Saturday 20th, April 2024
canara news

ದಿಟ್ಟತನದ ವ್ಯವಹಾರದಿಂದ ಬ್ಯಾಂಕುಗಳು ಗ್ರಾಹಕರ ವಿಶ್ವಾಸಕ್ಕೆ ಪಾತ್ರರಾಗಬಲ್ಲವು

Published On : 30 Sep 2018   |  Reported By : Rons Bantwal


ಮೊಡೇಲ್ ಬ್ಯಾಂಕ್‍ನ 101ನೇ ವಾರ್ಷಿಕ ಮಹಾಸಭೆಯಲ್ಲಿ ಬಿಷಪ್ ಪೀಟರ್ ಪಾವ್ಲ್ ಸಲ್ದಾನ್ಹಾ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಸೆ.29: ಜನಸಾಮಾನ್ಯರ ಆಥಿರ್üಕ ಪ್ರಗತಿಗೆ ಮೋಡೆಲ್ ಬ್ಯಾಂಕ್ ಸೇವೆ ಅನುಪಮವಾದದು. 102 ವರ್ಷಗಳ ನಿರಂತರ ಸೇವೆಯೇ ಮೋಡೆಲ್ ಬ್ಯಾಂಕ್‍ನ ನಿಷ್ಠಾವಂತ ಸೇವೆಗೆ ಕೈಗನ್ನಡಿಯಾಗಿದೆ. ಗ್ರಾಹಕರ ಸಂತೃಪ್ತಿಯೇ ಬ್ಯಾಂಕ್‍ನ ಸಮೃದ್ಧಿಯಾಗಿದೆ. ಬ್ಯಾಂಕುಗಳು ಬರೇ ಹಣಕಾಸು ವ್ಯವಸ್ಥೆ ನಿವಾರಿಸುವ ಉದ್ದೇಶವನ್ನಿರಿಸಿ ಸೇವಾ ನಿರತವಾಗದೆ ಜನಸಾಮಾನ್ಯರಿಗೆ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಸಹಕಾರಿ ಆದಾಗ ಆಥಿರ್üಕ ಸೇವಾ ಸಂಸ್ಥೆಗಳ ಉದ್ದೇಶ ಫಲಪ್ರದವಾಗುವುದು. ಜಾಗತೀಕರಣದ ಈ ಕಾಲದಲ್ಲಿ ಬ್ಯಾಂಕುಗಳಂತಹ ಪಥಸಂಸ್ಥೆಗಳು ದಿಟ್ಟತನದಿಂದ ವ್ಯವಹಾರ ನಡೆಸಿ ಮುನ್ನಡೆದಾಗ ಮಾತ್ರ ಬ್ಯಾಂಕುಗಳು ಗ್ರಾಹಕರ ವಿಶ್ವಾಸಕ್ಕೆ ಪಾತ್ರರಾಗಬಲ್ಲವು. ಆದುದರಿಂದ ಮಧ್ಯಮ ವರ್ಗದ ಜನತೆ ಆಥಿರ್üಕ ಸಹಾಯದತ್ತ ಹೆಚ್ಚಿನ ಬ್ಯಾಂಕುಗಳು ಮಹತ್ವ ನೀಡುವುದು ಅತ್ಯವಶ್ಯವಾಗಿದೆ ಎಂದು ಮಂಗಳೂರು ರೋಮನ್ ಕ್ಯಾಥೋಲಿಕ್ ಧರ್ಮಪ್ರಾಂತ್ಯದ ಬಿಷಪ್ ಅ| ವಂ| ಡಾ| ಪೀಟರ್ ಪಾವ್ಲ್ ಸಲ್ದಾನ್ಹಾ ಕರೆಯಿತ್ತರು.

