Tuesday 18th, June 2019
canara news

ಭಾರತ್ ಬ್ಯಾಂಕ್‍ನ 2018-2021ರ ಸಾಲಿನ ನಿರ್ದೇಶಕ ಮಂಡಳಿಯ ಚುನಾವಣೆ

Published On : 04 Oct 2018   |  Reported By : Rons Bantwal


ಭರ್ಜರಿ ಜಯಭೇರಿ ಸಾಧಿಸಿದ ಜಯ ಸಿ.ಸುವರ್ಣ ಬಳಗ
(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)


ಮುಂಬಯಿ, ಅ.04: ರಾಷ್ಟ್ರದ ಪ್ರತಿಷ್ಠಿತ ಹಣಕಾಸು ಸಂಸ್ಥೆ ದಿ.ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ಇದರ 2018-2021ರ ಸಾಲಿನ ನಿರ್ದೇಶಕ ಮಂಡಳಿಗೆ ಬ್ಯಾಂಕ್‍ನ ಸರ್ವಾಂಗೀಣ ಅಭಿವೃದ್ಧಿಯ ರೂವಾರಿ, ಹಾಲಿ ಕಾರ್ಯಧ್ಯಕ್ಷ ಜಯ ಸಿ.ಸುವರ್ಣ ಅವರ ಬಳಗ ಎಲ್ಲಾ ಸ್ಪರ್ಧಿಗಳು ಭಾರೀ ಮತಗಳಿಂದ ಭರ್ಜರಿ ಜಯಭೇರಿ ಸಾಧಿಸಿದೆ.

ಇಂದಿಲ್ಲಿ ಗುರುವಾರ ಗೋರೆಗಾಂವ್ ಪೂರ್ವದ ಬ್ರಿಜ್‍ವಾಸಿ ಪ್ಯಾಲೇಸ್ ಸಭಾಗೃಹದಲ್ಲಿ ನಡೆಸಲ್ಪಟ್ಟ ಮತ ಎಣಿಕೆಯಲ್ಲಿ ದೇಶದ ಮೂರು ರಾಜ್ಯಗಳಾದ ಮಹಾರಾಷ್ಟ್ರ, ಕರ್ನಾಟಕ ಮತ್ತು ಗುಜರಾತ್‍ನಲ್ಲಿ ಕಳೆದ ಮಂಗಳವಾರ ನಡೆದ ಚುನಾವಣೆಯ ಓಟಿನ ಚೀಟಿಗಳುಳ್ಳ (ಬ್ಯಾಲೆಟ್ ಪೇಪರ್) ಮತಪೆಟ್ಟಿಗೆಗಳನ್ನು ಭದ್ರತಾಧಿಕಾರಿಗಳು, ಚುನಾವಣಾಧಿಕಾರಿಗಳು ಮತ್ತು ಆಕಾಂಕ್ಷಿಗÀಳೆಲ್ಲರ ಸಮ್ಮುಖದಲ್ಲೇ ತೆರೆದು ಮುಖ್ಯ ಚುನಾವಣಾಧಿಕಾರಿ ಆಗಿದ್ದ ಕೋ.ಆಪರೇಟಿವ್ ಸೊಸೈಟಿ ಹೆಚ್ಚುವರಿ ರಿಜಿಸ್ತ್ರಾರ್ ಎ.ಕೆ ಚವ್ಹಾಣ್ ತನ್ನ ನೇತೃತ್ವದಲ್ಲಿ ಬೆಳಿಗ್ಗಿನಿಂದ ಮತ ಎಣಿಕೆ ನಡೆಸಿದರು.

