Thursday 25th, April 2024
canara news

ಬಿಲ್ಲವರ ಅಸೋಸಿಯೇಶನ್‍ನಿಂದ ವಿದ್ಯಾಥಿರ್s ವೇತನ-ಪ್ರತಿಭಾ ಪುರಸ್ಕಾರ-ಶೈಕ್ಷಣಿಕ ದತ್ತು ಸ್ವೀಕಾರ

Published On : 09 Sep 2018   |  Reported By : Ronida Mumbai


ಮನುಷ್ಯತ್ವ, ನಂಬಿಕೆ, ಗೌರವ, ಆತ್ಮವಿಶ್ವಾಸದಿಂದ ಸಾಧನೆ ಸಿದ್ಧಿಯಾಗಬೇಕು: ಸತೀಶ್ ಪೂಜಾರಿ

(ಚಿತ್ರ / ವರದಿ : ರೊನಿಡಾ ಮುಂಬಯಿ)


ಮುಂಬಯಿ, ಸೆ.08: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಆಯೋಜಿಸಿದ್ದ ವಾರ್ಷಿಕ ವಿದ್ಯಾಥಿರ್s ವೇತನ, ಪ್ರತಿಭಾ ಪುರಸ್ಕಾರ ಮತ್ತು ಶೈಕ್ಷಣಿಕ ದತ್ತು ಸ್ವೀಕಾರ ಕಾರ್ಯಕ್ರಮವು ಇಂದಿಲ್ಲಿ ಶನಿವಾರ ಸಂಜೆ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದ ಶ್ರೀನಾರಾಯಣ ಗುರು ಸಭಾಗೃಹದಲ್ಲಿ ನೇರವೇರಿತು.

ಅಸೋಸಿಯೇಶನ್‍ನ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಕಾರ್ಯಕ್ರಮವನ್ನು. ಮುಖ್ಯ ಅತಿಥಿüಯಾಗಿ ಕೈಗರಿಕೋದ್ಯಮಿ ಸತೀಶ್ ಹೆಚ್.ಪೂಜಾರಿ, ಗೌರವ ಅತಿಥಿsಯಾಗಿ ಭಾರತ್ ಬ್ಯಾಂಕ್ ನಿರ್ದೇಶಕ ಭಾಸ್ಕರ ಎಂ.ಸಾಲ್ಯಾನ್ ಉಪಸ್ಥಿತರಿದ್ದರು.

ಸತೀಶ್ ಪೂಜಾರಿ ಮಾತನಾಡಿ ನಾವೂ ಯಾವ ಕ್ಷೇತ್ರವನ್ನು ಆಯ್ಕೆ ಮಾಡುತ್ತೇವೆ ಅದೇ ಕ್ಷೇತ್ರದಲ್ಲಿ ನಾವೂ ಸಾಧನೆ ಮಾಡಬೇಕು. ಮನುಷ್ಯತ್ವ, ನಂಬಿಕೆ, ಗೌರವ, ಆತ್ಮವಿಶ್ವಾಸವನ್ನು ಅಳವಡಿಸಬೇಕು. ಇದೆಲ್ಲಾ ನಮ್ಮಲ್ಲಿ ಅಳವಡಿಸಿದಾಗ ನಾವೂ ನಮ್ಮ ಗುರಿಯನ್ನು ಸಾಧಿಸಲು ಅನುಕೂಲವಾಗುತ್ತದೆ. ಹಣದ ಹಿಂದೆ ಹೋಗುವುದಕ್ಕಿಂತ ಜ್ಞಾನ ಸಂಪಾದನೆ ಆದರೆ ಎಲ್ಲವೂ ದೊರಕಿದಂತೆ. ಸರಸ್ವತಿಯನ್ನು ಪೂಜಿಸಿದರೆ ಲಕ್ಷ್ಮೀ ಪ್ರಸಿದ್ಧಿಯಾಗುವುದು ಎಂದರು.

