Friday 24th, May 2019
canara news

ಚಾರ್‍ಕೋಪ್ ಕನ್ನಡಿಗರ ಬಳಗ ಸಂಭ್ರಮಿಸಿದ 19ನೇ ವಾರ್ಷಿಕೋತ್ಸವ-ಶಾರದಾ ಪೂಜೆ

Published On : 17 Oct 2018   |  Reported By : Rons Bantwal


ಮಹಾನೀಯರಿಗೆ ಬಳಗದ ವಾರ್ಷಿಕ ಪ್ರಶಸ್ತಿ-ಸಾಧಕ ಗೌರವ ಪ್ರದಾನ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)


ಮುಂಬಯಿ, ಅ.17: ಚಾರ್‍ಕೋಪ್ ಕನ್ನಡಿಗರ ಬಳಗ ಕಾಂದಿವಿಲಿ (ರಿ.) ತನ್ನ19ನೇ ವಾರ್ಷಿಕೋತ್ಸವ ಮತ್ತು 2018ನೇ ಸಾಲಿನ ಶ್ರೀ ಶಾರದಾ ಪೂಜೆಯನ್ನುಇಂದಿಲ್ಲಿ ಭಾನುವಾರ ಕಾಂದಿವಲಿ ಪಶ್ಚಿಮದ ಚಾರ್‍ಕೋಪ್ ಇಲ್ಲಿನ ಹರ್ಯಾನ ಭವನದ ಸಭಾಗೃಹದಲ್ಲಿ ಸಂಭ್ರಮ ಸಡಗರದೊಂದಿಗೆ ಆಚರಿಸಿದ್ದು, ಬಳಗದ ಉಪಾಧ್ಯಕ್ಷ ಎಂ.ಕೃಷ್ಣ ಎ.ಶೆಟ್ಟಿ ಸಮಾರಂಭದ ಅಧ್ಯಕ್ಷತೆಯಲ್ಲಿ ಜರಗಿದ ಸಮಾರಂಭಕ್ಕೆ ಬಂಟ್ಸ್ ಸಂಘ ಮುಂಬಯಿ ಇದರ ಎಸ್.ಎಂ ಶೆಟ್ಟಿ ಶೈಕ್ಷಣಿಕ ಸಮೂಹದ ಉಪ ಕಾರ್ಯಧ್ಯಕ್ಷ ಎನ್.ನಿತ್ಯಾನಂದ ಹೆಗ್ಡೆ ದೀಪ ಪ್ರಜ್ವಲಿಸಿ ಚಾಲನೆಯನ್ನಿತ್ತರು.

 

ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀ ಕಾರ್ಯಾಧ್ಯಕ್ಷ ಎನ್.ಟಿ ಪೂಜಾರಿ, ಗೋಕುಲ್ ಐಸ್‍ಕ್ರೀಂನ ಮಾಲೀಕ ಗಣೇಶ್ ಜಿ.ಕಾಮತ್, ಬಂಟ್ಸ್ ಸಂಘ ಮುಂಬಯಿ ಇದರ ಜೋಗೇಶ್ವರಿ ದಹಿಸರ್ ಪ್ರಾದೇಶಿಕ ಸಮಿತಿ ಕಾರ್ಯಧ್ಯಕ್ಷ ರವೀಂದ್ರ ಎಸ್.ಶೆಟ್ಟಿ ಅತಿಥಿü ಅಭ್ಯಾಗತರಾಗಿ ಹಾಗೂ ಬಳಗದ ವಿಶ್ವಸ್ಥ ಸದಸ್ಯರುಗಳಾದ ಜಯ ಸಿ.ಶೆಟ್ಟಿ, ಭಾಸ್ಕರ್ ಸರಪಾಡಿ, ಎಂ.ಎಸ್.ರಾವ್, ಉಪಾಧ್ಯಕ್ಷರಾದ ಕೃಷ್ಣ ಟಿ.ಅವಿೂನ್, ಪದ್ಮಾವತಿ ಬಿ.ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಸಂಸ್ಥೆಯು ವಾರ್ಷಿಕವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಾನೀಯರಿಗೆ ಕೊಡಮಾಡುವ ಅಡ್ಯಾರು ನಂದಿಗುತ್ತು ತಿಮ್ಮಪ್ಪ ಶೆಟ್ಟಿ ಸ್ಮಾರಕ ಪ್ರಶಸ್ತಿಯನ್ನು ಉದ್ಯಮಿ ಹಾಗೂ ಸಮಾಜ ಸೇವಕ ಸುರೇಶ್ ಆರ್.ಕಾಂಚನ್ ಅವರಿಗೆ ಶ್ರೀ ಕೆ.ಕೆ.ಸುವರ್ಣ ಸ್ಮಾರಕ ಪ್ರಶಸ್ತಿಯನ್ನು ರಂಗಕರ್ಮಿ ನಾಗರಾಜ್ ಗುರುಪುರ ಅವರಿಗೆ ಮತ್ತು ಶ್ರೀಮತಿ ಭಾರತಿ ಕೊಡ್ಲೆಕರ್ ಸ್ಮಾರಕ ಪ್ರಶಸ್ತಿಯನ್ನು ಹಿರಿಯ ನಾಟಕ ಕಲಾವಿದೆ ಶೈಲಿನಿ ರಾವ್ ಅವರಿಗೆ ಪತಿ ಡಾ| ಅರುಣ್ ರಾವ್ ಜೊತೆಗೂಡಿ ಸನ್ಮಾನಿಸಿ ಗೌರವಿಸಲಾಯಿತು. ಅತಿಥಿüಗಳು ಮತ್ತು ಪುರಸ್ಕೃತರು ಸಂದರ್ಭೋಚಿತವಾಗಿ ಮಾತನಾಡಿ ಸಂಸ್ಥೆಯ ಕಾರ್ಯಸಾಧನೆಗಳನ್ನು ಪ್ರಶಂಸಿ ಅಭಿವಂದಿಸಿದರು. ಹರೀಶ್ ಚೇವಾರ್, ಚಂದ್ರಶೇಖರ್ ಎಸ್.ಶೆಟ್ಟಿ ಮತ್ತು ರೂಪಾ ವಿ.ಭಟ್ ಪುರಸ್ಕೃತರನ್ನು ಪರಿಚಯಿಸಿ ಅಭಿನಂದಿಸಿದರು.

