Wednesday 12th, December 2018
canara news

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಮಹಿಳಾ ವಿಭಾಗದಿಂದ ಲಲಿತ ಸಹಸ್ರ-ಕುಂಕುಮಾರ್ಚನೆ `ದಾಂಡಿಯಾ ರಾಸ್' ಸಂಭ್ರಮ

Published On : 15 Oct 2018   |  Reported By : Rons Bantwal


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಅ.15: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಮಹಿಳಾ ವಿಭಾಗವು ವಾರ್ಷಿಕವಾಗಿ ಆಚರಿಸುವ ಲಲಿತ ಸಹಸ್ರ-ಕುಂಕುಮಾರ್ಚನೆ, `ದಾಂಡಿಯಾ ರಾಸ್' ಕಾರ್ಯಕ್ರಮ ಇಂದಿಲ್ಲಿ ಶನಿವಾರ ಅಪರಾಹ್ನ ಶಾಸ್ತ್ರೋಕ್ತವಾಗಿ ನಡೆಸಲ್ಪಟ್ಟಿತು. ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ ಮುಂದಾಳುತ್ವ ಹಾಗೂ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜಯಂತಿ ವಿ.ಉಳ್ಳಾಲ್ ಸಾರಥ್ಯದಲ್ಲಿ ನಡೆಸಲ್ಪಟ್ಟ ಕಾರ್ಯಕ್ರಮಕ್ಕೆ ಪಂಚಕುಟೀರದ ಸುವರ್ಣ ಮಂದಿರ ಶ್ರೀ ಮಹಾಶೇಷ ರುಂಡಮಾಲಿನಿ ದೇವಸ್ಥಾನ ಪೆÇವಾಯಿ ಇದರ ಧರ್ಮದರ್ಶಿ ಶ್ರೀ ಸುವರ್ಣ ಬಾಬಾ ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಅಸೋಸಿಯೇಶನ್‍ನ ಗೌರವ ಪ್ರಧಾನ ಕಾರ್ಯದರ್ಶಿ ಧನಂಜಯ ಎಸ್.ಕೋಟ್ಯಾನ್, ಗೌರವ ಪ್ರಧಾನ ಕೋಶಾಧಿಕಾರಿ ರಾಜೇಶ್ ಜೆ.ಬಂಗೇರ, ಧರ್ಮಪಾಲ ಜಿ.ಅಂಚನ್, ಮಹೇಶ್ ಕಾರ್ಕಳ, ಸುಧಾಕರ ಜಿ.ಪೂಜಾರಿ ಮತ್ತಿತರ ಉಪಸ್ಥಿತರಿದ್ದರು. ರವೀಂದ್ರ ಶಾಂತಿ ಅವರ ಪೌರೋಹಿತ್ಯದಲ್ಲಿ ಪೂಜೆ ನೇರವೇರಿತು. ಸುಭಾಷ್ ಮಾಬಿಯಾನ್ ಮತ್ತು ಸಂತೋಷ್ ಕೆ.ಪೂಜಾರಿ ಪೂಜೆಗೆ ಸಹಕರಿಸಿ ಪ್ರಸಾದ ವಿತರಿಸಿ ಅನುಗ್ರಹಿಸಿದರು. ರಾಘು ಸಿ.ಅಮೀನ್, ಯೋಗೀಶ್ ನಾಥ್, ಶ್ಯಾಮ ಸಿ.ಅಮೀನ್ ತಂಡದ ಭಜನೆ ಮೂಲಕ ಕಾರ್ಯಕ್ರಮ ಆದಿಗೊಂಡಿತು.

