Wednesday 24th, April 2024
canara news

ಉಡುಪಿಯಲ್ಲಿ ಸಂಪ್ರದಾಯಿಕ-ಸಾಂಸ್ಕೃತಿಕ ವೈಭವಗಳೊಂದಿಗೆ ಅನಾವರಣಗೊಂಡ ವಿಶ್ವ ಬಂಟ ಸಮ್ಮೇಳನ

Published On : 09 Sep 2018   |  Reported By : Rons Bantwal


ಬಂಟರು ಶ್ರಮಜೀವಿಗಳಾಗಿ ಸಾಧಕರೆಣಿಸಿದವರು : ಜಸ್ಟೀಸ್ ಸಂತೋಷ್ ಹೆಗ್ಡೆ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಉಡುಪಿ, ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನ, ತೋನ್ಸೆ ಶಶಿರೇಖಾ ಆನಂದ ಶೆಟ್ಟಿ ವೇದಿಕೆ: ಸೆ.09: ನಾನೊಬ್ಬ ಬಂಟನೆಂದು ಹೇಳುವುದೇ ಹೆಮ್ಮೆಯೆಣಿಸುತ್ತಿದೆ. ನಮ್ಮ ಸಾಧನೆಗಳೆಲ್ಲವೂ ದೂರದೃಷ್ಠಿತ್ವದ್ದು ಮತ್ತು ಹಿರಿದಾಗಿವೆ. ನಮ್ಮಲ್ಲಿನ ಒಗ್ಗೂಡುವಿಕೆಯೇ ಈ ಮಹಾಸಮ್ಮೇಳನಕ್ಕ್ಕೆ ಕಾರಣ. 1970ರ ಭೂಮಸೂದೆ ಕಾನೂನುನಿಂದ ಕಂಗೆಡದ ಬಂಟರು ಮುಂದೆ ಶ್ರಮಜೀವಿಗಳಾಗಿ ಈ ಸಾಧಕರಾಗಿ ಈ ಮಟ್ಟಕ್ಕೆ ಬೆಳೆದವರು. ಮೂಲ್ಕಿ ಸುಂದರ ರಾಮ ಶೆಟ್ಟಿ, ಅವರಂತ ದಿಗ್ಗಜರ ಸಹಯೋಗವೂ ನಮಗೆ ಅನುಕರಣೀಯ. ಕರ್ನಾಟಕದ ಮೂರು ಜನರು ರಾಷ್ಟ್ರದ ಸರ್ವೋಚ್ಛ ನ್ಯಾಯಾಧೀಶರಾದಲ್ಲೂ ಆ ಪಯ್ಕಿ ಮೂವರು ಬಂಟರು ಎಂದೇಳಲೂ ಅಭಿಮಾನ ಅಣಿಸುತ್ತಿದೆ ಎಂದು ಭಾರತ ರಾಷ್ಟ್ರದ ಉಚ್ಛನ್ಯಾಯಲಯದ ಮಾಜಿ ನ್ಯಾಯಾಧೀಶ ಜಸ್ಟೀಸ್ ನಿಟ್ಟೆ ಸಂತೋಷ್ ಹೆಗ್ಡೆ ತಿಳಿಸಿದರು.

 

ಜಾಗತಿಕ ಬಂಟರ ಸಂಘಗಳ ಒಕ್ಕೂಟ (ಫೆಡರೇಶನ್ ಆಫ್ ವರ್ಲ್ಡ್ ಬಂಟ್'ಸ್ ಅಸೋಸಿಯೇಶನ್'ಸ್ (ರಿ.) ಉಡುಪಿ ಜಿಲ್ಲಾ ಬಂಟರ ಸಂಘ ಸಂಸ್ಥೆಗಳು (ಅಸೋಸಿಯೇಶನ್ ಆಫ್ ಉಡುಪಿ ಡಿಸ್ಟ್ರಿಕ್ಟ್ ಬಂಟ್ಸ್ ಸಂಘಸ್) ಇಂದಿಲ್ಲಿ ರವಿವಾರ ಪೂರ್ವಾಹ್ನ ಉಡುಪಿಯಲ್ಲಿ ಆಯೋಜಿಸಿರುವ ವಿಶ್ವ ಬಂಟರ ಸಮ್ಮೇಳನ-2018 ವನ್ನು ಕಲ್ಪವೃಕ್ಷ ಅರಳಿಸಿ ಕಳಸೆಯಲ್ಲಿಟ್ಟು ವಿಧ್ಯುಕ್ತವಾಗಿ ಸಮ್ಮೇಳನ ಉದ್ಘಾಟಿಸಿ, ನೆನಪಿನ ಸಂಚಿಕೆ ಬಂಟಸೌರಭ ಬಿಡುಗಡೆಗೊಳಿಸಿ ಜಸ್ಟೀಸ್ ಹೆಗ್ಡೆ ಮಾತನಾಡಿದರು.

