Tuesday 18th, June 2019
canara news

ಲೇಖಕಿ ಹೇಮಾ ಸದಾನಂದ ಅವಿೂನ್ ಅವರ ಕಥಾ ಸಂಕಲನ ಮತ್ತು ಕವನ ಸಂಕಲನ ಬಿಡುಗಡೆ

Published On : 09 Oct 2018   |  Reported By : Rons Bantwal


ಮುಂಬಯಿನಲ್ಲಿ ಸಾಹಿತ್ಯಕೃಷಿಗೆ ವಿಫುಲ ಅವಕಾಶಗಳಿವೆ : ಡಾ| ಜಿ.ಎನ್ ಉಪಾಧ್ಯ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ,: ಮುಂಬಯಿ ವಿವಿ ಎಲ್ಲರಿಗೂ ತೆರೆದ ಮನೆ ಇದ್ದಂತ್ತಿದ್ದು ಮುಂಬಯಿಯಲ್ಲಿ ಸಾಹಿತ್ಯ ಕೃಷಿಗೆ ಇನ್ನೂ ತುಂಬಾ ಅವಕಾಶಗಳಿವೆ. ಆದುದರಿಂದಲೇ ಹೇಮಾ ಅವಿೂನ್ ಅವಳಿಜವಳಿ ಕೃತಿಗಳನ್ನು ಅನಾವರಣ ಗೊಳಿಸುವಲ್ಲಿ ಯಶಕಂಡಿದ್ದಾರೆ. ಅವರೋರ್ವ ಮಹಿಳಾ ಸಾಂಘಿಕತ್ವಕ್ಕೆ ಸಂಚಲನಗೊಳಿಸಿದ ಧೀಮಂತ ಲೇಖಕಿ. . ಕಷ್ಟನಷ್ಟಗಳಿಂದ ಬೆಳೆದ ಓರ್ವ ಸೃಜಶೀಲ ಪ್ರತಿಭೆ ಹೇಮಾ ಅವರು ಕಥೆ ಮತ್ತು ಕವನಗಳ ಉಭಯ ಮಾಧ್ಯಮಗಳಿಂದ ಬೆಳೆಯುತ್ತಿದ್ದಾರೆ. ಇದು ನಿಜವಾದ ಸಾಹಿತ್ಯ ಪ್ರೀತಿ.ಒಳನಾಡ ಮತ್ತು ಹೊರನಾಡ ಕನ್ನಡಿಗರ ಸಂಬಂಧ ಬೆಳೆಸುವ ಕಾರ್ಯಕ್ರಮ ಇದಾಗಿಸಿದ್ದಾರೆ. ಆದುದರಿಂದ ಇದೊಂದು ನಾಡಹಬ್ಬ ಕಾರ್ಯಕ್ರಮವೇ ಸರಿ. ಇಂತವರಿಂದಲೇ ಮುಂಬಯಿಯಲ್ಲಿ ಒಳ್ಳೆಯ ಸಾಹಿತ್ಯ ಕೃಷಿ ನಡೆಯುತ್ತಿದೆ. ಅಭಿಜಿತ್ ಪ್ರಕಾಶನದ 98 ಮತ್ತು 99 ಕೃತಿಗಳಾಗಿ ಪ್ರಕಾಶಮಾನವಾಗುತ್ತಿವೆ ಎಂದು ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ ತಿಳಿಸಿದರು.

ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಮತ್ತು ನೃತ್ಯ ಅಭಿನಯ ಕಲಾಕ್ಷೇತ್ರ ಇವುಗಳ ಜಂಟಿ ಆಶ್ರಯದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಇಂದಿಲ್ಲಿ ಶನಿವಾರ ಅಪರಾಹ್ನ ಘಾಟ್ಕೋಪರ್ ಪಶ್ಚಿಮದ ಅಸಲ್ಫಾ ಇಲ್ಲಿನ ಶ್ರೀ ಕ್ಷೇತ್ರದ ಶ್ರೀ ಗೀತಾಂಬಿಕಾ ಸಭಾಗೃಹದಲ್ಲಿ ಮಹಾನಗರದ ಲೇಖಕಿ ಹೇಮಾ ಸದಾನಂದ ಅವಿೂನ್ ಅವರ `ಅವರೆಲ್ಲಾ ದೇವರಾಗಿದ್ದಾರೆ' ಕಥಾ ಸಂಕಲನ ಮತ್ತು `ಕಲ್ಯಾಣಿಯಲ್ಲಿ ಮಳೆ' ಕವನ ಸಂಕಲನ ಈ ಎರಡು ಕೃತಿಗಳ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಡಾ| ಜಿ.ಎನ್ ಉಪಾಧ್ಯ ಮಾತನಾಡಿದರು.

