Thursday 25th, April 2024
canara news

ದಿ.ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ಸಹಕಾರಿ ಸಂಸ್ಥೆಗೆ

Published On : 13 Oct 2018   |  Reported By : Rons Bantwal


ಜಯ ಸಿ.ಸುವರ್ಣ-ಕಾರ್ಯಾಧ್ಯಕ್ಷ ; ನ್ಯಾ| ರೋಹಿಣಿ ಜೆ.ಸಾಲ್ಯಾನ್-ಉಪ ಕಾರ್ಯಾಧ್ಯಕ್ಷೆ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)


ಮುಂಬಯಿ,ಅ.12: ಗ್ರಾಹಕರಿಗೆ ಸರ್ವೋತ್ತಮ ಹಣಕಾಸು ಸೇವೆ ಒದಗಿಸಿ ದಿ.ಮಹಾರಾಷ್ಟ್ರ ಅರ್ಬನ್ ಕೋ.ಅಪರೇಟಿವ್ ಬ್ಯಾಂಕ್ಸ್ ಫೆಡರೇಶನ್ ಲಿಮಿಟೆಡ್ ಮತ್ತು ದಿ.ಬೃಹನ್ಮುಂಬಯಿ ನಗರಿ ಸಹಕಾರಿ ಬ್ಯಾಂಕ್ಸ್ ಅಸೋಸಿಯೇಶನ್ ಲಿಮಿಟೆಡ್ ಸಂಸ್ಥೆಗಳಿಂದ `ಸರ್ವೋತ್ಕೃಷ್ಟ ಸಾಧಕ ಬ್ಯಾಂಕ್ ಪುರಸ್ಕಾರ' ಸೇರಿದಂತೆ ನೂರಾರು ರಾಷ್ಟ್ರೀಯ ಪ್ರಶಸ್ತಿಗಳನ್ನು ಮುಡಿಗೇರಿಸಿ ದೇಶದ ಸಹಕಾರಿ ರಂಗದ ಸರ್ವೋತ್ಕೃಷ್ಟ ಆಥಿರ್üಕಸಂಸ್ಥೆ ಎಂದೆಣಿಸಿದ ತುಳು-ಕನ್ನಡಿಗರ ಪ್ರತಿಷ್ಠಿತ ಆಥಿರ್üಕ ಸಂಸ್ಥೆ ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ಇದರ 2018-2023ರ ಸಾಲಿನ ನೂತನ ಕಾರ್ಯಧ್ಯಕ್ಷರಾಗಿ ಜಯ ಸಿ.ಸುವರ್ಣ ಮತ್ತು ಉಪಕಾರ್ಯಾಧ್ಯಕ್ಷೆ ಆಗಿ ನ್ಯಾಯವಾದಿ ರೋಹಿಣಿ ಜೆ.ಸಾಲ್ಯಾನ್ ಪುನಾರಾಯ್ಕೆ ಗೊಂಡರು.

ಇಂದಿಲ್ಲಿ ಶುಕ್ರವಾರ ಸಂಜೆ ಗೋರೆಗಾಂವ್ ಪೂರ್ವದಲ್ಲಿನ ಬ್ಯಾಂಕ್‍ನ ಕೇಂದ್ರ ಕಛೇರಿ ಮಾರುತಗಿರಿ ಇದರ ಸಭಾಗೃಹದಲ್ಲಿ ನಡೆಸಲಾದ ಬ್ಯಾಂಕ್‍ನ ನೂತನ ನಿರ್ದೇಶಕ ಮಂಡಳಿಯ ಪ್ರಥಮ ಸಭೆಯಲ್ಲಿ ಮುಂದಿನ ಐದು ವರ್ಷಗಳ ಕಾಲಾವಧಿ ನಿರ್ದೇಶಕ ಮಂಡಳಿಯ ಕೊನೆ ಹಂತದ ಆಯ್ಕೆಪ್ರಕ್ರಿಯೆಯನ್ನು ಮುಖ್ಯ ಚುನಾವಣಾಧಿಕಾರಿ ಆಗಿದ್ದ ಕೋ.ಆಪರೇಟಿವ್ ಸೊಸೈಟಿಗಳ ಹೆಚ್ಚುವರಿ ರಿಜಿಸ್ತ್ರಾರ್ ಎ.ಕೆ ಚವ್ಹಾಣ್ ನಡೆಸಿದರು.

