Thursday 25th, April 2024
canara news

ದೇವ ಪೀಠ ಸೇವಕರ ದಿನ- ಮಕ್ಕಳು ಸಣ್ಣವರಿರುವಾಗಲೇ ಯಾಜಕರಾಗಲು ಕುಟುಂಬದಲ್ಲಿ ಪ್ರೇರಣೆಯ ವಾತವರಣ ಸ್ರಷ್ಟಿ ಮಾಡಬೇಕು

Published On : 11 Nov 2018   |  Reported By : Bernard Dcosta


ಕುಂದಾಪುರ: ಕುಂದಾಪುರ ರೊಜರಿ ಮಾತಾ ಚರ್ಚಿನಲ್ಲಿ ದೇವ ಪೀಠದಲ್ಲಿ ಸೇವೆ ಮಾಡುವ ದೇವ ಪೀಠ ಸೆವಕರ ದಿನವನ್ನು ಆಚರಿಸಲಾಯಿತು. ಮೊದಲಿಗೆ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಪವಿತ್ರ ಬಲಿದಾವನ್ನು ಅರ್ಪಿಸಿದರು, ಜೊತೆಯಲ್ಲಿ ಸಹ ಬಲಿದಾನವನ್ನು ಅರ್ಪಿಸಿದ ಧರ್ಮಗುರು ವಂ|ರೋಯ್ ಲೋಬೊ ‘ಇವತ್ತಿನ ಕಾಲದಲ್ಲಿ ಯಾಜಕರಾಗಲು ಮಕ್ಕಳು ಹಿಂದೆ ಸರಿಯುತ್ತಾರೆ, ಅದಕ್ಕೆ ಅಂತಹ ವಾತವರಣವನ್ನು ಕುಟುಂಬದಲ್ಲಿ ಮನೆಯವರು ಸ್ರಷ್ಟಿ ಮಾಡಬೇಕು, ಹೆತ್ತವರು ಅದಕ್ಕೆ ಪ್ರೇರಣೆ ನೀಡಬೇಕು, ಮಕ್ಕಳು ನಿತ್ಯ ಪೂಜೆಗೆ ಬರಬೇಕು, ದೇವರಲ್ಲಿ ಭಕ್ತಿ ಹೆಚ್ಚಬೇಕು’ ಎಂದು ಸಂದೇಶ ನೀಡಿದರು.

ನಂತರ ನೆಡೆದ ಆಚರಣೆಯಲ್ಲಿ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ‘ಪೀಠ ಸೆವಕರು ತಮ್ಮ ಕರ್ತವ್ಯವನ್ನು ಪಾಲಿಸಬೇಕು ಯಾಜಕರಾಗಲೂ ಮನಸು ಮಾಡ ಬೇಕು ‘ಎಂದು ಅವರು ಶುಭ ಕೋರಿದರು. ಪಾಲನ ಮಂಡಳಿ ಉಪಾಧ್ಯಕ್ಷ ಜೇಕಬ್ ಡಿಸೋe ಶುಭ ಕೋರಿದರು. ಪ್ರಾಂಶುಪಾಲ ವಂ| ಫಾ|ಪ್ರವೀಣ್ ಅಮ್ರತ್ ಮಾರ್ಟಿಸ್, ಕಾನ್ವೆಂಟಿನ ಮುಖ್ಯಸ್ಥೆ ವಾಯ್ಲೆಟ್ ತಾವ್ರೊ, ಸರ್ವ್ ಆಯೋಗಗಳ ಸಂಚಾಲಕಿ ಪ್ರೇಮಾ ಡಿಕುನ್ಹಾ, ಪೀಠ ಸೇವಕ ಸಂಘದ ಅಧ್ಯಕ್ಷ ವಿಜೇಶ್ ಡಿಸೋಜಾ, ಕಾರ್ಯದರ್ಶಿ ಕ್ರಿಶ್ಚಿಯನ್ ಡಿಸೋಜಾ ಮತ್ತು ದೇವ ಸ್ಥುತಿ ಆಯೋಗದ ಸದಸ್ಯರು ಹಾಜರಿದ್ದರು.

ದೇವ ಸ್ಥುತಿ ಆಯೋಗದ ಸಂಚಾಲಕ ಮೆಲ್ವಿನ್ ಫೆರ್ನಾಂಡಿಸ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸದಸ್ಯ ವಾಲೇರಿಯನ್ ಡಿಸೋಜಾ ಧನ್ಯವಾದಗಳನ್ನು ಅರ್ಪಿಸಿದರು. ಐ.ಸಿವೈ.ಎಮ್ ಸದಸ್ಯರು ಪೀಠ ಸೇವಕರ ಮಕ್ಕಳಿಗಾಗಿ ಮನೋರಂಜನಾ ಆಟಗಳನ್ನು ನೇರವೆರಿಸಿದದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here