Friday 29th, March 2024
canara news

ಭಾರತ್ ಬ್ಯಾಂಕ್‍ನ ನೂತನ ಮಂಡಳಿಗೆ ಗೌರವಿಸಿದ ಮಾತೃಸಂಸ್ಥೆಬಿಲ್ಲವರ ಅಸೋಸಿಯೇಶನ್

Published On : 08 Oct 2018   |  Reported By : Rons Bantwal


ಬಿಲ್ಲವರ ಭವನದಲ್ಲಿ ಹರ್ಷೋದ್ಗಾರದಿಂದ ಸಂಭ್ರಮಿಸಲ್ಪಟ್ಟ ವಿಜಯೋತ್ಸವ 

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ,: ರಾಷ್ಟ್ರದ ಪ್ರತಿಷ್ಠಿತ ಹಣಕಾಸು ಸಂಸ್ಥೆ ದಿ.ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ಇದರ 2018-2023ರ ಸಾಲಿನ ನಿರ್ದೇಶಕ ಮಂಡಳಿಗೆ ಆಯ್ಕೆಯಾದ ನಿರ್ದೇಶಕ ಮಂಡಳಿಗೆ ಬ್ಯಾಂಕ್‍ನ ಮಾತೃಸಂಸ್ಥೆಯಾದ ಬಿಲ್ಲವರ ಅಸೋಸಿಯೇಶನ್ ಮುಂಬಯಿನಿಂದ ಗೌರವಿಸಿ ಅಭಿನಂದಿಸಲಾಯಿತು.

ಇಂದಿಲ್ಲಿ ಶುಕ್ರವಾರ ಸಂಜೆ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದ ಶ್ರೀ ನಾರಾಯಣಗುರು ಸಭಾಗೃಹದಲ್ಲಿ ಬಿಲ್ಲವರ ಅಸೋಸಿಯೇಶನ್‍ನ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ ಅಧ್ಯಕ್ಷತೆಯಲ್ಲಿ ಜರುಗಿಸಲ್ಪಟ್ಟ ಸನ್ಮಾನ ಸಮಾರಂಭದಲ್ಲಿ ಬ್ಯಾಂಕ್‍ನ ನಿರ್ದೇಶಕ ಮಂಡಳಿಗೆ ನೂತನವಾಗಿ ಆಯ್ಕೆಯಾದ ಶತಮಾನದ ಶ್ರೇಷ್ಠ ಸಮಾಜ ಸೇವಕ ಬಿರುದಾಂಕಿತ ಭಾರತ್ ಬ್ಯಾಂಕ್‍ನ ಸರ್ವಾಂಗೀಣ ಅಭಿವೃದ್ಧಿಯ ರೂವಾರಿ, ಹಾಲಿ ಕಾರ್ಯಧ್ಯಕ್ಷ, ಜಯ ಸಿ.ಸುವರ್ಣ ಮತ್ತು ಅವರ ಬಳಗಕ್ಕೆ ಸನ್ಮಾನಿಸಿ ಗೌರವಿಸಲಾಯಿತು.

ನಿರ್ದೇಶಕರಾಗಿ ಆಯ್ಕೆಗೊಂಡ ಜಯ ಸಿ.ಸುವರ್ಣ, ವಾಸುದೇವ ಆರ್.ಕೋಟ್ಯಾನ್, ಎಲ್.ವಿ ಅವಿೂನ್, ನ್ಯಾ| ಎಸ್.ಬಿ ಅವಿೂನ್, ಜೆ.ಎ ಕೋಟ್ಯಾನ್, ದಾಮೋದರ ಸಿ.ಕುಂದರ್, ಎನ್.ಟಿ ಪೂಜಾರಿ, ಗಂಗಾಧರ್ ಜೆ.ಪೂಜಾ ರಿ, ಕೆ.ಬಿ ಪೂಜಾರಿ, ಯು.ಎಸ್ ಪೂಜಾರಿ, ಜ್ಯೋತಿ ಕೆ.ಸುವರ್ಣ, ಭಾಸ್ಕರ್ ಎಂ.ಸಾಲ್ಯಾನ್, ಸೂರ್ಯಕಾಂತ್ ಜೆ.ಸುವರ್ಣ, ಪ್ರೇಮನಾಥ್ ಪಿ.ಕೋಟ್ಯಾನ್, ಮೋಹನ್‍ದಾಸ್ ಎ.ಪೂಜಾರಿ ಭಿವಂಡಿ, ಪುರುಷೋತ್ತಮ ಎಸ್.ಕೋಟ್ಯಾನ್, ನ್ಯಾ| ರೋಹಿಣಿ ಜೆ.ಸಾಲ್ಯಾನ್, ಶಾರದಾ ಸೂರು ಕರ್ಕೇರ ಮತ್ತು ಅವರಿಗೆ ಅಸೋಸಿಯೇಶನ್‍ನ ಪದಾಧಿಕಾರಿಗಳು ಸನ್ಮಾನಿಸಿ ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಅನುಪಸ್ಥಿತ ನಿರ್ದೇಶಕರಾದ ಕೆ.ಎನ್ ಸುವರ್ಣ ಮತ್ತು ಅನ್ಭಲ್ಗನ್ ಸಿ.ಹರಿಜನ್ ಅವರನ್ನೂ ಸ್ಮರಿಸಿ ಅಭಿನಂದಿಸಲಾಯಿತು.