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಘನಾಧ್ಯಕ್ಷತೆಯಲ್ಲಿ ಜರುಗಿದ ಮಹಾ ಸಮ್ಮೇಳನ ಬಂಟ ಸಂಪ್ರದಾಯಿಕ, ಸಾಂಸ್ಕೃತಿಕ ವೈಭವಗಳೊಂದಿಗೆ ವಿಜೃಂಭಣೆಯಿಂದ ಅನಾವರಣ ಗೊಂಡಿದ್ದು, ಶ್ರೀ ಗುರುದೇವದತ್ತ ಸಂಸ್ಥಾನಮ್ ಶ್ರೀ ದತ್ತಗುರು ವೀರಾಂಜನೆಯ ಸ್ವಾಮಿ ಕ್ಷೇತ್ರ ಒಡಿಯೂರು ಮಠಾಧೀಶ ಶ್ರೀ ಗುರುದೇವಾನಂದ ಸ್ವಾಮೀಜಿ, ಬಾರ್ಕೂರು ಮಹಾಸಂಸ್ಥಾನ ಭಾರ್ಗವ ಬೀಡು ಇದರ ವಿಶ್ವ ಸಂತೋಷ ಭಾರತಿ ಗುರೂಜಿ ದೀಪ ಪ್ರಜ್ವಲಿಸಿ ಸಮ್ಮೇಳನಕ್ಕೆ ಅನುಗ್ರಹಿಸಿದರು.

ನಾಡವರ ಮಾತೃ ಸಂಘ ಮಂಗಳೂರು ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಮುಖ್ಯ ಅತಿಥಿsಯಾಗಿದ್ದು, ಆರ್ಗ್ಯಾನಿಕ್ ಇಂಡಸ್ಟ್ರೀಸ್ ಲಿಮಿಟೆಡ್ ಇದರ ಕಾರ್ಯಾಧ್ಯಕ್ಷ ತೋನ್ಸೆ ಆನಂದ ಎಂ.ಶೆಟ್ಟಿ ಮತ್ತು ಶಶಿರೇಖಾ ಆನಂದ ಶೆಟ್ಟಿ ದಂಪತಿ ತಡಪೆಯಲ್ಲಿದ್ದು ಅಕ್ಕಿಯನ್ನು ಕಳಸೆಗೆ ಸುರಿದು, ಬೆಲ್ಲ, ಫಲಗಳನ್ನು ಬಾಳೆಎಲೆಯಲ್ಲಿರಿಸಿ ಸಾಂಪ್ರದಾಯಿಕವಾಗಿ ಸಮ್ಮೇಳನ ವೇದಿಕೆ ಉದ್ಘಾಟಿಸಿದರು. ಹಾಗೂ ತುಳುನಾಡ ಮುಂಡಾಸು ತೊಡಿಸಿ ಐಕಳ ಹರೀಶ್ ಶೆಟ್ಟಿ ಅವರಿಗೆ ಸಮ್ಮೇಳನಾಧ್ಯಕ್ಷತೆ ವಹಿಸಿ ಶುಭಾರೈಸಿದರು. ಬಳಿಕ ರಾಧಾ ಸುಂದರ ಶೆಟ್ಟಿ ದ್ವಾರವನ್ನು ರವಿ ಎಸ್.ಶೆಟ್ಟಿ (ಸಾಯಿ ಪ್ಯಾಲೇಶ್), ಭವಾನಿ ಫೌಂಡೇಶನ್ ನವಿಮುಂಬಯಿ ಸಂಸ್ಥಾಪಕಧ್ಯಕ್ಷÀ ದಡ್ದಂಗಡಿ ಚೆಲ್ಲಡ್ಕ ಕೆ.ಡಿ ಶೆಟ್ಟಿ, ವಿಕೇ ಸಮೂಹ (ಮೆಕ್‍ಕೊಯ್) ಮುಂಬಯಿ ಸಂಸ್ಥೆಯ ಆಡಳಿತ ನಿರ್ದೇಶಕ ಕೆ.ಎಂ ಶೆಟ್ಟಿ ಸಮ್ಮೇಳನ ದ್ವಾರಗಳನ್ನು ಉದ್ಘಾಟಿಸಿದರು.

ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್.ಪಯ್ಯಡೆ, ಬೋಂಬೆ ಬಂಟ್ಸ್ ಅಸೋಶಿಯೇಶನ್ ಅಧ್ಯಕ್ಷ ಸುಭಾಷ್ ಬಿ.ಶೆಟ್ಟಿ, ಬಂಟ್ಸ್ ಸಂಘ ಪುಣೆ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲಾಬೆಟ್ಟು, ಬಂಟ್ಸ್ ಸಂಘ ಬೆಂಗಳೂರು ಅಧ್ಯಕ್ಷ ಆರ್.ಉಪೇಂದ್ರ ಶೆಟ್ಟಿ, ಬಂಟ್ಸ್ ಸಂಘ ಬಳ್ಳಾರಿ ಅಧ್ಯಕ್ಷ ಸುರೇಶ್ ಶೆಟ್ಟಿ ಗುರ್ಮೆ, ಬಂಟರ ಸಂಘ ಬಂಟವಾಳ ತಾಲೂಕು ಅಧ್ಯಕ್ಷ ನಗ್ರಿಗುತ್ತು ವಿವೇಕ್ ಶೆಟ್ಟಿ, ಬಂಟ್ಸ್ ಸಂಘ ದೆಹಲಿ ಅಧ್ಯಕ್ಷ ಸುರೇಶ್ ಶೆಟ್ಟಿ, ಬಂಟ್ಸ್ ಸಂಘ ಚೆನ್ನೈ ಅಧ್ಯಕ್ಷ ನಿರಂಜನ ಮಾರ್ಲ, ಬಂಟ್ಸ್ ಸಂಘ ಹುಬ್ಬಳ್ಳಿ-ಧಾರವಾಡ ಕಾರ್ಯನಿರತ ಅಧ್ಯಕ್ಷ ಹೆಚ್.ದಿನೇಶ್ ಶೆಟ್ಟಿ, ಕರ್ನಾಟಕ ಸಂಘ ಗುಜರಾತ್ ಅಧ್ಯಕ್ಷ ಶಶಿಧರ ಶೆಟ್ಟಿ ಬರೋಡಾ, ಬಂಟ್ಸ್ ಸಂಘ ಭದ್ರಾವತಿ ಅಧ್ಯಕ್ಷ ದಿವಾಕರ ಶೆಟ್ಟಿ, ಬಂಟ್ಸ್ ಸಂಘ ಮೂಲ್ಕಿ ಅಧ್ಯಕ್ಷ ಸಂತೋಷ್‍ಕುಮಾರ್ ಹೆಗ್ಡೆ, ಬಂಟ್ಸ್ ಸಂಘ ಪುತ್ತೂರು ಅಧ್ಯಕ್ಷ ಲಕ್ಷ್ಮೀನಾರಾಯಣ ಶೆಟ್ಟಿ, ಬಂಟ್ಸ್ ಸಂಘ ಸುಳ್ಯ ಅಧ್ಯಕ್ಷ ಜಯಪ್ರಕಾಶ್ ರೈ, ಬಂಟ್ಸ್ ಸಂಘ ಬೆಳ್ತಂಗಡಿ ಅಧ್ಯಕ್ಷ ಎಸ್.ಜಯರಾಮ ಶೆಟ್ಟಿ ಗೌರವ ಅತಿಥಿsಗಳಾಗಿ ಉಪಸ್ಥಿತರಿದ್ದರು.

