Thursday 18th, April 2024
canara news

ಭಾರತೀಯ ಸಂಸ್ಕೃತಿ ಸಮೃದ್ಧವಾಗಿ ಬೆಳೆಸಿದ ತುಳುವರು ವಿಶ್ವಕ್ಕೆ ಮಾದರಿ

Published On : 05 Nov 2018   |  Reported By : Rons Bantwal


ತುಳು ಸಂಘ ಅಂಕ್ಲೇಶ್ವರ ಉದ್ಘಾಟಿಸಿ ಧರ್ಮಪಾಲ್ ಯು.ದೇವಾಡಿಗ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಗುಜರಾತ್ (ಅಂಕ್ಲೇಶ್ವರ), ನ.05: ಪರಶುರಾಮ ಸೃಷ್ಟಿಯ ತುಳುನಾಡು ದೈವ ದೈವಾರಾಧನೆಯ ಬೀಡು ಆಗಿದೆ. ತುಳುಭಾಷೆ ಇಲ್ಲಿನ ಮಾತೃಪ್ರಧಾನ ನಾಡುಭಾಷೆಯಾಗಿದ್ದು, ಇದು ದೈವದೈವರುಗಳ ಮತ್ತು ಹಿರಿಯರ ಆಶೀರ್ವಾದಿಂದ ಮುನ್ನಡೆದಿದೆ. ಭಾರತ ದೇಶದಲ್ಲಿ ಇದು 53ನೇ ತುಳುಸಂಸ್ಥೆಯಾಗಿದೆ. ಸಂಸ್ಕೃತಿ ಅಸ್ತಿತ್ವಕೆ ಬಂದಿರುವುದು ಹೆಮ್ಮೆಯ ವಿಚಾರ. ಇದರ ಅರ್ಥ ಕೂಡುಕುಟುಂಬದ ಏಕತೆ ಸಾರುತ್ತದೆ. ಇದು ತುಳು ಭಾಷೆ, ಸಂಸ್ಕೃತಿ ಆಚಾರÀ ವಿಚಾರ ಉಳಿಸಿ ಬೆಳೆಸುವ ಉತ್ಸವವೇ ಸರಿ. ತುಳು ಭಾಷೆ-ಸಂಸ್ಕೃತಿ ಲೋಕ ಪ್ರಿಯತೆ ಆಗುತ್ತಿದೆ. ಆದುದರಿಂದ ತುಳು ಭಾಷೆ ರಾಷ್ಟ್ರದ ಎಂಟನೇ ಪರಿಚ್ಛಯದಲ್ಲಿ ಸೇರ್ಪಡೆಗೊಳಿಸುವಲ್ಲಿ ಯಶ ಕಾಣಬೇಕು ಎಂದು ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ್ ಯು.ದೇವಾಡಿಗ ತಿಳಿಸಿದರು.

