Friday 29th, March 2024
canara news

*ಸಮಾಜದಲ್ಲಿ ಅಶಾಂತಿಯ ವಾತಾವರಣ ದೂರ ಮಾಡಬೇಕು : ಜೇಸಿ ರಾಕೇಶ್ ಕುಂಜೂರು*

Published On : 27 Sep 2018   |  Reported By : media release


ಜೆಸಿ ಯಲ್ಲಿ ಬೆಳೆಯಬೇಕಾದರೆ ಜೇಸಿ ಆಂದೋಲನದಲ್ಲಿ ಕ್ರಿಯಾಶೀಲರಾಗಬೇಕು. ಮೊದಲು ನಾವು ನಮ್ಮನ್ನು ಅರಿತುಕೊಳ್ಳಬೇಕು ಮತ್ತು ಈ ಆಂದೋಲನದಲ್ಲಿ ತೊಡಗಿಸಿಕೊಳ್ಳಬೇಕು. ಜೆಸಿ ಯಿಂದ ನಾವು ಬಹಳಷ್ಟು ನಿರೀಕ್ಷಿಸುತ್ತೇವೆ. ಆದರೆ ನಾವು ನಮಗೆ ಪ್ರಶ್ನೆ ಕೇಳಬೇಕು ಜೆಸಿಗೆ ನಾವು ಏನು ಕೊಡುತ್ತೇವೆ?? ಜೇಸಿ ಯಿಂದ ಬಹಳಷ್ಟು ಅನುಭವ ಪಡೆಯಲು ಸಾಧ್ಯವಿದೆ. ಕೇವಲ ಆಂದೋಲನದಲ್ಲಿ ತೊಡಗಿಕೊಂಡರೆ ಸಾಲದು, ಸಮಾಜಕ್ಕೆ ನಾವು ಏನಾದ್ರೂ ಕೊಡಬೇಕಾಗಿದೆ ಎಂದು ಪತ್ರಕರ್ತ ಮತ್ತು ಜೇಸಿಐ ವಲಯ 15 ವಲಯಾಧ್ಯಕ್ಷ ಜೇಸಿ ಪಿಪಿಪಿ ರಾಕೇಶ್ ಕುಂಜೂರು, ಜೇಸಿಐ ಉದ್ಯಾವರ ಕುತ್ಪಾಡಿ ಘಟಕಕ್ಕೆ ಅಧಿಕೃತ ಭೇಟಿಯ ಸಭಾ ಕಾರ್ಯಕ್ರಮದಲ್ಲಿ, ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.

ಪ್ರಸ್ತುತ ಸಮಾಜದಲ್ಲಿ ಅಶಾಂತಿಯ ವಾತಾವರಣವಿದೆ. ಜೇಸಿ ಗಳು ಶಾಂತಿಯ ಪ್ರತಿಪಾದನೆ ಮಾಡಬೇಕಾಗಿದೆ. ಸಮಾಜದಲ್ಲಿ ಅಶಾಂತಿಯ ವಾತಾವರಣವನ್ನು ದೂರ ಮಾಡಬೇಕಾಗಿದೆ ಎಂದರು.

ಸಭಾ ಕಾರ್ಯಕ್ರಮದ ಮೊದಲು ಜೇಸಿಐ ಉದ್ಯಾವರ ಕುತ್ಪಾಡಿಯ ಘಟಕಕ್ಕೆ ಅಧಿಕೃತ ಭೇಟಿ ನೀಡಿದ ವಲಯ ಅಧ್ಯಕ್ಷರನ್ನು, ಬಲಾಯಿಪಾದೆ ಯಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.

