Thursday 28th, March 2024
canara news

ದ.ಕ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪುರಸ್ಕಾರ ಮುಡಿಗೇರಿಸಿಕೊಂಡ ಮುಂಬಯಿಯ ಹಿರಿಯ ಹೊಟೇಲು ಉದ್ಯಮಿ ವಿರಾರ್ ಶಂಕರ್ ಶೆಟ್ಟಿ

Published On : 04 Nov 2018   |  Reported By : Rons Bantwal


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮಂಗಳೂರು, ನ .01: ಕನ್ನಡನಾಡು ನುಡಿಯ 63ನೇ ಕರ್ನಾಟಕ ರಾಜ್ಯೋತ್ಸವ ಸಂಭ್ರಮವನ್ನು ದ.ಕ ಜಿಲ್ಲಾಡಳಿತವು ಇಂದಿಲ್ಲಿ ಗುರುವಾರ ಬೆಳಿಗ್ಗೆ ಮಂಗಳೂರು ನೆಹರೂ ಮೈದಾನದಲ್ಲಿ ಸಂಭ್ರಮ ಸಡಗರದಿಂದ ಆಚರಿಸಿತು.

ಈ ಶುಭಾವಸರದಲ್ಲಿ 2018ನೇ ಸಾಲಿನ ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಮುಂಬಯಿಯ ಹಿರಿಯ ಹೊಟೇಲು ಉದ್ಯಮಿ, ಸಾಮಾಜಿಕ ಹಾಗೂ ಧಾರ್ಮಿಕ ಮುಂದಾಳು ಶಂಕರ್ ಬಿ.ಶೆಟ್ಟಿ ವಿರಾರ್ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕ 18 ಮಹಾನೀಯರಿಗೆ ಹಾಗೂ 7 ಸಂಸ್ಥೆಗಳಿಗೆ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನಿಸಿ ಶುಭಾರೈಸಿದರು. ಹಾಗೂ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಸಂದೇಶ ನೀಡಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ವೇದವ್ಯಾಸ ಕಾಮತ್, ಡಾ| ಭರತ್ ವೈ.ಶೆಟ್ಟಿ, ಮೇಯರ್ ಕೆ.ಭಾಸ್ಕರ್ ಮೊಯ್ಲಿ, ಉಪಮೇಯರ್ ಕೆ.ಮುಹಮ್ಮದ್, ಜಿ¯್ಲÁಧಿಕಾರಿ ಸಸಿಕಾಂತ್ ಸೆಂಥಿüಲ್, ಪೆÇಲೀಸ್ ಆಯುಕ್ತ ಟಿ.ಆರ್ ಸುರೇಶ್, ಜಿ¯್ಲÁ ಎಸ್ಪಿರವಿಕಾಂತೇ ಗೌಡ, ದ.ಕ ಜಿ¯್ಲÁ ಕನ್ನಡ ಸಾಹಿತ್ಯ ಪರಿಷತ್ತು ಅದ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಜಿಲ್ಲಾ ರಾಜ್ಯೋತ್ಸವ ಸಮಿತಿ ಮತ್ತು ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನೇತೃತ್ವದಲ್ಲಿ ನಗರದ ಜ್ಯೋತಿ ಸಮೀಪದ ಡಾ| ಬಿ.ಆರ್ ಅಂಬೇಡ್ಕರ್ ವೃತ್ತದಿಂದ ಮೆರವಣಿಗೆ ನಡೆಸಲ್ಪಟ್ಟಿದ್ದು, ಹಿರಿಯ ಲೇಖಕಿ ಆರೂರು ಲಕ್ಷಿ ್ಮೀ ರಾವ್ ಮೆರವಣಿಗೆ ಉದ್ಘಾಟಿಸಿದರು. ಮೆರವಣಿಗೆಯಲ್ಲಿ ಕಿಶೋರ್ ಮತ್ತು ಬಳಗ ಸುಳ್ಯ ಇವರ ಕಂಗೀಲು ನೃತ್ಯ, ಹರೀಶ್ ಮತ್ತು ಬಳಗ ಗಿಡಿಗೆರೆ ಕಟೀಲು ಅವರಿಂದ ಚೆಂಡೆ, ಮಹೇಶ್ ಭಟ್ ಸರಸ್ವತಿ ಕಲಾ ಆರ್ಟ್ಸ್ ಮಂಗಳೂರು ಅವರ ಯಕ್ಷಗಾನ ಬೊಂಬೆಗಳು, ಕೀಲುಕುದುರೆ, ಬ್ಯಾಂಡ್ ವಾದ್ಯ, ರವೀಂದ್ರ ಗಿರಿಸಿರಿ ಕಲಾ ಜಾನಪದ ಕಲಾತಂಡ ಕನ್ಯಾನ ಅವರ ಕೊರಗರ ಡೋಲು ಕುಣಿತ, ಸುಶೀಲಾ ಮತ್ತು ಬಳಗ ಕಿನ್ನಿಗೋಳಿ ಅವರಿಂದ ಬುಡಕಟ್ಟು ಕಲಾಪ್ರದರ್ಶನ, ಗೀತಾ ಮತ್ತು ಬಳಗ ಕೋಡಿಕಲ್ ಅವರ ಕೊರಗರ ಗಜಮೇಳ ಇತ್ಯಾದಿಗಳೊಂದಿಗೆ ಅತ್ಯಾಕÀರ್ಷಕವಾಗಿ ಮೆರವಣಿಗೆ ಮೂಡಿತು.

ಸರಕಾರಿ ಉತ್ಸವಗಳ ಕವಾಯತು (ಪರೇಡ್) ಆಂಗ್ಲಭಾಷೆಯಲ್ಲಿ ನಡೆಯುವುದು ಸಾಮಾನ್ಯ. ಆದರೆ, ಗುರುವಾರ ನೆಹರೂ ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ ರಾಜ್ಯೋತ್ಸವ ಕಾರ್ಯಕ್ರಮದ ಪರೇಡ್ ಸಂಪೂರ್ಣ ಕನ್ನಡಮಯವಾಗಿತ್ತು. ಜಿಲ್ಲಾ ಎಸ್ಪಿ ಡಾ| ರವಿಕಾಂತೇ ಗೌಡ ಅವರಿಂದ ರಚಿಸಲ್ಪಟ್ಟ ಕನ್ನಡ ಭಾಷೆಯ ಈ ಕವಾಯತನ್ನು ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಅಳವಡಿಸಲಾಗಿದೆ. ಆ ಮೂಲಕ ರಾಜ್ಯದ 2ನೇ ಜಿಲ್ಲೆಯಾಗಿ ದ.ಕ.ಜಿಲ್ಲೆಯು ಗುರುತಿಸಲ್ಪಟ್ಟಿತು. 2016ರಲ್ಲಿ ರವಿಕಾಂತೇ ಗೌಡ ಬೆಳಗಾವಿ ಎಸ್ಪಿ ಆಗಿದ್ದಾಗ ಪರೇಡ್‍ಗೆ ಕನ್ನಡ ಬಳಸಲಾಗಿತ್ತು. ಇದು ದೇಶಮಟ್ಟದಲ್ಲಿ ಗಮನ ಸೆಳೆದಿತ್ತು.

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here