ಸಂಜೆ ತನಕ ಭಾರತ್ ಬ್ಯಾಂಕ್‍ನ ಸಿಇಒ ಮತ್ತು ಆಡಳಿತ ನಿರ್ದೇಶಕ ಸಿ.ಆರ್ ಮೂಲ್ಕಿ ಉಪಸ್ಥಿತಿಯಲ್ಲಿ ಎ.ಕೆ ಚವ್ಹಾಣ್ ಮತದಾನ ಫಲಿತಾಂಶ ಘೋಷಿಸಿ ವಿಜೇತರ ಯಾದಿ ಪ್ರಕಟಿಸಿದ್ದು ಹದಿನೇಳು ಸ್ಥಾನಗಳಿಗೆ ಹತ್ತೊಂಬತ್ತು ಆಕಾಂಕ್ಷಿಗಳು ಕಣದಲ್ಲಿದ್ದು ಹೆಚ್ಚುವರಿ ಎರಡು ಸ್ಪರ್ಧಿಗಳ ನಿಮಿತ್ತ ನಡೆದ ಚುನಾವಣೆಯಲ್ಲಿ ಜಯ ಸುವರ್ಣರ ತಂಡದ ಪ್ರತಿಸ್ಪರ್ಧಿ ಬ್ಯಾಂಕ್‍ನ ಮಾಜಿ ನಿರ್ದೇಶಕ ರೋಹಿತ್ ಎಂ.ಸುವರ್ಣ 2,871 ಮತಗಳೊಂದಿಗೆ ಸ್ಥಾನ ಕಳಕೊಂಡರೆ ಇದೇ ಬ್ಯಾಂಕ್‍ನಲ್ಲೇ ಉದ್ಯೋಗಿಯಾಗಿದ್ದು ನಿವೃತ್ತಿಯಾಗಿ ನಿರ್ದೇಶಕ ಮಂಡಳಿಗೆ ಸವಾಲೆರೆದು ಸ್ಪರ್ಧಿಸಿದ ಸತೀಶ್ ಎನ್.ಬಂಗೇರ 2,672 ಮತಗಳನ್ನು ಗಳಿಸುವುದರೊಂದಿಗೆ ಸೋಲುಂಡು ತೀವ್ರ ಮುಖಭಂಗ ಅನುಭವಿಸುವಂತಾಯಿತು.

ವಿಜೇತರಲ್ಲಿ ಎಲ್.ವಿ ಅವಿೂನ್ (12,685) ಮತಗಳನ್ನು ಪಡೆದರೆ, ನ್ಯಾ| ಎಸ್.ಬಿ ಅವಿೂನ್ (12,213), ಜೆ.ಎ ಕೋಟ್ಯಾನ್ (12,560), ಪ್ರೇಮನಾಥ್ ಪಿ.ಕೋಟ್ಯಾನ್ (12,467), ಪುರುಷೋತ್ತಮ ಎಸ್.ಕೋಟ್ಯಾನ್ (12,673), ವಾಸುದೇವ ಆರ್.ಕೋಟ್ಯಾನ್ (12,684), ದಾಮೋದರ ಸಿ.ಕುಂದರ್ (12,543), ಎನ್.ಟಿ ಪೂಜಾರಿ (12,803), ಗಂಗಾಧರ್ ಜೆ.ಪೂಜಾರಿ (12,741), ಕೆ.ಬಿ ಪೂಜಾರಿ (12,645), ಮೋಹನ್‍ದಾಸ್ ಎ.ಪೂಜಾರಿ (12,652), ಯು.ಎಸ್ ಪೂಜಾರಿ (12,540), ಭಾಸ್ಕರ್ ಎಂ.ಸಾಲ್ಯಾನ್ (12,620), ಜಯ ಸಿ.ಸುವರ್ಣ (12,729), ಜ್ಯೋತಿ ಕೆ.ಸುವರ್ಣ (12,503), ಕೆ. ಎನ್ ಸುವರ್ಣ(12,039), ಸೂರ್ಯಕಾಂತ್ ಜೆ.ಸುವರ್ಣ (11,863) ಮತಗಳನ್ನು ಪಡೆದು ವಿಜೇತರಾದರು.