ಶ್ರೀ ಗೀತಾಂಬಿಕಾ ಸೇವಾ ಸಮಿತಿ ಅಧ್ಯಕ್ಷ ಕಡಂದಲೆ ಸುರೇಶ್ ಎಸ್.ಭಂಡಾರಿ ಮುಖ್ಯ ಅತಿಥಿüಯಾಗಿದ್ದು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶ್ರೀ ಕೃಷ್ಣ ವಿಠಲ ಪ್ರತಿಷ್ಠನದ ಸಂಸ್ಥಾಪಕಧ್ಯಕ್ಷ ವಿದ್ವಾನ್ ಕೈರಬೆಟ್ಟು ವಿಶ್ವನಾಥ್ ಭಟ್ ಅನುಗ್ರಹಿಸಿದರು.

ವಿದ್ಯಾಧರ ಕನ್ನಡ ಪ್ರತಿಷ್ಠಾನ ಧಾರವಾಡ (ಮುಂಬಯಿ) ಅಧ್ಯಕ್ಷ ವಿದ್ಯಾಧರ ಮುತಾಲಿಕ ದೇಸಾಯಿ, ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿ, ಅನನ್ಯ ಹಾರ್ಟ್ ಸಂಸ್ಥೆ ಮಂಡ್ಯ ಇದರ ನಿರ್ದೇಶಕಿ ಅನುಪಮ ಎನ್.ಎಸ್ ಗೌಡ, ಸಮಾಜ ಸೇವಕ ಕೃಷ್ಣ ಎಲ್.ಪೂಜಾರಿ, ಉದ್ಯಮಿ ಗಿರಿ ಸೂರ್ಯರಾಮ ಉಡುಪಿ, ಅತಿಥಿü ಅಭ್ಯಾಗತರುಗಳಾಗಿ ಉಪಸ್ಥಿತರಿದ್ದು, ಹುಬ್ಬಳ್ಳಿಯ ಹಿರಿಯ ಸಾಹಿತಿ, ಕಾದಂಬರಿಗಾರ್ತಿ ಸುನಂದ ಪ್ರಕಾಶ ಕಡಮೆ `ಅವರೆಲ್ಲಾ ದೇವರಾಗಿದ್ದಾರೆ' ಕೃತಿಯನ್ನು ಪತ್ರಕರ್ತ ಶ್ರೀನಿವಾಸಜೋಕಟ್ಟೆ `ಕಲ್ಯಾಣಿಯಲ್ಲಿ ಮಳೆ' ಕೃತಿ ಬಿಡುಗಡೆ ಗೊಳಿಸಿದರು. ಡಾ| ಉಮಾ ರಾವ್ ಅವರು ಕಥಾ ಸಂಕಲನ ಮತ್ತು ಕಾಳನಾಯಕ ವಿ.ಮೈಸೂರು ಅವರು ಕವನ ಸಂಕಲನವನ್ನು ಕ್ರಮವಾಗಿ ಪರಿಚಯಿಸಿದರು.

ಸುನಂದ ಪ್ರಕಾಶ್ ಮಾತನಾಡಿ ಒಂದು ಕಾಲಕ್ಕೆ ದುರ್ಬಲ ಪ್ರಕಾರವಾಗಿದ್ದ ಕಥಾ ಪ್ರಕಾರವು ಇಂದು ಯಶಸ್ವಿ ಪ್ರಕಾರವಾಗಿ ಬೆಳೆದು ನಿಂತಿದೆ. ಬ್ಲೇಡ್ ಮಾಡುವ ಕೆಲಸವನ್ನು ಇಂದಿನ ಕಥೆಗಳು ಮಾಡಬೇಕು ಎಂದರು.