ಈ ಶುಭಾವಸರದಲ್ಲಿ ಬಂಟ ಸಮುದಾಯದ ಹಿರಿಯ ಸಾಧಕರಾದ ಸದಾನಂದ ಎ.ಶೆಟ್ಟಿ, ಬಂಟ್ಸ್ ಆಲಿಯಾಸ್ ನಾಡವರ ಸಂಘ ಅಧ್ಯಕ್ಷ ಬಿ.ಜಗನ್ನಾಥ ಶೆಟ್ಟಿ ಬೈಂದೂರು, ಹಿರಿಯ ಹೊಟೇಲು ಉದ್ಯಮಿಗಳಾದ ವಿಠಲ್ ಹೆಗ್ಡೆ (ಕೀರ್ತಿ ಹೊಟೇಲ್ ಬೆಳಗಾವಿ), ಮೈನಾ ಸುಬ್ಬಣ್ಣ ಶೆಟ್ಟಿ (ಹೊಟೇಲ್ ಟ್ವಿನ್ ಥಾಣೆ), ಮಾಜಿ ಶಾಸಕ ಬಿ.ಅಪ್ಪಣ್ಣ ಹೆಗ್ಡೆ (ಬಸ್ರೂರು), ಸಾಹಿತಿ ಶಿಮಂತೂರು ನಾರಾಯಣ ಶೆಟ್ಟಿ, ಸಮಾಜ ಸೇವಕ ಕುಳೂರುಬೀಡು ದಾಸಣ್ಣ ಆಳ್ವ (ಕಾಸರಗೋಡು), ವೈದ್ಯಾಧಿಕಾರಿ ಡಾ| ಪ್ರಭಾಕರ ಕೆ.ಶೆಟ್ಟಿ ಕಾಪು, ಯುಎಇ ಬಂಟ್ಸ್‍ನ ಸರ್ವೋತ್ತಮ ಎನ್.ಶೆಟ್ಟಿ ಅವರನ್ನು ಅತಿಥಿüಗಳು ಸನ್ಮಾನಿಸಿಅಭಿನಂದಿಸಿದರು. ಸನ್ಮಾನಿತರ ಪರವಾಗಿಸದಾನಂದ ಎ.ಶೆಟ್ಟಿ ಮತ್ತು ಸರ್ವೋತ್ತಮ ಎನ್.ಶೆಟ್ಟಿ ಸನ್ಮಾನಕ್ಕೆ ಉತ್ತರಿಸಿದರು.

ಸಭಾಭವನದ ಅವಾರಣದಲ್ಲಿನ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿ ವಿಧಿವತ್ತಾಗಿ ಉದಯರಾಗ ನಡೆಸಿ ಸಮ್ಮೇಳನಕ್ಕೆ ಚಾಲನೆಯನ್ನೀಡಲಾಯಿತು. ದ್ವಾರಗಳ ಉದ್ಘಾಟನೆ ಬಳಿಕ ಭವ್ಯ ಮೆರವಣಿಗೆಯಲ್ಲಿ ವೇದಿಕೆಗೆ ಆಗಮಿಸಿದ ಗಣ್ಯರು ಅಲ್ಲಿನ ಮೂಲ್ಕಿ ಸುಂದರರಾಮ್ ಶೆಟ್ಟಿ, ನ್ಯಾಯಮೂರ್ತಿ ಕೆ.ಎಸ್ ಹೆಗ್ಡೆ, ಸತೀಶ್‍ಚಂದ್ರ ಶೆಟ್ಟಿ ಉಡುಪಿ ಮತ್ತು ಪಳ್ಳಿ ಜಯರಾಮ ಶೆಟ್ಟಿ ಅವರ ಸಜ್ಜುಗೊಳಿಸಿದ ಭಾವಚಿತ್ರಕ್ಕೆ ಪುಷ್ಪಾಂಜಲಿ ಅರ್ಪಿಸಿದರು.

