Thursday 25th, April 2024
canara news

ಹೋಪ್ ಫೌಂಡೇಶನ್ ಧಾರಾವಿ ಸಂಸ್ಥೆಯಿಂದ ಅಧ್ಯಾಪಕತ್ವ ತರಗತಿ ಉದ್ಘಾಟನೆ

Published On : 14 Oct 2018   |  Reported By : Rons Bantwal


ಶಿಕ್ಷಣದಲ್ಲಿ ಬಡವರ ಮಕ್ಕಳೆಂಬ ಕೀಳರಿಮೆ ಸಲ್ಲದು-ಕವಿ ಗೋಪಾಲ ತ್ರಾಸಿ
(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ, ಅ.14: ಬಡವರ ಮಕ್ಕಳೆಂಬ ಕೀಳರಿಮೆ ಬೇಡ ನಿಮ್ಮಂತಹ ಮಕ್ಕಳು ಬರೇ ಅವಕಾಶ ವಂಚಿತರು ಅಷ್ಟೆ. ನಿಮ್ಮೊಳಗೂ ನಾನಾ ಪ್ರತಿಭೆಗಳು ಹುದುಗಿರ ಬಹುದು. ನೀವು ಸರ್ವರಿಗೂ ಸಮಾನರು ಎಂಬ ಆತ್ಮ ವಿಶ್ವಾಸ ತಮ್ಮಲ್ಲಿ ಸದಾ ಇರಲಿ, ಪರೀಕ್ಷೆಯಲ್ಲಿ ಉತ್ತೀರ್ಣರಾಗೋದು ಮುಖ್ಯ. ಅಂಕಗಳು ಕಡಿಮೆ ಬರಬಹುದು ಚಿಂತಿಸಬೇಡಿ. ಆದರೆ ಶ್ರದ್ಧೆಯಿಂದ ಅಭ್ಯಾಸವನ್ನು ಮಾಡುತ್ತಿರಬೇಕು ಎಂದು ಯುಎಸ್‍ಎ ಅಮೇರಿಕಾದ ಮೊಂಟ್‍ಗೊಮೆರಿ ಕಂಟ್ರಿ ರಾಜ್ಯ ಕೌನ್ಸಿಲ್ ಗೌರವ ಸ್ವೀಕೃತ ಕನ್ನಡದ ಸಂವೇದನಾಶೀಲ ಕವಿ, ಕಥೆಗಾರ ಗೋಪಾಲ ತ್ರಾಸಿ ನುಡಿದರು.

