Friday 29th, March 2024
canara news

ಗುಜರಾತ್ ಬಿಲ್ಲವ ಸಂಘದ ಸೂರತ್ ಸಮಿತಿ ಸಂಭ್ರಮಿಸಿದ 7ನೇ ವಾರ್ಷಿಕೋತ್ಸವ

Published On : 23 Oct 2018   |  Reported By : Rons Bantwal


ಶ್ರೀಮಂತ ಮನೋಭಾವದಿಂದ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ : ಚಂದ್ರಶೇಖರ ಪೂಜಾರಿ

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ನ.23: ಶ್ರೀಮಂತ ಮನೋಭಾವದಿಂದ ಸ್ವಸ್ಥ ಸಮಾಜದ ನಿರ್ಮಾಣ ಸಾಧ್ಯ. ಅಂತೆಯೇ ತಮ್ಮೆಲ್ಲರ ಸಹಯೋಗದಿಂದ ಸಮುದಾಯದ ಉನ್ನತೀಕರಣ ಸಾಧ್ಯವಾಗಿದೆ. ಜಯ ಸುವರ್ಣರು ಭಾರತ್ ಬ್ಯಾಂಕ್‍ಗಳಿಂದ ಬಿಲ್ಲವ ಸಮಾಜವು ರಾಷ್ಟ್ರ ಮಾನ್ಯತೆಗೆ ಪಾತ್ರವಾಗಿದೆ. ಅವರ ಸಮಾಜಮುಖಿ ಚಿಂತನೆಯಿಂದ ಸಮಾಜೋದ್ಧಾರ ಸಾಧ್ಯವಾಗಿದೆ. ನಾವು ಸ್ವಸಮಾಜದಂತೆ ಅನ್ಯ ಸಮಾಜವನ್ನು ಗೌರವಿಸಿ ಪ್ರೀತಿಸಿ ಸಾಮರಸ್ಯದಿಂದ ಬಾಳಿದಾಗ ಮನುಷ್ಯ ಜೀವನ ಹಸನವಾಗುವುದು. ಬಿಲ್ಲವರು ಮೂಢನಂಬಿಕಾ ಮುಕ್ತರಾಗಬೇಕು. ಆವಾಗಲೇ ಬಿಲ್ಲವರು ಬಲಿಷ್ಠರಾಗುವರು. ದೈವದೇವರುಗಳನ್ನು ಬೆಳ್ಳಿ ಸ್ವರ್ಣದಿಂದ ಅಲಂಕರಿಸುವ ಬದಲು ನಿರ್ಗತಿಕ ಪಾಲಿಗೆ ಆಶ್ರಯ ದಾತರಾಗಿರಿ. ಅದೇ ಜರ್ನಾಧನನ ಸೇವೆ, ಜನತಾ ಸೇವೆ ಆಗಿದೆ ಎಂದು ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್. ಪೂಜಾರಿ ನುಡಿದರು.

ಇಂದಿಲ್ಲಿ ಭಾನುವಾರ ಪೂರ್ವಾಹ್ನ ಗುಜರಾತ್ ರಾಜ್ಯದ ಸೂರತ್ ಜಿಲ್ಲೆಯ ವರಛಾ ನಗರದ ಪಾಟೇಲ್‍ವಾಡಿ ಅಲ್ಲಿನ ಹರೇಕೃಷ್ಣ ಸಭಾಗೃಹದಲ್ಲಿ ಗುಜರಾತ್ ಬಿಲ್ಲವ ಸಂಘದ ಸೂರತ್ ಶಾಖೆಯ ವಾರ್ಷಿಕೋತ್ಸವ ಕಾರ್ಯಕ್ರಮ ಮತ್ತು ಆಯೋಜಿಸಿದ್ದ ಕೋಟಿ-ಚೆನ್ನಯ ಭಜನಾ ಕಾರ್ಯಕ್ರಮ ಉದ್ಘಾಟಿಸಿ ಚಂದ್ರಶೇಖರ ಪೂಜಾರಿ ಮಾತನಾಡಿದರು.

ಗುಜರಾತ್ ಬಿಲ್ಲವ ಸಂಘದ ಅಧ್ಯಕ್ಷ ಮನೋಜ್ ಸಿ.ಪೂಜಾರಿ ಅಧ್ಯಕ್ಷತೆಯಲ್ಲಿ ಜರುಗಿಸಲ್ಪಟ್ಟ ಸಭಾ ಕಾರ್ಯಕ್ರಮದಲ್ಲಿ ಗೌರವ ಅತಿಥಿüಗಳಾಗಿ ಗುಜರಾತ್ ಬಿಲ್ಲವ ಸಂಘದ ಗೌರವಾಧ್ಯಕ್ಷ ದಯಾನಂದ ಬೋಂಟ್ರಾ, ಹರೀಶ್ ಪೂಜಾರಿ ಅಂಕ್ಲೇಶ್ವರ, ಗುಜರಾತ್ ಬಿಲ್ಲವ ಸಂಘÀ ಸೂರತ್ ಗೌರವಾಧ್ಯಕ್ಷ ಕೆ.ಎಸ್ ಅಂಚನ್, ಮಾಜಿ ಉಪಾಧ್ಯಕ್ಷ ಸಾಧು ಪೂಜಾರಿ, ಗುಜರಾತ್ ಬಿಲ್ಲವ ಸಂಘದ ಪ್ರಧಾನ ಕಾರ್ಯದರ್ಶಿ ವಾಸು ವಿ.ಸುವರ್ಣ, ಮಾಜಿ ಕೋಶಾಧಿಕಾರಿ ವಾಸು ಪೂಜಾರಿ ಬರೋಡಾ, ವಿಠಲ ಪೂಜಾರಿ ಅಂಕ್ಲೇಶ್ವರ ಮತ್ತಿತರು ವೇದಿಕೆಯಲ್ಲಿ ಆಸೀನರಾಗಿದ್ದರು.