ಇದೇ ಶುಭಾವಸರದಲ್ಲಿ ಚುನಾವಣಾ ಪ್ರಕ್ರಿಯೆಯಲ್ಲಿ ಅವಿರತವಾಗಿ ಶ್ರಮಿಸಿದ ಭಾರತ್ ಬ್ಯಾಂಕ್‍ನ ಮುಖ್ಯ ಸಿಇಒ ಮತ್ತು ಆಡಳಿತ ನಿರ್ದೇಶಕ ಸಿ.ಆರ್ ಮೂಲ್ಕಿ, ಪ್ರಧಾನ ಪ್ರಬಂಧಕರುಗಳಾದ ವಿದ್ಯಾನಂದ ಎಸ್.ಕರ್ಕೇರ (ಹೆಚ್ಚುವರಿ ಚುನಾವಣಾಧಿಕಾರಿ ಆಗಿದ್ದ), ನಿತ್ಯಾನಂದ ಎಸ್.ಕಿರೋಡಿಯನ್, ಸುರೇಶ್ ಎಸ್.ಸಾಲ್ಯಾನ್, ದಿನೇಶ್ ಬಿ.ಸಾಲ್ಯಾನ್ ಮತ್ತು ಕಾರ್ಯಕ್ರಮದಲ್ಲಿ ಉಪಸ್ಥಿತ ಎಸಿಪಿ ಸುಧಾಕರ ಪೂಜಾರಿ, ಸಿಎ| ಅಶ್ವಜಿತ್ ಹೆಜ್ಮಾಡಿ, ಗಣೇಶ ಪೂಜಾರಿ ಥಾಣೆ ಮತ್ತಿತರ ಗಣ್ಯರಿಗೆ ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು.

ಚಂದ್ರಶೇಖರ್ ಪೂಜಾರಿ ಮಾತನಾಡಿ ಅಖಂಡ ಸಮಾಜಕ್ಕೆ ಮೇರು ವ್ಯಕ್ತಿತ್ವವುಳ್ಳ ಜಯ ಸುವರ್ಣರು ಬಿಲ್ಲವರ ಅಸೋಸಿಯೇಶನ್ ಜೊತೆಗೆ ಭಾರತ್ ಬ್ಯಾಂಕ್‍ನ್ನೂ ಪರ್ವತದತ್ತ ಸಾಗಿಸಿ ಎಲ್ಲರಿಗೂ ಆಶ್ರಯದಾತರಾದವರು. ಬಿಲ್ಲವರ ಅಸೋಸಿಯೇಶನ್ ಮತ್ತು ಭಾರತ್ ಬ್ಯಾಂಕ್ ಇವೆರದೂ ನಾಣ್ಯದ ಎರಡು ಮುಖಗಳಿದ್ದಂತೆ. ಎಲ್ಲರ ಸಹಕಾರದಿಂದ ಈ ವಿಜಯಭೇರಿ ಸಾಧ್ಯವಾಗಿದೆ. ಬಿಲ್ಲವರು ಮತ್ತು ಸಮಾಜಜೇತರ ಬಂಧುಗಳÀನ್ನು ಒಗ್ಗೂಡಿ ಬ್ಯಾಂಕ್‍ನ್ನು ಉತ್ತುಂಗಕ್ಕೇರಿಸಿದ ಜಯ ಸುವರ್ಣರ ದೂರದೃಷ್ಠಿತ್ವವುಳ್ಳ ಕನಸುಗಳು ನನಸಾಗಲಿ. ಜೀವನದಲ್ಲಿ ಎಲ್ಲರೂ ಸಂತೋಷ ಸಮೃದ್ಧಿಯಿಂದ ಬಾಳುವಂಂತಾಗಲಿ ಎಂದು ಅಧ್ಯಕ್ಷ ಚಂದ್ರಶೇಖರ ಪೂಜಾರಿ ತಿಳಿಸಿದರು.

