Thursday 25th, April 2024
canara news

ಶ್ರೀ ಗುರು ನಾರಾಯಣ ತುಳು ನಾಟಕ ಸ್ಪರ್ಧೆ-ಗೋರೆಗಾಂವ್ ಸಮಿತಿಯ `ಈದಿ' ನಾಟಕ ಪ್ರಥಮ

Published On : 30 Oct 2018   |  Reported By : Rons Bantwal


ಸೇವಾ ಗಳಿಕೆಯ ನೆಮ್ಮದಿ-ಪ್ರಸಿದ್ಧಿ ಶಾಶ್ವತವಾದುದು: ಐಕಳ ಹರೀಶ್ ಶೆಟ್ಟಿ 

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಅ.28: ನನಗೂ ಬಿಲ್ಲವರಿಗೂ ಸಹೋದರತ್ವದ ಸಂಬಂಧವಿದೆ. ಆದರೆ ಚಂದ್ರಶೇಖರ್ ಪೂಜಾರಿ ಅವರು ಅಧ್ಯಕ್ಷರಾದ ಬಳಿಕ ಬಿಲ್ಲವರ ಭವನಕ್ಕೆ ಅತಿಥಿüಯಾಗಿ ಬಂದು ಬಿಲ್ಲವರ ಗೌರವ ಸ್ವೀಕರಿಸುವಂತಾಯಿತು. ಕಾಲೇಜು ಜೀವನದಲ್ಲೇ ಮೂಲ್ಕಿ ರುಕ್ಕರಾಮ ಸಾಲ್ಯಾನ್, ಸೋಮಪ್ಪ ಸುವರ್ಣ ಅವರಂತಹ ಮೇರುವ್ಯಕ್ತಿತ್ವದ ಚೇತನರಿಂದ ಪೆÇ್ರೀತ್ಸಹಕನಾದ ನನಗೆ ಜಯ ಸುವರ್ಣರು ಅಂತೂ ನನ್ನ ಪಾಲಿನ ದೊಡ್ಡಪ್ಪ ಇದ್ದಂತೆ. ಸುವರ್ಣರು ನನ್ನಂತೆ ಎಲ್ಲರ ಪಾಲಿಗೆನೇ ಆದರ್ಶರು. ಬಿಲ್ಲವ ಸಮಾಜವು ಇಂದಿಲ್ಲಿ ಗೌರವಿಸಿ ನೀಡಿದ ಈ ಸನ್ಮಾನ ಗುರು ನಾರಾಯಣರ ಪಾದಕ್ಕೆ ಅರ್ಪಿಸುವೆ. ನಾನೂ ಸಮಾಜ ಸೇವೆ ಮೂಲಕ ನಿದ್ರಿಸುವ ಸಂಸ್ಥೆ,ಸಮಾಜವನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದೇನೆ. ನಾಯಕತ್ವ ಎಂದೂ ವೈಭವ ಆಗಬಾರದು. ಸಮುದಾಯ ಮತ್ತು ಜನತೆಗೆ ಸ್ಪಂದಿಸಿ ಎಲ್ಲರನ್ನೂ ಒಗ್ಗೂಡಿಸಿ ಸಮಾಜವನ್ನು ಮುನ್ನಡೆಸುವ ಅರ್ಹರುಳ್ಳವರೇ ನಾಯಕರಾಗಬೇಕು. ಸ್ವಮನೆಗಾಗಿ ಎಲ್ಲರೂ ಸೇವೆಯೂ, ಜೀವನವನ್ನೂ ನಡೆಸುತ್ತ್ತಾರೆ ಆದರೆ ಸಮಗ್ರ ಸಮಾಜಕ್ಕಾಗಿ ನಿಸ್ವಾರ್ಥವಾಗಿ ಕೆಲಸ ಮಾಡುವವರು ಬೇಕು. ಸೇವೆಯಿಂದ ಗಳಿಸಿದ ನೆಮ್ಮದಿ,ಪ್ರಸಿದ್ಧಿ ಎಂದಿಗೂ ಶಾಶ್ವತವಾದುದು ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ತಿಳಿಸಿದರು.