ಇಂದಿಲ್ಲಿ ಶನಿವಾರ ಬೆಳಿಗ್ಗೆ ಗುಜರಾತ್ ಅಂಕ್ಲೇಶ್ವರ ಇಲ್ಲಿನ ಪುರಭವನದ ಮಾ ಶಾರದ ಭವನ ಸಭಾಗೃಹದಲ್ಲಿ ತುಳು ಸಂಘ ಅಂಕ್ಲೇಶ್ವರ ಅಧ್ಯಕ್ಷ ಶಂಕರ್ ಕೆ.ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ತುಳು ಸಂಘ ಅಂಕ್ಲೇಶ್ವರ ಉದ್ಘಾಟನಾ ಸಮಾರಂಭದಲ್ಲಿ ತುಳು ಸಂಘ ಅಂಕ್ಲೇಶ್ವರ ಇದನ್ನು ಕಲ್ಪವೃಕ್ಷ ಅರಳಿಸಿ ಕಳಸೆಯಲ್ಲಿರಿಸಿ ಹಿಂಗಾರವವನ್ನಿತ್ತು ಉದ್ಘಾಟಿಸಿ ಧರ್ಮಪಾಲ್ ದೇವಾಡಿಗ ಮಾತನಾಡಿ ಇಂತಹ ವೇದಿಕೆಗಳು ತುಳು ಸಂಸ್ಕಾರದ ಘನತೆ ಹೆಚ್ಚಿಸುತ್ತಿವೆ. ಶ್ರದ್ಧೆಭಕ್ತಿ ಮೂಲಕ ತುಳುವರು ಸುಲಭವಾಗಿ ಒಗ್ಗೂಡು ವುದೇ ತುಳುವರ ಹಿರಿತನವಾಗಿದೆ. ಭಾರತೀಯ ಸಂಸ್ಕೃತಿಯನ್ನು ಸಮೃದ್ಧವಾಗಿ ಬೆಳೆಸಿದ ತುಳುವರು ವಿಶ್ವಕ್ಕೆ ಮಾದರಿ. ಬರೋಡಾದಲ್ಲಿನ ತುಳುವರು ಕೊಡುವ ಮಾನಮರ್ಯಾದೆ, ಘನತೆ ಹೃದಯಸ್ಪರ್ಶಿ ಆಗಿದ್ದು ಇಂತಹ ಪ್ರೇರಣೆಯಿಂದ ಅಂಕ್ಲೇಶ್ವರದಲ್ಲಿ ತುಳು ಹುಟ್ಟು ಪಡೆದಿರುವುದು ಅಭಿನಂದನೀಯ. ಗುಜರಾತ್‍ನಲ್ಲಿ ತುಳುವನ್ನು ಬೇಲೆಸುವಲ್ಲಿ ಶಶಿಧರ ಬಿ.ಶೆಟ್ಟಿ ಕೊಡುಗೆ ಅನುಪಮವಾದುದು ಎಂದ ಧರ್ಮಪಾಲ್ ದೇವಾಡಿಗ ಇದೇ ನವೆಂಬರ್‍ನಲ್ಲಿ ದುಬಾಯಿನಲ್ಲಿ ನಡೆಯುವ ವಿಶ್ವತುಳು ಪರ್ಬಕ್ಕೆ ಎಲ್ಲರನ್ನೂ ಆಹ್ವಾನಿಸಿದರು.

ಮುಖ್ಯ ಅತಿಥಿüಯಾಗಿ ಶ್ರೀ ಮೂಕಾಂಬಿಕಾ ದೇವಸ್ಥಾನ ಘನ್ಸೋಲಿ ಇದರ ಧರ್ಮದರ್ಶಿ ಅಣ್ಣಿ ಸಿ.ಶೆಟ್ಟಿ ದೀಪ ಪ್ರಜ್ವಲಿಸಿ ಸಮಾರಂಭಕ್ಕೆ ಚಾಲನೆಯನ್ನಿಡಿದರು. ಜಯಂತ್ ಶೆಟ್ಟಿ ದುಬಾಯಿ ಉಪಸ್ಥಿತರಿದ್ದು ವಿಶ್ವತುಳು ಪರ್ಬ ದುಬಾಯಿ ಸಮಾವೇಶಕ್ಕೆ ಗುಜರಾತ್‍ನ ತುಳುವರಿಗೆ ಆಹ್ವಾನಪತ್ರಿಕೆ ಹಸ್ತಾಂತರಿಸಿ ಸುಖಾಗಮನ ಬಯಸಿದರು.

