Friday 29th, March 2024
canara news

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್, ಶ್ರೀ ಕ್ಷೇತ್ರ ಧರ್ಮಸ್ಥಳ ಭಜನಾ ತರಬೇತಿ ಕಮ್ಮಟ – 2018

Published On : 27 Sep 2018   |  Reported By : Rons Bantwal


ವ್ಯಕ್ತಿಯ ಪರಿವರ್ತನೆಗೆ ಭಕ್ತಿಮಾರ್ಗ ಪೂರಕ

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪರಮಪೂಜ್ಯ ಪದ್ಮವಿಭೂಷಣ ಡಾ| ಡಿ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರದಲ್ಲಿ 20 ನೇ ವರ್ಷದ ಭಜನಾ ತರಬೇತಿ ಕಮ್ಮಟವು ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ.

ದಿನಾಂಕ 23.09.2018 ರಂದು ಪ್ರಾರಂಭವಾದ ಕಮ್ಮಟದಲ್ಲಿ 157 ಭಜನಾ ಮಂಡಳಿಯ 281 ಸದಸ್ಯರಿದ್ದಾರೆ. ಕಮ್ಮಟದಲ್ಲಿ 186 ಪುರಷ ಶಿಬಿರಾರ್ಥಿಗಳು, 95 ಮಹಿಳಾ ಶಿಬಿರಾರ್ಥಿಗಳು ಭಾಗವಹಿಸಿದ್ದಾರೆ.

ಭಜನಾ ಕಮ್ಮಟದಲ್ಲಿ ಪೂಜ್ಯನೀಯ ಡಾ| ಡಿ.ವೀರೇಂದ್ರ ಹೆಗ್ಗಡೆಯವರು, ಮಾತೃಶ್ರೀ ಹೇಮಾವತಿ ಹೆಗ್ಗಡೆಯವರು, ಶ್ರೀ ಶ್ರೀ ಮೋಹನದಾಸ ಸ್ವಾಮಿಜಿ, ಶ್ರೀಧಾಮ ಮಾಣಿಲ, ಗೌರವಾನ್ವಿತ ಹರ್ಷೇಂದ್ರ ಕುಮಾರ್‍ರವರು ಆಗಮಿಸಿ ಕಾರ್ಯಕ್ರಮಕ್ಕೆ ಪ್ರೇರಣೆ ನೀಡಿದರು.

ಧಾರ್ಮಿಕ ಹಾಗೂ ಸಾಮಾಜಿಕ ಸಮನ್ವಯತೆಯಲ್ಲಿ ಭಜನಾ ಮಂಡಳಿಯ ಪಾತ್ರದ ಬಗ್ಗೆ ಡಾ| ಎಲ್.ಎಚ್.ಮಂಜುನಾಥ್‍ರವರು ಉಪನ್ಯಾಸ ನಡೆಸಿಕೊಟ್ಟರು. ಪ್ರಕೃತಿ - ಸಂಸ್ಕøತಿ ಜೀವನದ ಭಾಗವಾಗಬೇಕಾಗಿದೆ. ಇಂದು ಸಮಾಜ ವಿಕೃತಿಯ ಕಡೆಗೆ ಹೋಗುತ್ತಿದೆ. ಇಂದು ಭಜನಾ ಮಂಡಳಿಯ ಮೂಲಕ ಸಾಮಾಜಿಕ ಪರಿವರ್ತನೆಗಳಾಗಬೇಕಾಗಿದೆ ಎಂದು ತಿಳಿಸಿದರು.

ಶಿಬಿರಾರ್ಥಿಗಳ ಪರಿಚಯ ಹಾಗೂ ಗುಂಪು ರಚನೆಯನ್ನು ಶ್ರೀಮತಿ ಮಮತಾ ರಾವ್ ಹಾಗೂ ಶ್ರೀ ಶ್ರೀನಿವಾಸ್ ರಾವ್ ಇವರು ನಡೆಸಿಕೊಟ್ಟರು. ರಾಗ, ತಾಳ, ಶ್ರುತಿಯ ಬಗ್ಗೆ ಶ್ರೀಮತಿ ಮನೋರಮಾ ತೋಳ್ಪಾಡಿತ್ತಾಯ ಇವರು ನಡೆಸಿಕೊಟ್ಟರು. ಶ್ರೀ ಕ್ಷೇತ್ರದ ಸಮಗ್ರ ಪರಿಚಯವನ್ನು ಶ್ರೀ ಸುಬ್ರಹ್ಮಣ್ಯ ಪ್ರಸಾದ್ ಇವರು ನಡೆಸಿಕೊಟ್ಟರು.


ರಾಗ, ತಾಳ, ವೈವಿಧ್ಯತೆಯ ಬಗ್ಗೆ ಪ್ರಾತ್ಯಕ್ಷಿಕೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಅಣ್ಣು ದೇವಾಡಿಗ ಹಾಗೂ ಶ್ರೀ ಪ್ರಭಾಕರ್ ರವರ ತಂಡದವರು ನಡೆಸಿಕೊಟ್ಟರು. ನೃತ್ಯ ಭಜನೆಯ ಬಗ್ಗೆ ಶ್ರೀ ರಮೇಶ್ ಕಲ್ಮಾಡಿ, ಶ್ರೀ ಶಂಕರ್, ಬೆಳಾಲು ಶ್ರೀ ಲಕ್ಷ್ಮಣ್ ಗೌಡ, ಶ್ರೀ ಧೀವಿತ್ ಕೋಟ್ಯಾನ್, ಕು| ಚೈತ್ರಾ ಇವರು ನಡೆಸಿಕೊಡುತ್ತಿದ್ದಾರೆ.