ಇದೊಂದು ಅದ್ಭೂತ ಅಪೂರ್ವವಾದ ನಾಡಿಗೆ ನಾಡೇ ಮೆಚ್ಚಿಕೊಳ್ಳುವ ಕಾರ್ಯಕ್ರಮ. ಬಂಟ ಅಂದರೆ ಸಂರಕ್ಷಕ. ನಾಯಕತ್ವಕ್ಕೆ, ಆತ್ಮ ವಿಶ್ವಾಸಕ್ಕೆ ಇನ್ನೊಂದು ಹೆಸರೇ ಬಂಟ ಸಮಾಜ. ತಾನೂ ಬೆಳೆಯುವ ಜೊತೆ ಅನ್ಯರನ್ನು ಬೆಳೆಸಿದವರೇ ಬಂಟರು. ಮಾತೃ ಪ್ರಧಾನವಾದ ಸಮಾಜವೇ ಬಂಟ ಸಮಾಜವಾಗಿದೆ. ನಮ್ಮ ಜೀವನಕ್ಕೆ ಭದ್ರತೆ ಬೇಕಾದರೆ ಧರ್ಮದ ಬದ್ಧತೆಬೇಕು. ಈ ಮಧ್ಯೆ ಧರ್ಮವೊಂದು ಕೆಲಸ ಮಾಡುತ್ತಿರಬೇಕು. ಜಾಗತಿಕವಾಗಿ ಪಸರಿದಎಲ್ಲಾ ಬಂಟರನ್ನು ಒಗ್ಗೂಡಿಸುವ ಶಕ್ತಿ ಬೆಳೆಸಿ ಸಮುದಾಯ, ಸಮಾಜವನ್ನು ಭದ್ರವಾಗಿ ಮುನ್ನಡೆಸೋಣ. ಅಖಂಡ ಬಂಟರಿಗೆ ಕೀರ್ತಿ ತರುವ ಸಮ್ಮೇಳನ ಇದಾಗಿದೆ. ನಾವೆಲ್ಲರೂ ಮಾತೃಭಾಷೆ ಉಳಿಸಿ ಬೆಳೆಸೋಣ ಅವಾಗಲೇ ಮಾತೃ ಸಂಸ್ಕೃತಿ ಬೆಳೆಯುವುದು ಎಂದು ಒಡಿಯೂರುಶ್ರೀ ನುಡಿದರು.

ಸಂತೋಷ್ ಗುರೂಜಿ ಹರಸಿ ನಾವು ಸೂಕ್ಷ್ಮಗ್ರಹಿಗಳಾದರೆ ಮುಂದಿನ ಪೀಳಿಗೆಗೆ ಒಳಿತಾಗುವುದು. ಭೂತಾರಾಧನೆ, ನಾಗಾರಾಧನೆ ಹಾಳಿ ತಪ್ಪಿ ಹೋಗುತ್ತಿರುವ ಈ ಕಾಲಕ್ಕೆ ಪದ್ಧತಿ ಅನುಸಾರ ಅದ್ಯತೆ ಬದ್ಧತೆಗಳೊಂದಿಗೆ ಭವಿಷ್ಯತ್ತಿನ ಪೀಳಿಗೆಗೆ ಕಳಿಸಿ ಕೊಡಬೇಕು. ಬಂಟರು ಅಂದರೆ ಬರೀ ಶ್ರೀಮಂತರಲ್ಲ. ನಮ್ಮಲ್ಲಿನ ಮಾಧ್ಯಮ ಬಡವರನ್ನು ಸೂಕ್ಷ್ಮವಾಗಿ ಗಮನಿಸಿ ಸಮುದಾಯದ ಪುನರ್ ಮಾಡಬೇಕು. ಅಡಂಬರದ ಕೋಟಿ ಗಟ್ಟಲೆ ಹಣ ವಿನಿಯೋಗಕ್ಕೆ ತಡೆಯೊಡ್ಡಿ, ಸಮುದಾಯದ ಶ್ರೀಮಂತಿಕೆ ಮಾಡಬೇಕು. ವಿಪರೀತ ದುಡ್ಡು ವ್ಯಯಿಸುವುದಕ್ಕಿಂತ ಬಡವರ, ರೋಗಿಗಳ ಸೇವೆಗೆ ತನ್ನ ಹಣ ವ್ಯಯಿಸಿರಿ. ಆರೋಗ್ಯದಾನ ಕ್ಕಿಂತ ದೇವಸ್ಥಾನ ಮತ್ತೊಂದಿಲ್ಲ. ದಾನದ ಬಾಬ್ತಿ ನಿಮ್ಮವರ ಹಿಂದುಳಿದವರಿಗೆ ನೀಡಿ. ಸಮಾಜ ಸೇವೆಯಿಂದ ಧನ್ಯರೆಣಿಸಿ. ಆವಾಗಲೇ ಸಮಗ್ರ ಸಮಾಜ ಬಲವಾಗುತ್ತದೆ ಎಂದರು.