ಅಂತೆಯೇ ಚಾರ್‍ಕೋಪ್ ಕನ್ನಡಿಗರ ಬಳಗದ ಸದಸ್ಯರಾಗಿದ್ದು ಗ್ಲೋಬಲ್ ಪೀಸ್ ಫೌಂಡೇಶನ್, ಕಾವೇರಿ ಕನ್ನಡ ಸಂಘ ಮತ್ತು ಐಸಿಎಫ್ ಸಂಸ್ಥೆಗಳು ಇತ್ತೀಚೆಗೆ ಅಮೇರಿಕಾದ ವಾಷಿಂಟನ್‍ನಲ್ಲಿ ನಡೆಸಿದ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಸಂಭ್ರಮದಲ್ಲಿ `ಅಂತಾರಾಷ್ಟ್ರೀಯ ವರ್ಷದ ವ್ಯಕ್ತಿ-2018 ಪ್ರಶಸ್ತಿ' ಪುರಸ್ಕೃತ ಮಲಾಡ್ ಕನ್ನಡ ಸಂಘದ ಅಧ್ಯಕ್ಷ ಹರೀಶ್ ಎನ್.ಶೆಟ್ಟಿ, ಅಸೋಸಿಯೇಶನ್ ಆಫ್ ಕನ್ನಡ ಕೂಟ'ಸ್ ಆಫ್ ಅಮೇರಿಕಾ ಸಂಸ್ಥೆ ಉತ್ತರ ಟೆಕ್ಸಾಸ್ ಮಲ್ಲಿಗೆ ಕನ್ನಡ ಕೂಟದ ಆಶ್ರಯದಲ್ಲಿ ಇತ್ತೀಚೆಗೆ ಅಮೆರಿಕದ ಡಾಲಸ್ ನಗರದ ಶೆರಟಾನ್ ಸಮಾವೇಶ ಸಭಾಗೃಹದಲ್ಲಿ ಆಯೋಜಿಸಿದ್ದ 10ನೇ ಅಕ್ಕ ವಿಶ್ವಕನ್ನಡ ಸಮ್ಮೇಳನದ ಕವಿಗೋಷ್ಠಿಯಲ್ಲಿ ಕವಿತೆ ವಾಚಿಸಿದ ಕನ್ನಡದ ಸಂವೇದನಾಶೀಲ ಕವಿ ಹಾಗೂ ಅಮೇರಿಕಾದಮೊಂಟ್‍ಗೊಮೆರಿ ಕಂಟ್ರಿ ರಾಜ್ಯ ಕೌನ್ಸಿಲ್ ವತಿಯಿಂದ ಕೌನ್ಸಿಲ್ ಸದಸ್ಯ ರೋಜ್ಹರ್ ಬೆರ್ಲಿನರ್ ಅವರಿಂದ ಗೌರವಿಸಲ್ಪಟ್ಟ ಗೋಪಾಲ ತ್ರಾಸಿ ಮತ್ತು ಸರ್ವೋತ್ಕೃಷ್ಟ ಚಲನಚಿತ್ರ (ಜಗ್ಗುದಾದ) ನಿರ್ದೇಶಕ ಪ್ರಶಸ್ತಿ ಪುರಸ್ಕೃತ ರಾಘವೇಂದ್ರ ಹೆಗ್ಡೆ ಅವರಿಗೆ ಸಾಧಕ ಗೌರವ ಪ್ರದಾನಿಸಿ ಗೌರವಿಸಲಾಯಿತು. ಪುರಸ್ಕೃತರು ಸಂದರ್ಭೋಚಿತವಾಗಿ ಮಾತನಾಡಿ ಬಳಗದ ಗೌರವಕ್ಕೆ ಅಭಿವಂದಿಸಿದರು. ಅಂತೆಯೇ ಅತಿಥಿüಗಳು ಸಂಘದ ಸದಸ್ಯರ ಪ್ರತಿಭಾನ್ವಿತ ವಿದ್ಯಾಥಿರ್üಗಳಿಗೆ ಸತ್ಕ್ಕರಿಸಿ ಅಭಿನಂದಿಸಿದರು.
ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಭಜನೆ ನಡೆದಿದ್ದು, ಪುರೋಹಿತ ವಿದ್ವಾನ್ ನಾಗೇಶ್ ಭಟ್ ತನ್ನ ಪೌರೋಹಿತ್ಯದಲ್ಲಿ ಶ್ರೀ ಶಾರದಾ ದೇವಿಗೆ ಮಹಾಪೂಜೆ ನೆರವೇರಿಸಿ ಮಹಾ ಮಂಗಳಾರತಿಗೈದು ನೆರೆದ ಸದ್ಭಕ್ತರಿಗೆ ತೀರ್ಥಪ್ರಸಾದ ವಿತರಿಸಿ ಹರಸಿದರು. ಭಾಸ್ಕರ ಶೆಟ್ಟಿ ಮತ್ತು ಪದ್ಮಾವತಿ ಶೆಟ್ಟಿ ದಂಪತಿಗಳು ಪೂಜೆ ವಿಧಿ ವಿಧಾನಗಳನ್ನು ನೇರವೇರಿಸಿದರು.

