Thursday 25th, April 2024
canara news

ನ.03: ತುಳು ಸಂಘ ಅಂಕ್ಲೇಶ್ವರ ಉದ್ಘಾಟನೆ ಮತ್ತು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಗುಜರಾತ್ ಘಟಕದ ವಾರ್ಷಿಕೋತ್ಸವ

Published On : 25 Oct 2018   |  Reported By : Rons Bantwal


ಮುಂಬಯಿ, ಅ.25: ಗುಜರಾತ್ ರಾಜ್ಯದ ಅಂಕ್ಲೇಶ್ವರ ಇಲ್ಲಿನ ಪುರಭವನದ ಮಾ ಶಾರದ ಭವನ ಸಭಾಗೃಹದಲ್ಲಿ ಇದೇ ನ.03ನೇ ಶನಿವಾರ ತುಳು ಸಂಘ ಅಂಕ್ಲೇಶ್ವರ ಉದ್ಘಾಟನೆ ಮತ್ತು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಗುಜರಾತ್ ಘಟಕದ ವಾರ್ಷಿಕೋತ್ಸವ ಸಂಭ್ರಮಿಸಲಿದೆ.

     

Ishwarsinh Patel                       Ajith Shetty (Coodinter).                     Anni C Shetty

    

Ravi kumar Arora IAS                    Rajendra Sinh C SP                          Dharmapal U.Devadiga

     

 Dayanand Bontra                   Satish Shetty Patla                           Shanker K. Shetty

  

 Ravinath Shetty (Hon.President)               Shashidhar B.Shetty

ತುಳು ಸಂಘ ಅಂಕ್ಲೇಶ್ವರ ಅಧ್ಯಕ್ಷ ಶಂಕರ್ ಕೆ.ಶೆಟ್ಟಿ ಅಧ್ಯಕ್ಷತೆಯಲ್ಲಿ ಬೆಳಿಗ್ಗೆ 10.00 ಗಂಟೆಗೆ ನಡೆಸಲ್ಪಡುವ ಉಭಯ ಕಾರ್ಯಕ್ರಮಗಳನ್ನು ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ್ ಯು.ದೇವಾಡಿಗ ಉದ್ಘಾಟಿಸುವರು. ಮುಖ್ಯ ಅತಿಥಿüಯಾಗಿ ಶ್ರೀ ಮೂಕಾಂಬಿಕಾ ದೇವಸ್ಥಾನ ಘನ್ಸೋಲಿ ಇದರ ಸಮಿತಿ ಅಧ್ಯಕ್ಷ ಧರ್ಮದರ್ಶಿ ಅಣ್ಣಿ ಸಿ.ಶೆಟ್ಟಿ, ಗೌರವ ಅತಿಥಿüಗಳಾಗಿ ಗುಜರಾತ್ ಬಿಲ್ಲವ ಸಂಘದ ಗೌರವಾಧ್ಯಕ್ಷ ದಯಾನಂದ ಬೋಂಟ್ರಾ, ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‍ನ ಸಂಸ್ಥಾಪಕಾಧ್ಯಕ್ಷ ಸತೀಶ್ ಶೆಟ್ಟಿ ಪಟ್ಲ, ಅಧ್ಯಕ್ಷ ಅಜಿತ್ ಎಸ್.ಶೆಟ್ಟಿ, ತುಳು ಸಂಘ ಬರೋಡಾ ಅಧ್ಯಕ್ಷ ಶಶಿಧರ್ ಬಿ.ಶೆಟ್ಟಿ, ಮಾಜಿ ಅಧ್ಯಕ್ಷ ಐ.ವಿಶೆಟ್ಟಿ, ತುಳು ಐಸಿರಿ ವಾಪಿ ಗುಜರಾತ್ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಕರ್ನಾಟಕ ಸಂಘ ಸೂರತ್ ಉಪಾಧ್ಯಕ್ಷ ಪ್ರಭಾಕರ್ ಶೆಟ್ಟಿ, ತುಳುಸಿರಿ ಅಂಕ್ಲೇಶ್ವರ ಅಧ್ಯಕ್ಷೆ ಸಂಧ್ಯಾ ಎಸ್.ಶೆಟ್ಟಿ, ಕರ್ನಾಟಕ ಸಂಘ ಅಂಕ್ಲೇಶ್ವರ ಅಧ್ಯಕ್ಷ ಉದಯ ಹೊನ್ನಾವರ್, ಶ್ರೀ ವೇದಛಲ ಸೇವಾ ಟ್ರಸ್ಟ್ ಮಣಿಪಾಲ ಉಡುಪಿ ಅಧ್ಯಕ್ಷ ಹರಿಪ್ರಸಾದ್ ರೈ ಬೆಳ್ಳಿಪಾಡಿ, ಕರ್ನಾಟಕ ಸಂಘ ಬರೋಡಾ ಗೌರವಾಧ್ಯಕ್ಷ ಜಯರಾಮ ಎಸ್.ಶೆಟ್ಟಿ, ಬಂಟ್ಸ್ ಸಂಘ ಅಹ್ಮದಾಬಾದ್ ಅಧ್ಯಕ್ಷ ಅಪ್ಪುಶೆಟ್ಟಿ, ತುಳುಸಿರಿ ವಾಪಿ ಗುಜರಾತ್ ಅಧ್ಯಕ್ಷ ಸುಕೇಶ್ ಶೆಟ್ಟಿ, ಹಿರಿಯ ಉದ್ಯಮಿಗಳಾದ ಮೋಹನ್ ಸಿ.ಪೂಜಾರಿ ಅಹ್ಮದಾಬಾದ್, ರಾಧಾಕೃಷ್ಣ ಶೆಟ್ಟಿ ಸೂರತ್, ಪಾಂಡು ಶೆಟ್ಟಿ ವಸಾಯಿ, ಶಿವರಾಮ ಶೆಟ್ಟಿ ಸೂರತ್, ಪ್ರಕಾಶ್ ಶೆಟ್ಟಿ ಸೂರತ್, ಅಂಕ್ಲೇಶ್ವರದ ಉದ್ಯಮಿಗಳಾದ ಗಣಪತಿ ಆಚಾರ್ಯ, ಉದಯ ಸಿ.ಶೆಟ್ಟಿ, ಹರೀಶ್ ಪೂಜಾರಿ, ಕರುಣಾಕರ್ ಶೆಟ್ಟಿ ಮತ್ತಿತರ ಮಹಾನೀಯರು ಆಗಮಿಸಲಿದ್ದಾರೆ.