ಆನಂದ ಶೆಟ್ಟಿ ಮಾತನಾಡಿ ಸಮಾಜದಲ್ಲಿ ವಿವಿಧ ವರ್ಗದ ಜನತೆ ಇರುತ್ತಾರೆ. ಹಲವಾರು ವಿಮರ್ಶೆ, ಅಡೆತಡೆ, ಮಾಡುತ್ತಾರೆ. ಅದನ್ನೆಲ್ಲಾ ಮನಸ್ಸಿಗೆ ಸೇರಿಸಿಕೊಳ್ಳದೆ ಸಮಾಜದ ಹಿತಕ್ಕಾಗಿ ಶ್ರಮಿಸಬೇಕು. ಸಮಾಜ ಸೇವೆಗೆ ಸ್ಪರ್ಧೆ ಎನ್ನುವುದಿಲ್ಲ. ಸೇವೆಯಲ್ಲಿ ತಮ್ಮನ್ನು ತಾವೇ ಸ್ಪರ್ಧಿಗಳಾದರೆ ಸೇವೆ ಫಲಾನುಭವಗೊಳ್ಳುವುದು. ದೂರದೃಷ್ಟಿವುಳ್ಳವರೇ ಧೈರ್ಯವಂತರು. ಸಮಾಜದ ಪ್ರೀತಿಯ ಕಣ್ಣಣಿಗಳಾಗುತ್ತಾರೆ. ಅವರಲ್ಲಿ ಐಕಳ ಹರೀಶ್ ಶೆಟ್ಟಿ ಓರ್ವರು ಎಂದರು.

ಬದಲಾಗುತ್ತಿರುವ ಕಾಲಕ್ಕೆ ನಾವೂ ಬದಲಾಗಬೇಕು. ಪೂರ್ವಜರ ಆದರ್ಶ, ಹೇಳಿಕೆಗಳಂತೆ ನಾವೂ ಇಂದು ಬದಲಾಗಿ ಸಾಧಕರಾಗಿ ಮೆರೆಯುತ್ತಿದ್ದೇವೆ. ಸಮಗ್ರ ಬಂಟ ಕಾರ್ಯಕರ್ತರ ಶ್ರಮವೇ ಈ ಸಮ್ಮೇಳನ. ನ್ಯಾಯಕ್ಕಾಗಿ ಬದುಕುವುದು ಬಂಟರು. ನಮ್ಮ ಸಾಧನೆ ಭಾವೀ ಜನಾಂಗಕ್ಕೆ ಮಾದರಿ ಆಗಲಿ ಎಂದು ಅಜಿತ್‍ಕುಮಾರ್ ತಿಳಿಸಿದರು.

ಈ ಸಮ್ಮೇಳನ ಬಂಟ ಜೀವನ ರೂಪಿಸಲು ರೂಪಿಸಿದ ಸಂಘಟನೆ. ಬಂಟರ ಸ್ವಾಭಿಮಾನ ಸಾರುವ ಕಾರ್ಯಕ್ರಮವಾಗಿದೆ. ಈ ಮೂಲಕ ನನ್ನ ಜೀವನ ಸಾರ್ಥಕ ಆದಂತಾಗಿದೆ. ಬಂಟರದ್ದು ಹಿರಿಯರು ಕಟ್ಟಿದ ಸಮಾಜ ಆಗಿದ್ದು ಯಾರಿಗೂ ತಲೆ ಬಾಗಿಸಿದ ಸಮಾಜವಲ್ಲ. ನಾಯಕತ್ವ ಅನ್ನುವುದು ಬಂಟರ ವಿಶೇಷಶಕ್ತಿ ಆಗಿದೆ. ಇದು ಬರೇ ಸಮ್ಮೇಳನವಲ್ಲ ಸಂಘಟನೆಯಾಗಿ ಬೆಳೆಯಬೇಕು ಮತ್ತು ಸಮುದಾಯವನ್ನು ಶಕ್ತಿಯುತ ಸಮಾಜವನ್ನಾಗಿಸಬೇಕು ಎನ್ನುವ ಧ್ಯೇಯೋದ್ದೇಶದಿಂದ ಹಮ್ಮಿಕೊಂಡಿದ್ದೇವೆ. ಸಮಾಜವನ್ನು ಮುನ್ನಡೆಸುವ ತಾಕತ್ತು ಇದ್ದರೆ ಮಾತ್ರ ನಾವು ಅಧ್ಯಕ್ಷರಾಗಿ ಸೇವಾ ನಿರತರಾಗಬೇಕು. ನಮ್ಮಲ್ಲಿನ ಬಡತನ ನಿರ್ಮೂಲನವೇ ನಮ್ಮ ಉದ್ದೇಶವಾಗಿದೆ. ಅದಕ್ಕಾಗಿ ಸಾಂಘಿಕವಾಗಿ ಮುನ್ನಡೆಯೋಣ ಎಂದು ಅಧ್ಯಕ್ಷೀಯ ಭಾಷಣವನ್ನುದ್ದೇಶಿಸಿ ಐಕಳ ಹರೀಶ್ ನುಡಿದರು.