ಸಯಾನ್ ಧಾರವಿ ಇಲ್ಲಿನ ರಾಜೀವ ಗಾಂಧಿ ನಗರದಲ್ಲಿನ ಹೋಪ್ ಫೌಂಡೇಶನ್ ಧಾರಾವಿ (ರಿ.) ಸಂಸ್ಥೆ ಇತ್ತೀಚೆಗೆ ಧಾರವಿ ಅಲ್ಲಿನ ಡಾ| ಬಾಬಾ ಸಾಹೇಬ್ ಅಂಬೇಡ್ಕರ್ ವಿದ್ಯಾಲಯದಲ್ಲಿ ಆಯೋಜಿಸಿದ್ದ ಅಧ್ಯಾಪಕತ್ವ ತರಗತಿ ಉದ್ಘಾಟನೆ ಮತ್ತು ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಅತಿಥಿü ಅಭ್ಯಾಗತರಾಗಿದ್ದು ಗೋಪಾಲ ತ್ರಾಸಿ ಮಾತನಾಡಿ ಹೋಪ್ ಫೌಂಡೇಶನ್ ಸಂಘಟನೆಯ ಮುಂದಾಳುತನದಲ್ಲಿ ಬಡ ಮಕ್ಕಳಿಗಾಗಿ ಉಚಿತ ಟ್ಯೂಷನ್ ತರಗತಿಯಲ್ಲಿ ಪ್ರೇರಣಾ ಭಾಷಣಕಾರರಾಗಿ ನೆರೆದಿದ್ದ ಮಕ್ಕಳು ಮತ್ತು ಪಾಲಕರನ್ನು ಉದ್ದೇಶಿಸಿ ಮಾತನಾಡಿ ಫೌಂಡೇಶನ್ ಬಯಸಿದರೆ ಕಥೆ, ನಾಟಕ, ಚಿತ್ರಕಲೆ ಶಿಬಿರಗಳನ್ನು ಆಯೋಜಿಸಲು ನನ್ನ ಸಹಕಾರ ಇದೆ. ಧಾರಾವಿ ಪರಿಸರ ಶ್ರಮಜೀವಿ ಯುವಕರ ತಂಡ ಬಡ ಮಕ್ಕಳ ಉತ್ತಮ ಶಿಕ್ಷಣಕ್ಕಾಗಿ ಉಚಿತ ಟ್ಯೂಷನ್ ನೀಡಿ ಸಹಕರಿಸಲು ಮುಂದಾದದ್ದು ಉದಾತ್ತ ಕೆಲಸವಾಗಿದೆ. ಮುಂದಿನ ದಿನಗಳಲ್ಲಿ ಇದೆ ಮಕ್ಕಳು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ವ್ಯಕ್ತಿತ್ವ ವಿಕಸನ, ಕಥೆ, ಕವಿತೆ, ನಾಟಕ, ಮುಂತಾದ ವಿಷಯಗಳ ಕುರಿತು ನನ್ನ ಸಹಕಾರ ಇದೆ ಎಂದು ತ್ರಾಸಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಫೆÇೀರ್ಟ್ ಎಜ್ಯುಕೇಶನ್ ಸಂಸ್ಥೆಯ ಉಪಾಧ್ಯಕ್ಷ ಪ್ರಕಾಶ್ ಮೂಡಬಿದ್ರೆ, ಮಹೇಂದ್ರ ಎಂಡ್ ಮಹೇಂದ್ರ ಸಂಸ್ಥೆಯ ಅಧಿಕಾರಿ ಡಾ| ಮೋನಾ ಐಯ್ಯರ್, ಸ್ಕೌಟ್ ಶಿಕ್ಷಕ ಕೃಷ್ಣ ಸುವರ್ಣ ಮತ್ತು ಕನ್ನಡ ಸಿರಿ ಧಾರವಿ ಸಂಸ್ಥೆಯ ಅಧ್ಯಕ್ಷ ಬಾಲಚಂದ್ರ ದೇವಾಡಿಗ ಅತಿಥಿüಗಳಾಗಿ ಉಪಸ್ಥಿತರಿದ್ದು ಸಂದರ್ಭೋಚಿತವಾಗಿ ಮಾತನಾಡಿ ಫೌಂಡೇಶನ್‍ನ ಸಾಮಾಜಿಕ ಕಳಕಳಿ ಮತ್ತು ಶಿಕ್ಷಣ ಪೆÇ್ರೀತ್ಸಹವನ್ನು ಪ್ರಶಂಸಿಸಿ ಅಭಿನಂದಿಸಿದರು.

ಬಡತನವೇ ಮಕ್ಕಳ ವಿಕಾಸನಕ್ಕೆ ಅಡ್ಡಿಯಾಗಬಾರದು. ಅವರಲ್ಲಿನ ಪ್ರತಿಭೆಗಳಿಗೆ ಅವಕಾಶಗಳನ್ನು ಒದಗಿಸಿ ಕೊಡಬೇಕು. ಶಿಕ್ಷಣದಲ್ಲಿ ಮೇಲುಕೀಳು ಇಲ್ಲ, ಎಲ್ಲರೂ ಸಮಾನರು. ನಿಮ್ಮಲ್ಲಿ ನಾಚಿಕೆ ಸ್ವಭಾವ ಸಲ್ಲದು. ನಮ್ಮೊಲಗಿನ ಶಕ್ತಿಯನ್ನು ನಾವೇ ಕಡೆಗಣಿಸಬಾರದು. ಮಕ್ಕಳು ಮೊಬೈಲ್ನಿಂದ ದೂರವಿರಬೇಕು. ಶ್ರಮ ಪಟ್ಟು ಸಾಧನೆ ಮಾಡಿದರೆ ಬದುಕಿನಲ್ಲಿ ಎತ್ತರ ಸ್ಥಾನ ಏರಲು ಸಾಧ್ಯ," ಎಂದು ಹೇಳಿದರು. ಮುಂದೆ ಅವರು ತಮ್ಮ ಶ್ರೀಮತಿಯವರಿಂದ ಮಕ್ಕಳಿಗಾಗಿ ಇಂಗ್ಲಿಷ್ ಸ್ಪೀಕಿಂಗ್ ಕ್ಲಾಸ್ ನಡೆಸಿಕೊಡುವೆ ಎಂದು ಪ್ರಕಾಶ್ ಮೂಡಬಿದ್ರೆ ಭರವಸೆ ನೀಡಿದರು.