ಅತಿಥಿü ಅಭ್ಯಾಗತರುಗಳಾಗಿ ಶ್ರೀ ವೇದಛಲ ಸೇವಾ ಟ್ರಸ್ಟ್ ಮಣಿಪಾಲ ಉಡುಪಿ ಅಧ್ಯಕ್ಷ ಹರಿಪ್ರಸಾದ್ ರೈ ಬೆಳ್ಳಿಪಾಡಿ, ತುಳು ಸಂಘ ಬರೋಡಾ ಅಧ್ಯಕ್ಷ ಹಾಗೂ ಯಕ್ಷಧ್ರುವ ಗುಜರಾತ್ ಘಟಕದ ಸಂಚಾಲಕ ಶಶಿಧರ್ ಬಿ.ಶೆಟ್ಟಿ, ಮಾಜಿ ಅಧ್ಯಕ್ಷ ಇಂದುದಾಸ್ ವಿ.ವಿಶೆಟ್ಟಿ, ತುಳು ಐಸಿರಿ ವಾಪಿ-ಗುಜರಾತ್ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಕರ್ನಾಟಕ ಸಂಘ ಸೂರತ್ ಉಪಾಧ್ಯಕ್ಷ ಪ್ರಭಾಕರ್ ಶೆಟ್ಟಿ, ಮುನಿಯಾಲ್ ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್‍ನ ಟ್ರಸ್ಟಿ ಉದಯ ಶೆಟ್ಟಿ ಮುನಿಯಾಲ್, ಕರ್ನಾಟಕ ಸಂಘ ಅಂಕ್ಲೇಶ್ವರ ಅಧ್ಯಕ್ಷ ಉದಯ ಹೊನ್ನಾವರ್, ಕರ್ನಾಟಕ ಸಂಘ ಬರೋಡಾ ಗೌರವಾಧ್ಯಕ್ಷ ಜಯರಾಮ ಎಸ್.ಶೆಟ್ಟಿ, ಬಂಟ್ಸ್ ಸಂಘ ಅಹ್ಮದಾಬಾದ್ ಅಧ್ಯಕ್ಷ ಅಪ್ಪುಶೆಟ್ಟಿ, ತುಳು ಸಿರಿ ವಾಪಿ ಗುಜರಾತ್ ಅಧ್ಯಕ್ಷ ಸುಕೇಶ್ ಶೆಟ್ಟಿ, ಹಿರಿಯ ಉದ್ಯಮಿಗಳಾದ ರಾಧಾಕೃಷ್ಣ ಶೆಟ್ಟಿ ಸೂರತ್, ಪಾಂಡು ಶೆಟ್ಟಿ ವಸಾಯಿ, ಶಿವರಾಮ ಶೆಟ್ಟಿ ಸೂರತ್, ಉದ್ಯಮಿಗಳಾದ ಕೃಷ್ಣ ಶೆಟ್ಟಿ ವಾಶಿ, ಗಣಪತಿ ಆಚಾರ್ಯ, ಉದಯ ಸಿ.ಶೆಟ್ಟಿ, ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‍ನ ಸಂಸ್ಥಾಪಕ ಅಧ್ಯಕ್ಷ ಸತೀಶ್ ಶೆಟ್ಟಿ ಪಟ್ಲ, ತುಳು ಸಂಘ ಅಂಕ್ಲೇಶ್ವರ ಗೌರವಾಧ್ಯಕ್ಷ ರವಿನಾಥ್ ವಿ.ಶೆಟ್ಟಿ, ಉಪಾಧ್ಯಕ್ಷ ಹರೀಶ್ ಪೂಜಾರಿ, ಕೋಶಾಧಿಕಾರಿ ಶಂಕರ್ ಆರ್.ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸಂಧ್ಯಾ ಎಸ್.ಶೆಟ್ಟಿ, ಪಟ್ಲ ಫೌಂಡೇಶನ್‍ನ ಗುಜರಾತ್ ಘಟಕದ ಅಧ್ಯಕ್ಷ ಅಜಿತ್ ಎಸ್.ಶೆಟ್ಟಿ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭಾರೈಸಿದರು.

ಬೆಳೆಯ ಲಕ್ಷಣ ಮೊಳಕೆಯಲ್ಲಿ ಕಾಣುವಂತೆ ಗುಜರಾತ್‍ನ ಬೆಳವಣಿಕೆಯಲ್ಲಿ ತುಳುವರು ಇಷ್ಟೊಂದು ಅದ್ದೂರಿ ಆಗಿ ತುಳುಸಂಘ ಸೇವಾರ್ಪಣೆಗೈಯುವುದು ಅಭಿನಂದನೀಯ. ಸಂಸ್ಥೆಯ ಬಾಳ್ವಿಕೆ ದೀರ್ಘಾವಧಿಯಂತೆ ತೋರುತ್ತದೆ. ಮನುಜನಿಗೆ ಸಮಾಜದ ಋಣಯಿದ್ದು ಇದನ್ನು ಇಂತಹ ಸೇವೆಗಳ ಮೂಲಕ ತೀರಿಸಲು ಸಾಧ್ಯವಾಗುವುದು. ಆದ್ದರಿಂದ ಸಮಾಜಮುಖಿ ಸೇವೆಗಳೊಂದಿಗೆ ಈ ಸಂಸ್ಥೆ ಬೆಳಗಲಿ ಎಂದು ಅಣ್ಣಿ ಶೆಟ್ಟಿ ತಿಳಿಸಿದರು.