ನಂತರ ಬ್ಯಾಂಕ್ ನಿರ್ದೇಶಕ ಮಂಡಳಿಯ ಕ್ರಮ19ರ ಅನೇಕತ್ವ ರಾಜ್ಯ ಸಹಕಾರಿ ಸೊಸೈಟಿಗಳ ಕಾರ್ಯಗತ ಗೊಳಿಸುವಿಕೆ ಕ್ರಮಾನುಸಾರ ನಡೆಸಲ್ಪಟ್ಟ ಸಭೆಯಲ್ಲಿ ಬ್ಯಾಂಕ್‍ನ ನಿರ್ದೇಶಕತ್ವ ಆಯ್ಕೆಗೆ ನಡೆಸಲಾದ ಸರ್ವ ಕಾರ್ಯವಿಧಾನ ಪ್ರಕ್ರಿಯೆ ಮಾಹಿತಿಯನ್ನಿತ್ತು 2018-2023ರ ಸಾಲಿನ ಎಲ್ಲಾ ನೂತನ ನಿರ್ದೇಶಕರ ಹೆಸರುಗಳನ್ನು ಪ್ರಕಟಿಸಿದರು. ಬ್ಯಾಂಕ್‍ಗೆ ಈ ಬಾರಿಯೂ 17 ಸಾಮಾನ್ಯ ವಿಭಾಗದ ನಿರ್ದೇಶಕರು 2 ಮಹಿಳಾ ಮೀಸಲು ಮತ್ತು 1 ಜಾತಿ-ಪರಿಶಿಷ್ಟ ವರ್ಗದ ಸದಸ್ಯತ್ವ ನಿರ್ದೇಶಕರ ಆಯ್ಕೆ ಗೊಳಿಸಲಾಗಿದ್ದು, ಚುನಾವಣೆ ಮುಖೇನ ಸಾಮಾನ್ಯ ವಿಭಾಗದಲ್ಲಿ ಆಯ್ಕೆಗೊಂಡ ಜಯ ಸಿ.ಸುವರ್ಣ, ವಾಸುದೇವ ಆರ್.ಕೋಟ್ಯಾನ್, ಎಲ್.ವಿ ಅವಿೂನ್, ನ್ಯಾ| ಎಸ್.ಬಿ ಅವಿೂನ್, ಜೆ.ಎ ಕೋಟ್ಯಾನ್, ದಾಮೋದರ ಸಿ.ಕುಂದರ್, ಎನ್.ಟಿ ಪೂಜಾರಿ, ಗಂಗಾಧರ್ ಜೆ.ಪೂಜಾರಿ, ಕೆ.ಬಿ ಪೂಜಾರಿ, ಯು.ಎಸ್ ಪೂಜಾರಿ, ಜ್ಯೋತಿ ಕೆ.ಸುವರ್ಣ, ಕೆ.ಎನ್ ಸುವರ್ಣ, ಭಾಸ್ಕರ್ ಎಂ.ಸಾಲ್ಯಾನ್, ಸೂರ್ಯಕಾಂತ್ ಜೆ.ಸುವರ್ಣ, ಪ್ರೇಮನಾಥ್ ಪಿ. ಕೋಟ್ಯಾನ್, ಮೋಹನ್‍ದಾಸ್ ಎ.ಪೂಜಾರಿ, ಪುರುಷೋತ್ತಮ ಎಸ್.ಕೋಟ್ಯಾನ್ ಇವರ ಹೆಸರುಗಳನ್ನು ಪ್ರಸ್ತಾಪಿಸಿದರು. ಅಂತೆಯೇ ಮಹಿಳಾ ಮೀಸಲು ವಿಭಾಗದಿಂದ ನಿರ್ದೇಶಕಿಯರಾಗಿ ಅವಿರೋಧವಾಗಿ ಆಯ್ಕೆಯಾದ ನ್ಯಾ| ರೋಹಿಣಿ ಜೆ.ಸಾಲ್ಯಾನ್ ಮತ್ತು ಶಾರದಾ ಸೂರು ಕರ್ಕೇರ, ಹಿಂದುಳಿದ ಜಾತಿ-ಪರಿಶಿಷ್ಟ ವರ್ಗದ ಸದಸ್ಯತ್ವ ನಿರ್ದೇಶಕರಾಗಿರುವ ಅನ್ಭಲ್ಗನ್ ಸಿ.ಹರಿಜನ್ ಈ ಎಲ್ಲಾ ನಿರ್ದೇಶಕರ ಹೆಸರುಗಳ ಅಂತಿಮ ಪಟ್ಟಿಯನ್ನು ಎ.ಕೆ ಚವ್ಹಾಣ್ ಅಧಿಕೃತವಾಗಿ ಪ್ರಕಟಿಸಿ ಶುಭಾರೈಸಿದರು.