ಕರ್ನಾಟಕ ಕರಾವಳಿಯ ಕ್ರೈಸ್ತ ಸಮೂದಾಯದ ಧುರೀಣರು ಸ್ಥಾಪಿತ ದಿ. ಮೆಂಗ್ಳೂರಿಯನ್ ಕಥೋಲಿಕ್ ಕೋ.ಆಪರೇಟಿವ್ ಕ್ರೆಡಿಟ್ ಸೊಸೈಟಿ ನಿಯಮಿತ ಪಥಸಂಸ್ಥೆ ಆಗಿದ್ದು, ಸದ್ಯ ಮೊಡೇಲ್ ಬ್ಯಾಂಕ್ ನಾಮಾಂಕಿತ ಬ್ಯಾಂಕ್ ತನ್ನ 101ನೇ ವಾರ್ಷಿಕ ಮಹಾಸಭೆ ಇಂದಿಲ್ಲಿ ಶನಿವಾರ ಸಂಜೆ ಮಾಹಿಮ್ ಪಶ್ಚಿಮದಲ್ಲಿನ ಸೈಂಟ್ ಕ್ಸೇವಿಯರ್ಸ್ ಇಂಜಿನೀಯರಿಂಗ್ ಕಾಲೇಜು ಸಭಾಗೃಹದಲ್ಲಿ ನಡೆಸಿದ್ದು, ಸಭೆಯಲ್ಲಿ ಪ್ರಧಾನ ಅಭ್ಯಾಗತರಾಗಿ ದಿವ್ಯೋಪಸ್ಥಿತ ಬಿಷಪ್ ಪೀಟರ್ ಸಲ್ದಾನ್ಹಾ ಮಾತನಾಡಿ ನೆರೆದ ಜನತೆಯನ್ನು ಹರಸಿದರು.

ಮೊಡೇಲ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಆಲ್ಬರ್ಟ್ ಡಬ್ಲ್ಯು. ಡಿ'ಸೋಜಾ ತನ್ನ ಅಧ್ಯಕ್ಷತೆಯಲ್ಲಿ ಮಹಾಸಭೆಯನ್ನು ನಡೆಸಿ ಸದಸ್ಯರನ್ನುದ್ದೇಶಿಸಿ ಗತ ಕ್ಯಾಲೆಂಡರ್ ಸಾಲಿನಲ್ಲಿ ಸುಮಾರು 919.94 ಕೋಟಿ ರೂಪಾಯಿ ಭದ್ರತಾ ಠೇವಣಿ ಹೊಂದಿದ್ದು, 510.82 ಕೋಟಿ ರೂಪಾಯಿ ಮುಂಗಡ ಠೇವಣಿ, 92.71 ಕೋಟಿ ರೂಪಾಯಿ ಸಾಂದ್ರ ಆದಾಯ ಹಾಗೂ ಸುಮಾರು 12.39 ಕೋಟಿ ರೂಪಾಯಿ ನಿವ್ವಳ ಲಾಭದೊಂದಿಗೆ ಸುಮಾರು 8.55 ಕೋಟಿ ರೂಪಾಯಿ (ನೆಟ್ ಪ್ರಾಫಿಟ್ ಪಿಎಟಿ) ಹೊಂದಿದೆ ಎಂದು ವಾರ್ಷಿಕ ಚಟುವಟಿಕೆಗಳನ್ನು ಭಿತ್ತರಿಸಿದ ಡಿ'ಸೋಜಾ ಹಿಶೆದಾರರಿಗೆ ವಾರ್ಷಿಕ ನಿವ್ವಳ ಲಾಭ ತಿಳಿಸಿ 9%ನ್ನು ಡಿವಿಡೆಂಡ್ ಘೋಷಿಸಿದರು.

ಬಿಷಪ್ ಪೀಟರ್ ಸಲ್ದಾನ್ಹಾ, ಮತ್ತು ಬ್ಯಾಂಕ್‍ನ ಸಂಸ್ಥಾಪಕಾಧ್ಯಕ್ಷ ಜೋನ್ ಡಿ'ಸಿಲ್ವಾ, ರಾಯನ್ ಅಂತರಾಷ್ಟ್ರೀಯ ಶೈಕ್ಷಣಿಕ ಸಮೂಹದ ಆಡಳಿತ ನಿರ್ದೇಶಕಿ ಮೇಡಂ ಗ್ರೇಸ್ ಪಿಂಟೋ ಅವರಿಗೆ ಕಾರ್ಯಾಧ್ಯಕ್ಷ ಆಲ್ಬರ್ಟ್ ಸ್ಮರಣಿಕೆ, ಪುಷ್ಪಗುಪ್ಛ ಪ್ರದಾನಿಸಿ ಗೌರವಿಸಿದರು. ಮಹಾಸಭೆಯ ಆದಿಯಲ್ಲಿ ಬಿಷಪ್ ಸಲ್ದಾನ್ಹಾ ಬ್ಯಾಂಕ್‍ನ ವಾರ್ಷಿಕ ಅಭಿವಂದನಾ ದಿವ್ಯಪೂಜೆ ನೆರವೇರಿಸಿ ಪ್ರಸಂಗವನ್ನಿತ್ತರು.