ಸಂಜೆ 6.00 ಗಂಟೆಗೆ ನಡೆಸಲ್ಪಡುವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿsಗಳಾಗಿ ಗುಜರಾತ್ ರಾಜ್ಯದ ಕ್ರೀಡೆ ಹಾಗೂ ಸಾರಿಗೆ ಸಚಿವ ಈಶ್ವರ್‍ಸಿಂಹ್ ಪಾಟೇಲ್, ಭರುಚ್ ಜಿಲ್ಲಾಧಿಕಾರಿ ರವಿ ಕುಮಾರ್ ಅರೋರಾ (ಐಎಎಸ್), ಭರುಚ್‍ನ ಪೆÇಲೀಸ್ ವರಿಷ್ಠಾಧಿಕಾರಿ ರಾಜೇಂದ್ರಸಿಂಹ್ ಚೂಡಸಾಮಾ, ಜಿಐಡಿಸಿ ಅಸೋಸಿಯೇಶನ್ ಅಂಕ್ಲೇಶ್ವರ ಅಧ್ಯಕ್ಷ ಮಹೇಶ್ ಪಾಟೇಲ್, ಅಂಕ್ಲೇಶ್ವರ ನಗರಪಾಲಿಕೆ ಅಧ್ಯಕ್ಷೆ ದಕ್ಷಾಬೆನ್ ಶ್ಹಾ, ಮುನಿಯಾಳ್ ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್‍ನ ಟ್ರಸ್ಟಿ ಉದಯ ಶೆಟ್ಟಿ ಮುನಿಯಾಳ್, ಬಂಟ್ಸ್ ಸಂಘ ಮುಂಬಯಿ ಇದರ ವಿೂರಾ ಭಯಂಧರ್ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಗಿರೀಶ್ ಶೆಟ್ಟಿ ತೆಲ್ಲಾರ್, ಕರ್ನಾಟಕ ಸಮಾಜ ಸೂರತ್ ಅಧ್ಯಕ್ಷ ಮನೋಜ್ ಸಿ.ಪೂಜಾರಿ, ಉದ್ಯಮಿಗಳಾದ ಬಾಬುಭಾಯಿ ಪಾಟೇಲ್, ರಾಮಕೃಷ್ಣ ಗಂಭೀರ್, ಹರೀಶ್ ಬಿ.ಶೆಟ್ಟಿ, ಜಯಂತ್ ಶೆಟ್ಟಿ, ಬಂಟ್ಸ್ ಸಂಘ ಮುಂಬಯಿ ಇದರ ಉನ್ನತ ಶಿಕ್ಷಣ ಸಮಿತಿ ಉಪ ಕಾರ್ಯಾಧ್ಯಕ್ಷ ಕಿಶೋರ್ ಕುಮಾರ್ ಕುತ್ಯಾರ್ ಇನ್ನಿತರ ಗಣ್ಯರು ಭಾಗವಹಿಸಿ ಶ್ರೀ ಮಹಾಂತ್ ಶ್ರೀ ಮನ್‍ಮೋಹನ್ ದಾಸ್‍ಜಿ ಗುಮನ್ದೇವ್ ಪಿತಾದೀಸ್ ಅವರ ಗುರುವಂದನೆಗೈದು ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸುವರು.

