Wednesday 24th, April 2024
canara news

ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ನೋ.) ಹತ್ತನೇ ವಾರ್ಷಿಕ ಮಹಾಸಭೆ

Published On : 01 Oct 2018   |  Reported By : Ronida Mumbai


ಪತ್ರಕರ್ತರೆಲ್ಲರೂ ಒಗ್ಗೂಡಿ ಸಂಸ್ಥೆಯನ್ನು ಬಲಿಷ್ಟ ಗೊಳಿಸೋಣ: ಪಾಲೆತ್ತಾಡಿ

ಮುಂಬಯಿ, ಸೆ.29: ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ದಶಮಾನೋತ್ಸವವನ್ನು ಆಚರಿಸಿರುವುದು ಎಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಸಂಘವನ್ನು ಹತ್ತು ವರ್ಷಗಳಿಂದ ಮುನ್ನಡೆಸಿದ ಆತ್ಮತೃಪ್ತಿ ನನಗಿದೆ. ಸಂಘವು ಕೇವಲ ಪದಾಕಾರಿಗಳಿಗೆ ಸೀಮಿತವಾಗಿಲ್ಲ. ಪ್ರತಿಯೋರ್ವ ಸದಸ್ಯರು ಸಂಘದ ಬಗ್ಗೆ ಅಭಿಮಾನವನ್ನು ಹೊಂದಿರಬೇಕು. ಸಂಘದ ಮೇಲಿನ ಅಭಿಮಾನದಿಂದ ನಗರದಲ್ಲಿನ ಅನೇಕ ದಾನಿಗಳು ಉತ್ತಮ ರೀತಿಯಲ್ಲಿ ಸ್ಪಂದಿಸಿರುವುದು ಸಂತೋಷ ತಂದಿದೆ. ಭವಿಷ್ಯದಲ್ಲೂ ನಾವೆಲ್ಲರು ಒಂದಾಗಿ ಸಂಘವನ್ನು ಇನ್ನಷ್ಟು ಬಲಿಷ್ಟಗೊಳಿಸೋಣ. ಹುದ್ದೆಯ ಆಶೆಯಿಂದ ನಾನು ಯಾವತ್ತೂ ಸಂಘಕ್ಕೆ ಬಂದವನಲ್ಲ. ನೂತನ ಸದಸ್ಯರು ಸಂಘದ ಕಾರ್ಯಕಾರಿ ಸಮಿತಿಗೆ ಬಂದು ಸಂಘದ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು ಎಂಬುವುದು ನನ್ನ ಉದ್ಧೇಶವಾಗಿದೆ. ಸಣ್ಣ ಸಣ್ಣ ತಪ್ಪುಗಳು ಆಗುವುದು ಸಹಜ. ಅದನ್ನು ಬದಿಗೊತ್ತಿ ಸಂಘವನ್ನು ಮತ್ತಷ್ಟು ಅಭಿವೃದ್ಧಿಯತ್ತ ಸಾಗಿಸೋಣ ಎಂದು ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ತಿಳಿಸಿದರು.

 

ಕರ್ನಾಟಕ ರಾಜ್ಯದ ಹೊರನಾಡ ಕನ್ನಡಿಗ ಪತ್ರಕರ್ತರ ಶ್ರೇಯೋಭಿವೃದ್ಧಿಗಾಗಿ ಬೃಹನ್ಮುಂಬಯಿಯಲ್ಲಿ ಪತ್ರಕರ್ತರ ಸಂಘಟನೆಯಾಗಿ ರೂಪುಗೊಂಡು ದಶಮಾನೋತ್ಸವ ಸಂಭ್ರದಲ್ಲಿರುವ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ತನ್ನ ಹತ್ತನೇ ವಾರ್ಷಿಕ ಮಹಾಸಭೆ ಇಂದಿಲ್ಲಿ ಶನಿವಾರ ಪೂರ್ವಾಹ್ನ ಸಯಾನ್‍ನ ಮುಖ್ಯ ಅಧ್ಯಾಪಕ ಭವನದಲ್ಲಿನ ಸ್ವಾಮಿ ನಿತ್ಯಾನಂದ ಸಭಾಗೃಹದಲ್ಲಿ ನಡೆಸಿದ್ದು ಮಹಾಸಭೆಯ ಅಧ್ಯಕ್ಷತೆ ವಹಿಸಿ ಪಾಲೆತ್ತಾಡಿ ಮಾತನಾಡಿದರು.