ಗುಜರಾತ್‍ವಾಸಿ ತುಳುವರ ಅತಿಥ್ಯ ಸತ್ಕಾರ ವೈಶಿಷ್ಟ್ಯಮಯವಾದುದು. ತುಳುವರ ಒಗ್ಗಟ್ಟು, ಪ್ರೀತ್ಯಾಧಾರದ ಚೌಕಟ್ಟು ಆಶ್ಚರ್ಯದಾಯಕ. ನಿಮ್ಮ ಸಂಘಟನಾ ಚಾತುರ್ಯತೆ ತುಳು ಸಂಸ್ಕೃತಿಯ ಆಳವನ್ನುವಿಸ್ತರಿಸುತ್ತದೆ. ಇಂತಹ ಸಂಸ್ಕೃತಿ ತುಳುವರಲ್ಲಿ ಮಾತ್ರ ಜೀವಳವಾಗಿರಲು ಸಾಧ್ಯ. ಭಾರತೀಯ ಸಂಸ್ಕೃತಿ, ಮಾತೃ ಸಂಸ್ಕಾರಕ್ಕೆ ತುಳುವರ ಕೊಡುಗೆ ಅನನ್ಯವಾಗಿದ್ದು ಇದನ್ನು ಮಕ್ಕಳಲ್ಲಿ ಭಿತ್ತರಿಸಿ ಧಣ್ಯರೆಣಿಸಿ ಎಂದು ಹರಿಪ್ರಸಾದ್ ಬೆಳ್ಳಿಪಾಡಿ ನುಡಿದರು.

ಮೂರು ತಿಂಗಳ ಅವಿರತ ಶ್ರಮದಿಂದ ಈ ಸಡಗರಕ್ಕೆ ಸಜ್ಜಾಗಿದ್ದೇವೆ. ಇಂದು ದೇಶದ 53ನೇ ತುಳುಸಂಸ್ಥೆ ಅಸ್ತಿತ್ವಕ್ಕೆ ಬಂದಿದ್ದು ಇದು ತುಳು ಪಾಲಿಗೆ ಐತಿಹಾಸಿಕ ದಿನವಾಗಿದೆ. ತುಳು ಮಾತೆಗೆ ವಿಶ್ವದಲ್ಲೇ ಸ್ವಂತಿಕೆಯ ತುಳುಚಾವಡಿ ನಿರ್ಮಿಸಿದ ಹೆಗ್ಗಳಿಕೆ ಈ ಗುಜರಾತ್‍ವಾಸಿ ತುಳುವರಿಗೆ ಸಲ್ಲುತ್ತದೆ. ಭವಿಷ್ಯತ್ತಿನಲ್ಲೂ ಗುಜರಾತ್‍ನ ವಾಪಿಯಿಂದ ಅಹ್ಮದಭಾದ್ ತನಕ ತುಳು ಸಂಸ್ಥೆಗಳನ್ನು ಹುಟ್ಟುಹಾಕಿ ಗುಜರಾತ್‍ದಾದ್ಯಂತ ತುಳು ಸಂಸ್ಕೃತಿ ಪಸರಿಸುವ ಆಶಯ ನಮ್ಮದಾಗಿದೆ. 2019ರ ಆಗಸ್ಟ್ 06 ರಂದು ಗುಜರಾತ್‍ನ ನರ್ಮದಾ ಜಿಲ್ಲೆಯಲ್ಲಿ ಇತ್ತೀಚೆಗೆ ಅನಾವರಣಗೊಂಡ ವಿಶ್ವದ ಅತೀ ಎತ್ತರದ ಸರ್ದಾರ್ ವಲ್ಲಭಭಾಯಿ ಪಾಟೇಲ್ ಪ್ರತಿಮೆ (ಸ್ಟಾ ್ಯಚ್ಯು ಆಫ್ ಯ್ಯೂನಿಟಿ) ಸ್ಥಳದಲ್ಲಿ ಏಕದಿನದ ಬೃಹತ್ ತುಳು ಸಮಾವೇಶ ಆಯೋಜಿಸಲು ತೀರ್ಮಾನಿಸಿದ್ದೇವೆ. ರಾಷ್ಟ್ರದ ಎಲ್ಲಾ 53 ಎಲ್ಲಾ ತುಳುಸಂಸ್ಥೆಗಳ ಮುಖ್ಯಸ್ಥರನ್ನು ಆಹ್ವಾನಿಸಿ ಈ ಸಂಗಮ ನಡೆಸಲಿದ್ದೇವೆ. ನಮ್ಮಲ್ಲಿ ಒಳ್ಳೆ ಮನಸ್ಸಿನ ಸಂಕಲ್ಪ ಇದ್ದಾಗ ಎಲ್ಲವೂ ಸಿದ್ಧಿಗೊಳ್ಳುವುದು. ಆ ಮೂಲಕ ತುಳುವರೆಲ್ಲರೂ ಒಂದು ಮಾತೆಯ ಮಕ್ಕಳಾಗಿ ಬಾಳೋಣ. ತುಳು ಭಾಷಾಭಿಮಾನ ವಿಶ್ವಕ್ಕೆ ಮಾದರಿಯಾಗಿಸೋಣ ಎಂದು ಶಶಿಧರ್ ಶೆಟ್ಟಿ ತಿಳೀಸಿದರು.