ಸಾಯಿರಾಜ್ ಹೆರಿಟೇಜ್‍ನ ಮನೋಹರ್ ಎಸ್.ಶೆಟ್ಟಿ ಅವರ ಕನಸಿನ ಬೃಹತ್ ಸಾಂಪ್ರದಾಯಿಕ ಗುತ್ತುಮನೆ ಸಾರುವ ಭವ್ಯ ವೇದಿಕೆ ಸಮ್ಮೇಳನದ ಆಕರ್ಷಣೆ ಆಗಿತ್ತು. ನಾಲ್ಕು ಪ್ರಮುಖ ಬಂಟ ಮನೆತನಗಳಾದ ಶಾನಾಡಿಗುತ್ತು, ಹಳ್ಳಿಜೆಡ್ಡುಗುತ್ತು, ಅಲ್ತಾರ್‍ಮನೆ,ಕಟ್ಟಿನಮಕ್ಕಿ ಮನೆಗಳನ್ನಾಧಾರಿಸಿ ಸುಮಾರು 15 ವರ್ಷಗಳ ಅವಿರತ ಶ್ರಮ, ಸಂಗ್ರಹಣೆಯೊಂದಿಗೆ ಡಾ| ಗೋಪಾಲ ಆಚಾರ್ಯ ಸಿದ್ಧಪಡಿಸಿದ ಗುತ್ತುಮನೆ ವೇದಿಕೆಯು ನಾಗಜಿಡೆ ಕೆತ್ತನೆಯೊಂದಿಗೆ ಬೇಲೂರುನ ಶ್ರೀ ವೀರಭದ್ರೆಶ್ವರ ದೇವಾಲಯದ ರಚನೆಯಲ್ಲಿತ್ತು. ವೇದಿಕೆಯು ಮರಗಳ ಕೆತ್ತನೆಯ ಕಂಬಗಳಿಂದ ಸುತ್ತುವರಿದಿದ್ದು, ಅಕ್ಕಿಮುಡಿ, ಢಮರು, ಲಾಟೇನ್ ದೀಪ, ಮಹಾಗಣಪತಿಯ ವಿಗ್ರಹದೊಂದಿಗೆ ಕಂಗೋಳಿಸುತ್ತಿತ್ತು. ದೇವಸ್ಥಾನದ ಬದಿಯಲ್ಲಿನ ಸಾಂಪ್ರದಾಯಿಕ ಲಾಟನೆವುಳ್ಳ ಬಾವಿ, ಬತ್ತದ ಕಣಜ, ಬುಲ್ಲ್ ಮಸ್ತ್ರೀಫ್ ತಳಿಯ ಕ್ರಾಮ್ ನಾಮದ ಶ್ವಾನ, ಸೌರಾಷ್ಟ್ರ ತಳಿಯ ಶ್ರದ್ಧಾ ಹೆಸರಿನ ಆಕಳು ಮತ್ತು ಭಿಮಾ ಹಾಗೂ ಪೂಜಾ ಕರುಗಳು ಒಂದೆಡೆ ಹಟ್ಟಿಯಲ್ಲಿದ್ದು ಹುಲ್ಲು ತಿನ್ನುತ್ತಾ ಇದ್ದರೆ, ಮೂಡಬಿದ್ರೆ ಕರಿಂಜೆಯ ವಿನೂ ವಿಶ್ವನಾಥ ಶೆಟ್ಟಿ ಅವರ ಓಟದ ಕೋಣಗಳು ಸಮ್ಮೇಳನದ ಆಕರ್ಷಣೀಯ ಕೇಂದ್ರವಾದವು. ಆವರಣದ ಉದ್ದಕ್ಕೂ ಕಟ್ಟಿಟ್ಟ ಅಂಕದ ಕೋಳಿಗಳು ಕೆಲವರ ಕಣ್ಣಿಗೆ ಮುದನೀಡಿದವು. ಹಳೇ ಕಾಲದ ವೈಭವದ ಫಿಯೇಟ್ 1100 ಮತ್ತು ಮೊರ್ರಿಸ್ ಕಾರುಗಳು ಮನಾಕರ್ಷಕವಾಗಿದ್ದವು. ಭೂತಾರಧಾನೆಯ ಬೃಹದಾಕಾರದ ಲೋಹಗಳಿಂದ ಮಿಂಚುವ ಸೃಷ್ಠಿ, ಉಡುಪಿಯ ಆರು ಬಂಟ ಪತ್ರಕರ್ತರ ಮುಂದಾಳುತ್ವದಲ್ಲಿ ಸಿದ್ಧಗೊಂಡ ಬಂಟಸೌರಭ ಸ್ಮರಣಿಕೆಯು ವಾದ್ಯ ಘೋಷಗಳ ನೀನಾದ, ಅಗೋಳಿ ಮಂಜಣ್ಣನ ಯಜಮಾನತ್ವದಲ್ಲಿ ಮಯೂರವಾಹನದಲ್ಲಿ ವೇದಿಕೆ ಸೇರಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿತು. ಧರ್ಮಶಾಸ್ತ ಚೆಂಡೆ ಬಳಗ ಮತ್ತು ಪ್ರಕಾಶ್ ದೇವಾಡಿಗ ಬಳಗದ ಕೊಂಬುಗಳ ಹಾಗೂ ಕಳತ್ತೂರು ಕುಮಾರ ತಂಡದ ಡೋಲುಗಳ ಸದ್ದುಗದ್ದಲ ಅಬ್ಬರದೊಂದಿಗೆ ಉಡುಪಿಗೆ ಉಡುಪೀಯೇ ರಂಗೇರಿತು. ಅಂತೂ ದಿನಾವಿಡೀ ಜನಸಾಗರದಲ್ಲಿ (ಪೆÇೀಪೆರ್ ಬರ್ಪೆರ್ ನುಡಿಯಂತೆ) ಜನರು ಆಗಮಿಸಿ ನಿರ್ಗಮಿಸುತ್ತಾ ಬಂಟ ಸಮ್ಮೇಳನಕ್ಕೆ ಕಳೆತಂದರು.