ದಯಾನಂದ ಬೋಂಟ್ರಾ ಮಾತನಾಡಿ ಭವಿಷ್ಯ ಯುವ ಜನತೆಯಲ್ಲಿದೆ. ಅದ್ದರಿಂದ ಬಮ್ಮ ಮಕ್ಕಳಲ್ಲಿ ಒಳಿತಿನ ಬಗ್ಗೆ ಪೆÇೀಷಕರು ಅರಿವು ಮೂಡಿಸುವ ಅಗತ್ಯವಿದೆ. ನಾವು ಗುರುಕುಲ ಪರಂಪರೆಗಳನ್ನು ಮೈಗೂಡಿಸಿ ಮುನ್ನಡೆದಾಗ ಬದುಕನ್ನು ಸುಲಭವಾಗಿಸಬಹುದು. ಶಿಕ್ಷಣಕ್ಕೆ ಮಹತ್ತರವಾದ ಪ್ರಾಮುಖ್ಯತೆ ನೀಡಿರಿ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ವಿದ್ಯಾಥಿರ್sಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಶೈಕ್ಷಣಿಕ ಹಾಗೂ ಕ್ರೀಡಾ ಸಾಧಕರಿಗೆ ಸತ್ಕರಿಸಲಾಯಿತು. ಸೇರಿದಂತೆ ಸಂಘದ ಪದಾಧಿಕಾರಿಗಳು, ವಿವಿಧ ಶಾಖೆಗಳ ಮುಖ್ಯಸ್ಥರು ಸದಸ್ಯರನೇಕರು ಉಸ್ಥಿತರಿದ್ದು ಅವರನ್ನು ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು.

ಕೋಟಿ-ಚೆನ್ನಯರು ಮತ್ತು ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರತಿಮೆಗಳಿಗೆ ಗಣ್ಯರು ಆರತಿ ನೆರವೇರಿಸಿ ಸಂಭ್ರಮಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿದರು. ಪದ್ಮಾವತಿ ಎಸ್.ಪೂಜಾರಿ ಬಳಗ ಪ್ರಾರ್ಥನೆಯನ್ನಾಡಿದರು. ಗುಜರಾತ್ ಬಿಲ್ಲವ ಸಂಘÀ ಸೂರತ್ ಅಧ್ಯಕ್ಷ ವಿಶ್ವನಾಥ್ ಜಿ.ಪೂಜಾರಿ ಬಾಡೋಳಿ, ಸ್ವಾಗತಿಸಿ, ಅತಿಥಿüಗಳನ್ನು ಪರಿಚಯಿಸಿ, ಪ್ರಸ್ತಾವಣೆಗೈದರು. ಕೋಶಾಧಿಕಾರಿ ರವೀಂದ್ರ ಸುವರ್ಣ, ರತ್ನಾಕರ್ ಕೋಟ್ಯಾನ್, ಗಣೇಶ್ ಗುಜರನ್, ಸುನೀಲ್ ಕೆ.ಅಂಚನ್ ಅತಿಥಿüಗಳಿಗೆ ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು. ಗುಜರಾತ್ ಬಿಲ್ಲವ ಸಂಘÀ ಸೂರತ್ ಜೊತೆ ಕಾರ್ಯದರ್ಶಿ ಮಮತಾ ಎಸ್.ಅಂಚನ್ ಪ್ರತಿಭಾ ಪುರಸ್ಕಾರ ಪಟ್ಟಿಯನ್ನು ವಾಚಿಸಿದರು. ಪ್ರಧಾನ ಕಾರ್ಯದರ್ಶಿ ಸೌಮ್ಯ ಪಿ. ಪೂಜಾರಿ ವಾರ್ಷಿಕ ವರದಿ ವಾಚಿಸಿ, ಕಾರ್ಯಕ್ರಮ ನಿರೂಪಿಸಿ, ವಂದನಾರ್ಪಣೆಗೈದರು.

ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಆರ್.ಕೆ ಕೋಟ್ಯಾನ್, ಗಣೇಶ್ ಗುಜರನ್, ಅಜಿತ್ ಪೂಜಾರಿ, ಸುಕುಮಾರ್ ಅಮೀನ್ ಪೂಜೆ ನೇರವೇರಿಸಿ ಪ್ರಸಾದ ವಿತರಿಸಿದರು. ಮನೋರಂಜನೆ ಪ್ರಯುಕ್ತ ತೆಲಿಕೆದ ಕಡಲ್ ಕುಡ್ಲ ತಂಡವು `ತೆಲಿಕೆದ ಸೆರೆ' ಕುಸಲ್ದ ಕಾರ್ಯಕ್ರಮ ಪ್ರಸ್ತುತ ಪಡಿಸಿದರು.

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here