Wednesday 24th, April 2024
canara news

ದ.ಕ. ಜಿಲ್ಲಾ ಪ್ರೌಢಶಾಲಾ ಹಿಂದಿ ಭಾಷಾ ಶಿಕ್ಷಕರ ಶೈಕ್ಷಣಿಕ ಸಮಾವೇಶ ಹಾಗೂ ಹಿಂದಿ ದಿವಸ ಕಾರ್ಯಕ್ರಮ

Published On : 15 Sep 2018   |  Reported By : rayee rajkumar


ಬಿ.ಸಿ.ರೋಡ್: ಕರ್ನಾಟಕ ರಾಜ್ಯ ಪ್ರೌಢಶಾಲಾ ಹಿಂದಿ ಭಾಷಾ ಶಿಕ್ಷಕರ ಶೈಕ್ಷಣಿಕ ಸಮಾವೇಶ ಹಾಗೂ ಹಿಂದಿ ದಿವಸ ಕಾರ್ಯಕ್ರಮವು ಬಿ.ಸಿರೋಡ್ ನ ಲಯನ್ ಸೇವಾ ಭವನದಲ್ಲಿ ಸಪ್ಟಂಬರ್ 14 ರಂದು ನಡೆಯಿತು. ಮಂಗಳೂರು ಕಾರ್ಪೋರೇಶನ್ ಬೇಂಕಿನ ಹಿಂದಿ ವಿಭಾಗದ ಪ್ರಬಂಧಕ ರವಿಶಂಕರ್ ವಾರಣಾಸಿ ರವರು ದೀಪ ಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಹಿಂದಿಯ ಮಹಾನತೆಯ ಬಗೆಗೆ ತಿಳಿಸಿ, ರಾಷ್ಟ್ರಭಾಷೆಯಾಗಿ ರಾಜಭಾಷೆ ಹಿಂದಿಯನ್ನು ಬೆಂಬಲಿಸುವ ಅಗತ್ಯತೆಯನ್ನು ತಿಳಿಸಿಕೊಟ್ಟರು. ಹಿಂದಿ ಭಾಷೆ ಹಾಗೂ ಸಂಸ್ಕøತಿ ಪ್ರತಿಯೊಬ್ಬ ಭಾರತೀಯನಲ್ಲಿ ಹೇಗೆ ಹಾಸುಹೊಕ್ಕಾಗಿದೆ ಎನ್ನುವುದನ್ನೂ ತಮ್ಮ ಮುಖ್ಯ ಭಾಷಣದಲ್ಲಿ ವಿವರಿಸಿದರು.

ಈ ವರ್ಷ ನಿವೃತ್ತರಾದ ಪುತ್ತೂರಿನ ಶ್ರೀಮತಿ ಮಾಲತಿಯವರನ್ನು ಶಾಲು ಹೊದಿಸಿ, ಸ್ಮರಣಿಕೆ, ಫಲ ತಾಬೂಲವನ್ನಿತ್ತು ಸನ್ಮಾನಿಸಲಾಯಿತು. ಅದೇ ರೀತಿ ಈ ವರ್ಷ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಬೆಳ್ತಂಗಡಿ ತಾಲ್ಲೂಕು ನಾರಾವಿಯ ಗೋಪಾಲಕೃಷ್ಣ ತುಳುಪುಲೆ, ಹಾಗೂ ಮೂಡುಬಿದಿರೆ ತಾಲ್ಲೂಕಿನ ಪ್ರಾಂತ್ಯದ ಬಾಲಕೃಷ್ಣ ರೇಖ್ಯರನ್ನು ಶಾಲು ಹೊದಿಸಿ, ಫಲ ತಾಂಬೂಲ, ಸ್ಮರಣಿಕೆ ನೀಡಿ ಸಂಮಾನಿಸಲಾಯಿತು. ತರುವಾಯ ವಿವಿಧ ತಾಲ್ಲೂಕಿನಲ್ಲಿ ಹಿಂದಿ ವಿಷಯದಲ್ಲಿ ನೂರು ಶೇಕಡಾ ಫಲಿತಾಂಶ ಪಡೆದ ಶಾಲೆಯ ಶಿಕ್ಷಕರನ್ನು ಗೌರವಿಸಲಾಯಿತು. ಆಗಮಿಸಿದ ಎಲ್ಲಾ ಅತಿಥಿಗಳಿಗೆ, ಶಿಕ್ಷಕರಿಗೆ ಮಂಗಳೂರು ಭೀಮಾ ಜುವೆಲ್ಲರ್ಸ್ ನವರು ಬ್ಯಾಗ್ ನ್ನು ಹಾಗೂ ಸ್ಕೂಲ್ ಬುಕ್ ಕಂಪನಿಯವರು ಪುಸ್ತಕ, ಪೆನ್ ವಿತರಿಸಿದರು.

ಮಧ್ಯಾಹ್ನದ ಕಾರ್ಯಕ್ರಮದಲ್ಲಿ ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಕೆ.ಎಸ್.ರಾಮಕೃಷ್ಣ ರವರು ಹಿಂದಿ ವ್ಯಾಕರಣ ವಿಷಯದ ಸುಲಭ ಕಲಿಕಾ ವಿಧಾನದ ಬಗೆಗೆ ಉಪನ್ಯಾಸ ಇತ್ತರು. ವೇದಿಕೆಯಲ್ಲಿ ಬಂಟ್ವಾಳ ಲಯನ್ಸ್ ಕ್ಲಬ್ ನ ಕಾರ್ಯದರ್ಶಿ ರಾಮಯ್ಯ ಶೆಟ್ಟಿಯವರು, ಹಿಂದಿ ಭಾಷಾ ಶಿಕ್ಷಕರ ಸಂಘದ ದ.ಕ.ಜಿಲ್ಲಾ ಶಾಖೆಯ ಅಧ್ಯಕ್ಷ ರಾಯೀ ರಾಜ ಕುಮಾರರು ಅಧ್ಯಕ್ಷತೆ ವಹಿಸಿದ್ದು ಎಲ್ಲರನ್ನೂ ಸ್ವಾಗತಿಸಿದರು. ಎಲ್ಲಾ ತಾಲ್ಲೂಕಿನ ಅಧ್ಯಕ್ಷರು ಅಧ್ಯಾಪಕರ ಪಟ್ಟಿಯನ್ನು ಓದಿದರು. ರಾಜ್ಯ ಸಂಘzಲ್ಲಿ ದ.ಕ. ಜಿಲ್ಲಾ ಪ್ರತಿನಿಧಿ ಶ್ರೀಮತಿ ಗೀತಾ ಕುಮಾರಿಯವರು ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಅನಿಲ್ ಕುಮಾರ್ ಒಡಗೇರಿ ವಂದಿಸಿದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here