ತುಳು ಭಾಷೆ, ಸಂಸ್ಕೃತಿ ಆರಾಧನೆಯಿಂದಾಗಿ ಈ ವೇದಿಕೆ ಅಲಂಕರಿಸುವಂತಾಗಿದೆ. ಆದುದರಿಂದ ಭಾಷಾಶಕ್ತಿ ಎಷ್ಟೊಂದು ಪ್ರಭಾವಿತ ಎನ್ನುವುದನ್ನು ತಿಳಿಯಲೇ ಬೇಕು. ನಾವು ತುಳುವರು ಜಾತಿಮತ, ಧರ್ಮಪಂಥದಿಂದ ಮುಕ್ತರಾಗಿ ತುಳುವರು ಎನ್ನುವುದನ್ನು ಅಭಿಮಾನದಿಂದ ಮುನ್ನಡೆಯಬೇಕು. ಇದರಿಂದ ನಮ್ಮೆಲ್ಲರ ಸಹೋದರತ್ವ ಸಂಬಂಧಗಳು ವೃದ್ಧಿಗೊಳ್ಳುತ್ತದೆ ಎಂದು ಉದಯ ಮುನಿಯಾಲು ತಿಳಿಸಿದರು.

ಶಂಕರ್ ಶೆಟ್ಟಿ ಅಧ್ಯಕ್ಷೀಯ ನುಡಿಗಳನ್ನಾಡಿ ಹೆತ್ತಮಾತೆಯ ಪ್ರೀತಿಯಷ್ಟೇ ಮಮತೆ ಮಾತೃಭಾಷೆಯಲ್ಲಿರಬೇಕು. ಭಾಷೆಯ ಮೂಲಕ ಪರಸ್ಪರ ಅನ್ಯೋನ್ಯತಾ ಬಾಳು ಸಾಧ್ಯ. ಆದುದರಿಂದ ನಾವೆಲ್ಲರೂ ಪರಸ್ಪರ ಸ್ಪಂದಿಸಿ ಬಾಳು ಬೆಳಗಿಸಬೇಕು ಎನ್ನುವ ಉದ್ದೇಶ ನಮ್ಮದಾಗಿದೆ. ನಾವೆಲ್ಲರೂ ಜೊತೆಗೂಡಿ ಜೀವನ ನಡೆಸುತ್ತಾ ಭಾಷೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸೋಣ ಎಂದÀ ಕರೆಯಿತ್ತರು.

ಪಟ್ಲ ಫೌಂಡೇಶನ್‍ನ ಗುಜರಾತ್ ಘಟಕದ ಗೌರವಾಧ್ಯಕ್ಷ ರಾಮಚಂದ್ರ ವಿ.ಶೆಟ್ಟಿ, ಪ್ರಧಾನ ಕಾರ್ಯದರ್ಶಿ ವಿಶಾಲ್ ಶಾಂತಾ, ತುಳು ಸಂಘ ಅಂಕ್ಲೇಶ್ವರ ಇದರ ಮುಖ್ಯಸ್ಥರನೇಕರು, ಸಲಹಾದಾರರು ಸೇರಿದಂತೆ ಸದಸ್ಯರನೇಕರು ಉಪಸ್ಥಿತರಿದ್ದು, ರಾಧಾಕೃಷ್ಣ ನಾಯರ್, ಸುನೀಲ್ ವಿ.ಶೆಟ್ಟಿ, ಮಹಾವೀರ ಎ.ಜೈನ್ ಬರೋಡಾ, ನಾರಾಯಣ ರೈ ಅಹ್ಮದಾಬಾದ್, ರಾಧಾಕೃಷ್ಣ ಮೂಲ್ಯ ಅವರನ್ನು ವಿಶೇಷವಾಗಿ ಗೌರವಿಸಿದರು.