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಸಾಂಸ್ಕøತಿಕ ಉಪ ಸಮಿತಿ ಅಸೋಸಿಯೇಶನ್‍ನ ಸ್ಥಳೀಯ ಸಮಿತಿಗಳಿಗೆ ಈ ಬಾರಿಯೂ ಆಯೋಜಿಸಿರುವ ಮೂರು ದಿನಗಳ ಶ್ರೀ ಗುರು ನಾರಾಯಣ ತುಳು ನಾಟಕ ಸ್ಪರ್ಧೆ 2018ರ ಸಮಾರೋಪ ಇಂದಿಲ್ಲಿ ಭಾನುವಾರ ರಾತ್ರಿ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದ ಶ್ರೀ ಗುರು ನಾರಾಯಣ ಸಭಾಗೃಹದಲ್ಲಿ ನೆರವೇರಿದ್ದು, ವಿಶೇಷ ಅತಿಥಿüಯಾಗಿದ್ದು ಐಕಳ ಹರೀಶ್ ಶೆಟ್ಟಿ ವಿಜೇತರಿಗೆ ಪ್ರಶಸ್ತಿ ಪ್ರದಾನಿಸಿ ಶುಭಾರೈಸಿ ಮಾತನಾಡಿದರು.

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ ಅಧ್ಯಕ್ಷತೆಯಲ್ಲಿ ನಾಟಕ ಸ್ಪರ್ಧೆಯ ಸಮಾರೋಪ, ಪಾರಿತೋಷ ಪ್ರದಾನ ಜರಗಿದ್ದು ಥಾಣೆ ಬಂಟ್ಸ್ ಅಧ್ಯಕ್ಷ ಕುಶಲ್ ಸಿ.ಭಂಡಾರಿ, ಸಮಾಜ ಸೇವಕರೂ ಉದ್ಯಮಿಗಳಾದ ಹರೀಶ್ಚಂದ್ರ ಅವಿೂನ್ ಕಟಪಾಡಿ, ಗಣೇಶ್ ಆರ್.ಪೂಜಾರಿ ಕಲಂಬೋಲಿ, ಹರೀಶ್ ಡಿ.ಸಾಲ್ಯಾನ್ ಬಜಗೋಳಿ, ಮತ್ತು ಅಶೋಕ್ ಸುವರ್ಣ (ಬಿರ್ಲಾ ಸನ್‍ಲೈಫ್) ಗೌರವ ಅತಿಥಿüಗಳಾಗಿ ಮತ್ತು ಅಸೋಸಿಯೇಶನ್‍ನ ಉಪಾಧ್ಯಕ್ಷರುಗಳಾದ ಶಂಕರ ಡಿ.ಪೂಜಾರಿ, ಶ್ರೀನಿವಾಸ ಆರ್.ಕರ್ಕೇರ, ಗೌ| ಪ್ರ| ಕೋಶಾಧಿಕಾರಿ ರಾಜೇಶ್ ಜೆ.ಬಂ ಗೇರ, ಮಹಿಳಾ ವಿಭಾಗದಧ್ಯಕ್ಷೆ ಜಯಂತಿ ವಿ.ಉಳ್ಳಾಲ್ ವೇದಿಕೆಯಲ್ಲಿ ಆಸೀನರಾಗಿದ್ದು ನಾಡಿನ ಹೆಸರಾಂತ ರಂಗಕರ್ಮಿಗಳಾದ ಸತ್ಯಭಾಮ ಬಾಲಕೃಷ್ಣ ನಿಡ್ವಣ್ಣಾಯ, ಜಯಶೀಲ ಸುವರ್ಣ ಮತ್ತು ಅಶೋಕ್‍ಕುಮಾರ್ ಕಾರ್ನಾಡ್ ಅವರಿಗೆ ರಂಗ ಗೌರವ ನೀಡಿ ಸತ್ಕರಿಸಿದರು.