ತಮ್ಮ ಸಂಸ್ಥೆಯಲ್ಲಿ ಹನ್ನೊಂದು ಮಂದಿ ಬಡ ಯುವಕರು ಇದ್ದು, ನಾವು ಕಲಿಯುವಾಗ ಪಟ್ಟ ಕಷ್ಟ ಈ ಮಕ್ಕಳಿಗೆ ಬರಬಾರದು ಎಂಬ ಉದ್ದೇಶದಿಂದ ಉಚಿತ ಟ್ಯೂಷನ್ ತರಗತಿ ತೆರೆಯಲಾಗಿದೆ. ಮುಂದೆ ಇನ್ನೂ ಅನೇಕ ಸಾಮಾಜಿಕ, ಶೈಕ್ಷಣಿಕ ಕಾರ್ಯಕ್ರಮಗಳನ್ನು ಆಯೋಜಿಸಲಿದ್ದೇವೆ ಅದಕ್ಕಾಗಿ ಎಲ್ಲರ ಪೆÇ್ರೀತ್ಸಾಹ, ಸಹಾಯ ಬೇಕೆಂದು ಹೋಪ್ ಫೌಂಡೇಶನ್‍ನ ಅಧ್ಯಕ್ಷ ಅನಿಲ್ ಬೋಡೋಲ್ ತಿಳಿಸಿ ಉಚಿತ ಟ್ಯೂಶನ್ ತರಗತಿಗಳನ್ನು ನಡೆಸಲು ಸ್ಥಳಾವಕಾಶ ಮಾಡಿಕೊಟ್ಟ ಎಕೆಡಿವಿ ಸಂಸ್ಥೆಯ ಕಾರ್ಯದರ್ಶಿ ನಿರಂಜನ್ ನಂದೇಪಲ್ಲಿ ಹಾಗೂ ಸಂಸ್ಥೆಯ ಎಲ್ಲ ಪದಾಧಿಕಾರಿಗಳಿಗೆ ಅಭಿವಂದಿಸಿ ಸಂಸ್ಥೆಯ ಹುಟ್ಟು ಮತ್ತು ಉದ್ದೇಶಗಳ ಕುರಿತು ವಿವರಿಸಿದರು.

ಕಾರ್ಯಕ್ರಮದಲ್ಲಿ ಹಲವು ವಿದ್ಯಾಥಿರ್üಗಳು ಮತ್ತು ಪಾಲಕರು ಹಾಜರಿದ್ದು, ಬೋಂಬೆ ಫೆÇೀರ್ಟ್ ರಾತ್ರಿ ಪ್ರೌಢ ಶಾಲೆಯ ಸ್ಕೌಟ್ ಶಿಕ್ಷಕ ಹಾಗೂ ಅಥಿüತಿಗಳಿಂದ ಮಕ್ಕಳಿಗೆ ಪುಸ್ತಕ-ಲೇಖನಿ ವಿತರಿಸಲಾಯಿತು. ಉಪಾಧ್ಯಕ್ಷ ಭೀಮರಾಯ ಚಿಲ್ಕ ಸ್ವಾಗತಿಸಿ ಅತಿಥಿüಗಳನ್ನು ಪರಿಚಯಿಸಿದÀರು. ಕು| ಕೆ.ಸೋನಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ತಾಯಪ್ಪ ಅನಮೋಲ ಮತ್ತು ಸರ್ವರಿಗೂ ಧನ್ಯವಾದಗೈದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here