Thursday 28th, March 2024
canara news

ಮೈಸೂರು ಅಸೋಸಿಯೇಶನಲ್ಲಿ ಕನ್ನಡ ಸಂಘಗಳ ದ್ವಿದಿನಗಳ ನಾಡಹಬ್ಬಕ್ಕೆ ಚಾಲನೆ

Published On : 14 Oct 2018   |  Reported By : Rons Bantwal


ನಾಟಕ ವೀಕ್ಷಣೆಯಿಂದ ಬದುಕು ಶಿಕ್ಷಣ ವೃದ್ಧಿ : ಗೋಪಾಲ್ ಹೊಸೂರು
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಅ.14: ಬದುಕಿನ ಅಪಾಯ ಮತ್ತು ರಕ್ಷಣಾತ್ಮಕ ಅಂಶಗಳ ಜಾಗೃತಿ ಮತ್ತು ತಿಳುವಳಿಕೆ ಹೆಚ್ಚಿಸಲು ನಾಟಕಗಳು ಪೂರಕವಾಗಿವೆ. ಜೀವನದ ಸಕ್ರಿಯ ನಡವಳಿಕೆಗಳನ್ನು ಉತ್ತೇಜಿಸಲು ನಾಟಕಗಳು ಪ್ರೇರಣೆಯಾಗಿದ್ದು, ನಾಟಕ ವೀಕ್ಷಣೆಯಿಂದ ಬದುಕು ಶಿಕ್ಷಣ ವೃದ್ಧಿಯಾಗುವುದು ಮತ್ತು ಸಾಮಾನ್ಯ ಜ್ಞಾನವೂ ವೃದ್ಧಿಗೊಳ್ಳುವುದು. ಮಾಹಿತಿ ವಿಷಯಕ್ಕೆ ಭಾವನಾತ್ಮಕ ಪ್ರತಿಕ್ರಿಯೆಯ ಒಂದು ಭಾಗವನ್ನು ನಾಟಕವು ಸಂಯೋಜಿಸುತ್ತದೆ.ಅಪರಾಧ ತಡೆಗಟ್ಟುವಿಕೆಗೆ ಹೊಸ ವಿಧಾನಗಳ ಇಂತಹ ಅಧ್ಯಯನವುಳ್ಳ ನಾಟಕಗಳು ಪರಿಣಾಮಕಾರಿತ್ವವಾಗಿವೆ. ವೈಯಕ್ತಿಕ ಉದ್ದೇಶಗಳನ್ನು ಉತ್ತೇಜಿಸಲು ಭಾವನಾತ್ಮಕ ಮತ್ತು ಮಾಹಿತಿಯ ಸಂಯೋಜನೆಗೂ ನಾಟಕಗಳು ಪರಿಣಾಮಕಾರಿ ಎಂದು ಇಂತಹ ಪ್ರಯೋಗಗಳು ಸಾರಿ ಹೇಳುತ್ತಿವೆ. 1995ರಲ್ಲಿ ಅಂದಿನ ಗೃಹ ಸಚಿವ ಎಂ.ಪಿ ಪ್ರಕಾಶ್ ಅವರು ಹುಲುಗಪ್ಪ ಕಟ್ಟೀಮ ಅವರಿಗೆ ಒದಗಿಸಿದ ಅವಕಾಶ ಇಂದು ಸಮಾಜ ಪರಿವರ್ತನೆಗೆ ಪಾಠವಾಗಿದೆ. ಸುಮಾರು 23 ವರ್ಷಗಳ ನಿರಂತರ ಮುನ್ನಡೆಯ ಇಂತಹ ನಾಟಕದ ಕಾರ್ಯವಿಧಾನಕ್ಕೆ ರಾಜ್ಯಗಳ, ಸ್ಥಳೀಯ ಸಂಸ್ಥೆಗಳ ಪೆÇ್ರೀತ್ಸಾಹ ದೊರಕಿದಾಗ ಅಪರಾಧಮುಕ್ತ ಸಮಾಜ ರೂಪಿಸಲು ವರವಾಗಲಿದೆ ಎಂದು ನಿವೃತ್ತ ಇನ್ಸ್‍ಪೆಕ್ಟರ್ ಜನರಲ್ ಆಫ್ ಪೆÇಲೀಸ್ ಗೋಪಾಲ್ ಹೊಸೂರು ನುಡಿದರು.

ಕರ್ನಾಟಕ ರಾಜ್ಯ ಸರ್ಕಾರ ಮತ್ತು ಬೃಹನ್ಮುಂಬಯಿ ಅಲ್ಲಿನ ವಿವಿಧ ಕನ್ನಡ ಸಂಘಗಳ ಒಗ್ಗೂಡುವಿಕೆಯಿಂದ ಇಂದಿಲ್ಲಿ ಶನಿವಾರ ಸಂಜೆ ಮಾಟುಂಗಾ ಭಾವುದಾಜಿ ರಸ್ತೆಯಲ್ಲಿನ ಮೈಸೂರು ಅಸೋಸಿಯೇಶನ್ ಸಭಾಗೃಹದಲ್ಲಿ ಇಂದಿನಿಂದ ಮಹಾನಗರದಲ್ಲಿ ಆಯೋಜಿಸಿದ್ದ ದ್ವಿದಿನಗಳ ನಾಡಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಗೋಪಾಲ್ ಹೊಸೂರು ಮಾತನಾಡಿದರು.