ಕುಶಲ ಭಂಡಾರಿ ಮಾತನಾಡಿ ಮೊದಲಾಗಿ ಇತ್ತೀಚೆಗೆ ಅಗಲಿದ ಹಿರಿಯನಟ ಭವಾನಿಶಂಕರ್ ಶೆಟ್ಟಿ ಅವರಿಗೆ ಬಾಷ್ಪಾಂಜಲಿ ಕೋರುವೆ.ಬಿಲ್ಲವರು ನಾರಾಯಣಗುರುಗಳ ತತ್ವದಂತೆ ಜಾತಿ ಮೀರಿ ನಿಂತವರು. ಮುಂಬಯಿನಲ್ಲಿನ ನಾವೂ ಬಿಲ್ಲವರೊಂದಿಗೆ ಸಹೋದರತ್ವದ ಬಾಳನ್ನು ಬಾಳಿದವರು. ಆದ್ದರಿಂದ ನಮ್ಮಕ್ಕಿಂತ ದೊಡ್ದ ಮಾನವರು ಯಾರು ಇರಲಾರದು. ಇನ್ನೂ ರಾಜಕಾರಣಿಗಳ ಜಾತೀಕರಣದ ಮೋಸಕ್ಕೆ ಮಾರು ಹೋಗದೆ ನಾವೆಲ್ಲರೂ ಒಂದೇ ಎಂದು ಬಾಳುವ. ಜಯ ಸುವರ್ಣರು ಬಿಲ್ಲವ ಸಮಾಜದ ಭೀಷ್ಮರೇ ಸರಿ. ಒಂದು ವ್ಯಕ್ತಿಕ್ಕಿಂತ ಅವರು ಒಂದು ವಿಶ್ವವಿದ್ಯಾಲಯ ಇದ್ದಂತೆ. ಎಲ್ಲರ ಧ್ರುವತಾರೆ ಎಂದೆಣಿಸಿದ ಅವರ ಕನಸುಗಳೆಲ್ಲವೂ ನನಸಾಗಲಿ. ಅಂತೆಯೇ ನಾವೆಲ್ಲರೂ ಸಾಮರಸ್ಯದಿಂದ ಬಾಳುವ ಎಂದರು.

ರಂಗಭೂಮಿ ಮತ್ತು ಬದುಕಿಗೆ ಮಾದರಿಯಾದ ನನ್ನ ತಂದೆ ಸ್ವರ್ಗೀಯ ಕೆ.ಕೆ ಸುವರ್ಣರ ಜನ್ಮಶತಾಬ್ಧಿಯ ಶುಭಾವಸರದಲ್ಲಿ ಗೌರವಕ್ಕೆ ಪಾತ್ರನಾದ ನಾನು ಧನ್ಯನು. ಆದುದರಿಂದ ಜೀವಮಾನ ಪರ್ಯಾಂತ ಈ ಗೌರವವನ್ನು ನೆನಪಿಸುವೆ. ತುಳು ನಾಟಕ ಸ್ಪರ್ಧೆ ಬಾರಿ ಖುಷಿ ತಂದಿದೆ. ತುಳು ತಿಳಿಯದ ಇಂಗ್ಲೀಷ್ ಓದುವ ಮಕ್ಕಳಿಂದ ನಾಟಕಗಳು ಮೂಡಿಸುತ್ತಿರುವುದು ನಾಟಕದ ಭಾಷಾ ಏಳಿಗೆಗೆ ಪೂರಕವಾಗಿದೆ. ಭಾರತೀಯ ರಂಗಭೂಮಿಯ ದೊಡ್ಡ ಸಾಧನೆ ಇದಾಗಿದೆ ಎಂದು ಜಯಶೀಲ ಸುವರ್ಣ ತಿಳಿಸಿದರು.