ಸಮನಸ್ಸನ್ನು ಕಾಡುವ ಕವಿತೆಗಳು ಕಲ್ಯಾಣಿಯಲ್ಲಿ ಮಳೆ ಸಂಕಲನದಲ್ಲಿ ಇವೆ. ಲೇಖಕರಿಗೆ ವ್ಯಾಕರಣದ ಜತೆ ಅಂತಕರಣ ಇರಲಿ ಎಂದು ಜೋಕಟ್ಟೆ ತಿಳಿಸಿದರು.

ಇಂದು ಬರೆಯುವ ಜನಸಂಖ್ಯೆ ಹೆಚ್ಚು ಇದೆ. ಆದರೆ ಓದುಗ ಜನ ಕಡಿಮೆಯಾಗಿತ್ತಿದೆ. ಓದುವ ಹವ್ಯಾಸ ಕಡಿಮೆಯಾದಾಗ ಬರಹಗಾರರಿಗೆ ಪೆÇ್ರೀತ್ಸಹದ ಕೊರತೆಯಾಗುವುದು. ಪುಸ್ತಕ ಗೆಳೆಯ ಯಾ ಪ್ರೇಯಸಿ ಇದ್ದಂತೆ. ಲೇಖಕರೂ ಎಷ್ಟು ಬರೆದೆವು ಎಂಬುವುದಕ್ಕಿಂತ ಮುಖ್ಯವಾಗಿ ಏನನ್ನು ಬದೆದಿದ್ದೇವೆ ಎಂಬ ಅರಿವಿನ ಎಚ್ಚರಿಕೆಯಿಂದ ಕೃತಿಗಳನ್ನು ಬರೆಯಬೇಕು ಎಂದು ಸುರೇಶ್ ಭಂಡಾರಿ ನುಡಿದರು.

ಪಾಲೆತ್ತಾಡಿ ಮಾತನಾಡಿ ಬದುಕಿನ ಜತೆ ಗುರುತಿಸಿಕೊಂಡಾಗ ಕತೆ, ಕವಿತೆ, ಕಾದಂಬರಿ ಯಶಸ್ವಿ ಕೃತಿಗಳೆನ್ನಿಸಿ ಕೊಳ್ಳುತ್ತವೆ ಎಂದರು.

ನಿಖಿತಾ ಅವಿೂನ್ ಓರ್ವ ಪ್ರತಿಭೆಯ ಮಿಂಚುಳ್ಳಿಯಂತೆ. ಎಲ್ಲ ವಿಧಗಳನ್ನೂ ಸಂಗೀತನೃತ್ಯಮಯವಾಗಿಸುವ ಕಲಾವಿದೆ. ಕಲಾವಿದರಲ್ಲಿ ಗುಣವಂತಿಕೆ, ಧನವಂತಿಕೆ ಮತ್ತು ವಿದ್ಯಾವಂತಿಕೆ ಇದ್ದರೆ ಚೆಂದ. ಅವಾಗಲೇ ಕಲಾ ಪುಷ್ಟಿತನವನ್ನು ಬೆಳೆಸಿ ಉಳಿಸುವ ಹೃದಯ ಶ್ರೀಮಂತಿಕೆ ಸಾಧ್ಯ. ಕಲಾವಿದರು ಪೆÇೀತ್ಸಾಹ ಪ್ರಿಯರು ಮತ್ತೊಬ್ಬರಿಗೆ ಸಂತಸದಲ್ಲಿರಿಸುವ ಮಿನುಗುತಾರೆಯರೇ ಸರಿ ಎಂದು ವಿದ್ವಾನ್ ಕೈರಬೆಟ್ಟು ತಿಳಿಸಿದರು.

