Thursday 28th, March 2024
canara news

ಸೆ.28: ಬಂಟರ ಭವನದ ಅನೆಕ್ಸ್ ಕಿರು ಸಭಾಗೃಹದಲ್ಲಿ ಭಾರತ ಭಾರತಿ ಸ್ನೇಹ ಸಮ್ಮೀಲನದ ಪೂರ್ವಭಾವಿ ಸಭೆ

Published On : 25 Sep 2018   |  Reported By : Rons Bantwal


ಮುಂಬಯಿ, ಸೆ.26: ಇದೇ ನವೆಂಬರ್. 18ರಂದು ದಿನಪೂರ್ತಿಯಾಗಿಸಿ ಮುಂಬಯಿಯಲ್ಲಿ ಸಮಗ್ರ ತುಳು ಕನ್ನಡಿಗರ ಸಂಘ ಸಂಸ್ಥೆಗಳ ವೇದಿಕೆಯಡಿಯಲ್ಲಿ ಭೇದಭಾವ ತೊಲಗಲಿ... ಹಿಂದು ಭಾವ ಮೊಳಗಲಿ ಎನ್ನುವ ಧ್ಯೇಯೋದ್ದೇಶದಿಂದ ಆಯೋಜಿಸಲಾಗಿರುವ ಭಾರತ ಭಾರತಿ ಕರ್ನಾಟಕ ಕೌಟುಂಬಿಕ ಸ್ನೇಹ ಸಮ್ಮೀಲನದ ಪೂರ್ವ ತಯಾರಿಯಾಗಿ ಸಭೆಯೊಂದನ್ನು ಇದೇ ಸೆ.28ನೇ ಶುಕ್ರವಾರ ಅಪರಾಹ್ನ 2.30 ಗಂಟೆಗೆ ಕುರ್ಲಾ ಪೂರ್ವದ ಬಂಟರ ಭವನದ ಅನೆಕ್ಸ್ ಕಿರು ಸಭಾಗೃಹದಲ್ಲಿ ಹಮ್ಮಿಕೊಳ್ಳಲಾಗಿದೆ.

ಆ ನಿಮಿತ್ತ ಭಾರತ ರಾಷ್ಟ್ರದ ಭಾವಕ್ಯತೆ ಸಾರುವ ಈ ಸಭೆಯಲ್ಲಿ ಮಹಾನಗರ ಮುಂಬಯಿ ಅಲ್ಲಿನ ಸಮಗ್ರ ಜನತೆ ಜಾತಿ ಮತ ಬೇಧವಿಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಭೆಯನ್ನು ಯಶಸ್ವಿ ಗೊಳಿಸುವಂತೆ ಮುಂಬಯಿ ಸಮಿತಿ ಗೌರವಾಧ್ಯಕ್ಷ ತೋನ್ಸೆ ಆನಂದ್ ಎಂ.ಶೆಟ್ಟಿ, ಅಧ್ಯಕ್ಷ ಸುರೇಶ್ ಶೆಟ್ಟಿ ಗುರ್ಮೆ, ಗೌರವ ಪ್ರಧಾನ ಕಾರ್ಯದರ್ಶಿ ಮುಂಡ್ಕೂರು ಸುರೇಂದ್ರಸಾಲ್ಯಾನ್, ಗೌರವ ಕೋಶಾಧಿಕಾರಿ ಶಿವಾನಂದ ಪೈ, ಸಂಚಾಲಕರಾದ ಕಡಂದಲೆ ಸುರೇಶ್ ಎಸ್.ಭಂಡಾರಿ ಮತ್ತು ಬಾಲಕೃಷ್ಣ ಪಿ.ಭಂಡಾರಿ ಈ ಮೂಲಕ ತಿಳಿಸಿದ್ದಾರೆ.

 

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here