ಕರ್ನಾಟಕ ನಾಟಕ ಆಕಾಡೆಮಿ ಮಾಜಿ ಅಧ್ಯಕ್ಷ ಶ್ರೀನಿವಾಸ ಜಿ.ಕಪ್ಪಣ್ಣ, ಪೆÇಲೀಸ್ ಅಧಿಕಾರಿಗಳಾದ ಆನಂದ ರೆಡ್ಡಿ ಮತ್ತು ಕೆ.ಸುರೇಶ್ (ಎಡಿಜಿ) ಮತ್ತು ಮೈಸೂರು ಅಸೋಸಿಯೇಶನ್‍ನ ಅಧ್ಯಕ್ಷೆ ಕಮಲಾ ಕಾಂತರಾಜ್ ವೇದಿಕೆಯಲ್ಲಿ ಆಸೀನರಾಗಿದ್ದು ಅಸೋಸಿಯೇಶನ್ ಪದಾಧಿಕಾರಿಗಳು ಅತಿಥಿüಗಳಿಗೆ ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಹೆಸರಾಂತ ನಾಟಕಕಾರ, ನಿರ್ದೇಶಕ ಹುಲುಗಪ್ಪ ಕಟ್ಟೀಮ, ಮೊಗವೀರ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಸದಾನಂದ ಎ.ಕೋಟ್ಯಾನ್, ಮೈಸೂರು ಅಸೋಸಿಯೇಶನ್‍ನ ಕಾರ್ಯದರ್ಶಿ ಡಾ| ಗಣಪತಿ ಶಂಕರಲಿಂಗ, ಡಾ| ಸುನೀತಾ ಎಂ.ಶೆಟ್ಟಿ, ಕೆ.ಮಂಜುನಾಥಯ್ಯ, ಬಿ.ಕೆ ಮಧುಸೂದನ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಕು| ಪೂಜಾ ಪೂಜಾರಿ ಸಂಗಡಿಗರ ಸ್ವಾಗತಗೀತೆಯೊಂದಿಗೆ ಕಾರ್ಯಕ್ರಮ ಆದಿಗೊಂಡಿತು. ಕು| ಕೆ.ಅರ್ಪಿತಾ ಬಳಗವು ಕೋಲಾಟ ಮತ್ತು ಕು| ಸುಶ್ಮೀತಾ ನಾಯ್ಕ್ ತಂಡವು ಎನ್‍ಕೆಇಎಸ್ ಕನ್ನಡ ಅಧ್ಯಾಪಕ ವೃಂದವನ್ನೊಳಗೊಂಡು ನಾಡಗೀತೆಯನಾಡಿ ಕನ್ನಡಾಂಭೆಗೆ ನಮಿಸಿತು. ಮೈಸೂರು ಅಸೋಸಿಯೇಶನ್‍ನ ಡಾ| ಬಿ.ಆರ್ ಮಂಜುನಾಥ್ ನಾಡಗೀತೆ, ನವರಾತ್ರಿ ಬಗ್ಗೆ ಬಣ್ಣಿಸಿ ಸ್ವಾಗತಿಸುತ್ತಾ ಅತಿಥಿüಗಳನ್ನು ಪರಿಚಯಿಸಿದರು ಹಾಗೂ ಸಭಾ ಕಾರ್ಯಕ್ರಮ ನಿರೂಪಿಸಿದರು. ಲಕ್ಷಿ ್ಮೀ ಸೀತಾರಾಮ್ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿ ವಂದನಾರ್ಪಣೆಗೈದರು.

ರಾಷ್ಟ್ರೀಯ ಕನ್ನಡ ಶಾಲೆ (ಎನ್‍ಕೆಇಎಸ್) ವಡಲಾ ಇಲ್ಲಿಂದ ಮೈಸೂರು ಅಸೋಸಿಯೇಶನ್ ವರೆಗೆ ಬ್ಯಾಂಡು ವಾದ್ಯಗಳ ನೀನಾದ, ನೃತ್ಯ ವೈವಿಧ್ಯತೆಗಳೊಂದಿಗೆ ಕನ್ನಡಾಂಭೆ ಕಾನಡಾ ವಿಠ್ಠಲು ಮೆರವಣಿಗೆ ಮೂಲಕ ನಾಡಹಬ್ಬ ಮೊಳಗಿತು. ನಂತರ ಶಾಲಾಮಕ್ಕಳು ನೃತ್ಯವೈಭವ ಪ್ರಸ್ತುತ ಪಡಿಸಿದರು. ಕೊನೆಯಲ್ಲಿ ಮೈಸೂರು ಸೆರೆಮನೆಯ ಸೆರೆಯಾಳು ಕಲಾವಿದರು ಹುಲುಗಪ್ಪ ಕಟ್ಟೀಮ ನಿರ್ದೇಶನದಲ್ಲಿ ಜಯಂತ ಕಾಯ್ಕಿಣಿ ರಚಿತ `ಜತೆಗಿರುವನು ಚಂದಿರ' ನಾಟಕ ಪ್ರದರ್ಶಿಸಿದರು.

 

 

 

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here