಟ್ರೀಯ ಬಿಲ್ಲವ ಮಹಾಮಂಡಲ, ಮುಲ್ಕಿ ಇದರ ಅಧ್ಯಕ್ಷರೂ ಹಾಗೂ ಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷರೂ ಆದ ಶ್ರೀಯುತ ಜಯ ಸಿ. ಸುವರ್ಣರ ಮಾತೃಶ್ರೀ ದಿ| ಅಚ್ಚು ಚಂದು ಸುವರ್ಣರವರ ಸ್ಮರಣಾರ್ಥಕವಾಗಿ ಸ್ಥಾಪಿಸಿದ ಶಾಶ್ವತ ನಿಧಿಯಿಂದ ಬಿಲ್ಲವರ ಎಸೋಸಿಯೇಶನ್ ಮುಂಬಯಿ ಇವರು ಕೊಡಮಾಡುವ `ಯಕ್ಷಗಾನ ಕಲಾ ಪ್ರಶಸ್ತಿ (2018)ಗೆ ಖ್ಯಾತ ಯಕ್ಷಗಾನ ಕಲಾವಿದ ಐರೋಡಿ ಗೋವಿಂದಪ್ಪ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯು 25000/- ರೂ. ನಗದು, ಪ್ರಶಸ್ತಿ ಫಲಕ, ಸನ್ಮಾನ ಪತ್ರಗಳನ್ನೊಳಗೊಂಡಿದೆ. ಇತ್ತೀಚೆಗೆ ಬಿಲ್ಲವ ಭವನದಲ್ಲಿ ಯಕ್ಷಗಾನದ ಹಿರಿಯ ಸಂಘಟಕ ಕಲಾವಿದ ಎಚ್.ಬಿ.ಎಲ್. ರಾವ್ ಅವರ ಅಧ್ಯಕ್ಷತೆಯಲ್ಲಿ ಜರಗುವ ನಿರ್ಣಾಯಕ ಸಮಿತಿಯು ಈ ನಿರ್ಧಾರ ಪ್ರಕಟಿಸಿದೆ. ಐರೋಡಿ ಗೋವಿಂದಪ್ಪ ಅÀವರು ಯಕ್ಷಗಾನ ಕ್ಷೇತ್ರಕ್ಕೆ ಸಲ್ಲಿಸಿರುವ ಐದು ದಶಕಗಳ ಸೇವೆಯನ್ನು ಗಮನಿಸಿ ಈ ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು.

ತೆಂಕು ಮತ್ತು ಬಡಗು ಉಭಯ ತಿಟ್ಟುಗಳಲ್ಲೂ ಪ್ರಸಿದ್ಧವಾಗಿರುವ ಐರೋಡಿ ಗೋವಿಂದಪ್ಪನವರು ಹಾರಾಡಿ ಪರಂಪರೆಯ ಕಲಾವಿದ. ಗೋಳಿಗರಡಿ, ಪೆರ್ಡೂರು, ಸಾಲಿಗ್ರಾಮ, ಕಣಿಪುರ, ಕುತ್ಯಾಳ, ಇರಾ ಸೋಮೇಶ್ವರ, ಮೂಲ್ಕಿ, ಕುಂಬಳೆ ಮುಂತಾದ ಮೇಳಗಳಲ್ಲಿ ಸುಮಾರು ಐದು ದಶಕಕ್ಕೂ ಮಿಕ್ಕು ಸೇವೆ ಸಲ್ಲಿಸಿದ್ದಾರೆ.

ಪಾತ್ರಕ್ಕೆ ತಕ್ಕ ವೇಷಭೂಷಣ, ಗತ್ತಿನ ರಂಗಪ್ರವೇಶ ನಿರ್ಗಮನ, ಮಟಪಾಡಿ ಶೈಲಿಯ ಹೆಜ್ಜೆಗಾರಿಕೆ, ಪದದ ಎತ್ತುಗಡೆ ಐರೋಡಿಯವರ ವೈಶಿಷ್ಟ್ಯಗಳು. ಕರ್ಣ, ಮಾರ್ಕೆಂಡೇಯ, ವೀರಮಣಿ, ವಿಭೀಷಣ, ಭೀಷ್ಮ, ಅರ್ಜುನ, ಜಾಂಬವ, ಭೀಮ, ಋತುಪರ್ಣ ಇವರ ಪ್ರಸಿದ್ಧ ಪಾತ್ರಗಳು.

