Tuesday 23rd, April 2024
canara news

ದುಬಾಯಿ ವಿಶ್ವ ತುಳು ಸಮ್ಮೇಳನ-ಮುಂಬಯಿ ಸಮಿತಿ ಪೂರ್ವಭಾವಿ ಸಭೆ

Published On : 07 Sep 2018   |  Reported By : Rons Bantwal


ಸಮ್ಮೇಳನದಲ್ಲಿ ಭಾಗವಹಿಸಲಿಪ್ಛಿಸುವ ತುಳುವರಿಗೆ ಹೆಸರು ದಾಖಲಿಸಲು ಕರೆ

ಮುಂಬಯಿ, ಸೆ.06: ಕೊಲ್ಲಿ ರಾಷ್ಟ್ರದಲ್ಲಿನ ತುಳುವ ಸಂಘ-ಸಂಸ್ಥೆಗಳು ಸಾಗರೋತ್ತರ ತುಳುವರ ಸಹಯೋಗ ದೊಂದಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಅಖಿಲಭಾರತ ತುಳು ಒಕ್ಕೂಟಗಳ ಸಹಭಾಗಿತ್ವದಲ್ಲಿ ಬರುವ ನವೆಂಬರ್ 23-24ರ ದ್ವಿದಿನಗಳಲ್ಲಿ ದುಬಾಯಿನಲ್ಲಿ ನಡೆಯಲಿರುವ ವಿಶ್ವ ತುಳು ಪರ್ಬ ನಿಮಿತ್ತ ಮುಂಬಯಿನಲ್ಲಿ ಪ್ರಥಮ ಪೂರ್ವಭಾವಿ ಸಭೆ ನಡೆಸಿತು.

 

ಘಾಟ್ಕೋಪರ್‍ನ ಮನಿಫೆÇೀಲ್ಡ್ ಕಛೇರಿ ಸಮಾಲೋಚನಾ ಸಭಾಗೃಹದಲ್ಲಿ ಕಳೆದ ಬುಧವಾರ ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ್ ಯು.ದೇವಾಡಿಗ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟಿತು. ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಬಾರ್ಕೂರು ಇದರ ಆಡಳಿತ ಮೊಕ್ತೇಸರ, ಎಸ್.ಬಿ ರಿಯಾಲಿಟಿ ಇದರ ಆಡಳಿತ ನಿರ್ದೇಶಕ ಕಡಂದಲೆ ಸುರೇಶ್ ಎಸ್.ಭಂಡಾರಿ ಅವರು ಧರ್ಮಪಾಲ್ ದೇವಾಡಿಗ ಅವರಿಗೆ ದುಬಾಯಿ ಪ್ರವಾಸ ವೀಸಾ ಪ್ರತಿ ಹಸ್ತಾಂತರಿಸಿ ಸಭೆಗೆ ಚಾಲನೆ ನೀಡಿದರು. ಸಭೆಯಲ್ಲಿ ದುಬಾಯಿನಲ್ಲಿ ನಡೆಯಲಿರುವ ವಿಶ್ವ ತುಳು ಪರ್ಬದಲ್ಲಿ ಪ್ರತಿನಿಧಿಗಳಾಗಿ ಪಾಲ್ಗೊಳ್ಳುವ ಬಗ್ಗೆ ಚರ್ಚಿಸಲಾಯಿತು.

ಧರ್ಮಪಾಲ್ ದೇವಾಡಿಗ ಮಾತನಾಡಿ ಸಾಗರೋತ್ತರ ರಾಷ್ಟ್ರದಲ್ಲಿ ತುಳುವರ ಜಾಗತಿಕ ಸಮ್ಮೇಳನ ಇದೇ ಮೊದಲ ಬಾರಿ ಅದ್ದೂರಿಯಾಗಿ ಮತ್ತು ಅರ್ಥಪೂರ್ಣವಾಗಿ ನಡೆಸಲ್ಪಡಲಿದ್ದು, ತುಳು ಭಾಷೆ, ಸಂಸ್ಕೃತಿಯ ಉಳಿವಿಗಾಗಿ ಒಂದು ಅಡಿಪಾಯ ಆಗಲಿದೆ. ಅರಬ್ ಸಂಯುಕ್ತ ಸಂಸ್ಥಾನದ ದುಬಾಯಿ ಅಲ್ಲಿನ ಆಲ್‍ನಸಾರ್ ಲೀಸರ್ ಲ್ಯಾಂಡ್ ಐಸ್‍ರಿಂಗ್ ಒಳಾಂಗಣದಲ್ಲಿ ಎನ್‍ಎಂಸಿ ಸಮೂಹ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ| ಬಿ.ಆರ್ ಶೆಟ್ಟಿ ಘನಾಧ್ಯಕ್ಷತೆ ಹಾಗೂ ಸರ್ವೋತ್ತಮ ಶೆಟ್ಟಿ ಅವರ ದೂರದೃಷ್ಠಿತ್ವದ ಮತ್ತು ಮುಂದಾಳುತ್ವದಲ್ಲಿ ನಡೆಯಲಿರುವ ಸಮಗ್ರ ತುಳುವರ ಸಾಂಘಿಕತೆ ಸಾರುವ ಸಮ್ಮೇಳನ ಆಗಿದೆ. ಭಾರತ ರಾಷ್ಟ್ರದಾದ್ಯಂತ ನೆಲೆಯಾದ ತುಳುವರು ಮತ್ತು ತುಳು ಸಂಘಟನೆಗಳ ಮುಂದಾಳುಗಳು ಸೇರಿದಂತೆ ಹಿಂದು, ಮುಸ್ಲಿಂ ಮತ್ತು ಕ್ರೈಸ್ತ ಧಾರ್ಮಿಕ ಮುಂದಾಳುಗಳು ಮತ್ತು ಕರ್ನಾಟಕ ಹಾಗೂ ಕರಾವಳಿ, ತುಳುನಾಡಿನ ನೂರಾರು ಗಣ್ಯರು ಭಾಗವಹಿಸಲಿದ್ದಾರೆ. ಮಹಾರಾಷ್ಟ್ರ ಮತ್ತು ಗುಜರಾತ್‍ನಿಂದ ಇದೀಗಲೇ ನೂರಾರು ತುಳುವರು ಸಮ್ಮೇಳನದಲ್ಲಿ ಪಾಲ್ಗೊಳ್ಳುವರೇ ಹೆಸರುಗಳನ್ನು ನೋಂದಾಯಿಸಿದ್ದಾರೆ ಎಂದು ಸಮ್ಮೇಳನದ ಬಗ್ಗೆ ಸ್ಥೂಲವಾದ ಮಾಹಿತಿಯನ್ನಿತ್ತರು.