ಬ್ಯಾಂಕ್‍ನ ಉಪ ಕಾರ್ಯಾಧ್ಯಕ್ಷ ವಿಲಿಯಂ ಸಿಕ್ವೇರಾ, ನಿರ್ದೇಶಕರಾದ ವಿನ್ಸೆಂಟ್ ಮತಾಯಸ್ (ಮಾಜಿ ಉಪ ಕಾರ್ಯಾಧ್ಯಕ್ಷ), ಪೌಲ್ ನಝರೆತ್, ಸಂಜಯ್ ಶಿಂಧೆ, ಬೆನೆಡಿಕ್ಟಾ ರೆಬೆಲ್ಲೋ, ಮರಿಟಾ ಡಿ'ಮೆಲ್ಲೋ, ಥೋಮಸ್ ಡಿ.ಲೊಬೋ, ಜೆರಾಲ್ಡ್ ಕಾರ್ಡೋಜಾ, ನ್ಯಾ| ಪಿಯುಸ್ ವಾಸ್, ಆ್ಯನ್ಸಿ ಡಿ'ಸೋಜಾ, ಜೋರ್ಜ್ ಕಾಸ್ತೆಲಿನೋ, ರೋನಾಲ್ಡ್ ಹೆಚ್.ಮೆಂಡೋನ್ಸಾ, ಬ್ಯಾಂಕ್‍ನ ಸಿಇಒ ಮತ್ತು ಮಹಾ ಪ್ರಬಂಧಕ ವಿಲಿಯಂ ಎಲ್.ಡಿ'ಸೋಜಾ ವೇದಿಕೆಯಲ್ಲಿ ಅಸೀನರಾಗಿದ್ದರು.

ಬ್ಯಾಂಕ್‍ನ ನಿರ್ದೇಶಕರಾದ ಜೋನ್ ಡಿ'ಸಿಲ್ವಾ ಮತ್ತು ವಿನ್ಸೆಂಟ್ ಮಥಾಯಸ್ ಸಂದರ್ಭೋಚಿತವಾಗಿ ಮಾತನಾಡಿ ಬ್ಯಾಂಕ್ ಕಾರ್ಯವೈಖರಿ, ಆಧುನಿಕ ಸೇವೆಗಳನ್ನು ಮನವರಿಸಿ ಅವುಗಳ ಸದುಪಯೋಗ ಪಡೆಯುವಂತೆ ತಿಳಿಸಿದರು.

ಸಭೆಯಲ್ಲಿ ಬ್ಯಾಂಕ್‍ನ ಶೇರುದಾರರು, ಹಿತೈಷಿಗಳು, ಹೆಚ್ಚುವರಿ ಪ್ರಧಾನ ಪ್ರಬಂಧÀಕ ಹರೋಲ್ಡ್ ಎಂ.ಸೆರಾವೋ, ಮಾಜಿ ನಿರ್ದೇಶಕರು, ಉನ್ನತಾಧಿಕಾರಿಗಳು, ವಿವಿಧ ಶಾಖೆಗಳ ಮುಖ್ಯಸ್ಥರು ಉಪಸ್ಥಿತರಿದ್ದು, ಶೇರುದಾರರ ಪರವಾಗಿ ಕೆಲವು ಸದಸ್ಯರು ಮಾತನಾಡಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಸಲಹಿದರು.

ಬ್ಯಾಂಕ್‍ನ ಸಿಇಒ ವಿಲಿಯಂ ಡಿ'ಸೋಜಾ ಸೂಚನಾ ಪತ್ರಗಳನ್ನು ಹಾಗೂ ಸಭಾ ಕಲಾಪಗಳನ್ನು ಭಿತ್ತರಿಸಿದರು. ಗತ ಸಾಲಿನಲ್ಲಿ ಅಗಲಿದ ಬ್ಯಾಂಕ್ ಸದಸ್ಯರು, ಗ್ರಾಹಕರು, ಹಿತೈಷಿಗಳು ಮತ್ತು ರಾಷ್ಟ್ರದಗಣ್ಯರಿಗೆ ಸಭೆಯ ಆದಿಯಲ್ಲಿ ಶ್ರದ್ಧಾಂಜಲಿ ಕೋರಲಾಯಿತು. ಎಡ್ವರ್ಡ್ ರಾಸ್ಕಿನ್ಹಾ ಸಭಾ ಕಲಾಪ ನಿರ್ವಾಹಿಸಿದರು. ವಿಲಿಯಂ ಸಿಕ್ವೇರಾ ಕೃತಜ್ಞತೆ ಸಮರ್ಪಿಸಿದರು.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here