Thursday 25th, April 2024
canara news

ಬಂಟ್ಸ್ ಅನೆಕ್ಸ್ ಸಭಾಗೃಹದಲ್ಲಿ ಜರುಗಿದ ಬಂಟ್ಸ್ ನ್ಯಾಯ ಮಂಡಳಿ 18ನೇ ಮಹಾಸಭೆ

Published On : 26 Sep 2018   |  Reported By : Rons Bantwal


ವ್ಯಾಜ್ಯಗಳನ್ನು ಸೌಜನ್ಯತೆಯಿಂದ ಬಗೆಹರಿಸಿದ ಅಭಿಮಾನವಿದೆ : ರವೀಂದ್ರ ಅರಸ
(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)

ಮುಂಬಯಿ, ಸೆ.26: ಸಮಾಜದಲ್ಲಿ ಅನೇಕತೆಗಳ ಮನೋಭಾವವುಳ್ಳ ಜನರಿದ್ದಾರೆ. ನ್ಯಾಯ ಮಂಡಳಿಯನ್ನು ಹರಸಿ ಬಂದ ಬಂಟರ ವ್ಯಾಜ್ಯಗಳನ್ನು ಸೌಜನ್ಯತೆಯಿಂದ ಸೂಕ್ತವಾಗಿ ಇತ್ಯರ್ಥಗೊಳಿಸಿ ಖಾಯಂ ಪರಿಹಾರ ನೀಡಿದ ಅಭಿಮಾನ ನಮಗಿದೆ. ನ್ಯಾಯ ಮಂಡಳಿಯ ಪ್ರತೀಯೋರ್ವರ ಸಹಯೋಗದಿಂದ ಇದು ಸಾಧ್ಯವಾಗಿದೆ. ಸುಮಾರು ಒಂದುವರೆ ದಶಕದಿಂದ ನಾವು ಅನೇಕ ಸಮಸ್ಯೆಗಳನ್ನು ಸೌಹಾರ್ದತೆಯಿಂದ ಬಗೆಹರಿಸಿದ್ದೇವೆ. ಆ ಮೂಲಕ ಮಂಡಳಿಯ ಸೇವೆ ಸಾರ್ಥಕವಾಗಿದೆ ಅನ್ನುವ ತೃಪ್ತಿ ನಮಗಿದೆ. ಇನ್ನೂ ಪ್ರಯತ್ನವನ್ನು ಮುನ್ನಡೆಸುವೆವು. ಸರ್ವರ ಸಮಸ್ಯೆಗಳನ್ನೂ ಸಮಾನತೆಯಿಂದ ಆಳಿಸಿ ಸಮಪಾಲು ಸಮಬಾಳು ನೀಡುವ ಪ್ರಯತ್ನ ಮುಂದುವರಿಸುವೆವು. ಭವಿಷ್ಯತ್ತಿನಲ್ಲೂ ಸರ್ವರ ಸಹಕಾರ ಅವಶ್ಯವಾಗಿದ್ದು ಸಮಸ್ಯೆಗಳಿಗೆ ನ್ಯಾಯಸಮ್ಮತವಾಗಿ ದೀರ್ಘಾವಧಿಯ ಸೂಕ್ತ ಪರಿಹಾರ ನೀಡುವಲ್ಲಿ ಕಾರ್ಯಚರಿಸುವೆವು. ಈ ತನಕ ಬಹುತೇಕ ವಿವಾದಗಳನ್ನು ಸೌಹಾರ್ದತೆಯಿಂದ ಬಗೆಹರಿಸಿದ ಆತ್ಮವಿಶ್ವಾಸ ನಮಗಿದೆ ಎಂದು ಬಂಟ್ಸ್ ನ್ಯಾಯ ಮಂಡಳಿ ಕಾರ್ಯಧ್ಯಕ್ಷ ರವೀಂದ್ರ ಎಂ.ಅರಸ ತಿಳಿಸಿದರು.

.

ಇಂದಿಲ್ಲಿ ಸೋಮವಾರ ರಾತ್ರಿ ಕುರ್ಲಾ ಪೂರ್ವದ ಬಂಟರ ಸಂಘದ ಅನೆಕ್ಸ್ ಕಟ್ಟಡದಲ್ಲಿನ ಲತಾ ಪ್ರಭಾಕರ್ ಎಲ್.ಶೆಟ್ಟಿ ಮತ್ತು ಕಬೆಥಿüಗುತ್ತು ಕಶಿ ಸಿದ್ಧು ಶೆಟ್ಟಿ ಸಭಾಗೃಹದಲ್ಲಿ ಬಂಟ್ಸ್ ನ್ಯಾಯ ಮಂಡಳಿ ತನ್ನ 18ನೇ ಮಹಾಸಭೆ ನಡೆಸಿದ್ದು, ಬಂಟ್ಸ್ ಹಿರಿಯ ಮುತ್ಸದ್ಧಿ, ನ್ಯಾಯ ಮಂಡಳಿಯ ಮಾಜಿ ಕಾರ್ಯಧ್ಯಕ್ಷ ಎಂ.ಡಿ ಶೆಟ್ಟಿ ದೀಪ ಬೆಳಗಿಸಿ ಮಹಾಸಭೆಗೆ ಚಾಲನೆಯನ್ನೀಡಿದರು. ಸಭೆಯ ಅಧ್ಯಕ್ಷತೆ ವಹಿಸಿ ಮಂಡಳಿ ಕಾರ್ಯಧ್ಯಕ್ಷ ರವೀಂದ್ರ ಅರಸ ಮಾತನಾಡಿದರು.

ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್.ಪಯ್ಯಡೆ, ಬಾಂಬೇ ಬಂಟ್ಸ್ ಅಸೋಸಿಯೇಶನ್‍ನ ಅಧ್ಯಕ್ಷ ನ್ಯಾಯವಾದಿ ಸುಭಾಷ್ ಬಿ.ಶೆಟ್ಟಿ ಅತಿಥಿüಗಳಾಗಿ ಮತ್ತು ನ್ಯಾಯ ಮಂಡಳಿ ಜೊತೆ ಕಾರ್ಯದರ್ಶಿ ಪಿ.ಧನಂಜಯ ಶೆಟ್ಟಿ ವೇದಿಕೆಯಲ್ಲಿ ಹಾಗೂ ಮಹಾಸಭೆಯಲ್ಲಿ ನ್ಯಾಯ ಮಂಡಳಿ ಕಾರ್ಯಕಾರಿ ಸಮಿತಿ ಸದಸ್ಯರಾದ ಆಶಾ ಎಸ್. ಶೆಟ್ಟಿ, ಜಯ ಎ.ಶೆಟ್ಟಿ, ಎನ್.ಸಿ ಶೆಟ್ಟಿ, ಶ್ಯಾಮ ಎನ್.ಶೆಟ್ಟಿ, ಸಲಹಾ ಮಂಡಳಿ ಸದಸ್ಯರಾದ ಕೃಷ್ಣ ವೈ.ಶೆಟ್ಟಿ, ಆರ್.ಸಿ ಶೆಟ್ಟಿ, ಸಂಜೀವ ಎಂ.ಶೆಟ್ಟಿ, ಸೀತರಾಮ ಎಂ.ಶೆಟ್ಟಿ ಹಾಜರಿದ್ದರು.

ಬಾಲ್ಯವಸ್ಥೆಯಲ್ಲೇ ಅರ್ಧ ಚಡ್ಡಿಯಲ್ಲಿ ಮುಂಬಯಿ ಸೇರಿ ಕರ್ನಾಟಕ ರಾತ್ರಿಶಾಲೆ ಓದಿದ ನಾನು ಇಂದು ಸೂಟ್ ಧರಿಸಿ ಇಂತಹ ಪ್ರತಿಷ್ಠಿತ ವೇದಿಕೆಗಳನ್ನು ಅಲಂಕರಿಸುವಂತಾಗಿದೆ. ನನ್ನ ಮೇಲೆ ಎಲ್ಲರಿಗೂ ಅತೀವ ಮಮತೆಯಿದೆ ಅದೇ ನನ್ನ ಸಂಪಾದನೆ ಮತ್ತು ಆಸಿಯಾಗಿದೆ. ನಾನು ತಿಳಿದು ತಪ್ಪು ಮಾಡಿದ ಅರಿವುನನಗಿಲ್ಲ. ನಾವು ಎಲ್ಲರಿಗೂ ಯೋಗ್ಯರೆಣಿಸಿದಾಗಲೇ ನ್ಯಾಯ ಸಮರ್ಥವಾಗುವುದು. ಈ ನ್ಯಾಯ ಮಂಡಳಿಯಿಂದ ಸಾವಿರಾರು ಸಮಾಜ ಬಂಧುಗಳಿಗೆ ಒಳಿತಾಗಿ ಕೋಟಿಗಟ್ಟಲೆ ಲಾಭವಾಗಿದೆ ಎನ್ನುವುದೇ ಮಂಡಳಿಯ ಹಿರಿಮೆಯಾಗಿದೆ ಎಂದು ಎಂ.ಡಿ ಶೆಟ್ಟಿ ಹರ್ಷವ್ಯಕ್ತ ಪಡಿಸಿದರು.