ಭಾರತ್ ಬ್ಯಾಂಕ್‍ನ್ನು ಇಷ್ಟೆತ್ತರÀಕ್ಕೇರಿಸಿ ನಿಲ್ಲಿಸುವಲ್ಲಿ ತಮ್ಮೆಲ್ಲರ ಸಹಯೋಗ ಪ್ರಧಾನವಾದುದು. ನಮ್ಮಮೇಲಿನ ತಮ್ಮೆಲ್ಲರ ಭರವಸೆಯೇ ಈ ಚುನಾವಣಾ ಫಲಿತಾಂಶವಾಗಿದೆ. ತಮ್ಮೆಲ್ಲರ ವಿಶ್ವಾಸವನ್ನು ಎಂದಿಗೂ ನಿರಾಶೆ ಮಾಡಲಾರೆವು. ಸದಾ ನಿಮಗೆ ವಿಶ್ವಾಸಿಗಳಾಗಿ ಇನ್ನೂ ಭರವಸೆಯ ಸೇವೆಯನ್ನೀಡುವೆವು ಎಂದು ಭಾವೋದ್ವೆಕರಾಗಿ ಜಯ ಸುವರ್ಣರು ವಿಜಯಕ್ಕೆ ಉತ್ತರಿಸಿದರು.

ಅಸೋಸಿಯೇಶನ್‍ನ ಉಪಾಧ್ಯಕ್ಷರಾದ ಶಂಕರ ಡಿ.ಪೂಜಾರಿ, ಹರೀಶ್ ಜಿ.ಅವಿೂನ್, ದಯಾನಂದ್ ಆರ್. ಪೂಜಾರಿ, ಶ್ರೀನಿವಾಸ ಆರ್.ಕರ್ಕೇರ, ಗೌ| ಪ್ರ| ಕೋಶಾಧಿಕಾರಿ ರಾಜೇಶ್ ಜೆ.ಬಂಗೇರ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜಯಂತಿ ವಿ.ಉಳ್ಳಾಲ್ ವೇದಿಕೆಯಲ್ಲಿದ್ದರು.

ಕಾರ್ಯಕ್ರಮದಲ್ಲಿ ಇತರ ಪದಾಧಿಕಾರಿಗಳು ಸೇರಿದಂತೆ ವಿವಿಧ ಉಪಸಮಿತಿ, ಸ್ಥಳಿಯ ಸಮಿತಿಗಳ ಮುಖ್ಯಸ್ಥರು, ಕಾರ್ಯಕಾರಿ ಸಮಿತಿ ಸದಸ್ಯರು, ಬ್ಯಾಂಕ್‍ನ ಮಾಜಿ ನಿರ್ದೇಶಕರು, ಉನ್ನತಾಧಿಕಾರಿಗಳು, ಹಿತೈಷಿಗಳನೇಕರು ಉಪಸ್ಥಿತರಿದ್ದು ಜಯ ಸುವರ್ಣ ಮತ್ತು ಅಖಂಡ ತಂಡವನ್ನು ಅಭಿನಂದಿಸಿ ಶುಭಾರೈಸಿದರು.