ಸಂಘದ ಪತ್ರಕರ್ತರ ಭವನ ಸಮಿತಿ ಕಾರ್ಯಧ್ಯಕ್ಷ ಡಾ| ಶಿವ ಎಂ.ಮೂಡಿಗೆರೆ, ಕ್ರೀಡಾ ಸಮಿತಿ ಕಾರ್ಯಧ್ಯಕ್ಷ ಜಯ ಸಿ.ಪೂಜಾರಿ ವೇದಿಕೆಯಲ್ಲಿ ಆಸೀನರಾಗಿದ್ದು, ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ಯಾಮ್ ಎಂ.ಹಂಧೆ, ಜನಾರ್ದನ ಎಸ್.ರೈ ಪುರಿಯಾ, ಡಾ| ದಿನೇಶ್ ಶೆಟ್ಟಿ ರೆಂಜಾಳ, ಗುರುದತ್ತ್ ಎಸ್.ಪೂಂಜಾ ಮುಂಡ್ಕೂರು, ವಿಶ್ವನಾಥ್ ವಿ. ಪೂಜಾರಿ ನಿಡ್ಡೋಡಿ, ಸಲಹಾ ಸಮಿತಿ ಸದಸ್ಯರಾದÀ ಸಿಎ| ಐ.ಆರ್ ಶೆಟ್ಟಿ, ನ್ಯಾ| ಬಿ.ಮೋಹಿದ್ಧೀನ್ ಮುಂಡ್ಕೂರು, ಗ್ರೆಗೋರಿ ಡಿ'ಅಲ್ಮೇಡಾ, ಡಾ| ಸುನೀತಾ ಎಂ.ಶೆಟ್ಟಿ, ಸುರೇಂದ್ರ ಎ.ಪೂಜಾರಿ, ವಿಶೇಷ ಆಮಂತ್ರಿತ ಸದಸ್ಯರಾದ ಸುರೇಶ್ ಶೆಟ್ಟಿ ಯೆಯ್ಯಾಡಿ, ಶ್ರೀಧರ್ ಉಚ್ಚಿಲ್, ಸುಧಾಕರ್ ಉಚ್ಚಿಲ್ ಸಭೆಯಲ್ಲಿದ್ದರು.

ಸಿಎ| ಐ.ಆರ್ ಶೆಟ್ಟಿ ಮಾತನಾಡಿ ಪತ್ರಕರ್ತರಿಗೆ ಅವರದ್ದೆ ಆದ ಜವಾಬ್ದಾರಿಗಳಿವೆ. ಅದನ್ನು ನಿಭಾಯಿಸಿ ಕೊಳ್ಳುವುದರೊಂದಿಗೆ ಮುಂಬಯಿಯಲ್ಲಿ ಸಂಘವೊಂದನ್ನು ಕಟ್ಟಿ ಅದು ದಶಮಾನೋತ್ಸವ ಸಂಭ್ರಮದಲ್ಲಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಕಳೆದ ಹತ್ತು ವರ್ಷಗಳಿಂದ ಸಂಘದ ಒಡನಾಡದಲ್ಲಿದ್ದೇನೆ. ನಮ್ಮಲ್ಲಿ ಗೊಂದಲಗಳಿದ್ದ ಪಕ್ಷದಲ್ಲಿ ಅದನ್ನು ಒಮ್ಮತದಿಂದ ಕೂತು ಬಗೆಹರಿಸಿಕೊಳ್ಳಬೇಕು. ಸಮಸ್ಯೆಗಳಿಗೆ ನ್ಯಾಯಯುತವಾಗಿ ಪರಿಹಾರ ಹುಡುಕಬೇಕು. ಸಂಘವು ಭವಿಷ್ಯದಲ್ಲಿ ಇನ್ನಷ್ಟು ಸಾಧನೆಗಳನ್ನು ಮಾಡುವಂತಾಗಲಿ ಎಂದು ಸಲಹಿಸಿದರು.