ಎಂ.ಡಿ ಶೆಟ್ಟಿ ಇಡೀ ಕೇವಲ ಬಂಟರಿಗೆ ಮಾತ್ರವಲ್ಲ ಸಮಗ್ರ ಸಮಾಜಕ್ಕೆ ಮಾದರಿ ವ್ಯಕ್ತಿ. ಅವರ ಸಮಾಜದ ಮೇಲಿನ ಪ್ರೀತಿ ಎಲ್ಲರಿಗೂ ಆದರ್ಶನೀಯ. ಬಂಟ್ಸ್ ಸಂಘಕ್ಕೆ ಅವರ ಕೊಡುಗೆ ಅನುಪಮವಾದುದು. ಬಂಟರಲ್ಲಿ ಕಡಂದಲೆ ಪ್ರಕಾಶ್ ಶೆಟ್ಟಿ ಅವರಂತಹ ಸಾಹಸಿಗ ವಕಿಲರು, ನಿಷ್ಠೆಯಿಂದ ಸಮಾಜವನ್ನು ನಡೆಸುವ ಅರಸರೂ ಇದ್ದಾರೆ ಅಂದಮೇಲೆ ನ್ಯಾಯ ಮಂಡಳಿ ಸೇವೆ ಬಗ್ಗೆ ಎರಡು ಮಾತುಗಳೇ ಇಲ್ಲ. ಆದುದರಿಂದಲೇ ಬಂಟ್ಸ್ ಸಂಘದ ನ್ಯಾಯ ಮಂಡಳಿ ವಿಶ್ವಕ್ಕೇ ಮಾದರಿ. ಪ್ರಾದೇಶಿಕ ಸಮಿತಿಗಳ ಮುಖ್ಯಸ್ಥರನ್ನು ವಿಶ್ವಾಸಕ್ಕೆ ತಗೆದು ಕೊಂಡಿದೆ. ಮುಂದಿನ ದಿನಗಳಲ್ಲಿ ಪ್ರಾದೇಶಿಕವಾಗಿ ಸಮಿತಿಗಳನ್ನು ವಿಸ್ತ್ಕೃತಗೊಳಿಸಿ ಸುಲಭವಾಗಿ ಶ್ರಮಿಸಬಹುದು. ಹಿರಿಯರು ನಮಗೆ ನೀಡಿವ ಸಲಹೆಗಳೇ ನಮಗೆ ಮೇಲ್ಪಂಕ್ತಿಯಾಗಿದ್ದು, ಇದೇ ಸ್ಪೂರ್ತಿಯಿಂದ ಯುವ ಪೀಳಿಗೆಗೆ ಧೈರ್ಯ ಬರುತ್ತದೆ. ಅದೇ ಎಲ್ಲರಿಗೂ ಪೆÇ್ರೀತ್ಸಾಹಕ ಆಗಬಲ್ಲದು. ನ್ಯಾಯ ಮಂಡಳಿಯು ಬಂಟ್ಸ್ ಸಂಘದಲ್ಲೇ ಕೇಂದ್ರ ಕಛೇರಿ ಹೊಂದಿ ದೇಶದಾದ್ಯಂತ ಶಾಖೆಗಳು ವಿಸ್ತಾರಿಸುವಂತಾಗಲಿ ಎಂದು ಐಕಳ ಹರೀಶ್ ಆಶಯ ವ್ಯಕ್ತಪಡಿಸಿದರು. ಹಾಗೂ ವಿಶ್ವ ಬಂಟರ ಪರವಾಗಿ ಎಂ.ಡಿ ಶೆಟ್ಟಿ ಅವರಿಗೆ ಪುಷ್ಫಗುಚ್ಛವನ್ನಿತ್ತು ಶುಭರೈಸಿದರು.

ಪದ್ಮನಾಭ ಪಯ್ಯಡೆ ಮಾತನಾಡಿ 18ನೇ ವರ್ಷಗಳ ಸೇವೆ ಪೂರೈಸಿದ ನ್ಯಾಯ ಮಂಡಳಿ ಬಂಟರ ಹೆಗ್ಗಳಿಕೆ ಆಗಿದೆ. ನ್ಯಾ| ಸಂತೋಷ್ ಹೆಗ್ಡೆ ಅವರ ಸಮಾಜಪ್ರಿಯ ಚಿಂತನೆ, ಕಲ್ಪನೆ, ಆಶಯ ಸಮಾಜದ ಜನತೆಯಲ್ಲಿ ನ್ಯಾಯ ಒದಗಿದೆÉುೈದೀಗಲೇ ಸುಮಾರು 350 ಅಧಿಕ ಕೇಸುಗಳನ್ನು ಕೈಗೆತ್ತಿ ನಾವು ಪರಿಹರಿಸಿದ್ದೇವೆ. ಇದು ಎಲ್ಲರ ಒಗ್ಗಟ್ಟಿನ ಕೆಲಸವಾಗಿದೆ. ತೀರ್ಪು-ತೀರ್ಮಾನ ನೀಡುವುದು ಬಂಟರಿಗೆÀ ವಂಶ ಪಾರಂಪರಿಕವಾಗಿ ಬಂದ ವರವಾಗಿದೆ ಎಂದರು.