ದಿನಾಂಕ 25.09.2018 ರಂದು ಶ್ರೀ ವಿಠಲ್ ನಾಯಕ್ ವಿಟ್ಲ ಇವರು ಗೀತ ಸಾಹಿತ್ಯ ಸಂಭ್ರಮವನ್ನು ನಡೆಸಿಕೊಟ್ಟು ಬದುಕಿನಲ್ಲಿರಬೇಕಾದ ಆದರ್ಶ ತತ್ವವನ್ನು ನಗೆಕಡಲಲ್ಲಿ ತೇಲಿಸುವುದರ ಮುಖೇನ ಹೇಳಿಕೊಟ್ಟರು. ಭಜನಾ ತರಬೇತಿ ಕಮ್ಮಟದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀಮತಿ ಉಷಾ ಹೆಬ್ಬಾರ್, ಶ್ರೀ ಶಿವಾನಂದ ರಾವ್ ಕಕ್ಕಿನೇಜಿ, ಶ್ರೀ ಭಗೀರಥ್, ಶ್ರೀ ದೇವದಾಸ್ ಪ್ರಭು, ಶ್ರೀಮತಿ ಮನೋರಮಾ ತೋಳ್ಪಾಡಿತ್ತಾಯ, ಶ್ರೀ ಮಂಗಲದಾಸ ಗುಲ್ವಾಡಿ, ಶ್ರೀ ಮೋಹನ್‍ದಾಸ್ ಶೆಣೈ ಮಂಗಳೂರು ಇವರು ವಹಿಸಿಕೊಟ್ಟರು.

ಪ್ರತೀದಿನ ಯೋಗ ತರಬೇತಿಯನ್ನು ಡಾ| ಶಶಿಕಾಂತ್ ಜೈನ್ ನಡೆಸಿಕೊಟ್ಟರು. ಚಿಂತನಾ ಕಾರ್ಯಕ್ರಮವನ್ನು ಶ್ರೀ ಹರಿದಾಸ್ ಗಾಂಭೀರ್, ಶ್ರೀ ವೀರು ಶೆಟ್ಟಿ ಇವರು ನಡೆಸಿಕೊಟ್ಟರು. ಶ್ರೀ ವಿವೇಕ್ ವಿನ್ಸೆಂಟ್ ಪಾಯ್ಸ್ ಇವರು ಆರೋಗ್ಯಕರ ಅಭ್ಯಾಸಗಳು, ದುರಭ್ಯಾಸದ ಬಗ್ಗೆ ಜಾಗೃತಿ ಮೂಡಿಸುವ ಬಗ್ಗೆ ಚಲನಚಿತ್ರ ಪ್ರದರ್ಶನದ ಜೊತೆಗೆ ಉಪನ್ಯಾಸ ನೀಡಿದರು.

ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ನ್ಯಾಚುರೋಪತಿ ಕಾಲೇಜಿನ ವಿದ್ಯಾರ್ಥಿಗಳು ಭಕ್ತಿಗೀತೆಗಳನ್ನು ಹಾಡುವುದರ ಮೂಲಕ ರಂಜಿಸಿದರು.

ಕಮ್ಮಟದ ಯಶಸ್ವಿಗಾಗಿ ಶ್ರೀ ಸುಬ್ರಹ್ಮಣ್ಯ ಪ್ರಸಾದ್, ಶ್ರೀಮತಿ ಮಮತಾ ಹರೀಶ್ ರಾವ್, ಶಾಂತಿವನದ ಕಾರ್ಯದರ್ಶಿ ಶ್ರೀ ಸೀತಾರಾಮ ತೋಳ್ಪಾಡಿತ್ತಾಯ, ಕೋಶಾಧಿಕಾರಿ ಶ್ರೀ ನಾಗೇಂದ್ರ ಅಡಿಗ, ಶ್ರೀ ಭುಜಬಲಿ, ಶ್ರೀ ಬಿ.ಜಯರಾಮ ನೆಲ್ಲಿತ್ತಾಯ, ಕಮ್ಮಟದ ಕಾರ್ಯಕಾರಿ ಸದಸ್ಯರು, ಶ್ರೀ ಕ್ಷೇತ್ರ ಧರ್ಮಸ್ಥಳ ದೇವಳದ ಎಲ್ಲಾ ವಿಭಾಗದ ಮುಖ್ಯಸ್ಥರು ಹಾಗೂ ಸಿಬ್ಬಂದಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ.)ಯ ಕಾರ್ಯಕರ್ತರು, ಕ್ಷೇತ್ರದ ಸ್ಥಳೀಯ ಸ್ವಯಂ ಸೇವಕರು, ಕನ್ಯಾಕುಮಾರಿ ಯುವತಿ ಮಂಡಲದ ಸದಸ್ಯರು ಸಹಕರಿಸಿರುತ್ತಾರೆ.

ಶ್ರೀ ದಿನೇಶ್ ಯೋಜನಾಧಿಕಾರಿ, ಶ್ರೀ ಶ್ರೀನಿವಾಸ್‍ರಾವ್, ಶ್ರೀ ಬಾಲಕೃಷ್ಣ, ಶ್ರೀ ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here