ಅಶೋಕ್ ಕಾರ್ನಾಡ್ ಮಾತನಾದಿ ಇದೊಂದು ಯಶಸ್ವಿ ಸಾಧನೆ. ಯಾಕೆಂದರೆ ಕಲಾಭಿಮಾನಿಗಳು ಆಸನಿತರಾಗದೆ ಸಭಾಗೃಹದ ಬದಿಗಳಲ್ಲಿ, ಮೂಲೆಮೂಲೆಗಳಲ್ಲಿ ನಿಂತು ನಾಟಕ ವೀಕ್ಷಿಸಿ ಪೆÇ್ರೀತ್ಸಹಿಸಿದ ಪರಿ ಅಚ್ಚರಿ ಮೂಡಿಸಿತು. ಅದಕ್ಕಾಗಿ ಯಶಸ್ವಿ ಎನ್ನಲೇ ಬೇಕು. ಅಭಿನಯ, ನಾಟಕ ಸಂಘಟನೆ ಕಷ್ಟಸಾಧ್ಯ. ತಾಂತ್ರಿಕ ಬದುಕಿನ ಮುಂಬಯಿ ಜೀವನದ ಮಧ್ಯೆಯೂ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದು ದೊಡ್ಡ ಪಂಥಹ್ವಾನವೇ ಸರಿ. ರಂಗಭೂಮಿಯ ಸಾವಿರ ಸಾವಿರ ಕಲಾವಿದರು ಬಣ್ಣ ಹಚ್ಚಿ ಗೆಜ್ಜೆಕಟ್ಟಿ ಅಭಿನಯಿಸಿದ ಈ ವೇದಿಕೆಯಲ್ಲಿ ಸನ್ಮಾನಕ್ಕೆ ಪಾತ್ರನಾದ ನಾನು ಶ್ರೇಷ್ಠನು ಎಂದರು.

ಜಯ ಸುವರ್ಣ ಅವರ ಮಾರ್ಗದರ್ಶನದಲ್ಲಿ ಇಂತಹ ಸ್ಪರ್ಧೆ ಸಾಧ್ಯವಾಗಿದೆ. ಅವರು ಸಮಾಜ ಮತ್ತು ಸಮಾಜರೇತರಿಗೆ ಶಿರೋಮಣಿ ಇದ್ದಾಂತೆ. ಮನುಷ್ಯನಿಗೆ ಸಾವಿನ ಬಳಿಕವೂ ಬದುಕಲು ಕಲಿಸುವಂತಿದ್ದರೆ ಅದು ರಂಗಭೂಮಿ. ಜೀವನದ ನಂತರವೂ ಬದುಕಲು ನಾಟಕಗಳು ಪ್ರೇರಕವಾಗಿವೆ. ಲೋಕದ ಉದ್ಧಾರಕ್ಕಾಗಿ ಮಕ್ಕಳ ಮಾತೆಯಂದಿರು ಪೆÇ್ರೀತ್ಸಾಹಿಸಬೇಕು. ಲೋಕ ವಿಖ್ಯಾತರಾಗುವಂತೆ ಮಕ್ಕಳನ್ನು ಬೆಳೆಸಿ ಬಾಳಬೇಕು. ನಮ್ಮಂತಹ ನಾಯಕರು ನಿಮಿತ್ತ ಮಾತ್ರ. ನೀವೆಲ್ಲರೂ ಜೊತೆಗಿದ್ದರೆ ನಾವು ಇರುವುದು. ನಾಟಕ ಸ್ಪರ್ಧೆ ಮೂಲಕ ನಾವೆಲ್ಲರೂ ಒಗ್ಗೂಟ್ಟಗಿದ್ದು ಇಂತಹ ಒಗ್ಗಟ್ಟು ಜೀವನುದ್ದಕ್ಕೂ ಬೆಸೆಯುವಂತಿರಲಿ ಎಂದು ಅಧ್ಯಕ್ಷೀಯ ಭಾಷಣವನ್ನುದ್ದೇಶಿಸಿ ಚಂದ್ರಶೇಖರ್ ಪೂಜಾರಿ ತಿಳಿಸಿದರು.