ಮಹಾರಾಷ್ಟ್ರ, ಕರ್ನಾಟಕ, ಗುಜರಾತ್ ಈ ಮೂರು ರಾಜ್ಯಗಳಲ್ಲಿನ ಬ್ಯಾಂಕ್ ಕಾರ್ಯಾಚರಣಾ ಪ್ರದೇಶಗಳಲ್ಲಿ ಒಟ್ಟು 45 ಕೇಂದ್ರಗಳನ್ನು ರಚಿಸಿ ಬ್ಯಾಂಕ್‍ನ ಷೇರುದಾರರಿಗೆ ಮತದಾನ ಮಾಡುವ ಅವಕಾಶ ಒದಗಿಸಲಾಗಿತ್ತು. ಎಲ್ಲೆಡೆ ಸೇರಿ ಒಟ್ಟು 13,958 ಮತಗಳು ಚಲಾವಣೆ ಗೊಂಡಿವೆ ಎಂದು ಚುನಾವಣಾಧಿಕಾರಿ ಚವ್ಹಾಣ್ ಮಾಹಿತಿ ನೀಡಿದರು. ಸಂದೀಪ್ ದೇಶ್‍ಮುಖ್, ಬಿ.ಡಿಗೋಸ್ವಾಮಿ, ಡಾ| ರಾಜರಾಮ್ ಧೊಣ್ಕರ್ ಮತ್ತು ವಿದ್ಯಾನಂದ ಎಸ್.ಕರ್ಕೇರ ಹೆಚ್ಚುವರಿ ಚುನಾವಣಾಧಿಕಾರಿಗಳಾಗಿದ್ದು ಮತಎಣಿಕಾ ಪ್ರಕ್ರಿಯೆಯಲ್ಲಿ ಸಹಕರಿಸಿದ್ದರು.

ಒಟ್ಟು ಇಪ್ಪತ್ತೆರಡು ಸ್ಥಾನಗಳಿರುವ ಬ್ಯಾಂಕ್‍ನ ನಿರ್ದೇಶಕ ಮಂಡಳಿಗೆ ಇಬ್ಬರು ಮಹಿಳಾ ಸದಸ್ಯೆಯರು, ಇಬ್ಬರು ಸಹ ಸದಸ್ಯರು (ಕೋ.ಆಪ್ಟೆಡ್) ಮತ್ತು ಒಂದು ಹಿಂದುಳಿದ ಜಾತಿ ಮತ್ತು ಪರಿಶಿಷ್ಟ ವರ್ಗದ ಸ್ಥಾನಗಳನ್ನು ಹೊರತು ಪಡಿಸಿ ಉಳಿದ ಸ್ಥಾನಗಳಿಗೆ ಮತದಾನ ನಡೆಸಲಾಗಿತ್ತು. ಇಂದು ಶುಕ್ರವಾರ (ಅ.05) ಬ್ಯಾಂಕ್‍ನ 2018-2021ರ ಸಾಲಿನ ಒಟ್ಟು ಮಂಡಳಿಯನ್ನು ಚುನಾವಣಾಧಿಕಾರಿ ಅಧಿಕೃತವಾಗಿ ಪ್ರಕಟಿಸಲಿರುವರು ಎಂದು ಬ್ಯಾಂಕ್‍ನ ಉನ್ನತ ಮೂಲಗಳು ತಿಳಿಸಿವೆ.

 ಜಯ ಸುವರ್ಣರ ಅಭಿಮಾನಿ-ಹಿತೈಷಿಗಳಿಂದ ಸಂಭ್ರಮಾಚರಣೆ:

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಪ್ರಾಯೋಜಕತ್ವದ ರಾಷ್ಟ್ರದ ಪ್ರತಿಷ್ಠಿತ ಹಣಕಾಸು ಸಂಸ್ಥೆ ದಿ.ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ಆಗಿ ಹೆಗ್ಗಳಿಕೆಗೆ ಪಾತ್ರವಾದ ಬ್ಯಾಂಂಕ್‍ನ ಚುನಾವಣೆ ಶಾಂತಿಯುತವಾಗಿಯೇ ನಡೆಸಲ್ಪಟ್ಟ ಕಾರಣ ಅಸೋಸಿಯೇಶನ್‍ನ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ ಎಲ್ಲಾ ಮತದಾರರನ್ನು,ಚುನಾವಣಾಧಿಕಾರಿ, ಸಿಬ್ಬಂದಿಗಳನ್ನು ಮತ್ತು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಶ್ರಮಿಸಿದ ಎಲ್ಲರನ್ನೂ ಅಭಿವಂದಿಸಿದರು.