ಭಜನಾ ಸಮಿತಿ ಕಾರ್ಯದರ್ಶಿ ಪ್ರಿಯಾ ಆರ್.ರೈ ಬಳಗವು ಪ್ರಾರ್ಥನೆಯನ್ನಾಡಿದರು. ತುಳು ಸಂಘ ಅಂಕ್ಲೇಶ್ವರದ ಸಾಂಸ್ಕೃತಿಕ ಕಾರ್ಯದರ್ಶಿ ಬಾಲಕೃಷ್ಣ ಗಂಭೀರ್ ಸ್ವಾಗತಿಸಿದರು. ಕಲಾಸಾರಥಿü ಕರ್ನೂರು ಮೋಹನ್ ರೈ ಅತಿಥಿüಗಳನ್ನು ಪರಿಚಯಿಸಿದರು. ತುಳು ಸಂಘದ ಜೊತೆ ಕಾರ್ಯದರ್ಶಿ ಯೋಗೇಶ್ ರೈ, ಜೊತೆ ಕೋಶಾಧಿಕಾರಿ ರವಿ ರೈ, ಸಂಘಟನಾ ಕಾರ್ಯದರ್ಶಿಗಳಾದ ಹರೀಶ್ ಬಿ.ಶೆಟ್ಟಿ ಮತ್ತು ಅಜಿತ್ ಶೆಟ್ಟಿ, ಕ್ರೀಡಾ ಕಾರ್ಯದರ್ಶಿ ಸಂತೋಷ್ ಜಿ.ಶೆಟ್ಟಿ, ಭಜನಾ ಕಾರ್ಯದರ್ಶಿ ಸತೀಶ್ ಶೆಟ್ಟಿ, ಉಪ ಕಾರ್ಯಾಧ್ಯಕ್ಷೆ ಮಮತಾ ಆರ್.ಶೆಟ್ಟಿ, ಕಾರ್ಯದರ್ಶಿ ಶೋಭಾ ಆರ್.ಗಂಭೀರ್, ಕೋಶಾಧಿಕಾರಿ ಸರಿತಾ ಆರ್.ಶೆಟ್ಟಿ, ಜೊತೆ ಕಾರ್ಯದರ್ಶಿ ಸುಮಾ ಎಸ್.ಶೆಟ್ಟಿ ಹಾಗೂ ಅಶ್ವಿನಿ ಶೆಟ್ಟಿ, ಸುರೇಶ್ ಕೊಟ್ಟಾರಿ, ರಮೇಶ್ ಸಿ.ಪೂಜಾರಿ, ಸುರೇಶ್ ಶೆಟ್ಟಿ, ವಿಶ್ವನಾಥ್ ಶೆಟ್ಟಿ, ಅಭಿಮಾನ್ ಸೆಟ್ಟಿ, ಪ್ರತಾಪ್ ಶೆಟ್ಟಿ, ಶ್ರೀಧರ ಪೂಜಾರಿ, ಗಣೇಶ್ ಕುಲಾಲ್, ಸತೀಶ್ ಶೆಟ್ಟಿ ಹಾವಂಜೆ, ಅನಿಲ್ ಶೆಟ್ಟಿ, ಶೋಭಾ ಹೆಚ್.ಪೂಜಾರಿ ಮತ್ತಿತರರು ಅತಿಥಿüಗಳಿಗೆ ಸ್ಮರಣಿಕೆ, ಪುಷ್ಫಗುಪ್ಚವಿತ್ತು ಗೌರವಿಸಿದರು. ಅತಿಥಿüಗಳÀು ಸಂಘದ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿ ಅಭಿನಂದಿಸಿದರು. ಜೊತೆ ಕೋಶಾಧಿಕಾರಿ ಶಾಂತಿ ಪಿ.ಶೆಟ್ಟಿ ವಿಜೇತರ ಪಟ್ಟಿ ವಾಚಿಸಿಸಿದರು. ನವೀನ್ ಶೆಟ್ಟಿ ಯೆಡ್ಮೆಮರ್ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಅಶೋಕ್ ಸಿ.ಶೆಟ್ಟಿ ಪ್ರಸ್ತಾವಿಕ ನುಡಿಗಳನ್ನಾಡಿ ಧನ್ಯವದಿಸಿದರು. ಮನೋರಂಜನಾ ಕಾರ್ಯಕ್ರಮವಾಗಿ ಸಂಘದ ಸದಸ್ಯರು ಹಾಗೂ ಮಕ್ಕಳು ಸಾಂಸ್ಕೃತಿಕ ವೈವಿಧ್ಯತೆ ಪ್ರದರ್ಶಿಸಿದರು. ರಂಜನಿ ಪಿ.ಶೆಟ್ಟಿ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು.