ವಿದ್ಯಾಧರ ದೇಸಾಯಿ ಮಾತನಾಡಿ ಕಳೆದ 45 ವರ್ಷಗಳಿಂದ ಮುಂಬಯಿಮಣ್ಣು ನನ್ನಂತರವರನ್ನು ಸಾಹಿತಿಯನ್ನಾಗಿಸಿದಂತೆ ಹೇಮಾರನ್ನೂ ಈ ಮಣ್ಣು ಲೇಖಕಿಯನ್ನಾಗಿಸಿ ಬೆಳೆಸಿದೆ. ನಾವೂ ಎಲ್ಲೆಲ್ಲಿ ನೋಡುತ್ತೇವೆಯೋ ಆ ದೃಷ್ಟಿಕೋನದಲ್ಲಿ ಅಲ್ಲಲ್ಲಿ ಕಾವ್ಯ ಹುಟ್ಟುತ್ತದೆ ಎಂದರು.

ಗಿರಿಜಾ ಅವಿೂನ್, ಸದಾನಂದ ಅವಿೂನ್ ಮತ್ತಿತರರು ಉಪಸ್ಥಿತರಿದ್ದು, ಸಾಂಸ್ಕೃತಿಕ ಕಾರ್ಯಕ್ರಮವಾಗಿ ಕು| ನಿಖಿತಾ ಸದಾನಂದ ಅವಿೂನ್ ನಿರ್ದೇಶನದಲ್ಲಿ ನೃತ್ಯ ಅಭಿನಯ ಕಲಾಕ್ಷೇತ್ರವು ನೃತ್ಯವೈಭವ ಪ್ರದರ್ಶಿಸಿತು. ಕು| ವಿದ್ಯಾ ರೋಹಿತ್ ಪೂಜಾರಿ ಅವರು ವೀಣಾವಾದನ ಪ್ರಸ್ತುತ ಪಡಿಸಿದರು.

ಕಲಾವಿದೆಯರು ಪ್ರಾರ್ಥನೆಯನ್ನಾಡಿದರು. ಕಲಾವಿದ ಕಿರಣ ದೇಸಾಯಿ ಸಾಲಹಳ್ಳಿ ಅತಿಥಿüಗಳನ್ನು ಪರಿಚಯಿಸಿ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು. ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಎಸ್.ಶೆಟ್ಟಿ ಸ್ವಾಗತಿಸಿ ಪ್ರಸ್ತಾವಿಸಿ ಕಾರ್ಯಕ್ರಮ ನಿರೂಪಿಸಿದರು ಪ್ರೇಮ ಪೂಜಾರಿ ವಂದನಾರ್ಪಣೆಗೈದರು.

 

 
More News

ನಿಸ್ವಾರ್ಥ ಸಾಮಾಜಿಕ ಹೋರಾಟಗಾರ ಎಂ.ಸಂಜೀವ ನಿಧನ
ನಿಸ್ವಾರ್ಥ ಸಾಮಾಜಿಕ ಹೋರಾಟಗಾರ ಎಂ.ಸಂಜೀವ ನಿಧನ
ರಾಷ್ಟ್ರೀಯ ಬಿಲ್ಲವರ ಮಹಾಮಂಡಲಕ್ಕೆ ಡಾ| ರಾಜಶೇಖರ ಎಸ್.ಕೋಟ್ಯಾನ್ ನೂತನ ಅಧ್ಯಕ್ಷ
ರಾಷ್ಟ್ರೀಯ ಬಿಲ್ಲವರ ಮಹಾಮಂಡಲಕ್ಕೆ ಡಾ| ರಾಜಶೇಖರ ಎಸ್.ಕೋಟ್ಯಾನ್ ನೂತನ ಅಧ್ಯಕ್ಷ
ಕರ್ನಾಟಕ ಸಂಘ ಮುಂಬಯಿ ಅಧ್ಯಕ್ಷ-ಕಾರ್ಯಕಾರಿ ಸಮಿತಿಗಾಗಿನ  ಚುನಾವಣೆ
ಕರ್ನಾಟಕ ಸಂಘ ಮುಂಬಯಿ ಅಧ್ಯಕ್ಷ-ಕಾರ್ಯಕಾರಿ ಸಮಿತಿಗಾಗಿನ ಚುನಾವಣೆ

Comment Here