Thursday 18th, April 2024
canara news

61ನೇ ನಾಡಹಬ್ಬ ಸಂಭ್ರಮಿಸಿದ ಗೋರೆಗಾಂವ್ ಕರ್ನಾಟಕ ಸಂಘ

Published On : 23 Oct 2018   |  Reported By : Rons Bantwal


ಯಕ್ಷಗಾನವು ಕಲೆ-ಸಂಸ್ಕೃತಿಯ ಮೂಲವಾಗಿದೆ: ಶ್ರೀಧರ್ ಎಸ್.ಶೆಟ್ಟಿ

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಅ.23: ವಿಶ್ವದಲ್ಲಿ ಹಿಂದೂಸ್ಥಾನದ ಸಂಸ್ಕೃತಿಯೇ ವೀರಾಗ್ರಣಿ (ಚ್ಯಾಂಪಿಯನ್). ಆದುದರಿಂದ ಭಾರತೀಯ ಕಲೆ, ಸಂಸ್ಕೃತಿ ಜಗತ್ತಿಗೆನೇ ಮಾದರಿ ಆಗಿದೆ. ಈ ಎಲ್ಲಾ ಕಲೆ, ಸಂಸ್ಕೃತಿಯ ಮೂಲ ಯಕ್ಷಗಾನವಾಗಿದೆ. ನೂರಾರು ವರ್ಷಗಳ ಇತಿಹಾಸವುಳ್ಳ ಯಕ್ಷಗಾನವು ಎಲ್ಲಾ ಸಂಸ್ಕೃತಿಗಳ ತಳಪಾಯ ಇದ್ದಂತೆ. ಯಾವುದೇ ವಿಶ್ವವಿದ್ಯಾಲಯಗಳು ಕಲೆ, ಸಂಸ್ಕೃತಿ ಬಗ್ಗೆ ನೀಡುವ ಅಧ್ಯಾಯನಗಳು ಯಕ್ಷಗಾನ ಪ್ರಧಾನವಾದುದು ಎಂದು ಬಂಟ್ಸ್ ಸಂಘ ಮುಂಬಯಿ ಸಂಚಾಲಕತ್ವದ ಎಸ್. ಎಂ ಶೆಟ್ಟಿ ಕಾಲೇಜ್ ಪೆÇವಾಯಿ ಇದರ ಪ್ರಾಂಶುಪಾಲ ಶ್ರೀಧರ್ ಎಸ್.ಶೆಟ್ಟಿ ತಿಳಿಸಿದರು.

ವಜ್ರ ಮಹೋತ್ಸವ ಸಂಭ್ರದಲ್ಲಿನ ಮುಂಬಯಿನ ಪ್ರತಿಷ್ಠಿತ ಸಂಸ್ಥೆಯಲ್ಲೊಂದಾದ ಗೋರೆಗಾಂವ್ ಕರ್ನಾಟಕ ಸಂಘವು ಇಂದಿಲ್ಲಿ ಆದಿತ್ಯವಾರ ಗೋರೆಗಾಂವ್ ಪಶ್ಚಿಮದ ಕೇಶವ ಗೋರೆ ಸ್ಮಾರಕ ಟ್ರಸ್ಟ್ ಸಭಾಗೃಹದಲ್ಲಿ ಸಂಭ್ರಮಿಸಿದ್ದ ಅರ್ವತ್ತೊಂದನೇ ವಾರ್ಷಿಕ ನಾಡಹಬ್ಬ ಉದ್ಘಾಟಿಸಿ ಸÀಂಭ್ರಮದ ಅಧ್ಯಕ್ಷತೆ ವಹಿಸಿ ಶ್ರೀಧರ್ ಎಸ್. ಶೆಟ್ಟಿ ಮಾತನಾಡಿದರು.