ಭಾರತ್ ಬ್ಯಾಂಕ್‍ನ ನಿರ್ದೇಶಕರುಗಳಾದ ನ್ಯಾ| ಎಸ್.ಬಿ ಅವಿೂನ್, ಜ್ಯೋತಿ ಕೆ.ಸುವರ್ಣ, ಭಾಸ್ಕರ್ ಎಂ.ಸಾಲ್ಯಾನ್, ಗಂಗಾಧರ್ ಜೆ.ಪೂಜಾರಿ, ಪುರುಷೋತ್ತಮ ಎಸ್.ಕೋಟ್ಯಾನ್, ಪ್ರೇಮನಾಥ್ ಪಿ.ಕೋಟ್ಯಾನ್, ಮೋಹನ್‍ದಾಸ್ ಎ.ಪೂಜಾರಿ, ಮಾಜಿ ನಿರ್ದೇಶಕ ಮೋಹನ್ ಜಿ.ಪೂಜಾರಿ, ನಾಗೇಶ್ ಎಂ.ಕೋಟ್ಯಾನ್, ನಾರಾಯಣ ಸುವರ್ಣ ಕಲ್ವಾ, ಯು.ಧನಂಜಯ ಕುಮಾರ್, ಪ್ರಕಾಶ್ ಮೂದಬಿದ್ರೆ, ನಿಲೇಶ್ ಪೂಜಾರಿಪಲಿಮಾರ್ ಸೇರಿದಂತೆ ಅಸೋಸಿಯೇಶನ್‍ನ ಪದಾಧಿಕಾರಿಗಳನೇಕರು ಉಪಸ್ಥಿತರಿದ್ದು ವಿಜೇತ ತಂಡಗಳಿಗೆ ಪ್ರಶಸ್ತಿಪತ್ರ, ಫಲಕ ಪ್ರದಾನಿಸಿ ಅಭಿನಂದಿಸಿದರು.

ಗೋರೆಗಾಂವ್ ಸ್ಥಳೀಯ ಸಮಿತಿ ತಂಡವು ಸಮೀರ್ ಪೆಣ್ಕರ್ ಕಥೆ ರಚನೆಯ ಲತೇಶ್ ಎಂ.ಪೂಜಾರಿ ಸಂಭಾಷಿಸಿ ನಿರ್ದೇಶಿಸಿದ `ಈದಿ' ನಾಟಕ ಪ್ರಥಮ ಸ್ಥಾನ ತನ್ನದಾಗಿಸಿತು. ಡಾ| ಚಂದ್ರಶೇಖರ್ ಕಂಬಾರ ಕಥೆ ರಚಿತ ನಾರಾಯಣ್ ಶೆಟ್ಟಿ ನಂದಳಿಕೆ ಸಂಭಾಷಣೆಯ ಮತ್ತು ಮನೋಹರ್ ಶೆಟ್ಟಿ ನಂದಳಿಕೆ ನಿರ್ದೇಶಿತ `ನಾಗ ಸಂಪಿಗೆ' ನಾಟಕ ದ್ವಿತೀಯ ಸ್ಥಾನ ಹಾಗೂ ನಾಲಾಸೋಫರಾ ಸ್ಥಳೀಯ ಸಮಿತಿ ತಂಡವು ಸುನೀಲ್ ಶೆಟ್ಟಿ ಕಥೆ ಸಂಭಾಷಣೆ ಮತ್ತು ಸುಮಿತ್ ಅಂಚನ್ ನಿರ್ದೇಶಿತ `ಯಾನ್ ಏರ್..?' ನಾಟಕ ತೃತೀಯ ಸ್ಥಾನ ವಿಜೇತರಾದವು.