ನ್ಯಾ| ಬಿ.ಮೋಹಿದ್ಧೀನ್ ಸಂಘವು ದಶಮಾನೋತ್ಸವ ಸಂಭ್ರಮವನ್ನು ಆಚರಿಸಿಕೊಂಡಿರುವುದು ಶ್ಲಾಘನೀಯ ವಿಚಾರವಾಗಿದೆ. ವಾರ್ಷಿಕ ಮಹಾಸಭೆ ಎಂದಾಗ ಅಲ್ಲಿ ಸಿಹಿ-ಕಹಿ ಎಲ್ಲವೂ ಇರುತ್ತದೆ. ಸಂಘ-ಸಂಸ್ಥೆಗಳಲ್ಲಿ ತಪ್ಪುಗಳಾದಾಗ ಅದನ್ನು ಸರಿಪಡಿಸಿಕೊಳ್ಳಲು ದಾರಿ ಹುಡುಕಬೇಕು. ಎಲ್ಲರು ಒಮ್ಮತ ಮತ್ತು ಒಗ್ಗಟ್ಟಿನಿಂದ ಸಂಸ್ಥೆಯನ್ನು ಮುನ್ನಡೆಸಿ ಇನ್ನಷ್ಟು ಸಾ`Àನೆಗಳನ್ನು ಮಾಡುವಂತಾಗಲಿ ಮಾತನಾಡಿ ಎಂದು ಸಲಹಿಸಿದರು.


ಡಾ| ಸುನೀತಾ ಶೆಟ್ಟಿ ಮಾತನಾಡಿ ಕನ್ನಡಿಗ ಪತ್ರಕರ್ತರ ಸಂಘದ ಸ್ಥಾಪನೆಯಿಂದ ಹಿಡಿದು ಇಲ್ಲಿಯವರೆಗೆ ರೋನ್ಸ್ ಬಂಟ್ವಾಳ್ ಅವರ ಯೋಗದಾನ ಮಹತ್ತರವಾಗಿದೆ. ಅದನ್ನು ನಾವು ಎಂದಿಗೂ ಮರೆಯಬಾರದು. ಸಂಘವು ಇತ್ತೀಚೆಗೆ ದಶಮಾನೋತ್ಸವವನ್ನು ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ಅವರ ನೇತೃತ್ವದಲ್ಲಿ ಅರ್ಥಪೂರ್ಣವಾಗಿ ಆಯೋಜಿಸಿ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಭವಿಷ್ಯದಲ್ಲೂ ಸಂಘವು ಅಭಿವೃದ್ಧಿಯತ್ತ ಸಾಗಲಿ ಎಂದರು.

ಹತ್ತು ವರ್ಷಗಳಲ್ಲಿ ಎಲ್ಲಾ ಪತ್ರಕರ್ತರ ಒಳನಾಟವನ್ನಿರಿಸಿ ಸಂಸ್ಥೆಯನ್ನು ಪರಿವಾರವಾಗಿಸಿ ಮುನ್ನಡೆಸಿದ ಸಂಘದ ಗೌ| ಪ್ರ| ಕಾರ್ಯದರ್ಶಿ ರೋನ್ಸ್ ಬಂಟ್ವಾಳ್ ಅವರು ಏನೋ ಬೇಜಾರಿನಲ್ಲಿರುವುದು ಸ್ಪಷ್ಟವಾಗುತ್ತಿದೆ ಅದಕ್ಕೆ ಅವರು ಮನದಾಳದ ಮಾತುಗಳನ್ನು ಇಲ್ಲೇ ತಿಳಿಸಬೇಕು ನಾವೆಲ್ಲರೂ ಒಗ್ಗೂಡಿ ಅದಕ್ಕೆ ಪರಿಹಾರ ಕಂದುಕೊಳ್ಳಬೇಕುಎಂದು ಸುರೇಂದ್ರ ಪೂಜಾರಿ ಮನವಿ ಮಾಡಿದರು.