ವಲಯಾಧ್ಯಕ್ಷರ ಅಧಿಕೃತ ಭೇಟಿಯ ಕಾರ್ಯಕ್ರಮದಲ್ಲಿ ಜೇಸಿಐ ಉದ್ಯಾವರ ಕುತ್ಪಾಡಿಯ ಶಾಶ್ವತ ಯೋಜನೆಗಳನ್ನು ವಲಯಾಧ್ಯಕ್ಷರು ಉದ್ಘಾಟನೆ ಮಾಡಿದರು. ಸಂತ ಫ್ರಾನ್ಸಿಸ್ ಜೇವಿಯರ್ ಕನ್ನಡ ಮಾಧ್ಯಮ ಪ್ರೌಢ ಶಾಲೆಗೆ ಬೋರ್ಡ್ ಮತ್ತು ಮಕ್ಕಳಿಗೆ ಉಪಯೋಗವಾಗುವಂತಹ ವಸ್ತುಗಳು, ಗುಡ್ಡೆಅಂಗಡಿ ಯಲ್ಲಿ ಸ್ವಾಗತ ನಾಮಫಲಕ ಮತ್ತು ಉದ್ಯಾವರದಲ್ಲಿ ರಕ್ತದಾನದ ಜಾಗೃತಿ ಮತ್ತು ತುರ್ತು ರಕ್ತದಾನದ ಸಂದರ್ಭದಲ್ಲಿ ಸಂಪರ್ಕಿಸುವಂತಹ ನಾಮಫಲಕವನ್ನು ವಲಯಾಧ್ಯಕ್ಷರು ಲೋಕಾರ್ಪಣೆ ಮಾಡಿದರು.

ವಲಯ ಹದಿನೈದರ ಉಪಾಧ್ಯಕ್ಷರಾದ ಜೇಸಿ ಪಶುಪತಿ ಶರ್ಮ ಮತ್ತು ವಲಯಾಧ್ಯಕ್ಷರ ಆಪ್ತ ಕಾರ್ಯದರ್ಶಿ ಜೇಸಿ ಶ್ರೀನಿವಾಸ ಐತಾಳ್ ರವರು ಸಾಂದರ್ಭಿಕವಾಗಿ ಮಾತನಾಡಿದರು.

ಸಭಾ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಘಟಕದ ಪರವಾಗಿ ನೀಡಲಾಯಿತು.
ಜೇಸಿಐ ಉದ್ಯಾವರ ಕುತ್ಪಾಡಿ ಘಟಕ ಅಧ್ಯಕ್ಷರಾದ ಜೇಸಿ ಸ್ಟೀವನ್ ಕುಲಾಸೊ ಉದ್ಯಾವರ ಅಧ್ಯಕ್ಷತೆ ವಹಿಸಿದ್ದರು.

ಸಭಾ ಕಾರ್ಯಕ್ರಮದಲ್ಲಿ
ವಲಯ ಅಧ್ಯಕ್ಷರಾದ ಜೇಸಿ ಪಿಪಿಪಿ ರಾಕೇಶ್ ಕುಂಜೂರು ಮತ್ತು ಅವರ ಧರ್ಮಪತ್ನಿ ಜೇಸಿ ಸೌಮ್ಯಾ ರಾಕೇಶ್ ಅವರನ್ನು ಜೇಸಿಐ ಉದ್ಯಾವರ ಕುತ್ಪಾಡಿಯ ಪೂರ್ವಾಧ್ಯಕ್ಷರು, ಸಲಹೆಗಾರರು ಮತ್ತು ಅಧ್ಯಕ್ಷರು ಸನ್ಮಾನಿಸಿದರು.

ಕಾರ್ಯದರ್ಶಿ ಜೆಸಿ ರಾಘವೇಂದ್ರ ವರದಿ ಮಂಡಿಸಿ, ವಂದಿಸಿದರು. ವೇದಿಕೆಯಲ್ಲಿ ಕಾರ್ಯಕ್ರಮದ ಕಾರ್ಯ ನಿರ್ದೇಶಕರಾದ ಜೇಸಿ ರಾಘವೇಂದ್ರ ಎಂ ಮತ್ತು ಜೇಸಿರೇಟ್ ಅಧ್ಯಕ್ಷೆ ಜೆಸಿ ರೋಶ್ನಿ ಕುಲಾಸೊ ಉಪಸ್ಥಿತರಿದ್ದರು.




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here