ಸ್ಪರ್ಧಾ ತೀರ್ಪುಗಾರರಾಗಿದ್ದ ಮಾಹಿಮ್ ರಮೇಶ್, ಜಗನ್ ಪವಾರ್ ಬೇಕಲ್, ಸಂತೋಷ್ ನಾಯಕ್ ಪಟ್ಲ, ನಾಟಕದ ಸಂಯೋಜಕರಾದ ಡಾ| ಭರತ್ ಕುಮಾರ್ ಪೆÇಲಿಪು, ಮೋಹನ್ ಮಾರ್ನಾಡ್, ಓಂದಾಸ್ ಕಣ್ಣಂಗಾರ್, ಸುಂದರ್ ಕೋಟ್ಯಾನ್, ಹರೀಶ್ ಹೆಜ್ಮಾಡಿ, ಚಿತ್ರನಟರಾದ ಬಡ್ಡೂರು ಮಹಮ್ಮದ್, ತೋನ್ಸೆ ವಿಜಯಕುಮಾರ್ ಶೆಟ್ಟಿ, ವಿದ್ದು ಉಚ್ಚಿಲ್ ಮಂಗಳೂರು ಇವರನ್ನು ಅಧ್ಯಕ್ಷರು ಗೌರವಿಸಿ ಅಭಿವಂದಿಸಿದರು.

ಸಾವಿರಾರು ಸಾಧಕರ ಪಾಲಿನ ಕಲ್ಪವೃಕ್ಷ ಈ ಅಸೋಸಿಯೇಶನ್ ಆಗಿದೆ. ಜಯ ಸುರ್ವಣರ ದೂರದೃಷ್ಠಿತ್ವದಿಂದ ಸುವರ್ಣಯುಗ ಕಂಡ ಬಿಲ್ಲವ ಸಮಾಜ ಸರ್ವರಿಗೂ ಆಸರೆಯಾಗಿದೆ. ನಾರಾಯಣ ಗುರುಗಳ ಪವಾಡದಿಂದ ಇಷ್ಟೊಂದು ಜನಸಂಖ್ಯೆಯ ಕಲಾಭಿಮಾನಿಗಳ ಆಗಮನ ಆಗಿದ್ದು ಶಿವಗಿರಿ ಮಠದ ಶಕ್ತಿ ಈ ಭವನಕ್ಕಿದೆ. ಅದರ ಪ್ರೇರಣೆಯಂತೆ ಈ ನಾಟಕ ಜಾತ್ರೆ ಸಡಗರದಿಂದ ಸಾಗುತ್ತಿದೆ ಎನ್ನುತ್ತಾ ಗೌ| ಪ್ರ| ಕಾರ್ಯದರ್ಶಿ ಧನಂಜಯ ಶಾಂತಿ, ಪ್ರಸ್ತಾವನೆಗೈದರು.

ಸಾಂಸ್ಕøತಿಕ ಸಮಿತಿ ಕಾರ್ಯಾಧ್ಯಕ್ಷ ದಯಾನಂದ ಆರ್.ಪೂಜಾರಿ ಸ್ವಾಗತಿಸಿದರು. ರಂಗತಜ್ಞ ಡಾ| ಭರತ್‍ಕುಮಾರ್ ಪೆÇಲಿಪು ವಿಜೇತರ ಪಟ್ಟಿ ಪ್ರಕಟಿಸಿದರು. ಅಕ್ಷಯ ಮಾಸಿಕದ ಸಂಪಾದಕ ಹರೀಶ್ ಹೆಜ್ಮಾಡಿ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕøತಿಕ ಸಮಿತಿ ಗೌರವ ಕಾರ್ಯದರ್ಶಿ ಅಶೋಕ್ ಸಸಿಹಿತ್ಲು ವಂದಿಸಿದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here