Thursday 25th, April 2024
canara news

ಬಿಎಸ್‍ಕೆಬಿ ಅಸೋಸಿಯೇಶನ್ ಆಶ್ರಯದಿಂದ ಹಿರಿಯ ನಾಗರಿಕರ ದಿನಾಚರಣೆ

Published On : 10 Oct 2018   |  Reported By : Rons Bantwal


ಜೇಷ್ಠ ನಾಗರಿಕರಿಂದ ಸಿನಿ ಸೀನಿಯರ್ಸ್-ಮೃದ್ಗಂಧ್ ಆರ್ಕೆಸ್ಟ್ರಾದ ಸಂಗೀತ ರಸಮಂಜರಿ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಅ.09: ಬೃಹನ್ಮುಂಬಯಿ ಹೃದಯ ಭಾಗದಲ್ಲಿದ್ದು, 93 ವರ್ಷಗಳ ಇತಿಹಾಸವುಳ್ಳ ಸಾಯನ್ ಗೋಕುಲದ ಬಿಎಸ್‍ಕೆಬಿ ಅಸೋಸಿಯೇಶನ್ ಹಿರಿಯ ನಾಗರಿಕರ ಆಶ್ರಯಧಾಮ `ಆಶ್ರಯ' ವಾರ್ಷಿಕ ಜೇಷ್ಠ ನಾಗರಿಕರ ದಿನಾಚರಣೆಯನ್ನು ಕಳೆದ ಭಾನುವಾರ ಸಂಜೆ ಚೆಂಬೂರು ಅಲ್ಲಿನ ಫೈನ್ ಆರ್ಟ್ಸ್‍ನ ಶಿವಸ್ವಾಮಿ ಸಭಾಗೃಹದಲ್ಲಿ ಹಿರಿಯ ನಾಗರಿಕರ ಸಿನಿ ಸೀನಿಯರ್ಸ್ ಮತ್ತು ಮೃದ್ಗಂಧ್ ಆರ್ಕೆಸ್ಟ್ರಾದ ಸಂಗೀತ ರಸಮಂಜರಿ ಕಾರ್ಯಕ್ರಮಗಳೊಂದಿಗೆ ಸಂಭ್ರಮ ಸಡಗರದಿಂದಾಅಚರಿಸಿತು.

 

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿüಯಾಗಿ ಇನ್ಫಾರ್ಮಶನ್ ಟೆಕ್ನಾಲಜಿ ಕಾರ್ಯಾಧ್ಯಕ್ಷ ಆನಂದ ಪೇಜಾವರ್ ಉಪಸ್ಥಿತರಿದ್ದು ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಅತಿಥಿü ಅಭ್ಯಾಗತರುಗಳಾಗಿ ಎಸ್‍ಬಿಐ ಇನ್ಸ್ಸೂರೆನ್ಸಸ್‍ನ ಕಾಪೆರ್Çರೇಟ್ ಕಮರ್ಷಿಯಲ್ ಮತ್ತು ಲಾಜಿಸ್ಟಿಕ್ಸ್, ರೇಮಂಡ್ ಲಿಮಿಟೆಡ್‍ನ ಪ್ರೆಸಿಡೆಂಟ್ ಎಸ್.ಎಲ್ ಪೆÇಕ್ರಾನಾ, ಅಸಿಸ್ಟೆಂಟ್ ಎಕ್ಸ್ ಕ್ಯುಟಿವ್, ಇಂಗ್ಲೋಬ್ ಎಕ್ಸ್‍ಫರ್ಟ್ಸ್‍ನ ರುಚಿತಾ ಶೆಟ್ಟಿ ಉಪಸ್ಥಿತರಿದ್ದು ಸಂಪ್ರದಾಯಿಕವಾಗಿ ಹಿಂಗಾರಹೂ ಅರಳಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಎಲಿಝಬೆತ್ ಪೆರೇರಾ ಪಂಡಿತ್ ಅವರ ನೃತ್ಯ ನಿರ್ದೇಶನ ಮತ್ತು ಕುಸುಮ್ ದಯಾಸಾಗರ್ ಅವರ ವಸ್ತ್ರವಿನ್ಯಾಸದಲ್ಲಿ ಜರಗಿದ ಸಿನಿ ಸೀನಿಯರ್ಸ್ ಕಾರ್ಯಕ್ರಮದಲ್ಲಿ 65 ವರ್ಷದಿಂದ 94 ವರ್ಷದವರೆಗಿನ ಸುಮಾರು 20 ಹಿರಿಯ ನಾಗರಿಕರು, ಹಳೆಯ ಹಿಂದಿ ಚಲನಚಿತ್ರದ ನಾಯಕ ನಾಯಕಿಯರ ಪಾತ್ರದಲ್ಲಿ ಚಿತ್ರಗೀತೆಗಳಿಗೆ ಸಂಗೀತಾಭಿನಯಗೈದರು. ಕಾಂಚನ್ ಚವಾಣ್ ಮತ್ತು ಐಎಂಪಿಎ ವೇಷಭೂಷಣದಲ್ಲಿ ಸಹಕರಿಸಿದ್ದು, ಕೊಟಾಕ್ ಹಿರಿಯ ನಾಗರಿಕರಿಗೆ ಮಹೀಂದ್ರಾ ಬ್ಯಾಂಕ್ ಪಾರಿತೋಷಕಗಳನ್ನಿತ್ತು ಮೆಚ್ಚುಗೆ ಸೂಚಿಸಿತು.