ಕರ್ನೂರು ಮೋಹನ್ ರೈ ಮತ್ತು ನವೀನ್ ಶೆಟ್ಟಿ ಯೆಡ್ಮೇಮರ್ ಕಾರ್ಯಕ್ರಮ ನಿರೂಪಿಸಲಿದ್ದು, ಮನೋರಂಜನಾ ಕಾರ್ಯಕ್ರಮವಾಗಿ ಉಭಯ ಸಂಸ್ಥೆಗಳ ಸದಸ್ಯರು ಹಾಗೂ ಮಕ್ಕಳು ಸಾಂಸ್ಕೃತಿಕ ವೈಭವ ಮತ್ತು ಯಕ್ಷಗಾನ ಕಲಾವಿದರು ಸತೀಶ್ ಶೆಟ್ಟಿ ಪಟ್ಲ ಭಾಗವತಿಕೆಯಲ್ಲಿ `ಕನಕಾಂಗಿ ಕಲ್ಯಾಣ' ಯಕ್ಷಗಾನ ಪ್ರದರ್ಶಿಸುವರು ಎಂದು ತುಳು ಸಂಘ ಅಂಕ್ಲೇಶ್ವರ ಇದರ ಪ್ರಧಾನ ಕಾರ್ಯದರ್ಶಿ ಅಶೋಕ್ ಶೆಟ್ಟಿ, ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಗುಜರಾತ್ ಘಟಕದ ಗೌರವಾಧ್ಯಕ್ಷ ರವಿನಾಥ್ ವಿ.ಶೆಟ್ಟಿ, ಸಂಚಾಲಕ ಶಶಿಧರ್ ಬಿ.ಶೆಟ್ಟಿ, ಪ್ರಧಾನ ಕಾರ್ಯದರ್ಶಿ ವಿಶಾಲ್ ಶಾಂತಾ ತಿಳಿಸಿದ್ದಾರೆ.

ದಿನಪೂರ್ತಿ ನಡೆಸಲ್ಪಡುವ ಸಮಾರಂಭಂದಲ್ಲಿ ನಾಡಿನ ಎಲ್ಲಾ ತುಳು-ಕನ್ನಡಿಗರು ಮತ್ತು ಕಲಾಭಿನಾಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಲ್ಲಾ ಕಾರ್ಯಕ್ರಮಗಳನ್ನು ಯಶಸ್ಸಿಗೊಳಿಸುವಂತೆ ತುಳು ಸಂಘ ಅಂಕ್ಲೇಶ್ವರ ಉದರ ಗೌರವಾಧ್ಯಕ್ಷ ರವಿನಾಥ್ ವಿ.ಶೆಟ್ಟಿ, ಉಪಾಧ್ಯಕ್ಷ ಹರೀಶ್ ಪೂಜಾರಿ, ಕೋಶಾಧಿಕಾರಿ ಶಂಕರ್ ಆರ್.ಶೆಟ್ಟಿ, ಜೊತೆ ಕಾರ್ಯದರ್ಶಿ ಯೋಗೇಶ್ ರೈ, ಜೊತೆ ಕೋಶಾಧಿಕಾರಿ ರವಿ ರೈ, ಸಂಘಟನಾ ಕಾರ್ಯದರ್ಶಿಗಳಾದ ಹರೀಶ್ ಬಿ.ಶೆಟ್ಟಿ ಮತ್ತು ಅಜಿತ್ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿ ಬಾಲಕೃಷ್ಣ ಗಂಭೀರ್, ಕ್ರೀಡಾ ಕಾರ್ಯದರ್ಶಿ ಸಂತೋಷ್ ಜಿ.ಶೆಟ್ಟಿ, ಭಜನಾ ಕಾರ್ಯದರ್ಶಿ ಸತೀಶ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸಂಧ್ಯಾ ಎಸ್.ಶೆಟ್ಟಿ, ಉಪ ಕಾರ್ಯಾಧ್ಯಕ್ಷೆ ಮಮತಾ ಆರ್.ಶೆಟ್ಟಿ, ಕಾರ್ಯದರ್ಶಿ ಶೋಭಾ ಆರ್.ಗಂಭೀರ್, ಕೋಶಾಧಿಕಾರಿ ಸತಿತಾ ಆರ್.ಶೆಟ್ಟಿ, ಜೊತೆ ಕಾರ್ಯದರ್ಶಿ ಸುಮಾ ಎಸ್.ಶೆಟ್ಟಿ, ಜೊತೆ ಕೋಶಾಧಿಕಾರಿ ಶಾಂತಿ ಪಿ.ಶೆಟ್ಟಿ ಸೇರಿದಂತೆ ಸಲಹಾದಾರರು ಮತ್ತು ಸರ್ವ ಸದಸ್ಯರು ಈ ಮೂಲಕ ವಿನಂತಿಸಿದ್ದಾರೆ. (ರೊನಿಡಾ ಮುಂಬಯಿ)

 

 

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here