ಸಭೆಯಲ್ಲಿ ಸಹ ಚುನಾವಣಾಧಿಕಾರಿ ಸಂದೀಪ್ ದೇಶ್‍ಮುಖ್ ಮತ್ತು ಡಿ.ಬಿ ಗೋಸ್ವಾಮಿ, ಭಾರತ್ ಬ್ಯಾಂಕ್‍ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಮತ್ತು ಆಡಳಿತ ನಿರ್ದೇಶಕ ಸಿ.ಆರ್ ಮೂಲ್ಕಿ, ಸಹ ಹೆಚ್ಚುವರಿ ಚುನಾವಣಾಧಿಕಾರಿ ವಿದ್ಯಾನಂದ ಎಸ್.ಕರ್ಕೇರ (ಭಾರತ್ ಬ್ಯಾಂಕ್‍ನ ಪ್ರಧಾನ ಪ್ರಬಂಧಕ) ವೇದಿಕೆಯಲ್ಲಿ ಅಸೀನರಾಗಿದ್ದರು.

ಬಿಲ್ಲವರ ಅಸೋಸಿಯೇಶನ್‍ನ ಉಪಾಧ್ಯಕ್ಷರುಗಳಾದ ಹರೀಶ್ ಜಿ.ಅಮೀನ್ ಮತ್ತು ಶ್ರೀನಿವಾಸ ಆರ್.ಕರ್ಕೇರ, ಬ್ಯಾಂಕ್‍ನ ಪ್ರಧಾನ ಪ್ರಬಂಧಕರಾದ ವಿದ್ಯಾನಂದ ಎಸ್.ಕರ್ಕೇರಾ, ದಿನೇಶ್ ಬಿ.ಸಾಲ್ಯಾನ್, ಸುರೇಶ್ ಎಸ್. ಸಾಲ್ಯಾನ್, ಮುಖ್ಯ ಮಾಹಿತಿ ಅಧಿಕಾರಿಯಾಗಿ ನಿತ್ಯಾನಂದ ಎಸ್.ಕಿರೋಡಿಯನ್, ಉಪ ಪ್ರಧಾನ ಪ್ರಬಂಧಕರಾದ ಪ್ರಭಾಕರ್ ಜಿ.ಸುವರ್ಣ, ವಿಶ್ವನಾಥ ಜಿ.ಸುವರ್ಣ, ಮಹೇಶ್ ಬಿ.ಕೋಟ್ಯಾನ್, ಸತೀಶ್ ಎಂ.ಬಂಗೇರಾ, ಪ್ರಭಾಕರ ಜಿ.ಪೂಜಾರಿ, ಜನಾರ್ದನ ಎಂ.ಪೂಜಾರಿ, ಸಹಾಯಕ ಮಹಾ ಪ್ರಬಂಧಕರಾದ ಮೋಹನ್ ಎನ್.ಸಾಲ್ಯಾನ್, ಮಂಜುಳಾ ಎನ್.ಸುವರ್ಣ, ಭಾರತ್ ಬ್ಯಾಂಕ್ ಆಫೀಸರ್ಸ್ ಅಸೋಸಿಯೇಶನ್‍ನ ಅಧ್ಯಕ್ಷ ಕಿರಣ್ ಬಿ.ಅವಿೂನ್, ಕಾರ್ಯದರ್ಶಿ ಪ್ರೇಮಾನಂದ ಪೂಜಾರಿ ಹಾಗೂ ಭಾರತ್ ಬ್ಯಾಂಕ್ ಎಂಪ್ಲಾಯಿಸ್ ಯೂನಿಯನ್ ಅಧ್ಯಕ್ಷ ರಮೇಶ್ ಟಿ.ಪೂಜಾರಿ, ಕಾರ್ಯದರ್ಶಿ ದಿನೇಶ್ ಕೆ.ಸನಿಲ್, ಭಾರತ್ ಬ್ಯಾಂಕ್ ಸ್ಟಾಫ್ ವೆಲ್ಫೇರ್ ಕ್ಲಬ್‍ನ ಕಾರ್ಯದರ್ಶಿ ಮೋಕ್ಷ ಕುಂದರ್, ನಿವೃತ್ತ ಉನ್ನತಾಧಿಕಾರಿಗಳಾದ ಶೋಭಾ ದಯಾನಂದ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದು ನೂತನ ನಿರ್ದೇಶಕ ಮಂಡಳಿಗೆ ಶುಭಾರೈಸಿದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here