ಸಮಾರಂಭದಲ್ಲಿ ಅತಿಥಿü ಅಭ್ಯಾಗತರುಗಳಾಗಿ ಬೊಂಬೇ ಬಂಟ್ಸ್ ಅಸೋಸಿಯೇಶನ್‍ನ ಗೌ| ಪ್ರ| ಕಾರ್ಯದರ್ಶಿ ಸಿಎ| ಸುರೇಂದ್ರ ಎಸ್.ಶೆಟ್ಟಿ, ಲೇಖಕಿ-ಕವಯತ್ರಿ ಅರುಷಾ ಎನ್.ಶೆಟ್ಟಿ, ಕೇಟರಿಂಗ್ ಉದ್ಯಮಿ ಸತೀಶ್ ಜೆ. ಪೂಜಾರಿ ಭಯಂದರ್ ಉಪಸ್ಥಿತರಿದ್ದು ಸಂಘವು ವಾರ್ಷಿಕವಾಗಿ ಕೊಡಮಾಡುವ ದತ್ತಿನಿಧಿ ಬಹುಮಾನÀ, ವಿದ್ಯಾಥಿರ್ü ನೆರವುವನ್ನು ಸ್ಥಳಿಯ ಐ ಬಿ ಪಾಟೀಲ್ ಮುನ್ಸಿಪಾಲಿಟಿ ಶಾಲೆ, ಪಹಡಿ ಶಾಲೆ ಮತ್ತು ಸರಸ್ವತಿ ರಾತ್ರಿ ಶಾಲಾ ಮಕ್ಕಳಿಗೆ ಅತಿಥಿsಗಳು ಹಸ್ತಾಂತರಿಸಿ ಶುಭಾರೈಸಿದರು.

ಸುರೇಂದ್ರ ಶೆಟ್ಟಿ ಮಾತನಾಡಿ ಮಾನವ ಜೀವನಕ್ಕೆ ಶಿಕ್ಷಣವೇ ಶಕ್ತಿಯಾಗಿದೆ. ಇಂತಹ ಶಿಕ್ಷಣ ಸಮಾಜೋದ್ಧಾರಕ್ಕೆ ಪ್ರಧಾನವಾದದ್ದು. ನಾವು ಇದು ಮಕ್ಕಳಿಗೆ ಕನಿಷ್ಠ ಪ್ರಮಾಣದ ನೆರವಿನ ಮೂಲಕವಾದರೂ ಪೆÇ್ರೀತ್ಸಾಹಸುವ ಇಂತಹ ಸೇವೆ ಭವಿಷ್ಯತ್ತಿಗೆ ಒಳ್ಳೆಯ ಪೀಳಿಗೆಯನ್ನು ಸಿದ್ಧಪಡಿಸಲು ಪೂರಕವಾಗಿದೆ ಎಂದರು.


ಅರುಷಾ ಶೆಟ್ಟಿ ಮಾತನಾಡಿ ಗೋರೆಗಾಂವ್ ಕರ್ನಾಟಕ ಸಂಘವು ಮಹಾನಗರದ ಜನತೆಯ ಕಾರ್ಯಗಾರ ಇದ್ದಂತೆ. ಮುಂಬಯಿನಲ್ಲಿ ಈ ಸಂಘಕ್ಕೆ ಮೀರಿದ ಸಂಸ್ಥೆಮತ್ತೊಂದಿಲ್ಲ. ಒಳ್ಳೆಯ ಉದ್ದೇಶವನ್ನಿಟ್ಟು ಪ್ರಯತ್ನ, ಪರಿಶ್ರಮದಿಂದ ಯಾವುದೇ ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗ ಅದು ಫಲಪ್ರದವಾಗಿಯೇ ಮೂಡುತ್ತದೆ. ಎಂದಿಗೂ ಋಣಾತ್ಮಕ ಚಿಂತನೆ ಮೂಡಿಸಿ ಕೊಳ್ಳುವುದಕ್ಕಿಂತ ಧನಾತ್ಮಕ ಮನೋಭಾವದಿಂದ ಯೋಚಿಸಿ ಆಯೋಜಿಸುವ ಯಾವುದೇ ಕಾಯಕಗಳು ಯಶಸ್ವೀಗೊಳ್ಳುವುದು. ಆವಾಗ ಆಸಾಧ್ಯ ಎನ್ನುವುದೇ ಇರಲಾರದು ಎಂದರು.