ತಂದೆ ಬೂದ ಭಾಗವತ ತಾಯಿ ಗೌರಿ ಪೂಜಾರ್ತಿ ದಂಪತಿ (10.05.1945)ಗಳ ಪುತ್ರರಾಗಿರುವ ಐರೋಡಿ ಗೋವಿಂದಪ್ಪನವರು ತಂದೆಯವರಿಂದ ಭಾಗವತಿಕೆ ಹಾಗೂ ಹೆಜ್ಜೆಗಾರಿಕೆಯನ್ನು ಕಾಂತಪ್ಪ ಮಾಸ್ತರರಿಂದ ಕಲಿತು ಗೋಳಿಗರಡಿ ಮೇಳ ಪ್ರವೇಶಿಸಿದರು. ಅನಂತರ ಅವರು ಹಿಂತಿರುಗಿ ನೋಡಲಿಲ್ಲ. ಹಲವಾರು ಮೇಳಗಳಲ್ಲಿ ವೇಷ ಹಾಕಿ ಕೀರ್ತಿಯ ಶಿಖರವೇರಿದರು. 1985ರಲ್ಲಿ ಕೆ. ಎಸ್. ಉಪಾಧ್ಯ ನೇತೃತ್ವದ ತಂಡದಲ್ಲಿ ವಿದೇಶಕ್ಕೆ (ಹಾಂಕಾಂಗ್) ಹೋಗಿ ವೇಷ ಮಾಡಿದ ಹೆಗ್ಗಳಿಕೆ ಇವರಿಗಿದೆ. 2004ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಇವರಿಗೆ ದೊರಕಿದೆ. ಅಲ್ಲದೆ ಜಾನಪದ ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿ ಸದಸ್ಯರಾಗಿಯೂ ಕೆಲಕಾಲ ಸೇವೆ ಸಲ್ಲಿಸಿದ್ದಾರೆ.

ಯಕ್ಷಗಾನ ಕಲಾ ಪ್ರಶಸ್ತಿ ಪ್ರದಾನ ಸಮಾರಂಭವು ಬಿಲ್ಲವ ಭವನದಲ್ಲಿ 09.09.2018ರಂದು ಸಂಜೆ 3.30ಕ್ಕೆ ಜರಗಲಿದೆ. ಸಮಾರಂಭವನ್ನು ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷರಾದ ಜಯ ಸಿ. ಸುವರ್ಣರು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಬಿಲ್ಲವರ ಎಸೋಸಿಯೇಶನ್, ಮುಂಬಯಿಯ ಅಧ್ಯಕ್ಷರಾದ ಚಂದ್ರಶೇಖರ್ ಪೂಜಾರಿ ವಹಿಸಲಿದ್ದಾರೆ. ಪ್ರಶಸ್ತಿಯನ್ನು ಖ್ಯಾತ ಯಕ್ಷಗಾನ ಕಲಾವಿದ ಸಂಘಟಕ ಕೆರೆಮನೆ ಶಿವಾನಂದ ಹೆಗಡೆ ಪ್ರದಾನಿಸಲಿದ್ದಾರೆ.

ಶ್ರೀಧರ ಪೂಜಾರಿ ಲೋನಾವಲಾ (ಉಪಾಧ್ಯಕ್ಷರು ಲೋನಾವಲಾ), ಪ್ರದೀಪ್ ಎಂ. ಚಂದನ್ (ನಿರ್ದೇಶಕರು ಭಾಸ್ಪ್ ಇಂಡಿಯಾ ಲಿ.) ಗೌರವ ಅತಿಥಿಗಳಾಗಿ ಆಗಮಿಸಲಿದ್ದಾರೆ. ಎಚ್.ಬಿ.ಎಲ್. ರಾವ್ ಅಭಿನಂದನಾ ಭಾಷಣ ಗೈಯ್ಯಲಿದ್ದಾರೆ. ಕಾರ್ಯಕ್ರಮದ ಅಂಗವಾಗಿ ಶ್ರೀ ಗುರು ನಾರಾಯಣ ಯಕ್ಷಗಾನ ಮಂಡಳಿಯ ಕಲಾವಿದರಿಂದ `ಪಾಂಡವಾಶ್ವಮೇಧ' ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಬಿಲ್ಲವರ ಎಸೋಸಿಯೇಶನಿನ ಗೌ.ಪ್ರ. ಕಾರ್ಯದರ್ಶಿ ಧನಂಜಯ ಶಾಂತಿ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳ ಕಾರ್ಯದರ್ಶಿ ಇವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವರು.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here