ಮಕ್ಕಳ ಭವಿಷ್ಯ ರೂಪಿಸುವ ಅರ್ಥಪೂರ್ಣ ಕಾರ್ಯಕ್ರಮ. ನಮ್ಮ ಕಾಲದಲ್ಲಿ ನಮಗೆ ಯಾವ ಸೌಕರ್ಯ, ಯಾರ ಬೆಂಬಲ ಇರಲಿಲ್ಲ. ನಾವೂ ಬಹಳಷ್ಟು ಕಷ್ಟಪಟ್ಟು ಮುಂದೆ ಬಂದಿದ್ದೇವೆ. ಆದರೆ ಈಗ ಎಲ್ಲಾ ತರದ ಸೌಲಭ್ಯಗಳು ಲಭ್ಯವಾಗಿವೆ. ಆದರ ಸದುಪಯೋಗ ಪಡೆಯಬೇಕು. ಅಸೋಸಿಯೇಶನ್‍ನ ಎಲ್ಲಾ 22 ಸ್ಥಳೀಯ ಕಛೇರಿಗಳಲ್ಲಿಯೂ ಮಕ್ಕಳಿಗೆ ಅನುಕೂಲವಾಗುವಂತಹ ಸಹಾಯ ಲಭ್ಯವಿದೆ. ಸಾಧನೆ ಮಾಡುವ ಗುರಿಯನ್ನು ವಿದ್ಯಾಥಿರ್sಗಳು ಮೈಗೂಡಿಸಬೇಕು ಎಂದÀು ಭಾಸ್ಕರ ಎಂ.ಸಾಲ್ಯಾನ್ ತಿಳಿಸಿದರು.

ಉಪಾಧ್ಯಕ್ಷÀ ಹರೀಶ್ ಜಿ.ಅವಿೂನ್ ಮಾತನಾಡಿ ಬಿಲ್ಲವರ ಅಸೋಸಿಯೇಶನ್ ಇಂತಹ ಶೈಕ್ಷಣಿಕ ನೆರವು ನೀಡುತ್ತಿರುವುದು ವಿದ್ಯಾಥಿರ್sಗಳಿಗೆ ಬಹಳಷ್ಟು ಉಪಾಯವಾಗಿದೆ. ನಾವೂ ತುಂಬಾ ಪರಿಶ್ರಮಪಟ್ಟು ಈ ಮಟ್ಟಕ್ಕೆ ಬಂದಿದ್ದೇವೆ. ಸಾಧನೆ ಗುರಿ ನಮ್ಮದಾಗಬೇಕು. ಸಹಾಯಹಸ್ತ ಸದುಪಯೋಗ ಒಳ್ಳೆಯ ರೀತಿಯಲ್ಲಿ ಆಗಬೇಕು. ಪರಿಶ್ರಮ, ಸಮರ್ಪಣೆ ನಿಮ್ಮದಾಗಬೇಕು. ಆವಾಗಲೇ ಜೀವನದಲ್ಲಿ ಸಾಧನೆ ಸಿದ್ಧಿಯಾಗುವುದು ಎಂದು ನುಡಿದರು.