ವಿದೇಶದಲ್ಲಿನ ತುಳು ಮಾತೃಭಾಷಿಗರ ಇಂತಹ ಯೋಚನೆ ಮೆಚ್ಚುವಂತಹದ್ದು. ಹೊರನಾಡಿನಲ್ಲಿ ಇಷ್ಟೊಂದು ದೊಡ್ಡ ಯೋಜನೆಯನ್ನು ಹಮ್ಮಿಕೊಂಡ ಸಾಗರೋತ್ತರ ತುಳುವರ ಸಾಧನೆ ಸ್ತುತ್ಯರ್ಹ. ಇದು ಭಾಷಾ ಭಾವೈಕ್ಯತೆಗೆ ಪೂರಕವಾಗಿದ್ದು ಒಳನಾಡ ತುಳುವರು ಸಕ್ರೀಯವಾಗಿ ಪಾಲ್ಗೊಂಡಾಗಲೇ ಸಮ್ಮೇಳನದ ಉದ್ದೇಶ ಸಾರ್ಥಕವಾಗುವುದು ಎಂದು ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಬಾರ್ಕೂರು ಇದರ ಆಡಳಿತ ಮೊಕ್ತೇಸರ, ಎಸ್.ಬಿ ರಿಯಾಲಿಟಿ ಇದರ ಆಡಳಿತ ನಿರ್ದೇಶಕ ಕಡಂದಲೆ ಸುರೇಶ್ ಎಸ್.ಭಂಡಾರಿ ತಿಳಿಸಿದರು.

ಸಮಾಜ ಸೇವಕರಾದವಿಶ್ವನಾಥ್ ಯು.ಮಾಡಾ, ಎಸ್.ಕೆ ಶ್ರೀಯಾನ್, ಬಾಲಕೃಷ್ಣ ಪಿ.ಭಂಡಾರಿ, ವಿಶ್ವನಾಥ ರೈ, ನಾಟಕಕಾರ ಸಾ.ದಯಾ ಮತ್ತಿತರರು ಉಪಸ್ಥಿತರಿದ್ದರು.

ಕರ್ನಾಟಕರ ರಾಜ್ಯ ತುಳು ಅಕಾಡಮಿ ಮಾಜಿ ಸದಸ್ಯ, ಸಂಘಟಕ ಕರ್ನೂರು ಮೋಹನ್ ರೈ ಸ್ವಾಗತಿಸಿ ವಿದೇಶದ ಪ್ರಪ್ರಥಮ ವಿಶ್ವ ತುಳು ಸಮ್ಮೇಳನ ಇದಾಗಲಿದ್ದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ವಿಶ್ವ ತುಳುವರೆ ಪರ್ಬ ಸಮಿತಿ ಗೌರವಾಧ್ಯಕ್ಷ, ಪದ್ಮಭೂಷಣ ಡಾ| ಡಿ.ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ಹೆಗ್ಗಡೆ ಪಾದರ್ಪಣೆಗೈದು ಸಮ್ಮೇಳನವನ್ನು ಸಾಂಪ್ರದಾಯಿಕವಾಗಿ ಉದ್ಘಾಟಿಸಲಿದ್ದಾರೆ ಎಂದು ಪ್ರಸ್ತಾವಿಕವಾಗಿ ತಿಳಿಸಿದರು. ಭಾರತ ತುಳು ಒಕ್ಕೂಟದ ಮಹಾರಾಷ್ಟ್ರ ಘಟಕದ ರೋನ್ಸ್ ಬಂಟ್ವಾಳ್ ಅಭಾರ ಮನ್ನಿಸಿದರು.

ಸಮ್ಮೇಳನದಲ್ಲಿ ಭಾಗವಹಿಸಲು ಆಸಕ್ತವುಳ್ಳವರಿಗೆ ಇನ್ನೂ ಒದುವಾರದ ಅವಕಾಶ ಒದಗಿಸಲಾಗಿದೆ. ಹೆಸರು ನೋಂದಣಿಸಲು ಅಥವಾ ಹೆಚ್ಚಿನ ಮಾಹಿತಿಗಾಗಿ ಧರ್ಮಪಾಲ್ ದೇವಾಡಿಗ (9322506941) ಕರ್ನೂರು ಮೋಹನ್ ರೈ (9867304757) ರೋನ್ಸ್ ಬಂಟ್ವಾಳ್ (9820292974) ಇವರನ್ನು ಸಂಪರ್ಕಿಸುವಂತೆ ಎಂದು ಮೋಹನ್ ರೈ ತಿಳಿದ್ದಾರೆ.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here