ಅಂಬರೀಷ್ ಮಿಶ್ರಾ ಅವರ ನಿರೂಪಣೆಯೊಂದಿಗೆ ಮೃದ್ಗಂಧ್ ಪಂಗಡ ಸಂಗೀತ ರಸಮಂಜರಿ ಪ್ರಸ್ತುತ ಪಡಿಸಿತು. ನಾಡಿನ ಹೆಸರಾಂತ ಗಾಯಕರಾದ ಶ್ರೀಕಾಂತ್ ನಾರಾಯಣ್, ಶೈಲಜಾ ಸುಬ್ರಹ್ಮಣ್ಯಂ, ಪ್ರಶಾಂತ್ ನಸೇರಿ ಮತ್ತು ಶರಯು ದಾತೆ ಮತ್ತಿತರ ಕಲಾವಿದರು ಹಿಂದಿ, ಮರಾಠಿ ಚಿತ್ರಗೀತೆಗಳೊಂದಿಗೆ ಹಳೆಯ ಮಧುರ ಗೀತೆಗಳನ್ನು ಮೆಲುಕು ಹಾಕುತ್ತಾ ಸುಶ್ರಾವ್ಯ ರಸಮಂಜರಿ ನಡೆಸಿ ಮಾಡಿ ಶ್ರೋತೃಗಳ ಮನ ರಂಜಿಸಿತು.

ಬಿಎಸ್‍ಕೆಬಿಎ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು, ಉಪಾಧ್ಯಕ್ಷರುಗಳಾದ ವಾಮನ್ ಹೊಳ್ಳ, ಶೈಲಿನಿ ರಾವ್, ಕಾರ್ಯದರ್ಶಿ ಎ.ಪಿ.ಕೆ ಪೆÇೀತಿ, ಕೋಶಾಧಿಕಾರಿ ಹರಿದಾಸ್ ಭಟ್, ಜತೆ ಕಾರ್ಯದರ್ಶಿ ಹಾಗೂ ಕಾರ್ಯಕ್ರಮ ಸಂಯೋಜಕಿ ಚಿತ್ರಾ ಮೇಲ್ಮನೆ ವೇದಿಕೆಯಲ್ಲಿ ಉಪಸ್ಥಿತರಿದ್ದು ಅತಿಥಿüಗಳು ಮತ್ತು ಪ್ರಾಯೋಜಕ ಪ್ರತಿನಿಧಿಗಳಾಗಿ ಆಗಮಿಸಿದ್ದ ಸದಾಶಿವ ರಾವ್, ಪ್ರದೀಪ್ ಶೆಟ್ಟಿ, ಸಮೀರ್, ರಸಮಂಜರಿಯ ಸಂಗೀತ ವ್ಯವಸ್ಥಾಪಕ ಪ್ರಶಾಂತ್ ಲಲಿತ್, ಗಾಯಕ ಗಾಯಕಿ ಕಲಾವಿದರನ್ನು, ಪರಿಸರಸ್ನೇಹಿ ಮನಿಪ್ಲಾಂಟ್, ತುಳಸಿಗಿಡ ಕುಂಡಗಳನ್ನಿತ್ತು ಗೌರವಿಸಿದರು.

ಕಾರ್ಯಕ್ರಮದ ಆಯೋಜಕರಾದ ಅವಧೂತ್ ಕೇಲ್ಕರ್, ವಿರಾಜ್ ಲೋಂಡೇ ಹಾಗೂ ನಿರೂಪಕ ಅಂಬರೀಷ್ ಮಿಶ್ರಾ ಅವರನ್ನು ಶಾಲು ಹೊದಿಸಿ ಸನ್ಮಾನಿಸಿದರು. ಅತಿಥಿ üಅಭ್ಯಾಗತರು, ಹಿರಿಯ ನಾಗರಿಕರ ಉತ್ಸಾಹ ಹಾಗೂ ಸಂಘದ ಸಾಮಾಜಿಕ ಕಳಕಳಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಸುಚಿತ್ರಾ ರಾವ್ ಪ್ರಾರ್ಥನೆ ಗೈದರು. ಚಿತ್ರಾ ಮೇಲ್ಮನೆ, ಲಕ್ಷ್ಮೀಶ್ ಆಚಾರ್ಯ, ಕುಸುಮ್ ದಯಾಸಾಗರ್, ಆನಂದ ಪೇಜಾವರ ಕಾರ್ಯಕ್ರಮ ನಿರೂಪಿಸಿದರು. ಎ.ಪಿ.ಕೆ ಪೆÇೀತಿ ಧನ್ಯವಾದ ಸಮರ್ಪಿಸಿದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here