2018-2019ರ ಸಾಲಿಗೆ ಲೆಕ್ಕಪರಿಶೋಧಕರನ್ನಾಗಿ ಮತ್ತೆ ನಗರದÀ ಪ್ರತಿಷ್ಠಿತ ಚಾರ್ಟರ್ಡ್ ಎಕೌಂಟೆಂಟ್ ಸಂಸ್ಥೆ ಸಿಎ| ಐ.ಆರ್ ಶೆಟ್ಟಿ ಎಂಡ್ ಅಸೋಸಿಯೇಟ್ಸ್‍ನ್ನೇ ಸಭೆ ಪುನಾರಾಯ್ಕೆ ಗೊಳಿಸಿತು. ಸಭಿಕರ ಪರವಾಗಿ ಕುಂಠಿನಿ ಪ್ರಕಾಶ್ ಹೆಗ್ಡೆ, ಸಾ.ದಯಾ, ಗೋಪಾಲ್ ತ್ರಾಸಿ ಮಾತನಾಡಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಸಂಘದ ಶ್ರೇಯೋನ್ನತಿಗೆ ಶುಭಾರೈಸಿದರು.

ವಿಶೇಷವಾಗಿ ಉಪಸ್ಥಿತ ಡಾ| ವ್ಯಾಸರಾಯ ನಿಂಜೂರು, ಡಾ| ಜಿ.ಎನ್ ಉಪಾಧ್ಯಾಯ, ಹಿರಿಯ ಪತ್ರಕರ್ತ್ ರಾಮಮೋಹನ್ ಬಳ್ಕುಂಜೆ, ಕಿರಣ್ ರೈ ಕರ್ನೂರು, ಹರೀಶ್ ಮೂಡಬಿದ್ರೆ ಪುಣೆ, ಆರೀಫ್ ಕಲಕಟ್ಟಾ, ಜಯ ಸಿ.ಸಾಲ್ಯಾನ್, ಗೋಪಾಲ ತ್ರಾಸಿ, ನಿತ್ಯಾನಂದ್ ಹಾಲ್‍ನ ಶಂಕರ್ ಶೆಟ್ಟಿ ಮತ್ತು ಸಲಹಾಗಾರರಿಗೆ ಅಧ್ಯಕ್ಷರು ಪುಷ್ಪಗಳನ್ನಿತ್ತು ಗೌರವಿಸಿದರು.

ಗತಸಾಲಿನಲ್ಲಿ ಅಗಲಿದ ಎಲ್ಲಾ ಪತ್ರಕರ್ತರಿಗೆ ಸಭೆಯ ಆದಿಯಲ್ಲಿ ಬಾಷ್ಪಾಂಜಲಿ ಕೋರಲಾಯಿತು. ಸಂಘದ ಗೌ| ಪ್ರ| ಕಾರ್ಯದರ್ಶಿ ರೋನ್ಸ್ ಬಂಟ್ವಾಳ್ ಸ್ವಾಗತಿಸಿ ಗತ ವಾರ್ಷಿಕ ಮಹಾಸಭೆ ವರದಿ ತಿಳಿಸಿದರು. ಜೊತೆ ಕಾರ್ಯದರ್ಶಿ ಬಾಬು ಕೆ.ಬೆಳ್ಚಡ ಸಂಘದ ವಾರ್ಷಿಕ ಚಟುವಟಿಕೆಗಳನ್ನು ಭಿತ್ತರಿಸಿದರು. ಗೌ| ಕೋಶಾಧಿಕಾರಿ ಪ್ರೇಮನಾಥ್ ಬಿ.ಶೆಟ್ಟಿ ಮುಂಡ್ಕೂರು ವಾರ್ಷಿಕ ಲೆಕ್ಕಪತ್ರದ ಮಾಹಿತಿಯಿತ್ತರು. ಉಪಾಧ್ಯಕ್ಷ ದಯಾಸಾಗರ್ ಚೌಟ ಕಲಾಪ ನಡೆಸಿದರು. ಡಾ| ಶಿವ ಎಂ.ಮೂಡಿಗೆರೆ ವಂದಿಸಿದರು.

 

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here