ಕಾರ್ಯಕ್ರಮದಲ್ಲಿ ಬಂಟ್ಸ್ ಸಂಘ ಮುಂಬಯಿ ಕುರ್ಲಾ-ಭಾಂಡೂಪ್ ಪ್ರಾದೇಶಿಕ ವಿಭಾಗೀಯ ಸಮಿತಿಯ ಮಹಿಳಾ ವಿಭಾಗದ ಕಾರ್ಯದರ್ಶಿ ಸರೋಜಿನಿ ಶೆಟ್ಟಿ, ನಿಕಟಪೂರ್ವ ಮಹಿಳಾಧ್ಯಕ್ಷೆ ಶಕುಂತಳಾ ಕೆ.ಕೋಟ್ಯಾನ್, ಜಯಲಕ್ಷ್ಮೀ ಚಂದ್ರಶೇಖರ್ ಪೂಜಾರಿ, ಮೋಹಿನಿ ವಾಸುದೇವ ಕೋಟ್ಯಾನ್, ಶ್ರೀಮಂತಿ ಎಸ್.ಪೂಜಾರಿ, ಶೋಭಾ ದಯಾನಂದ್, ಸುಧಾ ಎಲ್.ಅಮೀನ್, ಮಹಿಳಾ ವಿಭಾಗದ ಉಪ ಕಾರ್ಯಧ್ಯಕ್ಷೆಯರಾದ ಪ್ರಭಾ ಕೆ.ಬಂಗೇರ ಮತ್ತು ಗಿರಿಜಾ ಚಂದ್ರಶೇಖರ್, ಜೊತೆ ಕಾರ್ಯದರ್ಶಿಗಳಾದ ಕುಸುಮಾ ಅವಿೂನ್ ಮತ್ತು ಜಯಂತಿ ಎಸ್.ಕೋಟ್ಯಾನ್, ವಿಶೇಷ ಆಮಂತ್ರಿತ ಸದಸ್ಯೆಯರಾದ ಯಶೋಧಾ ಎನ್.ಪೂಜಾರಿ, ಪೂಜಾ ಪುರುಷೋತ್ತಮ್ ಕೋಟ್ಯಾನ್, ಕಾರ್ಯಕಾರಿ ಸಮಿತಿ ಸದಸ್ಯೆಯರನೇಕರು ಹಾಜರಿದ್ದು ದಾಂಡಿಯಾ ರಾಸ್ ಕಾರ್ಯಕ್ರಮ, ಗಾರ್ಭಾರಾಸ್ ನೃತ್ಯಾವಳಿಯಲ್ಲಿ ಪಾಲ್ಗೊಂಡರು.

 
More News

ಕರ್ನಾಟಕ ಸಂಘ ಅಸಲ್ಫಾ ಇದರ ಕನ್ನಡ ವಿದ್ಯಾ ಭವನದ ನವೀಕೃತ ಶಾಲಾ ಕೊಠಡಿ ಉದ್ಘಾಟನೆ
ಕರ್ನಾಟಕ ಸಂಘ ಅಸಲ್ಫಾ ಇದರ ಕನ್ನಡ ವಿದ್ಯಾ ಭವನದ ನವೀಕೃತ ಶಾಲಾ ಕೊಠಡಿ ಉದ್ಘಾಟನೆ
ವೊವ್ಯೊ-ವೇರ್ಸ್-ಸೋಭಾನೆ ಕಾರ್ಯನಿರ್ವಹಣಾ ತರಬೇತಿ-ಸಮಾರೋಪ
ವೊವ್ಯೊ-ವೇರ್ಸ್-ಸೋಭಾನೆ ಕಾರ್ಯನಿರ್ವಹಣಾ ತರಬೇತಿ-ಸಮಾರೋಪ
ಡಿ.15: ವೆಸ್ಟರ್ನ್ ಇಂಡಿಯಾ ಶ್ರೀ ಶನಿಮಹಾತ್ಮ ಸೇವಾ ಸಮಿತಿ 74ನೇ ವಾರ್ಷಿಕ ಶನಿಪೂಜೆ-ಅಮೃತ ಮಹೋತ್ಸವ ಸಂಭ್ರಮಕ್ಕೆ ಚಾಲನೆ
ಡಿ.15: ವೆಸ್ಟರ್ನ್ ಇಂಡಿಯಾ ಶ್ರೀ ಶನಿಮಹಾತ್ಮ ಸೇವಾ ಸಮಿತಿ 74ನೇ ವಾರ್ಷಿಕ ಶನಿಪೂಜೆ-ಅಮೃತ ಮಹೋತ್ಸವ ಸಂಭ್ರಮಕ್ಕೆ ಚಾಲನೆ

Comment Here