ಜತೆ ಕಾರ್ಯದರ್ಶಿ ವಸಂತಿ ಯು.ಸಾಲ್ಯಾನ್, ಸ್ವಾಗತಿಸಿದರು. ಎಂ.ಕೃಷ್ಣ ಎ.ಶೆಟ್ಟಿ ಪ್ರಸ್ತಾವಿಕ ಭಾಷಣಗೈದು ಸಂಸ್ಥೆಯ ಸೇವಾ ವೈಖರಿ ತಿಳಿಸಿದರು. ಗೌ| ಪ್ರ| ಕಾರ್ಯದರ್ಶಿ ರಘುನಾಥ್ ಎನ್.ಶೆಟ್ಟಿ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಪದಾಧಿಕಾರಿಗಳು ಅತಿಥಿüಗಳಿಗೆ ಶಾಲು ಹೊದಿಸಿ, ಹೂಗುಚ್ಛ, ಸ್ಮರಣಿಕೆಯನ್ನಿತ್ತು ಗೌರವಿಸಿದರು. ಗೌ| ಕೋಶಾಧಿಕಾರಿ ಗೌರಿ ಡಿ.ಪಣಿಯಾಡಿ ವಂದಿಸಿದರು.

ಜತೆ ಕಾರ್ಯದರ್ಶಿ ವಿಜಯ ಡಿ.ಪೂಜಾರಿ, ಜತೆ ಕೋಶಾಧಿಕಾರಿಗಳಾದ ಸದಾಶಿವ ಸಿ.ಪೂಜಾರಿ, ಲತಾ ಶೆಟ್ಟಿ, ತನುಜಾ ಭಟ್ ಮತ್ತಿತರರ ಸಹಕಾರದೊಂದಿಗೆ ಬಳಗದ ಸದಸ್ಯರು ಮತ್ತು ಮಕ್ಕಳು ನೃತ್ಯವೈವಿಧ್ಯತೆಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತ ಪಡಿಸಿದರು. ಗೋಪಾಲ್ ತ್ರಾಸಿ ಮತ್ತು ಕು| ರೋಶ್ನಿ ಆಚಾರ್ಯ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಾಹಿಸಿದರು.

 
More News

ಸಂಗೀತ ಪ್ರೇಮಿಗಳ ಮನಸೆಳೆದ  `ಕೊಂಕಣಿ ಶ್ರೀರಾಮ ಗೀತಾ'
ಸಂಗೀತ ಪ್ರೇಮಿಗಳ ಮನಸೆಳೆದ `ಕೊಂಕಣಿ ಶ್ರೀರಾಮ ಗೀತಾ'
ಮೇ.26: ಕಾಂದಿವಿಲಿ ಪಶ್ಚಿಮದ ಪೆÇಯಿಸರ್ ಜಿಮ್ಖಾನಾ ಮೈದಾನದಲ್ಲಿ
ಮೇ.26: ಕಾಂದಿವಿಲಿ ಪಶ್ಚಿಮದ ಪೆÇಯಿಸರ್ ಜಿಮ್ಖಾನಾ ಮೈದಾನದಲ್ಲಿ
ಬಣ್ಣದ ರಂಗು...ಸಂಸ್ಕಾರದ ಮೆರುಗು ವಿಶೇಷ ಬೇಸಿಗೆ ಶಿಬಿರ ಸಂಪನ್ನ
ಬಣ್ಣದ ರಂಗು...ಸಂಸ್ಕಾರದ ಮೆರುಗು ವಿಶೇಷ ಬೇಸಿಗೆ ಶಿಬಿರ ಸಂಪನ್ನ

Comment Here