ಬಂಟ್ಸ್ ನ್ಯಾಯ ಮಂಡಳಿ ಸಮಾಜದ ಜನತೆಗೆ ಲಾಭವಾಗಿಯೇ ಪರಿಣಮಿಸಿದೆ. ಇದೊಂದು ಬುದ್ಧಿ ಜೀವಿಗಳ ಸಂಸ್ಥೆ ಎನ್ನುವುದರಲ್ಲಿ ಸಂಶಯವಿಲ್ಲ. ನ್ಯಾಯಕ್ಕೆ ಅನುಭವಸ್ಥ ಹಿರಿಯ ವ್ಯಕ್ತಿಗಳ ಬುದ್ಧಿವಾದ ಅಗತ್ಯವಾಗಿದ್ದು, ಅವರ ಚಿಂತನೆಯಿಂದಲೇ ಸಮರ್ಥ ನ್ಯಾಯ ಸಾಧ್ಯ. ನಮ್ಮೊಳಗಿನ ಇಂತಹ ಮಂಡಳಿಯ ಸೇವೆ ಸಮಾಜಕ್ಕೆ ಮತ್ತು ಇತರರೂ ಅನುಕರಿಸಲಿ ಎಂದು ಸುಭಾಷ್ ಶೆಟ್ಟಿ ಆಶಯ ವ್ಯಕ್ತ ಪಡಿಸಿದರು.

ಕಾರ್ಯಧ್ಯಕ್ಷ ರವೀಂದ್ರ ಅರಸ ಅವರು ಎಂ.ಡಿ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಪದ್ಮನಾಭ ಪಯ್ಯಡೆ, ಸುಭಾಷ್ ಶೆಟ್ಟಿ, ಹಿರಿಯ ಉದ್ಯಮಿ ಸುಧೀರ್ ವಿ.ಶೆಟ್ಟಿ, ಲತಾ ಪಿ.ಭಂಡಾರಿ, ಬಂಟರವಾಣಿ ಗೌರವ ಪ್ರಧಾನ ಸಂಪಾದಕ ಅಶೋಕ್ ಪಕ್ಕಳ, ಸಿಎ| ಸುರೇಂದ್ರ ಎ.ಶೆಟ್ಟಿ, ಸಿಎ| ಸಂಜೀವ ಶೆಟ್ಟಿ ಮತ್ತಿತರ ಗಣ್ಯರಿಗೆ ಪುಷ್ಫಗುಚ್ಛವನ್ನಿತ್ತು ಅಭಿವಂದಿಸಿದರು. ಸಭಿಕರಲ್ಲಿನ ಸುಧೀರ್ ವಿ.ಶೆಟ್ಟಿ, ಬೊಲ್ಯಗುತ್ತು ವಿವೇಕ್ ಶೆಟ್ಟಿ, ಮುಂಡಪ್ಪ ಎಸ್.ಪಯ್ಯಡೆ, ದಿವಾಕರ್ ಶೆಟ್ಟಿ ಇಂದ್ರಾಳಿ, ಮಂಡಳಿಯ ಸಲಹಾ ಮಂಡಳಿ ಸದಸ್ಯರಾದ ಆರ್.ಸಿ ಶೆಟ್ಟಿ, ಸೀತರಾಮ ಎಂ.ಶೆಟ್ಟಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಲತಾ ಪಿ.ಶೆಟ್ಟಿ ಪ್ರಾರ್ಥನೆಯನ್ನಾಡಿದರು. ಉಪಾಧ್ಯಕ್ಷ ನ್ಯಾ| ಕಡಂದಲೆ ಪರಾರಿ ಪ್ರಕಾಶ್ ಎಲ್.ಶೆಟ್ಟಿ ಸ್ವಾಗತಿಸಿ ಸಭಾ ಕಲಾಪ ನಡೆಸಿದರು. ಗೌ| ಪ್ರ| ಕಾರ್ಯದರ್ಶಿ ಡಾ| ಪ್ರಭಾಕರ ಶೆಟ್ಟಿ ಬೋಳ ವಾರ್ಷಿಕ ವರದಿ ಮತ್ತು ಗತವಾರ್ಷಿಕ ಮಹಾಸಭೆ ವರದಿ ಭಿತ್ತರಿಸಿದರು. ಕೋಶಾಧಿಕಾರಿ ನ್ಯಾ| ಅಶೋಕ್ ಡಿ.ಶೆಟ್ಟಿ ವಾರ್ಷಿಕ ಲೆಕ್ಕಪತ್ರಗಳ ವಿವರ ನೀಡಿ ವಂದಿಸಿದರು.

 

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here