ಅಧ್ಯಕ್ಷ ದೇವಲ್ಕುಂದ ಶೆಟ್ಟಿ ಸ್ವಾಗತಿಸಿ ಪ್ರಸ್ತಾವನೆಗೈದು 1958ರ ಅಕ್ಟೋಬರ್‍ನ ವಿಜಯದಶಮಿ ದಿನ ಮೂರೂರು ಸಂಜೀವ ಶೆಟ್ಟಿ ಮತ್ತು ಅವರ ಸಮಾನ ಮನಸ್ಕ ಜೊತೆಗಾರರ ದೂರದೃಷ್ಠಿತ್ವದಿಂದ ಹುಟ್ಟು ಪಡೆದ ಈ ಸಂಘವು ತನ್ನ ಉದಾತ್ತ ಧ್ಯೇಯೋದ್ದೇಶಗಳನ್ನು ಪರಿಪೂರ್ಣ ಗೊಳಿಸಿ ಸ್ವಂತಿಕೆಯ ಪ್ರತಿಷ್ಠೆಯೊಂದಿಗೆ ಬೆಳೆದಿದೆ. ಅರ್ವತ್ತರ ನಡಿಗೆಯಲ್ಲೂ ಇಂದಿಗೂ ಒಂದು ಕುಟುಂಬವಾಗಿಯೇ ಮುನ್ನಡೆದಿದೆ ಎಂದÀರು.

ಸಂಘದ ಮಾಜಿ ಅಧ್ಯಕ್ಷ ವಿ.ಪಿ ಕೋಟ್ಯಾನ್, ಹಾಲಿ ಮಾಜಿ ಪದಾಧಿಕಾರಿಗಳು, ವಿವಿಧ ವಿಭಾಗಗಳ ಮುಖ್ಯಸ್ಥರು, ಸದಸ್ಯರನೇಕರು ಉಪಸ್ಥಿತರಿದ್ದು, ಸೀಮಾ ಕುಲ್ಕರ್ಣಿ, ವೇದ ಶೆಟ್ಟಿ ಮತ್ತು ಪ್ರೀತಿ ಕುಡ್ವ ಪ್ರಾರ್ಥನೆ ಹಾಡಿದರು. ಸಂಘದ ಗೌ| ಪ್ರ| ಕಾರ್ಯದರ್ಶಿ ಪದ್ಮಜಾ ಮಣ್ಣೂರು, ವಸಂತಿ ಕೋಟೆಕರ್, ವೇದ ಸುವರ್ಣ, ಸರಿತಾ ಸುರೇಶ್ ನಾಯ್ಕ್ ಅತಿಥಿsಗಳನ್ನು ಪರಿಚಯಿಸಿದರು. ಮಾಜಿ ಅಧ್ಯಕ್ಷರುಗಳಾದ ಜಿ.ಟಿ ಆಚಾರ್ಯ, ಪಯ್ಯಾರು ರಮೇಶ್ ಶೆಟ್ಟಿ (ಹಾಲಿ ಪಾರುಪತ್ಯಗಾರರು), ಶಕುಂತಳಾ ಆರ್.ಪ್ರಭು, ಎಸ್.ಎಂ ಶೆಟ್ಟಿ ಅತಿಥಿsಗಳಿಗೆ ಪುಷ್ಪಗುಪ್ಚ ಸ್ಮರಣಿಕೆಯನ್ನಿತ್ತು ಗೌರವಿಸಿದರು. ಜಯಕರ ಡಿ.ಪೂಜಾರಿ ಸಭಾ ಮತ್ತುಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು. ಗೌ| ಕೋಶಾಧಿಕಾರಿ ವಿಶಾಲಾಕ್ಷಿ ಉಳುವಾರ ಮತ್ತು ಗುಣೋದಯ ಎಸ್.ಐಲ್ ಫಲಾನುಭವಿ ಮಕ್ಕಳ ಯಾದಿ ವಾಚಿಸಿದರು. ವಸಂತಿ ಕೋಟೆಕರ್ ಕೃತಜ್ಞತೆ ಸಮರ್ಪಿಸಿದರು.

ಸಂಘದ ಉಪವಿಭಾಗಗಳ ಸದಸ್ಯರು ಹಾಗೂ ಮಹಾನಗರದಲ್ಲಿನ ವಿವಿಧ ಸಂಘ-ಸಂಸ್ಥೆಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸುತ ಪಡಿಸಿದರು. ಗೋರೆಗಾಂವ್ ಕರ್ನಾಟಕ ಸಂಘದ ರಂಗಸ್ಥಳ ವಿಭಾಗದ ಕಲಾವಿದರು `ಪಿಂಗಳಾಕ್ಷ ವಿಜಯ' ಯಕ್ಷಗಾನ ಪ್ರದರ್ಶಿಸಿದರು.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here