ಗುಜರಾತ್‍ನಲ್ಲಿ ತುಳುನಾಡು ಸೃಷ್ಠಿಸಿದ ತುಳುಭಾಷಾ ಮಹಿಮೆ:
ಅತ್ಯಾಕರ್ಷಕ ಬೃಹತ್‍ವೇದಿಕೆಯ ಇಕ್ಕಡೆಗಳಲ್ಲಿ ನಮ್ಮೂರ ಅಡಿಕೆ ಗೊಂಚಲು ಗೊಂಚಲು, ಬಾಳೆಗೊಣೆ, ಕೆಂಪು ಸೀಯಾಳಗಳಿಂದ ಶೃಂಗಾರಿಸಿದ ಪುಷ್ಪಾಲಂಕೃತ ಪೀಠದಲ್ಲಿ ತಿರುಪತಿ ವೆಂಕಟೇಶ್ವರ (ಬಾಲಜಿ) ರಾರಜಿಸುತ್ತಿದ್ದರೆ ಎಡಬದಿಯಲ್ಲಿ ಮಾತೆ ಭ್ರಮರಾಂಭಿಕೆ ತುಳುನಾಡ ಭಕ್ತರನ್ನು ತನ್ನತ್ತ ಆಕರ್ಷಿಸುತ್ತಾ ತುಳುನಾಡ ವೈಭವದ ಭಕ್ತಿಸಾರಲು ಪ್ರೇರೇಪಿಸುತಿತ್ತು. ಊರಿನಿಂದ ಆಗಮಿಸಿದ್ದ ಬ್ಯಾಂಡು, ವಾದ್ಯ, ಚೆಂಡೆ ಬಳಗ, ಕೊಂಬು ಕಳಹೆಗಳ ನೀನಾದವು ತುಳುವರನ್ನು ತನ್ನತ್ತ ಮನಾಕರ್ಷಿಸುತ್ತಿದ್ದರೆ ಎಕ್ಕಸಕಾ.... ಎಕ್ಕಸಕ್ಕಾ ತುಳು ಹಾಡು ತವರೂರನ್ನೇ ಮುಟ್ಟಿಸಿ ಭಾರೀ ಸೀಟಿಗಳ, ಚಪ್ಪಾಳೆಗಳ ಸುರಿಮಳೆ ಸುರಿಸುವಂತಾಗಿಸಿತು. ಅಟ್ಟಿಅಟ್ಟಿ ಮಂಗಳೂರು ಮಲ್ಲಿಗೆಗಳು ತನ್ನ ಸುಗಂಧವನ್ನು ಸಭಾಂಗಣವಿಡೀ ಪಸರಿಸಿ ಭಕ್ತಮುಗ್ಧರನ್ನಾಗಿಸಿತು. ತುಳುನಾಡಿನ ಅಡಿಕೆ, ವೀಲೆದೆಳೆ, ತಾಂಬೂಲಗಳ ಮಹಿಳೆಯರ ಸಂಪ್ರದಾಯಿಕ ಸ್ವಾಗತ ಒಟ್ಟಾರೆ ತುಳುನಾಡಿನ ಸೊಬಗು ಮೆರಗು ರೋಮಾಂಚನಗೊಳಿಸಿ ತಾಯ್ನಾಡ ಸಂಸ್ಕೃತಿಯನ್ನು ಅಚ್ಚುಕಟ್ಟಾಗಿ ಮೈನವಿರೇಳಿಸುವಂತೆ ಮಾಡುತ್ತಾ ಮತ್ತೆಮತ್ತೆ ಇಂತಹ ತುಳುಕಾರ್ಯಕ್ರಮಗಳು ನಡೆಸುವ ಉಮೇದು ಭರಿಸುವಂತಿತ್ತು.

 

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here