ಆಯ್ಕೆಗೊಂಡ ನೂತನ ಬ್ಯಾಂಕ್ ಮಂಡಳಿಯು ಗೋರೆಗಾಂನಿಂದ ನೇರವಾಗಿ ಬಿಲ್ಲವ ಭವನಕ್ಕಾಗಮಿಸಿ ಭವನದ ಮಂದಿರದಲ್ಲಿ ಪ್ರತಿಷ್ಠಾಪಿತ ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರತಿಮೆಗೆ ಪೂಜೆ ನೆರವೇರಿತು ಹಾಗೂ ಕೋಟಿ ಚೆನ್ನಯ ಮತ್ತು ಕಾಂತಬಾರೆ ಬೂದಬಾರೆ ಭಾವಚಿತ್ರಕ್ಕೆ ಪುಷ್ಪಾರ್ಚನೆ, ಆರತಿಗೈದು ಅಭಿವಂದಿಸಿದರು. ಸನ್ಮಾನ ಸಮಾರಂಭದ ಬಳಿಕ ಮನೋರಂಜನಾ ಕಾರ್ಯಕ್ರಮವಾಗಿ ನವೀನ್ ಪಡುಇನ್ನ ಸಂಚಾಲಕತ್ವದಲ್ಲಿ ಉಮೇಶ್ ಮೀಜಾರು ಸಾರಥ್ಯದ ನಮ್ಮ ಕಲಾವಿದೆರ್ ಬೆದ್ರ ತಂಡವು `ತೆಲಿಕೆದ ಗೊಂಚಿಲ್' ಕಾರ್ಯಕ್ರಮ ಪ್ರಸ್ತುತಪಡಿಸಿತು.

ಬಿಲ್ಲವರ ಅಸೋಸಿಯೇಶನ್‍ನ ಗೌರವ ಪ್ರಧಾನ ಕಾರ್ಯದರ್ಶಿ ಧನಂಜಯ ಎಸ್.ಕೋಟ್ಯಾನ್ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಅಕ್ಷಯ ಮಾಸಿಕದ ಸಹ ಸಂಪಾದಕ ಹರೀಶ್ ಹೆಜ್ಮಾಡಿ ಪುರಸ್ಕೃತರನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆಗೈದರು.

ಬಿಲ್ಲವರ ಭವನದಲ್ಲಿ ಮುಗಿಲು ಮುಟ್ಟಿದ ವಿಜಯೋತ್ಸವ:
ಬಿಲ್ಲವರ ಅಸೋಸಿಯೇಶನ್ ಮುಂಬಯಿ ಪ್ರಾಯೋಜಕತ್ವದ ರಾಷ್ಟ್ರದ ಪ್ರತಿಷ್ಠಿತ ಹಣಕಾಸು ಸಂಸ್ಥೆ ಭಾರತ್ ಬ್ಯಾಂಕ್ ಲಿಮಿಟೆಡ್ ಆಗಿ ಹೆಗ್ಗಳಿಕೆಗೆ ಪಾತ್ರವಾದ ಬ್ಯಾಂಕ್‍ನ ಚುನಾವಣೆ ಶಾಂತಿಯುತವಾಗಿಯೇ ನಡೆಸಲ್ಪಟ್ಟ ಕಾರಣ ಸಾಂತಕ್ರೂಜ್ ಅಲ್ಲಿನ ಬಿಲ್ಲವರ ಅಸೋಸಿಯೇಶನ್‍ನ ಬಿಲ್ಲವರ ಭವನದಲ್ಲಿ ಅಧ್ಯಕ್ಷ ಚಂದ್ರಶೇಖರ ಪೂಜಾರಿ ಮುಂದಾಳುತ್ವದಲ್ಲಿ ಭಾರೀ ಸಂಭ್ರಮಾಚಾರಣೆ ನಡೆಸಲ್ಪಟ್ಟಿತು. ಅಸೋಸಿಯೇಶನ್‍ನ ಪದಾಧಿಕಾರಿಗಳು, ಸದಸ್ಯರನೇಕರು ಬ್ಯಾಂಕ್‍ನ ನಿರ್ಗಮನ, ಮಾಜಿ ನಿರ್ದೇಶಕರು, ಉನ್ನತಾಧಿಕಾರಿಗಳು ಹಾಜರಿದ್ದು ಸಿಹಿತಿಂಡಿ ಹಂಚಿ ಹರ್ಷೋಲ್ಲಾಸದಿಂದ ಕುಣಿದು ಕುಪ್ಪಳಿಸಿ ವಿಜಯೋತ್ಸವ ಸಂಭ್ರಮಿಸಿದರು.

 

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here