ಈ ಸಂದರ್ಭದಲ್ಲಿ ಅಸೋಸಿಯೇಶನ್‍ನ ಉಪಾಧ್ಯಕ್ಷರುಗಳಾದ ಹರೀಶ್ ಜಿ.ಅವಿೂನ್, ದಯಾನಂದ್ ಆರ್. ಪೂಜಾರಿ, ಶ್ರೀನಿವಾಸ ಆರ್.ಕರ್ಕೇರ, ಗೌ| ಪ್ರ| ಕಾರ್ಯದರ್ಶಿ ಧನಂಜಯ ಎಸ್.ಕೋಟ್ಯಾನ್, ಯುವಾಭ್ಯುದಯ ಸಮಿತಿ ಕಾರ್ಯಾಧ್ಯಕ್ಷ ನಾಗೇಶ್ ಎನ್.ಕೋಟ್ಯಾನ್ ಸೇರಿದಂತೆ ಇತರೇ ಪದಾಧಿಕಾರಿಗಳು, ಸದಸ್ಯರನೇಕರು ಬ್ಯಾಂಕ್‍ನ ಮಾಜಿ ನಿರ್ದೇಶಕರಾದ ನ್ಯಾ| ರೋಹಿಣಿ ಜೆ.ಸಾಲ್ಯಾನ್, ಎನ್.ಎಂ ಸನಿಲ್, ಜಗನ್ನಾಥ್ ವಿ. ಕೋಟ್ಯಾನ್, ನ್ಯಾ| ರಾಜಾ ವಿ.ಸಾಲ್ಯಾನ್, ಅನ್ಭಲ್ಗನ್ ಸಿ.ಹರಿಜನ್, ಹೊಟೇಲು ಉದ್ಯಮಿಗಳಾದ ರವಿ ಎಸ್.ಶೆಟ್ಟಿ (ಸಾಯಿ ಪ್ಯಾಲೇಸ್), ಶಾರದಾ ಎಸ್.ಕರ್ಕೇರ, ಹರೀಶ್ ಪೂಜಾರಿ, ರಾಮ ಜಿ.ಸುವರ್ಣ ಗೋರೆಗಾಂವ್, ಲಕ್ಷ ್ಮಣ್ ಸಿ.ಪೂಜಾರಿ (ಎನ್‍ಸಿಪಿ), ಧರ್ಮಪಾಲ್ ಜಿ.ಅಂಚನ್, ನಾರಾಯಣ ಪೂಜಾರಿ ಕಲ್ವಾ, ಶೋಭಾ ಹರೀಶ್ ಪೂಜಾರಿ ವಡಲಾ, ರತ್ನಾಕರ್ ಶೆಟ್ಟಿ ಮುಂಡ್ಕೂರು, ಉಳ್ತೂರು ಮೋಹನ್‍ದಾಸ್ ಶೆಟ್ಟಿ ಸೇರಿದಂತೆ ಬ್ಯಾಂಕ್‍ನ ಉನ್ನತಾಧಿಕಾರಿಗಳನೇಕರು ಹಾಜರಿದ್ದು ಫಲಿತಾಂಶವನ್ನು ಸಂಭ್ರಮಿಸಿದರು.

 

 
More News

ನಿಸ್ವಾರ್ಥ ಸಾಮಾಜಿಕ ಹೋರಾಟಗಾರ ಎಂ.ಸಂಜೀವ ನಿಧನ
ನಿಸ್ವಾರ್ಥ ಸಾಮಾಜಿಕ ಹೋರಾಟಗಾರ ಎಂ.ಸಂಜೀವ ನಿಧನ
ರಾಷ್ಟ್ರೀಯ ಬಿಲ್ಲವರ ಮಹಾಮಂಡಲಕ್ಕೆ ಡಾ| ರಾಜಶೇಖರ ಎಸ್.ಕೋಟ್ಯಾನ್ ನೂತನ ಅಧ್ಯಕ್ಷ
ರಾಷ್ಟ್ರೀಯ ಬಿಲ್ಲವರ ಮಹಾಮಂಡಲಕ್ಕೆ ಡಾ| ರಾಜಶೇಖರ ಎಸ್.ಕೋಟ್ಯಾನ್ ನೂತನ ಅಧ್ಯಕ್ಷ
ಕರ್ನಾಟಕ ಸಂಘ ಮುಂಬಯಿ ಅಧ್ಯಕ್ಷ-ಕಾರ್ಯಕಾರಿ ಸಮಿತಿಗಾಗಿನ  ಚುನಾವಣೆ
ಕರ್ನಾಟಕ ಸಂಘ ಮುಂಬಯಿ ಅಧ್ಯಕ್ಷ-ಕಾರ್ಯಕಾರಿ ಸಮಿತಿಗಾಗಿನ ಚುನಾವಣೆ

Comment Here