ಜಯ ಸುವರ್ಣ ಅವರ ಮಾರ್ಗದರ್ಶನದಿಂದ ಬಿಲ್ಲವರ ಅಸೋಶಿಯೇಶನ್ ಶೈಕ್ಷಣಿಕ ಕ್ಷೇತ್ರದಲ್ಲಿ ಸಮಾಜದ ಮಕ್ಕಳಿಗೆ ಸಹಾಯ ನೀಡುತ್ತದೆ. ಸುಮಾರು ಮಕ್ಕಳು ಇವತ್ತು ಸಿಎ, ಇಂಜಿನಿಯರಿಂಗ್, ಡಾಕ್ಟರ್ ಸೇರಿದಂತೆ ಅನೀಕ ಒಳ್ಳೆಯ ಹುದ್ದೆಗಳನ್ನು ಅಲಂಕರಿಸಿಕೊಂಡಿದ್ದಾರೆ. ಈ ಅಸೋಸಿಯೇಶನ್‍ನಿಂದ ಸಹಾಯ ಪಡೆದು ಸಾಧನೆ ಮಾಡಿದ ಎಲ್ಲಾ ವಿದ್ಯಾಥಿರ್sಗಳು ಮುಂದಿನ ಪೀಳಿಗೆಗೆ ಸಹಾಯ ಮಾಡಬೇಕು. ಐಕ್ಯತೆ ಮತ್ತು ಒಗ್ಗಟ್ಟು ನಮ್ಮೆಲಿರಬೇಕು. ಅಸೋಸಿಯೇಶನ್‍ನ ಮೇಲೆ ಪ್ರೀತಿ ಇರಬೇಕು. ಎಲ್ಲಾ ಮಕ್ಕಳು ಬಿಲ್ಲವರ ಅಸೋಸಿಯೇಶನ್‍ನ ಸದಸ್ಯರಾಗಬೇಕು ಎಂದÀು ಅಧ್ಯಕ್ಷೀಯ ಭಾಷ್ಣವನ್ನುದ್ದೇಶಿಸಿ ಚಂದ್ರಶೇಖರ ಪೂಜಾರಿ ತಿಳಿಸಿದರು.

ಅಸೋಸಿಯೇಶನ್‍ನ ಉಪಾಧ್ಯಕ್ಷÀ ಶಂಕರ ಡಿ.ಪೂಜಾರಿ, ಗೌರವ ಪ್ರಧಾನ ಕೋಶಾಧಿಕಾರಿ ರಾಜೇಶ್ ಜೆ.ಬಂಗೇರ, ಮಹಿಳಾ ವಿಭಾಗಧ್ಯಕ್ಷೆ ಜಯಂತಿ ವಿ.ಉಳ್ಳಾಲ್ ವೇದಿಕೆಯಲ್ಲಿ ಆಸೀನರಾಗಿದ್ದರು.

ಇದೇ ಸಂದರ್ಭದಲ್ಲಿ ಬಂಟ್ಸ್ ಸಂಘದ ಎಸ್.ಎಂ ಶೆಟ್ಟಿ ಕಾಲೇಜ್ ಪೆÇವಾಯಿ ಇದರ ಪ್ರಾಂಶುಪಾಲ ಡಾ| ಶ್ರೀಧರ್ ಶೆಟ್ಟಿ ಅವರು ವಿದ್ಯಾಥಿರ್üಗಳ ಸರ್ವತೋಮುಖ ಏಳಿಗೆಗಾಗಿ ಸ್ವಜ್ಞಾನೋಭಿವೃದ್ಧಿ (Seಟಜಿ ಂತಿಚಿಡಿeಟಿess ಚಿಟಿಜ ಆeveಟoಠಿmeಟಿಣ) ವಿಚಾರಿತ ದಿಕ್ಸೂಚಿ ವಿಷಯದಲ್ಲಿ ಉಪನ್ಯಾಸ ನೀಡಿದರು.

ಲೇಖಾ ಸುವರ್ಣ ಪ್ರಾರ್ಥನೆಯನ್ನಾಡಿದರು. ವಿದ್ಯಾ ಉಪಸಮಿತಿ ಕಾರ್ಯಾಧ್ಯಕ್ಷ ವಿಶ್ವನಾಥ್ ತೋನ್ಸೆ ಸ್ವಾಗತಿಸಿದರು. ಅಸೋಸಿಯೇಶನ್‍ನ ಗೌರವ ಪ್ರಧಾನ ಕಾರ್ಯದರ್ಶಿ ಧನಂಜಯ ಎಸ್.ಕೋಟ್ಯಾನ್ ಪ್ರಸ್ತಾವಿಕ ನುಡಿಗಳ£ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾ ಸಮಿತಿ ಗೌರವ ಕಾರ್ಯದರ್ಶಿ ಹರೀಶ್ ಜಿ. ಸಾಲ್ಯಾನ್ ವಂದನಾರ್ಪಣೆಗೈದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here