ಆದಿಯಲ್ಲಿ ಬಂಟರ ಸಂಘಗಳ ಒಕ್ಕೂಟದ ಕಾನೂನು ಸಲಹಾಗಾರ ನ್ಯಾ| ಕೆ. ಪ್ರಥಿü್ವರಾಜ್ ರೈ, ಲೆಕ್ಕಪರಿಶೋಧಕ ಸಿಎ| ದಯಾ ಶರಣ್ ಶೆಟ್ಟಿ ವೇದಿಕೆಯಲ್ಲಿದ್ದು, ಬಂಟಗೀತೆಯೊಂದಿಗೆ ಸಮಾರಂಭ ಆರಂಭಗೊಂಡಿತು. ಸುರೇಶ್ ಶೆಟ್ಟಿ ಶಿಬರೂರು, ಮುಂಬಯಿ ಪ್ರಾರ್ಥನೆಯನ್ನಾಡಿದರು. ಜೊತೆ ಕಾರ್ಯದರ್ಶಿ ಜಯಕರ್ ಶೆಟ್ಟಿ ಇಂದ್ರಾಳಿ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ವಿಜಯಪ್ರಸಾದ್ ಆಳ್ವ ಪ್ರಸ್ತಾವಿಕ ನುಡಿಗಳನ್ನಾಡಿದರು. ಡಾ| ರೋಶನ್ ಕುಮಾರ್ ಶೆಟ್ಟಿ, ನವನೀತ ಶೆಟ್ಟಿ ಕದ್ರಿ ಮತ್ತು ಅಶೋಕ್ ಪಕ್ಕಳ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಅಧ್ಯಕ್ಷ ಐಕಳ ಹರೀಶ್ ಮತ್ತು ಪದಾಧಿಕಾರಿಗಳು ಅತಿಥಿüಗಳಿಗೆ ಪುಷ್ಫಗುಪ್ಚ, ಸ್ಮರಣಿಗಳನ್ನೀಡಿ ಗೌರವಿಸಿದರು. ಗೌರವ ಕೋಶಾಧಿಕಾರಿ ಕೊಲ್ಲಾಡಿ ಬಾಲಕೃಷ್ಣ ರೈ ವಂದನಾರ್ಪಣೆಗೈದರು. ಬಂಟರ ಸಂಘ ಜಪ್ಪಿನಮೊಗರು ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತ ಪಡಿಸಿದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here